ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ : ದಿನಾಂಕ 27/02/2022 ರಂದು ಮಧ್ಯಾಹ್ನ  2:00 ಗಂಟೆಗೆ, ಕುಂದಾಪುರ ತಾಲೂಕು, ಕಸಬಾ ಗ್ರಾಮದ ಹೊಸ ಬಸ್‌ ನಿಲ್ದಾಣದ ಹತ್ತಿರದ ಶೆಟ್ಟಿ ಲಂಚ್‌ ಹೋಮ್‌ ಬಳಿ ಪುರಸಭಾ ರಸ್ತೆಯಲ್ಲಿ ಆಪಾದಿತ ಕೆವಿನ್‌ ‌ರೋಯ್ಸ್‌ ‌‌‌ರಾವ್‌ ಎಂಬುವವರು ಪುರಸಭಾ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದ  KA-22-MC-3455 ಹುಂಡೈ Creta ಕಾರನ್ನು ಏಕಾಏಕಿ ಯಾವುದೇ ಸೂಚನೆ ನೀಡದೇ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ಬಲಬದಿಗೆ ಚಾಲನೆ ಮಾಡಿ, ಕುಂದಾಪುರ ಶಾಸ್ತ್ರಿಸರ್ಕಲ್‌ ‌‌ಕಡೆಯಿಂದ  ಹೊಸ ಬಸ್‌ ‌ನಿಲ್ದಾಣದ ಕಡೆಗೆ  ಪಿರ್ಯಾದಿದಾರರಾದ ಲಕ್ಷ್ಮಿ ನಾರಾಯಣ ಆಚಾರ್‌ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-V-9486ನೇ ಪಲ್ಸರ್‌ ಬೈಕಿಗೆ  ಅಪಘಾತಪಡಿಸಿದ  ಪರಿಣಾಮ ಲಕ್ಷ್ಮಿ ನಾರಾಯಣ ಆಚಾರ್‌ ರವರ ಎಡಕಾಲಿಗೆ ಹಾಗೂ ಎಡಕೈಗೆ ಗಾಯನೋವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಹೇಮ, (34),  ಗಂಡ: ವಿಶ್ವನಾಥ ಪೂಜಾರಿ, ವಾಸ: ದುರ್ಗಾಶ್ರೀ, ಮೇಲ್ಮನೆ, ಹೊನ್ನಾಳ, ಹಾರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಜೊತೆ ವಾಸವಾಗಿರುವ ಅವರ ಅಜ್ಜಿ   ಅಕ್ಕಣಿ ಪೂಜಾರ್ತಿ (70) ರವರು ದಿನಾಂಕ 26/02/2022 ರಂದು ರಾತ್ರಿ 8:30 ಗಂಟೆಗೆ ಊಟ ಮಾಡಿ ಮಲಗಿದ್ದವರು, ರಾತ್ರಿ 12:00 ಗಂಟೆಯ ಸಮಯಕ್ಕೆ ನೋಡಿದಾಗ ಮಲಗಿದ ಜಾಗದಲ್ಲಿ ಕಾಣದೆ ಇದ್ದು, ನಂತರ ಆಸುಪಾಸಿನಲ್ಲಿ ಹುಡುಕಾಡಿದಾಗ ಪತ್ತೆಯಾಗದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ರಾಜೇಶ್ ಪೂಜಾರಿ (35), ತಂದೆ: ಶೇಖರ್ ಪೂಜಾರಿ, ವಾಸ: ದೀಪ ನಿವಾಸ, ಅಲಂಗಾರು, ಸಂಪೆಕೆರೆ ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಶೇಖರ ಪೂಜಾರಿ(62) ರವರು ಕೃಷಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 27/02/2022 ರಂದು ಸಂಜೆ  5:15 ಗಂಟೆಗೆ ಮನೆಯ ಸಮೀಪದ ತೆಂಗಿನ ಮರದಲ್ಲಿದ್ದ ತೆಂಗಿನ ಕಾಯಿಯನ್ನು ಕೊಯ್ಯಲು ಮರ ಹತ್ತುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ  ಬಿದ್ದು ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ಮಂಜುನಾಥ  (36), ತಂದೆ: ರಘು ಪೂಜಾರಿ , ವಾಸ:ರಘು ಗೌರಿ ನಿಲಯ ಕೋಣಿ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಶ್ರೀನಿವಾಸ(31) ಇವರು ಎಮ್ ಬಿ ಎ ವಿಧ್ಯಾಭ್ಯಾಸ ಮಾಡಿ  2 ವರ್ಷಗಳಿಂದ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದು,  ದಿನಾಂಕ 27/02/2022 ರಂದು 13:00 ಗಂಟೆಗೆ ಪಿರ್ಯಾದಿದಾರರು ಮನೆಗೆ ಬಂದಾಗ ಪಿರ್ಯಾದಿದಾರರ ತಮ್ಮ ಶ್ರೀನಿವಾಸ ಮಲಗಿಕೊಂಡಿದ್ದು ಪಿರ್ಯಾದಿದಾರರು ಎಬ್ಬಿಸಲು ಹೋದಾಗ ಮಾತನಾಡದೇ ಇದ್ದು, ಮೈ ಮುಟ್ಟಿದಾಗ ತಣ್ಣಗಾಗಿದ್ದನ್ನು ನೋಡಿ  ನಂತರ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯರು ಶ್ರೀನಿವಾಸರವರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿದ್ದು , ಪಿರ್ಯಾದಿದಾರರ ತಮ್ಮ ಶ್ರೀನಿವಾಸ ಆರೋಗ್ಯ ಸಮಸ್ಯೆಯಿಂದಲೋ ಅಥವಾ ಹ್ರದಯಾಘಾತದಿಂದಲೋ ದಿನಾಂಕ 27/02/2022 ರಂದು 13:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ವನಿತ (29), ಗಂಡ: ಪುರುಷೋತ್ತಮ, ವಾಸ: ಪದ್ಮ ನಿಲಯ, ಸೊಸೈಟಿ ಕಾಲೋನಿ, ಅಲೆವೂರು ಗ್ರಾಮ  ಇವರು ದಿನಾಂಕ  27/02/2022 ರಂದು ಸಂಜೆ 05:00 ಗಂಟೆಗೆ  ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಆಟವಾಡಲು ಹೋಗಿದ್ದ  ತನ್ನ ಮಗನನ್ನು ಕರೆಯಲು ಹೋದ ಸಮಯ ನೆರೆಮನೆಯ ಕೆ ಅನಿಲ ದತ್ತ (55), ತಂದೆ: ಪದ್ಮನಾಭ, ವಾಸ:ಸ್ಮಿತಾ ನಿಲಯ, ಸೊಸೈಟಿ ಕಾಲೋನಿ, ಅಲೆವೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತ ಏಕಾಎಕಿ ಸಾರ್ವಜನಿಕ ರಸ್ತೆಯಲ್ಲಿ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022, ಕಲಂ: 354, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080