ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ: ಭಾರತಿ ನಾಯ್ಕ ಪ್ರಾಯ: 38 ವರ್ಷ ಗಂಡ: ಗೋಪಾಲ ನಾಯ್ಕ ವಾಸ: ಹುಲ್ಕಡಕಿ ಗುಡಿಕೇರಿ ಮನೆ, ಯೆಳಜಿತ್ ಗ್ರಾಮ ಇವರು ದಿನಾಂಕ 26/02/2023  ರಂದು 21:00 ಗಂಟೆಗೆ   ಅವರ ಅಕ್ಕನ ಮಗನಾದ ಉದಯ ಮರಾಠಿ ಯವರ  KA 20 HA 2350 ನೇ ಟಿವಿಎಸ್ ರೈಡರ್ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರರಾಗಿ ಕುಳಿತುಕೊಂಡು  ಹುಲ್ಕಡ್ಕಿಯ ಮನೆಯಿಂದ ಅರೆಶಿರೂರಿನಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ  ನೋಡುವ ಸಲುವಾಗಿ   ಹೊರಟು  ಯೆಳಜಿತ್ ಗ್ರಾಮದ ಹಳ್ಳಿಗೋಳಿ  ಎಂಬಲ್ಲಿ  ಉದಯ ಮರಾಠಿ ಆತನ ಬಾಬ್ತು ಮೋಟಾರು ಸೈಕಲ್ ನ್ನು ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ನಾಯಿಯೊಂದು  ಒಮ್ಮೇಲೆ ಬೈಕ್ ಗೆ ಅಡ್ಡ ಬಂದ ಕಾರಣ , ಉದಯ ಮರಾಠಿ ಆತನ ಬಾಬ್ತು ಮೋಟಾರು ಸೈಕಲ್ ಗೆ ಒಮ್ಮೇಲೆ ಬ್ರೇಕ್  ಹಾಕಿದ ಪರಿಣಾಮ ಹಿಂಬದಿ ಸಹ ಸವಾರಳಾದ ಫಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ,  ಪರಿಣಾಮ ಫಿರ್ಯಾದಿದಾರರಿಗೆ ಮುಖಕ್ಕೆ  ತರಚಿದ ಗಾಯ , ಹಣೆಗೆ  ರಕ್ತ ಗಾಯ ಹಾಗೂ ತಲೆಗೆ ಒಳ ಜಖಂ ಆದವರನ್ನು  ಉದಯ ಮರಾಠಿ ಹಾಗೂ ಸ್ಥಳೀಯರು ಉಪಚರಿಸಿ ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದು ಕೊಂಡು ಬಂದಲ್ಲಿ  ವೈದ್ಯರು ಪರೀಕ್ಷೀಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 32/2023 ಕಲಂ:279, 337  ಭಾದಂಸಂ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಪಿರ್ಯಾದಿ: ಅಣ್ಣಪ್ಪ, ಪ್ರಾಯ: 54 ವರ್ಷ, ತಂದೆ: ದಿ. ನಾರಾಯಣ ಶೆಟ್ಟಿಗಾರ್‌, ವಾಸ: ಮಾತೃ ಕೃಪಾ ಮನೆ, ಸಾಲಿಕೇರಿ, ವಾರಂಬಳ್ಳಿ ಗ್ರಾಮ  ಇವರು ದಿನಾಂಕ 27.02.2023 ರಂದು ಬ್ರಹ್ಮಾವರ ಮಾರ್ಕೇಟ್‌ಬಳಿ ಇರುವ ಶ್ರೀ ಮಾಸ್ತಿಯಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು, ಅವರ ಮನೆಯಾದ ಸಾಲಿಕೇರಿಗೆ ಹೋಗವರೇ ವಾರಂಬಳ್ಳಿ ಗ್ರಾಮದ, ಆಕಾಶವಾಣಿ ಜಂಕ್ಷನ್‌ಬಳಿ ಬಂದು ಕುಂದಾಪುರ – ಉಡುಪಿ ರಾಹೆ 66 ರ ರಸ್ತೆಯನ್ನು ದಾಟಲು ನಿಂತುಕೊಂಡಿರುವಾಗ ಸಂಜೆ 7:20 ಗಂಟೆಯ ಸುಮಾರಿಗೆ ಕುಂದಾಪುರ ಕಡೆಯಿಂದ ಆರೋಪಿ ಸಂತೋಷ್‌ಕುಮಾರ್ ಎಂಬವರು ಅವರ KA.‌.HN.8317 ನೇ ಮೋಟಾರ್‌ಸೈಕಲ್‌ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಫಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ  ಬಲ ಕಣ್ಣಿನ ಮೇಲ್ಬಾಗದ ಹಣೆಯ ಬಳಿ ರಕ್ತಗಾಯ ಅಲ್ಲದೇ ಬಲ ಕಣ್ಣಿನ ಕೆಳ ಭಾಗದ ದವಡೆಯ ಬಳಿ ಒಳ ಗುದ್ದಿದ ನೋವು ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ . 33/2023 : ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ

  • ಶಿರ್ವ: ದಿನಾಂಕ 23/02/2023 ರಂದು ಬೆಳಗ್ಗೆ  10.00  ಗಂಟೆಗೆ ಕಾಪು ತಾಲೂಕು  ಬೆಳಪು ಗ್ರಾಮದ ವಿನಯನಗರ ಬಳಿ ಆಪಾದಿತ ಸುಫಿಯಾನ(22)ತಂದೆ:ಉಮ್ಮರ್‌,ವಾಸ:ಸರ್ವೇನಂಬ್ರ 55/ಪಿ4,ವಾಜಪೇಯಿ ಬಡಾವಣೆ, ಬೆಳಪುಗ್ರಾಮ  ಮತ್ತುಅಂಚೆ ಕಾಪು   ರವರು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತರು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  13/2022, ಕಲಂ 27(b) NDPS Act. ರಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವ: ದಿನಾಂಕ 23/02/2023 ರಂದು ಬೆಳಗ್ಗೆ 10.00  ಗಂಟೆಗೆ ಕಾಪು ತಾಲೂಕು  ಬೆಳಪು ಗ್ರಾಮದ ವಿನಯನಗರ ಬಳಿ ಆಪಾದಿತ ಮುಸ್ತಾಕ್‌(38) ತಂದೆ:ಇಬ್ರಾಹಿಂ, ವಾಸ: ಸರ್ವೇ ನಂಬ್ರ: 55/ಪಿ4, ವಾಜಪೇಯಿ ಬಡಾವಣೆ, ಬೆಳಪು  ಗ್ರಾಮ  ಮತ್ತು  ಅಂಚೆ,ಕಾಪು  ಇವನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು,ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಈ ಬಗ್ಗೆ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  14/2022, ಕಲಂ 27(b) NDPS Act. ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 28-02-2023 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080