ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ:  ಪಿರ್ಯಾದಿದಾರರಾಧ ಸಂತೋಷ್ (43) ತಂದೆ: ಪುಟ್ಟ ವಾಸ: ನಂದಿಕೆಶ್ವರ ದೇವಸ್ಥಾನದ ಬಳಿ, ಮಾಸ್ತಿಕಟ್ಟೆ ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕನ ಗಂಡ ನರಸಿಂಹ ಎಂಬುವವರು ದಿನಾಂಕ 27/02/2023 ರಂದು ಮುಂಜಾನೆ ಕೂಲಿ ಕೆಲಸಕ್ಕೆ ಹೋದವರು 9:00 ಗಂಟೆಗೆ ವಾಪಾಸು ಮನೆಗೆ ಬಂದಿದ್ದು, ಎದೆ ನೊವು ಎಂದು ಮನೆಯವರಲ್ಲಿ ಹೇಳಿರುತ್ತಾರೆ ಆಗ ಮನೆ ಹಾಗೂ ನೆರೆಮನೆಯವರು ಸೇರಿ ಅವರನ್ನು  ಹುಣ್ಸೆಮಕ್ಕಿ ಕ್ಲೀನಿಕ್ ಗೆ ಅಲ್ಲಿಂದ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಮ್ ಸಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ 11:40 ಗಂಟೆಗೆ ಖಚಿತಪಡಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಯು.ಡಿ,ಆರ್‌ ಕ್ರಮಾಂಕ 07/2023 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರ ಜೈನಾಬಿ (46) ಗಂಡ: ಅಬ್ದುಲ್ ಕರೀಂ ವಾಸ: ಅರಫ, ಉಳಿಯಾರಗೋಳಿ ಗ್ರಾಮ ಕಾಪು ಇವರ ತಂದೆಯವರಾದ ಶಾಬಾನ್ (70) ರವರು ಇವರ ಮನೆಯಲ್ಲಿ ವಾಸಮಾಡಿಕೊಂಡಿರುತ್ತಾರೆ. ಜೈನಾಬಿ ರವರ ತಂದೆಯವರಿಗೆ 10 ದಿನಗಳಿಂದ ಕೆಮ್ಮು ಮತ್ತು ಕಫ ಜಾಸ್ತಿಆಗಿದ್ದು ದಿನಾಂಕ 27/02/2023 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಜೈನಾಬಿ ರವರ ತಂದೆಯವರಿಗೆ ಕೆಮ್ಮು ಜಾಸ್ತಿ ಆಗಿ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 12:40 ಗಂಟೆ ಸಮಯಕ್ಕೆ ಜೈನಾಬಿ ರವರ ತಂದೆಯವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಜೈನಾಬಿ ರವರ ತಂದೆಯವರು ಕಫ ಜಾಸ್ತಿಯಾಗಿ  ಉಸಿರಾಟದ ತೊಂದರೆಯಿಂದ ಹಾಗೂ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಅವರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ.  ಈ ಬಗ್ಗೆ ಕಾಫು ಪೊಲೀಸ್‌ ಯು.ಡಿ,ಆರ್‌ ಕ್ರಮಾಂಕ 05/2023 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 18/02/2023 ರಂದು 17:00 ಗಂಟೆಯಿಂದ ಬೆಳಿಗ್ಗೆ ದಿನಾಂಕ 19/02/2023 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲ್ಲೂಕು  ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ  ಪಿರ್ಯಾದಿದಾರರಾದ ದಿವಾಕರ ಪೂಜಾರಿ (45) ತಂದ: ಪುದ್ದು ಪೂಜಾರಿ ವಾಸ: ಕೃಷ್ಣ ಕೃಪಾ ಹೌಸ್‌ನೇಹರು ನಗರ ಮೂಡು ಅಲೆವೂರು ಇವರ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್‌ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂನ ಕಿವಿಯ ಯೋಲೆ ಮತ್ತು ಸರ, 20 ಗ್ರಾಂನ ಪೆಂಡೆಂಟ್ ಇರುವ‌ ಚಿನ್ನದ ಸರ, 4 ಗ್ರಾಂಮ ಚಿನ್ನದ ಉಂಗುರ, 8 ಗ್ರಾಂನ ಚಿನ್ನದ ಸರ, 2 ಗ್ರಾಂನ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗ ಬಹುದುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  37/2023 ಕಲಂ:  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ಪಿರ್ಯಾದಿದಾರರಾಧ ಉದಯ್‌ ಆಚಾರಿ (46) ತಂದೆ:ರಾಮ ಆಚಾರಿ   ವಾಸ: ಶ್ರೀಮಾತಾ, ಬಡಾಕೇರೆ, ಚಿಟಿಬೆಟ್ಟು, ಕೊಟೇಶ್ಚರ ಗ್ರಾಮ ಕುಂದಾಪುರ ಇವರ ಹೆಂಡತಿ  ಶ್ರೀಮತಿ  ಮಾಲತಿರವರು  ಟಾಟಾ ಕಂಪನಿಯ GA 01 W 8950 ನೇ    ಟಿಪ್ಪರ್  ಲಾರಿಯ ವಾಹನದ ನೊಂದಣಿ ಮಾಲೀಕರಾಗಿದ್ದು ಸದ್ರಿ ಟಿಪ್ಪರ್‌ ವಾಹನದಲ್ಲಿ ಗದಗ್‌ ನಿವಾಸಿ ಗುಲಾಮ್‌ ಹುಸೇನ್‌ ದಖನಿ ಎನ್ನುವವರು ಕಳೆದ 2 ವಾರಗಳಿಂದ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ 25/02/2023 ರಂದು 18:00 ಗಂಟೆಗೆ ಸದ್ರಿ ವಾಹನದ ಚಾಲಕ ಗುಲಾಮ್‌ ಹುಸೇನ್‌ ದಖನಿ ಬೀಜಾಡಿ ಗ್ರಾಮದ ವಿಲಾಸ್‌ ಗ್ರಾನೈಟ್‌ ಅಂಗಡಿಯ ಪಕ್ಕದಲ್ಲಿರುವ ಪಿರ್ಯಾದುದಾರರ ಶ್ರೀ ಮಾತಾ ಆಟೋ ಡಿಸೇಲ್‌  ವರ್ಕ್ಸ ಗ್ಯಾರೆಜ್ ನಲ್ಲಿ ವಾಹನವನ್ನು ನಿಲ್ಲಿಸಿ  ರಾತ್ರಿ 23:30 ಗಂಟೆಯವರೆಗೆ ಸದ್ರಿ ಗ್ಯಾರೆಜ್‌ ನಲ್ಲಿ ಕೆಲಸ ಮಾಡಿ ಮನೆಗೆ ಹೋಗಿದ್ದು,  ದಿನಾಂಕ 26/02/2023 ರಂದು ಬೆಳಿಗ್ಗೆ 07:00 ಗಂಟೆಗೆ ಉದಯ ಆಚಾರಿ ಇವರು  ಬಂದು ವಾಹನವನ್ನು ನಿಲ್ಲಿಸಿದ ಗ್ಯಾರೆಜ್‌  ಬಳಿ  ನೋಡಿದಾಗ ಹೆಂಡತಿಯ ಮಾಲೀಕತ್ವದ ಟಿಪ್ಪರ್‌ ಲಾರಿಯು ಕಾಣೆಯಾಗಿರುವುದು ಗಮನಕ್ಕೆ ಬಂದು, ಅಕ್ಕಪಕ್ಕದಲ್ಲಿ ಹುಡುಕಾಡಿ ಹಾಗೂ ಚಾಲಕನಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಟಿಪ್ಪರ್ ವಾಹನವನ್ನುಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 4 ಲಕ್ಷ ರೂಪಾಯಿ ಆಗಬಹುದುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  28/2023  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಮಗು ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಸಲೀಮ್‌ (23) ತಂದೆ: ಸೈಯದ್‌ ಫೀರ್‌ ವಾಸ: ನ್ಯೂಕಾಲೊನಿ ಕೊಡಂಕುರು ಪೊಸ್ಟ್‌ ನಿಟ್ಟೂರು ಪುತ್ತುರು ಗ್ರಾಮ ಉಡುಪಿ ತಾಲೂಕು ಇವರ ಅಕ್ಕ ಅಂಜುಬಾನು (27) ಮತ್ತು ಆಕೆಯ  3 ವರ್ಷ  ಪ್ರಾಯ ಹೆಣ್ಣು ಮಗು ಮೊಯಿರಾ ಫಿರ್ದೊಸ್‌ ರವರು ತಾವು ವಾಸವಿದ್ದ  ನಗರ  ಶಿವಳ್ಳಿ ಗ್ರಾಮದ ಸಂತೋಷ ನಗರ “ಶಭಾನಾ ಮಂಜಿಲ್‌” ನಿಂದ ದಿನಾಂಕ 18/02/2023 ರಂದು ಬೆಳಿಗ್ಗೆ 07:30 ಗಂಟೆಯಿಂದ 09:00 ಗಂಟೆಯ ಮಧ್ಯಾವಧಿಯಲ್ಲಿ ಮನೆಗೆ ಬೀಗ ಹಾಕಿ ಹೊರಟು ಹೋಗಿದ್ದು ಈ ವೆರೆಗೂ ವಾಪಾಸು ಬಾರದೇ ಕಾಣೆಯಾಗಿರುತ್ಥಾರೆ ಕಾಣೆಯಾದ ಅಂಜುಬಾನು ರವರು ದಿನಾಂಕ: 20/02/2023, 23/02/2023 ಮತ್ತು 24/02/2023 ರಂದು ಸಲೀಮ್‌ ರವರಿಗೆ ಪೋನ್‌ ಕರೆ ಮಾಡಿ ನಾನು ಮನೆಗೆ ಬರುವುದಾಗಿ ತಿಳಿಸಿದ್ದು ಆದರೂ ಈವರೆಗೂ ಮನೆಗೆ ಬಂದಿರುವುದಿಲ್ಲ, ಕಾಣೆಯಾದವರ ವಿವರ ಸಾದಾರಣ ಮೈಕಟ್ಟು  ಎತ್ತರ: 5.4 ಅಡಿ ಬಣ್ಣ: ಬಿಳಿ ಮೈ ಬಣ್ಣ ಬಟ್ಟೆ: ಕಪ್ಪು ಬುರ್ಖಾ ಧರಿಸಿರುತ್ತಾರೆ ಭಾಷೆ: ಹಿಂದಿ ಕನ್ನಡ, ಕಾಣೆಯಾದ ಮಗುವಿನ ಚಹರೆ: ಬಿಳಿ ಬಣ್ಣ, ಎತ್ತರ:3 ಅಡಿ, ಬಣ್ಣ: ಬಿಳಿ ಮೈ ಬಣ್ಣ ಭಾಷೆ: ಹಿಂದಿ ಸ್ವಲ್ಪ ಸ್ವಲ್ಪ,ಮಾತಾಡುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಅಪರಾಧ ಕ್ರಮಾಂಕ 36/2023  ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾಧ ಪಾರ್ವತಿ ಶೆಡ್ತಿ ((76) ತಂದೆ: ದಿ. ಸದಾಶಿವ ಶೆಟ್ಟಿ ವಾಸ:123 ತೆಕ್ಕಟ್ಟೆ ಗ್ರಾಮ , ಕುಂದಾಪುರ ಇವರು ದಿನಾಂಕ 25/02/2023 ರಂದು 16:30 ಗಂಟೆಗೆ ತಮ್ಮ ಜಾಗದಲ್ಲಿ ತೆಂಗಿನ ಮರಕ್ಕೆ ನೀರನ್ನು ಬಿಡುತ್ತಾ ಇರುವಾಗ ನೆರೆಮನೆಯ ಜಯರಾಮ ಶೆಟ್ಟಿ ಅಳಿಯ ಸುಧೀರ ಶೆಟ್ಟಿ ಎಂಬುವವರು ಏಕಾಎಕಿ ಪಾರ್ವತಿ ಶೆಡ್ತಿ ರವರ ಜಾಗಕ್ಕೆ ನುಗ್ಗಿ ಅಕ್ರಮ ಪ್ರವೇಶ ಮಾಡಿ, ಜಯರಾಮ ಶೆಟ್ಟಿ ರವರು ಅವಾಚ್ಯ ಶಬ್ದದಿಂದ ಬೈದಿದ್ದು, ಸದ್ರಿ ಜಾಗದಲ್ಲಿ 12 ಫೀಟ್ ರೋಡಿಗೆ ಜಾಗ ಬಿಡಬೇಕೆಂದು ಹೇಳಿ ಆರೋಪಿಗಳಿಬ್ಬರೂ ಕೈಯಿಂದ ದೂಡಿ ಹೊಡೆದಿದ್ದು ಅಲ್ಲದೇ ಆರೋಪಿಗಳಿಬ್ಬರೂ “ನಮಗೆ ರೋಡಿಗೆ 12 ಫೀಟ್ ಜಾಗ ಬಿಡದೇ ಹೋದರೆ ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ” ಎಂಬುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  31/2023  ಕಲಂ: 447, 504, 323, 354, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾಧ ಸೀತಾ (62) ಗಂಡ:ಸೋಮ ಕುಲಾಲ್ ವಾಸ: ಸುಗೋರಿ ಬಿದ್ಕಲಕಟ್ಟೆ, ಹರ್ದಳ್ಳಿ-ಮಂಡಳ್ಳಿ ಗ್ರಾಮ ಕುಂದಾಪುರ ಇವರು ದಿನಾಂಕ 26/02/2023 ರಂದು ಸುಮಾರು 20:00 ಗಂಟೆಗೆ ಮನೆಯ ಹೊರಗಡೆ ಮೆಟ್ಟಿಲ ಮೇಲೆ  ಮಾತನಾಡುತ್ತಾ ಕುಳಿತಿದ್ದು ವಿಶ್ವನಾಥ ಮತ್ತು ಅವರ ಬೇಕರಿಯ 8 ರಿಂದ 9 ಹುಡುಗರು ಸೀತಾ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದಿದ್ದಲ್ಲದೇ ಸೀತಾ ರವರ ಕುತ್ತಿಗೆಗೆ ಕೈ ಹಾಕಿ ದೂಡಿದಾಗ ಸೀತಾ ರವರು ಬೊಬ್ಬೆ ಹಾಕಿರುತ್ತಾರೆ. ಅಗ ಮನೆ ಒಳಗಡೆ ಇದ್ದ ಇವರ ಗಂಡ ಮತ್ತು ಮಗ ಹೊರಗಡೆ ಬಂದಿದ್ದು ಮಗ ಗಣೇಶನನ್ನು ಎಲ್ಲರೂ ಸೇರಿ ಅಂಗಳದಲ್ಲಿ ದೂಡಿ ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಯಿಂದ ಎರಡೂ ಕಾಲಿಗೆ ಹಾಗೂ ಬಲಕಣ್ಣಿಗೆ ಬಲವಾಗಿ ಹೊಡೆದಿರುತ್ತಾರೆ. ಆರೋಪಿಯು “ನಿನ್ನನ್ನು ಹಾಗೂ ನಿನ್ನ ಮಗನನ್ನು ಜೀವ ಸಮೇತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  143, 147, 148, 447, 504, 323, 354, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾಧ ವೀಣಾ ಬಿ. ಪೂಜಾರಿ (48) ಗಂಡ: ಬಾಲಕೃಷ್ಣ ವಾಸ:ಕೆರೆಬಳಿ ಹೌಸ್‌, ಅಲಂಗಾರ್‌, ನಡ್ಸಾಲು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರು ಹಾಗೂ ದೊಡ್ಡಮ್ಮನ ಮಗ ಆರೋಪಿ ರಾಘವ ರವರು ತನ್ನ ಅಜ್ಜಿಯ ಪಿತ್ರಾರ್ಜಿತ ಆಸ್ತಿಯಲ್ಲಿರುವ ಒಂದೇ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 26/02/2023 ರಂದು ವೀಣಾ ಬಿ. ಪೂಜಾರಿ ರವರು ತನ್ನ ಮನೆಯಲ್ಲಿ ಪ್ರತ್ಯೇಕವಾಗಿರಿಸಿದ್ದ ತನ್ನ ಪಾಲಿನ ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆಯಲು ಮುಂದಾದಾಗ ಆರೋಪಿಯು ಆಕ್ಷೇಪ ಮಾಡಿರುತ್ತಾನೆ.  ದಿನಾಂಕ 27/02/2023 ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಆರೋಪಿಯು ಕೂಲಿ ಕೆಲಸದವನನ್ನು ಕರೆಸಿ ಅದೇ ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆಯಲು ಪ್ರಾರಂಭಿಸಿದಾಗ ವೀಣಾ ಬಿ. ಪೂಜಾರಿ ರವರು ಆಕ್ಷೇಪಿಸಿದ್ದಕ್ಕೆ ಆರೋಪಿಯು ಇವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಅವನ ಕೈಯಲ್ಲಿ ಇದ್ದ ಸ್ಕ್ರೂ ಡ್ರೈವರ್‌ ನಿಂದ ಎಡಕಣ್ಣಿನ ಬಳಿ ಚುಚ್ಚಲು ಬಂದಾಗ ಪಿರ್ಯಾದಿದಾರರು ತಪ್ಪಿಸಿದ್ದರೂ ಎಡಕಣ್ಣಿನ ಬಳಿ ತಾಗಿ ಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆಗೆ ಆಸ್ಪತ್ರೆಗೆ ಹೊರಟಾಗ “ಹೋಗು ಈವಾಗ ತಪ್ಪಿಸಿಕೊಂಡೆ ಮುಂದಕ್ಕೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಹಾಕಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಅಪರಾಧ ಕ್ರಮಾಂಕ 21/2023, ಕಲಂ: 504, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿದಾರರಾಧ ಚಂದ್ರಕಲಾ (62) ಗಂಡ:ಶಿವರಾಮ ಶೆಟ್ಟಿ ವಾಸ: ಅರೆಬೈಲು ತೆಕ್ಕಟ್ಟೆ ಗ್ರಾಮ ಕುಂದಾಪುರ ಇವರು ದಿನಾಂಕ 25/02/2023 ರಂದು ಸುಮಾರು 16:30 ಗಂಟೆಗೆ ದಾರಿಯಲ್ಲಿ ನೆರೆಮನೆಯವರಾದ ಪಾರ್ವತಿ ಶೆಡ್ತಿ, ವಿಮಲ ಶೆಡ್ತಿ, ಚಂದ್ರಕಲಾ ಶೆಡ್ತಿ ಮತ್ತು ದೇವಿ ಪ್ರಸಾದ ಶೆಟ್ಟಿ ರವರು ತೆಂಗಿನ ಹೆಡೆ ಹಾಗೂ ಕಲ್ಲನ್ನು ಮನೆಗೆ ಬರುವ ದಾರಿಯಲ್ಲಿ ಅಡ್ಡ ಇಟ್ಟಿದ್ದು ಹಾಗೂ ಗಡಿ ಕಲ್ಲನ್ನು ಕೀಳುತ್ತಿದ್ದನ್ನು ನೋಡಿ ಅಲ್ಲೆ ಇದ್ದ  ಪಾರ್ವತಿ ಶೆಡ್ತಿ ರವರನ್ನು ವಿಚಾರಿಸಿದ್ದಲ್ಲಿ ಎಲ್ಲರೂ ಏಕಾಏಕಿ ಚಂದ್ರಕಲಾ ರವರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮೈಗೆ ಕೈ ಹಾಕಿ ದೂಡಿದ್ದಲ್ಲದೇ ಧರಿಸಿದ ಸೀರೆ ಎಳೆದು ಸಾರ್ವಜನಿಕವಾಗಿ ಅಪಮಾನ ಮಾಡಿರುತ್ತಾರೆ. ಚಂದ್ರಕಲಾ ರವರು ಬೊಬ್ಬೆ ಹಾಕಿದಾಗ ಇವರ ತಮ್ಮ ಓಡಿ ಬರುವುದನ್ನು ನೋಡಿ “ದಾರಿಯ ವಿಚಾರದಲ್ಲಿ ಪುನಃ ಬಂದ್ರೆ ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಅಪರಾಧ ಕ್ರಮಾಂಕ 33/2023  ಕಲಂ: 504, 323, 354, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2023 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080