ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಅಬ್ದುಲ್ ಅಜೀಜ್ (60), ತಂದೆ:ಇಸ್ಮಾಯಿಲ್ ಬ್ಯಾರಿ, ವಾಸ: ಬಕ್ರವಳ್ಳಿ, ಮಲಸಾವರ ಅಂಚೆ, ಬೇಲೂರು ತಾಲೂಕು ಹಾಸನ ಜಿಲ್ಲೆ ಇವರು ಕಾಮಧೇನು ಗ್ಯಾಸ್ ಏಜೆನ್ಸಿಸ್ ಯ ಲಾರಿ ನಂಬ್ರ KA-19-AC-7972 ನೇದರ ಚಾಲಕರಾಗಿದ್ದು ,ದಿನಾಂಕ 25/03/2022 ರಂದು ಮಂಗಳೂರಿನಿಂದ ಗ್ಯಾಸ್  ತುಂಬಿದ ಸಿಲಿಂಡರ್ ಗಳನ್ನು ಲೋಡು ಮಾಡಿಕೊಂಡು ಹೋಗಿ ಕಾರವಾರದಲ್ಲಿ ಇಳಿಸಿ, ದಿನಾಂಕ 26/03/2022 ರಂದು ಖಾಲಿ ಗ್ಯಾಸ್ ಸಿಲಿಂಡರ್ ಗಳನ್ನು ತುಂಬಿಸಿಕೊಂಡು ಸಂಜೆ 4:30 ಗಂಟೆಗೆ ಮಂಗಳೂರಿಗೆ ಹೊರಟು ರಾಹೆ 66 ರಲ್ಲಿ ಚಲಾಯಿಸಿಕೊಂಡು ಬರುತ್ತಾ  ರಾತ್ರಿ 10:30 ಗಂಟೆಗೆ ಬೈಂದೂರು ಸಮೀಪ ಮಯೂರ ಪೆಟ್ರೋಲ್ ಬಂಕ್ ನಿಂದ  ಸ್ವಲ್ಪ ಮುಂದಕ್ಕೆ ರಾಷ್ಟ್ರ್ರೀಯ ಹೆದ್ದಾರಿ 66 ನೇದರ ಪೂರ್ವ ಬದಿಯ ರಸ್ತೆಯ ಬಲ ಬದಿಯ ಲೇನ್  ಚಲಾಯಿಸಿಕೊಂಡು ಹೋಗುವಾಗ ರಾಷ್ರೀ ಹೆದ್ದಾರಿ 66 ನೇದರ ಪೂರ್ವ ಬದಿಯ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಆಟೋ ರಿಕ್ಷಾ ನಂಬ್ರ KA-20-AA-2369  ನೇದರ ಚಾಲಕನು ಆತನ ಆಟೋ ರಿಕ್ಷಾವನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಲಾರಿ ಹಾಗೂ ಆಟೋ ರಿಕ್ಷಾ ಮುಂಭಾಗ ಜಖಂಗೊಂಡಿರುತ್ತದೆ. ಅಪಘಾತದ ಪರಿಣಾಮ ರಿಕ್ಷಾ ಚಾಲಕನಿಗೆ ತಲೆಗೆ ಕಾಲಿಗೆ ಮೈಕೈಗೆ ರಕ್ತಗಾಯವಾಗಿದ್ದು, ರಿಕ್ಷಾದಲ್ಲಿದ್ದ  ಪ್ರಯಾಣಿಕನು ಅಪಘಾತದ ಪರಿಣಾಮ ರಿಕ್ಷಾದಿಂದ ಹೊರಗೆ ಬಿದ್ದಿದ್ದು  ಆತನಿಗೆ ಮೈ ಕೈ ಗೆ ತರಚಿದ ಗಾಯವಾಗಿರುವುದು  ಕಂಡು ಬಂದಿದ್ದು ಸ್ಥಳೀಯರು 108 ಅಂಬುಲೆನ್ಸ್ ವಾಹನದಲ್ಲಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ  ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 279, 337, 338 ಐಪಸಿ, Rule 218 ಜೊತೆ 177 ಮೋ.ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 27/03/2022 ರಂದು ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ನಲ್ಲೂರು ನಮನ ಬೇಕರಿಯ ಬಳಿ ಹಾದು ಹೋಗಿರುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ KA-20-MD-7078 ನೇ ನಂಬ್ರದ ಕಾರು ಚಾಲಕನು ತನ್ನ ಕಾರನ್ನು ಧರ್ಮಸ್ಥಳ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಯಿಂದ ಧರ್ಮಸ್ಥಳ ಕಡೆಗೆ ಪಿರ್ಯಾದಿದಾರರಾದ ಅಶೋಕ್ ಎಂ ಕುರ್ಡೇಕರ್ (47), ತಂದೆ: ಮಹಾಬಲೇಶ್ವರ ಸುಬ್ರಾಯ ಕುರ್ಡೇಕರ್, ವಾಸ: ಅಮ್ರತ ನಿಲಯ, ಸಬಗೇರಿ, ಯಲ್ಲಾಪುರ ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರು ತನ್ನ ಹೆಂಡತಿ ಶ್ರೀಮತಿ ಅನುಷಾ, ಮಗ ಅಮಯ, ಅತ್ತೆ ಶ್ರೀಮತಿ ತಾರಾ ಸುಬ್ರಾಯ ರಾಯ್ಕರ್, ಮಾವ ಸುಬ್ರಾಯ ರಾಯ್ಕರ್ ರವರು ಪ್ರಯಾಣಿಸುತ್ತಿದ್ದ ಕಾರ್ತಿಕ್ ಎಂಬುವವರು ಚಲಾಯಿಸುತ್ತಿದ್ದ ಕಾರು ನಂಬ್ರ KA-30-A-4116 ನೇ ನಂಬ್ರದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಅತ್ತೆ ಶ್ರೀಮತಿ ತಾರಾ ಸುಬ್ರಾಯ ರಾಯ್ಕರ್ (70) ರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಪಿರ್ಯಾದಿದಾರರಿಗೆ ಹಾಗೂ ಅವರ ಹೆಂಡತಿ ಅನುಷಾ ಮತ್ತು ಮಾವ ಸುಬ್ರಾಯ ರಾಯ್ಕರ್ ರವರಿಗೆ ಸಣ್ಣಪುಟ್ಟ ಗಾಯವುಂಟಾಗಿರುವುದಾಗಿದೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 25/03/2022 ರಂದು ಪಿರ್ಯಾದಿದಾರರಾದ ಸಂಪತ್‌ ಕುಮಾರ್‌ (35), ತಂದೆ:- ಎಚ್‌. ಪುರುಷೋತ್ತಮ ನಾಯ್ಕ್‌ ,ವಾಸ: ಗಿರಿ ಸದನ  ಗೊದ್ದನ ಕಟ್ಟೆ, ಪೇತ್ರಿ , ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕಾರಿನಲ್ಲಿ ಕೊಕ್ಕರ್ಣೆಗೆ ಹೋಗಿ ವಾಪಾಸು ಮನೆಗೆ ಬರುವಾಗ  ಕೊಕ್ಕರ್ಣೇ – ಚೇರ್ಕಾಡಿ  ರಸ್ತೆಯಲ್ಲಿ ಪಿರ್ಯಾದಿದಾರರ ಎದುರಿನಿಂದ KA-20-S-5365ನೇ ಮೋಟಾರ ಸೈಕಲ್‌ ಸವಾರ ದಿನೇಶರವರು ಅತೀ ವೇಗ ಹಾಗೂ  ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು  ಚೇರ್ಕಾಡಿ ಗ್ರಾಮದ  ಕನ್ನಾರು  ಸಾಸ್ತಾವು  ನಾಗ ಬ್ರರ್ಹ ಸ್ಧಾನ ಬಳಿ ತಲುಪುವಾಗ ಸ್ಕಿಡ್‌ ಆಗಿ ಮೋಟಾರ ಸೈಕಲ್‌ ಸಮೇತ ಇಬ್ಬರು ಸಹಾ ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ  ಸ್ಧಳಕ್ಕೆ ಹೋಗಿ  ಬಿದ್ದವರನ್ನು ಎತ್ತಿ ಉಪಚರಿಸಿ  ಮೋಟಾರ ಸೈಕಲ್‌ ಸವಾರನಲ್ಲಿ ವಿಚಾರಿಸಿದಾಗ  ಹಾವು  ಅಡ್ಡ ಬಂದಿರುವುದರಿಂದ  ಬ್ರೇಕ್‌ ಹಾಕಿರುವುದರಿಂದ  ಈ ಅಪಘಾತ ಸಂಬಂವಿಸಿರುವುದಾಗಿ ಬೈಕ್‌ ಸವಾರ ತಿಳಿಸಿರುತ್ತಾನೆ.  ಈ ಅಪಘಾತದಿಂದ  ಬೈಕ್‌ ಸವಾರನಿಗೆ  ತರಚಿದ ಗಾಯವಾಗಿರುತ್ತದೆ ಹಿಂಬದಿ ಸವಾರಿಣಿ ಸುಜಾತ್‌ರವರ ಎಡ ಭುಜಕ್ಕೆ ತೀವ್ರ ಗಾಯವಾಗಿರುತ್ತದೆ.  ಕೂಡಲೇ ಇಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು  ಬ್ರಹ್ಮಾವರ  ಮಹೇಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿಸಿ  ನಂತರ ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಗಾಯಾಳುವಿನ ಗಂಡ ದಿನೇಶರವರು ದಿನಾಂಕ 26/03/2022 ರಂದು  ಮಣಿಪಾಲನ ಕೆ.ಎಂ.ಸಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಕೋಕಿಲಾ ಎಂ.ವಿ (26), ಗಂಡ: ರಾಕೇಶ್ ಎಂ, ವಾಸ: ಮಳಲಿ ಪೋಸ್ಟ್, ಮತ್ತು ಗ್ರಾಮ,ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ ಇವರು ದಿನಾಂಕ 27/03/2022 ರಂದು ಉಡುಪಿಯಿಂದ ಸಕಲೇಶಪುರಕ್ಕೆ ಹೋಗಲು ಅವರ ಕಾರು KA-04-MY-9992 ನೇದನ್ನು ಚಲಾಯಿಸಿಕೊಂಡು  ತನ್ನ ಗಂಡ ರಾಕೇಶ್ ಎಂಬುವವರೊಂದಿಗೆ  ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಾ 16:30 ಗಂಟೆಗೆ ಕಾರ್ಕಳ ಕಸಬಾದ ಪುಲ್ಕೇರಿ ಬೈಪಾಸ್ ಹತ್ತಿರ ಕುಲದೇವತಾ ಬಿಲ್ಡಿಂಗ್  ಹತ್ತಿರ ತಲುಪುವಾಗ ಎದುರಿನಿಂದ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಟಿಪ್ಪರ್ KA-20-B1723 ನೇದನ್ನು ಅದರ ಚಾಲಕ ಅಬ್ಬಾಸ್ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಬಲಕ್ಕೆ ಚಲಾಯಿಸಿ ಕಾರು KA-04-MY-9992ನೇದಕ್ಕೆಡಿಕ್ಕಿ ಹೊಡೆದು ನಂತರ ಮುಂದಕ್ಕೆ ಚಲಾಯಿಸಿ ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದ  ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು  ಕಾರು ಚಾಲನೆ ಮಾಡುತ್ತಿದ್ದ  ಪಿರ್ಯಾದಿದಾರರ ಎರಡೂ ಕಾಲುಗಳಿಗೆ ಒಳಜಖಂ ಹಾಗೂ ರಕ್ತಗಾಯವಾಗಿರುತ್ತದೆ. ಹಾಗೂ ಟಿಪ್ಪರ್  ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡು ಮೆಸ್ಕಾಂಗೆ ನಷ್ಟವುಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ: 279, 337, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 27/03/2022 ರಂದು ಸಂಜೆ 7:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ KA-19-MD-2867 ನೇ ನಂಬ್ರದ ಕಾರು ಚಾಲಕನು ಆತನ ಕಾರನ್ನು ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ದೂಪದಕಟ್ಟೆ ರಿಕ್ಷಾ ನಿಲ್ದಾನದ ಬಳಿ ರಸ್ತೆಯಲ್ಲಿ ಇರಿಸಿರುವ ಬ್ಯಾರಕೇಡ್‌ಗೆ ಡಿಕ್ಕಿ ಹೊಡೆದಿದ್ದು ಆ ಬ್ಯಾರಿಕೇಡ್‌ ಒಮ್ಮೆಲೇ ಪಿರ್ಯಾದಿದಾರರಾದ ನಂದಿತ (26), ತಂದೆ: ಹರೀಶ್‌ ಶೆಟ್ಟಿ ವಾಸ: ಮಹಮ್ಮಾಯಿ ನಿವಾಸ, ಭಾರತ್‌ ಬೀಡಿ ಕಾಲನಿ ಕಸಬಾ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ  ಇವರು ಸಹಸವಾರರಾಗಿ ಸಂಚರಿಸುತ್ತಿದ್ದ KA-20-EP-4036 ನಂಬ್ರದ ಸ್ಕೂಟ್ರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈಗೆ ತರಚಿದ ಮತ್ತು ಸೊಂಟದ ಬಳಿ ಗುದ್ದಿದ ನೋವು ಆಗಿರುವುದಾಗಿದೆ. ಅಲ್ಲದೇ ಸ್ಕೂಟರ್‌ ಸವಾರೆ ಅಕ್ಷತಾ ರವರ ಬಲಭುಜ ಬಳಿ ಒಳ ಜಖಂ ಆಗಿದ್ದು 2 ಕೈಗಳಿಗೂ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ನಮ್ಮನ್ನು ಒಂದು ವಾಹನದಲ್ಲಿ ಕಾರ್ಕಳ ಸಿಟಿ ನರ್ಸಿಂಗ್‌ ಹೋಮ್‌ನಲ್ಲಿ  ಚಿಕಿತ್ಸೆಗೆ ದಾಖಲಾಗಿದ್ದಾಗಿದೆ. ಅಲ್ಲದೇ ಅಪಘಾತವೆಸಗಿದ ಕಾರು ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279, 337, 338 ಐಪಿಸಿ ಮತ್ತು 134(ಎ)(ಬಿ) ಜತೆಗೆ 187 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ನೂರ್ ಅಹ್ಮದ್ (32), ತಂದೆ: ಕುತುಬುದ್ದಿನ್, ವಾಸ: ಅಪ್ಪಿರವರ ಬಾಬ್ತು ಬಾಡಿಗೆ ಮನೆ, ಅಪ್ಪಿ ನಿವಾಸ, ಸರಕಾರಿ ಶಾಲೆಯ ಬಳಿದಾದಬೆಟ್ಟು, ಪಳ್ಳಿ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 27/03/2022 ರಂದು ಅಗತ್ಯದ ಕೆಲಸದ ಬಗ್ಗೆ ತನ್ನ ಮನೆಯಿಂದ ಉಡುಪಿಯ ಸಂತೆಕಟ್ಟೆ ಕಡೆಗೆ ಹೊರಟು , ಶರಣಪ್ಪ ಹಾಗೂ ಮಹಮ್ಮದ್ ರಫೀಕ್ ಎಂಬುವವರೊಂದಿಗೆ KA-19-EN-8859 ನೇ ಸ್ಕೂಟರಿನಲ್ಲಿ ಕಲ್ಸಂಕ ಅಂಬಾಗಿಲು ರಸ್ತೆಯಾಗಿ ಹೋಗುತ್ತಿರುವಾಗ ಸ್ಕೂಟರನ್ನು ಶರಣಪ್ಪ ರವರು ಚಲಾಯಿಸುತ್ತಿದ್ದು, ಪಿರ್ಯಾದಿದಾರರು ಹಾಗೂ ಮಹಮ್ಮದ್ ರಫೀಕ್ ರವರು ಸ್ಕೂಟರಿನ ಹಿಂಬದಿ ಕುಳಿತುಕೊಂಡಿರುವುದಾಗಿದೆ. ಶರಣಪ್ಪರವರು ತನ್ನ ಸ್ಕೂಟರನ್ನು ಅಂಬಾಗಿಲು ಜಂಕ್ಷನ್ ತಲುಪಿ ಸಂತೆಕಟ್ಟೆ ಕಡೆಗೆ ಹೋಗುವಾಗ ಮದ್ಯಾಹ್ನ 1:00 ಗಂಟೆಗೆ ಸಂತೆಕಟ್ಟೆ ಕಡೆಯಿಂದ ಕರಾವಳಿ ಕಡೆಗೆ  KA-20-AA-3357 ನೇ ಬಸ್ಸು ಚಾಲಕ ಮುಜೀರ್ ಶೇಖ್ ಅಹ್ಮದ್ ತನ್ನ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಬಲಬದದಿಗೆ ಬಂದು  ಪುತ್ತೂರು ಗ್ರಾಮದ ಅಂಬಾಗಿಲು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-19-EN-8859 ನೇ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರಾದ ಮೂರು ಜನ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಶರಣಪ್ಪ ರವರಿಗೆ ತಲೆಗೆ, ಎದೆಗೆ ಮತ್ತು ಎಡಕಾಲಿಗೆ ರಕ್ತ ಗಾಯವಾಗಿದ್ದು, ಅಲ್ಲದೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಕಣ್ಣಿನ ಬಳಿ, ಬಲಕೈಗೆ ಗುದ್ದಿದ ಗಾಯವಾಗಿರುತ್ತದೆ, ಮಹಮ್ಮದ್ ರಫೀಕ್ ರವರಿಗೆ ತಲೆಗೆ  ಮತ್ತು ಮೂಗಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-03-2022 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080