ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಉಡುಪಿ: ದಿನಾಂಕ 27/03/2021 ರಂದು ಪಿರ್ಯಾದಿದಾರರಾದ ಕೀರ್ತನ (24), ತಂದೆ: ಸೋಮಯ್ಯ, ವಾಸ: ಡೋರ್ ನಂಬ್ರ 7-53 A5 ರಾಜೀವನಗರ ನಿಟ್ಟೂರು ಅಂಚೆ ಉಡುಪಿ ತಾಲೂಕು  ಇವರು ತಾಯಿ ಎಮ್ಮಾಳು(70)ರವರನ್ನು ಅಂಬಾಗಿಲಿನಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ KA-20-AA-9388 ನೇ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ವಾಪಸ್ಸು ಅದೇ ರಿಕ್ಷಾದಲ್ಲಿ ಮನೆಕಡೆಗೆ ಅಂಬಾಗಿಲು ಜಂಕ್ಷನ್ ನಿಂದಾಗಿ ಹನುಮಂತನಗರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬರುತ್ತಿರುವಾಗ ಮಧ್ಯಾಹ್ನ 1:30 ಗಂಟೆಗೆ ಹನುಮಂತನಗರದ ಸರ್ಕಾರಿ ಪ್ರೌಢಶಾಲೆಯ ಎದುರುಗಡೆ ತಲುಪುವಾಗ ಆಟೋ ರಿಕ್ಷಾ ಚಾಲಕ ಮಹಮ್ಮದ್ ಅಜೀಜ್ ರವರು ತನ್ನ ಆಟೋರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಪಿರ್ಯಾದಿದಾರರ ತಾಯಿ ಎಮ್ಮಾಳು ರವರಿಗೆ ತಲೆಗೆ ಗಾಯವಾಗಿದ್ದು ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 26/03/2021 ರಂದು ಮಧ್ಯಾಹ್ನ 2:15  ಗಂಟೆಗೆ ಕುಂದಾಪುರ  ತಾಲೂಕಿನ,  ಬಸ್ರೂರು ಗ್ರಾಮದ, ಗುಂಡಿಗೋಳಿ  ಕ್ರಾಸ್‌ ಬಳಿ, ರಾಜ್ಯ ರಸ್ತೆಯಲ್ಲಿ,  ಆಪಾದಿತ ಕೊಟ್ರಯ್ಯ ಎಂಬುವವರು KA-35-D-0099ನೇ  ಟ್ಯಾಂಕರ್‌ನ್ನು  ಕುಂದಾಪುರ  ಕಡೆಯಿಂದ ಬಸ್ರೂರು  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ರಸ್ತೆಯ  ಬಲಬದಿಗೆ  ಬಂದು, ಬಸ್ರೂರು  ಕಡೆಯಿಂದ ಕುಂದಾಪುರ  ಕಡೆಗೆ  ಜೆಲಾನಿ  ಎಂಬುವವರು  ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  KA-20-ER-8060ನೇ  ಬೈಕಿಗೆ  ಎದುರುಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ ಜೆಲಾನಿಯವರ  ಬಲಕಾಲಿಗೆ, ಹಾಗೂ ದೇಹದ  ಇತರೆ  ಅಂಗಾಂಗಳಿಗೆ  ಗಂಭೀರ ಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ ಕೆಎಂಸಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 27/03/2021 ರಂದು ಸಂಜೆ 4:35  ಗಂಟೆಗೆ ಕುಂದಾಪುರ  ತಾಲೂಕಿನ,  ಕೊಟೇಶ್ವರ ಗ್ರಾಮದ ಕಿನಾರ  ಜಂಕ್ಷನ್‌‌ ಬಳಿ,  ಕೊಟೇಶ್ವರ ರಥಭೀದಿ  ರಸ್ತೆಯಲ್ಲಿ,  ಆಪಾದಿತ  ಸುಧೀಂದ್ರ KA-20-EW-3803ನೇ ಬೈಕನ್ನು ಭೀಜಾಡಿ ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು ಕುಂದಾಪುರ ಕಡೆಯಿಂದ ಕೊಟೇಶ್ವರ ಪೇಟೆ ಕಡೆಗೆ  ಪಿರ್ಯಾದಿದಾರರಾಧ ಕೆ. ಶ್ರೀನಿವಾಸ  ಪೈ (31), ತಂದೆ: ಪಾಂಡುರಂಗ ಪೈ,  ವಾಸ: ವಾಸರಕಟ್ಟೆ, ಕೆಂಜೂರು ಗ್ರಾಮ, ಕೊಕ್ಕರ್ಣೆ, ಬ್ರಹಾವರ ತಾಲೂಕು ಇವರು  ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  KA-20-EH-7015 Honda Active ಸ್ಕೂಟರ್‌‌‌ ಗೆ ಎದುರುಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸ ಪೈ ರವರ ಬಲಕಾಲಿನ ಮಣಿಗಂಟಿಗೆ  ಒಳಜಖಂ ಗಾಯ  ಹಾಗೂ  ಸುಧೀಂದ್ರ ರವರ ಬಲಕಾಲಿಗೆ  ಗಾಯವಾಗಿ  ಕೊಟೇಶ್ವರ   ಎನ್‌.ಆರ್‌‌‌  ಆಚಾರ್ಯ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 25/03/2021 ರಂದು ತ್ರಾಸಿ, ಹೊಸಪೇಟೆ ಬಳಿ ತ್ರಾಸಿ ಬೀಚ್‌ ನಲ್ಲಿ ಕೆಲ ಹುಡುಗರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಭೀಮಾಶಂಕರ ಸಿನ್ನೂರ ಸಂಗಣ್ಣ , ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ  ತ್ರಾಸಿ ಹೊಸಪೇಟೆ ಬಳಿ ತ್ರಾಸಿ ಬೀಚ್‌ ತಲುಪಿ ಅಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನದ ಮೇಲೆ ಆಪಾದಿತರಾದ 1.ನರೇಂದ್ರ (20 ), ತಂದೆ: ಲಕ್ಷ್ಮಣ, ವಾಸ:  ಮೇಲ್ ಗಂಗೊಳ್ಳಿ, ಬಾವಿಕಟ್ಟೆ, ಗಂಗೊಳ್ಳಿ ಗ್ರಾಮ, ಕುಂದಾಪುರ  ತಾಲೂಕು , 2.ತೌಪೀಕ್ (24), ತಂದೆ: ಅಬ್ಬಾಸ್, ವಾಸ; ಕುಪ್ಪೆ ಪದವು, ಕಳಂಜಾರು ಗ್ರಾಮ, ಮಂಗಳೂರು ತಾಲೂಕು ಇವರನ್ನು ಕೆ.ಎಂ.ಸಿ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಗಾಂಜಾ ಸೇವನೆ ಮಾಡಿರುವುದಾಗಿ ತಜ್ಞರು ವರದಿ ನೀಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 27(ಬಿ) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 27/03/2021 ರಂದು ಬೆಳಿಗ್ಗೆ 05:30 ಗಂಟೆಗೆ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಕಾಪು ಹೌಸ್  ಎಂಬಲ್ಲಿ ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿರುವುದಾಗಿ ಜನಾರ್ಧನ್‌ ಕೆ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ದಾಳಿ ಮಾಡಿದಾಗ  ಓರ್ವ ಹಾಡಿಯಲ್ಲಿ ಓಡಿ ಪರಾರಿ ಆಗಿದ್ದು ಆರೋಪಿ ಅಬ್ದುಲ್ ಖಾದರ್ @ ಅಬ್ಬು (65), ತಂದೆ: ದಿ ಅಹಮ್ಮದ್ ಬ್ಯಾರಿ ,ರೆಂಜಾಳ ಕಾಪು ಮನೆ , ರೆಂಜಾಳ ಅಂಚೆ ಮತ್ತು  ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದಿದ್ದು, ಆರೋಪಿತರುಗಳು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ  15,000/- ರೂಪಾಯಿ ಮೌಲ್ಯದ ನಸು ಕಂದು ಬಣ್ಣದ ದನ 01 , ನಸು ಬಣ್ಣದ ಕರು 01 , ನಸು ಕಂದು ಬಣ್ಣದ ಕರು -01, ನಸು ಕೆನೆ ಬಣ್ಣದ ಕರುವನ್ನು ಅವುಗಳ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಕಟ್ಟಿ ಹಾಡಿಯಲ್ಲಿ ಕಟ್ಟಿ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ: 379 ಐಪಿಸಿ ಹಾಗೂ ಕಲಂ: 9,11  ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಹಾಗೂ  ಕಲಂ 11(1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1964 ಹಾಗೂ ಕಲಂ: 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ -2020  ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 28-03-2021 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080