ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಫಿರ್ಯಾದಿ ಪ್ರಥ್ವಿರಾಜ್ ನಾಯ್ಕ ಇವರು ದಿನಾಂಕ 26/03/2023 ರಂದು ಸ್ನೇಹಿತರಾದ ರೋಹಿತ್ ಶೆಟ್ಟಿ, ದಿನಕರ ಕುಲಾಲ್ ರವರೊಂದಿಗೆ ಭಟ್ಕಳದ ಮಾರಿಕಾಂಬ ದೈವಸ್ಥಾನಕ್ಕೆ ಪೂಜೆಗೆ  ಅರುಣ ರವರ ಆಟೋ ರಿಕ್ಷಾ ನಂಬ್ರ KA20AA0719 ರಲ್ಲಿ ಹೋಗಿದ್ದು, ದೈವಸ್ಥಾನದಲ್ಲಿ ಪೂಜೆ ಮುಗಿಸಿ ರಾತ್ರಿ ಸಮಯ ಆಟೋ ರಿಕ್ಷಾ ನಂಬ್ರ KA20AA0719 ರಲ್ಲಿ ವಾಪಾಸು ಮನೆಗೆ ಹೊರಟು ಬರುತ್ತಿದ್ದು, ಆಟೋ ರಿಕ್ಷಾವನ್ನು ಅರುಣ ರವರು ಚಲಾಯಿಸುತ್ತಿದ್ದು, ಫಿರ್ಯಾದುದಾರರು ಚಾಲಕ ಹಿಂಬದಿ ಸೀಟಿನಲ್ಲಿ ಎಡಬದಿ ಡೋರ್ ಬಳಿ ಕುಳಿತಿದ್ದು, ರೋಹಿತ್ ಶೆಟ್ಟಿ ರವರು ಮಧ್ಯದಲ್ಲಿ ಹಾಗೂ ದಿನಕರ ಕುಲಾಲ್ ರವರು ಬಲಬದಿಯಲ್ಲಿ ಕುಳಿತಿದ್ದರು.  ರಾಹೆ 66 ರಲ್ಲಿ ಬರುತ್ತಾ ರಾತ್ರಿ 9:00 ಗಂಟೆಯ ಸುಮಾರಿಗೆ ಪಡುವರಿ ಗ್ರಾಮದ ಚಿಲುಮೆ ಬಳಿ ತಲುಪಿದಾಗ ಆಟೋ ರಿಕ್ಷಾವನ್ನು ಚಾಲಕ ಅರುಣ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾ ಚಾಲಕನ ಹತೋಟಿ ತಪ್ಪಿದಾಗ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾ ಎಡಕ್ಕೆ ಮಗುಚಿ ಬಿದ್ದು, ರಿಕ್ಷಾದ ಡೋರ್ ಬಳಿ ಕುಳಿತಿದ್ದ ಫಿರ್ಯಾದುದಾರರಿಗೆ ರಿಕ್ಷಾ ರಾಡ್ ತಲೆಗೆ ಬಡಿದ ಪರಿಣಾಮ ಹೆಣೆಗೆ ಜಜ್ಜಿದ ಗಾಯ, ಕೈಕಾಲುಗಳಿಗೆ ತರಚಿದ ಗಾಯ ಆಗಿದ್ದು, ಉಳಿದ  ರೋಹಿತ್ ಶೆಟ್ಟಿ, ದಿನಕರ ಕುಲಾಲ್ ರವರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ಫಿರ್ಯಾದುದಾರರ ಸ್ನೇಹಿತರು  ಫಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಗೆ ದಾಖಲು ಮಾಡಿರುತ್ತಾರೆ. ಈ ಅಪಘಾತಕ್ಕೆ ಆಟೋ ರಿಕ್ಷಾ ನಂಬ್ರ KA20AA0719 ನೇದರ ಚಾಲಕ ಅರುಣ ರವರ ಅತೀ ವೇಗ ಅಜಾಗರೂಕತೆಯ ಚಾಲನೆ ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023   ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 27/03/2023 ರಂದು ರಾತ್ರಿ ಸುಮಾರು 9:55 ಗಂಟೆಗೆ ಕುಂದಾಪುರ ತಾಲೂಕು, ಕಸಬಾ ಗ್ರಾಮದ ಹಳೇ ಆದರ್ಶ ಆಸ್ಪತ್ರೆಯ ಹತ್ತಿರ ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ ಪುನೀತ್‌ ಎಂಬವರು KA20-MD- 3685 ನೇ Kia Sonet ಕಾರನ್ನು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ  ನಿತೇಶ್‌ ಆಚಾರ್ಯರವರು KA21-N-4030 Renault  Scala ಕಾರಿನಲ್ಲಿ ಪಿರ್ಯಾದಿದಾರರಾದ ಡಾ:  ಎಸ್‌ ಜಿ. ಪ್ರಸನ್ನ ಐತಾಳ್‌ ರವರನ್ನು ಕುಳ್ಳಿರಿಸಿಕೊಂಡು ಚಾಲನೆ ಮಾಡಿಕೊಂಡು ಬರುತ್ತಿದ್ದ ಕಾರಿಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಗೊಂಡಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023   ಕಲಂ 279 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 25/03/2023 ರಂದು ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ ರಿಲಯನ್ಸ್‌ ಮಾರ್ಟ ಶಾಪ್‌ ಹತ್ತಿರ ರಸ್ತೆಯಲ್ಲಿ, ಆಪಾದಿತ ಪ್ರವೀಣ್‌ ಕುಮಾರ್‌ ಶೆಟ್ಟಿ  ಎಂಬವರು KA20ER-7408 ನೇ ಸ್ಕೂಟರ್‌ ನ್ನು ಕುಂದಾಪುರ ಬಸ್‌ ನಿಲ್ದಾಣದ ಕಡೆಯಿಂದ ಅತೀವೇಗ  ಹಾಗೂ ನಿರ್ಲಕ್ಷತನದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿಯಾದಿದಾರರಾದ ಸಿದ್ದಪ್ಪ ಕೆ. ಎಸ್‌  ಎಂಬವರು KA20EU-7476 ನೇ ಬೈಕಿನಲ್ಲಿ ಅವರ ಮಗ ಜ್ಞಾನೇಶ್‌ ನನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸಿದ್ದಪ್ಪ ಕೆ. ಎಸ್‌ ರವರ ಬಲಕೈಗೆ ಮೂಳೆ ಮುರಿತವಾದ ಗಾಯವಾಗಿ, ಕುಂದಾಪುರ ನ್ಯೂ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಶಿರ್ವ: ಪ್ರಕರಣದ ಸಾರಾಂಶವೆನೆಂದರೆ  ದಿನಾಂಕ:27/03/2023 ರಂದು  13.00 ಘಂಟೆಗೆ  ಶ್ರೀರ್ಧರ ಕೆ ಜೆ, ಎಎಸ್‌ಐ  ಶಿರ್ವ  ಪೊಲೀಸ್‌  ಠಾಣೆ ಇವರಿಗೆ ನಾಗೇಶ್ ಕುಮಾರ್ ಎಂಬಾತನು  ಕಳತ್ತೂರು ಗ್ರಾಮದ ಪುಂಚಲಕಾಡು ನಿಶ್ಮಿತಾ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಹೇಳಿ  ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿರುವುದಾಗಿ  ಮಾಹಿತಿ ಬಂದಿದ್ದು ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ ಅಕ್ರ 27/2023 U/S 78(3) KP ACT ನಂತೆ ಪ್ರಕರಣ ದಾಖಲಾಗಿರುತ್ತದೆ.

 ಮನುಷ್ಯ ಕಾಣೆ ಪ್ರಕರಣ

 • ಶಿರ್ವ:  ಶೈಲೇಶ್‌ ಕೆ. ಪ್ರಭು (44)ರವರು ಸೂರ್ಯ ಚೈತನ್ಯ ಶಾಲಾ ಬಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಹಾಗೂ ಹೊಸದಾಗಿ ಅಟೋ  ರಿಕ್ಷಾವನ್ನು ಒಂದು ತಿಂಗಳ ಹಿಂದೆ ಖರೀದಿಸಿದ್ದು, ಕುತ್ಯಾರಿನಲ್ಲಿ ಅಟೋ ಚಾಲಕರಾಗಿ ಕೂಡಾ ದುಡಿಯುತ್ತಿದ್ದು,  ದಿನಾಂಕ 27.03.2023  ರಂದು ಬೆಳಿಗ್ಗೆ 9:30 ಗಂಟೆಗೆ ಕಾಪು ತಾಲೂಕು ಕುತ್ಯಾರು ಗ್ರಾಮದ  ವಾಸ್ತವ್ಯದ ಮನೆಯಿಂದ ಅಟೋ ರಿಕ್ಷಾದಲ್ಲಿ ಬಾಡಿಗೆ ಹೋದವರು ಮಧ್ಯಾಹ್ನ ಊಟಕ್ಕೆ ಮನೆಗೆ ಬಾರದೆ ಇದ್ದು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/23 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 28-03-2023 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080