ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಧರ ನಾಯ್ಕ (28),  ತಂದೆ: ದಿ: ಗೋವಿಂದ  ನಾಯ್ಕ, ವಾಸ: ಬಸ್ರೀಬೇರು ವಲ್ತಾರು ಹೌಸ್‌ ಜಡ್ಕಲ್‌  ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 26/02/2022 ರಂದು  ಬೆಳಗ್ಗೆ  ತನ್ನ  KA-19-EW-9930 ನೇ ಮೋಟಾರು ಸೈಕಲ್‌ನ್ನು ಮಂಗಳೂರಿನಿಂದ ತನ್ನ ಮನೆಯಾದ ಬಸ್ರಿಬೇರಿಗೆ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 09:30 ಗಂಟೆಗೆ ಮುದೂರು ಗ್ರಾಮ ಮುದೂರು ಮೈದಾನದ ಟೆಲಿಪೋನ್‌ ಎಕ್ಸ್‌ಚೇಂಜ್‌ ಬಳಿ  ತಲುಪಿದಾಗ ಎದುರುಗಡೆಯಿಂದ ಉದಯನಗರ ಕಡೆಯಿಂದ ಜಡ್ಕಲ್‌ ಕಡೆಗೆ ಆರೋಪಿ ಶೇಖರ  ತನ್ನ KA-20-EU-3752  ನೇ ಮೋಟಾರು ಸೈಕಲ್‌ನ್ನು ವೇಗವಾಗಿ ನಿರ್ಲಕ್ಷತನದಿಂದ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲ ಕೈ  ಹೆಬ್ಬೆರಳಿನ  ಬಳಿ  ಮೂಳೆ ಮುರಿತ ಹಾಗೂ ಬಲ ಕಾಲಿನ ಮೊಣಗಂಟಿನ  ಮೇಲ್‌ಬದಿ  ಮೂಳೆ ಮುರಿತ  ಹಾಗೂ ಮೊಣಗಂಟಿಗೆ ಗುದ್ದಿದ ಒಳ ಜಖಂ ನೋವು ಉಂಟಾಗಿ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿ ಶೇಖರ ಆಸ್ಪತ್ರೆಯ ಚಿಕಿತ್ಸೆಯ ಖರ್ಚು ವೆಚ್ಚವನ್ನು ನೀಡುವುದಾಗಿ ಹೇಳಿ  ಈಗ  ಆಸ್ಪತ್ರೆ ಚಿಕಿತ್ಸೆಯ ಖರ್ಚು ವೆಚ್ಚ  ಹೆಚ್ಚಾದ  ಬಗ್ಗೆ ಕೊಡಲು ನಿರಾಕರಿಸಿದ ಕಾರಣ ದೂರು ನೀಡಲು ವಿಳಂಬವಾಗಿರುತ್ತದೆ. ಈ  ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ:  ದಿನಾಂಕ 27/02/2022 ರಂದು ಪಿರ್ಯಾದಿದಾರರಾದ ನೇತ್ರಾವತಿ(26), ತಂದೆ:ಶರತ, ವಾಸ:ಎಣ್ಣೆಬಾಳು ಕೂಡ್ಲು ಕನ್ಯಾನ  ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಚಂದ್ರ ಪೂಜಾರಿ(63) ರವರು ಮನೆಯ ಹತ್ತಿರದಲ್ಲಿರುವ ಹುಣೆಸೆ  ಮರಕ್ಕೆ ಹುಣಸೆ ಕಾಯಿ ಕೊಯ್ಯಲು ಹತ್ತಿದ್ದು ಬೆಳಿಗ್ಗೆ 10:15 ಗಂಟಗೆ ಹುಣಸೆ ಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದು, ತೀವ್ರ ಒಳ ಜಖಂ ಆದ ಪಿರ್ಯಾದಿದಾರರ ತಂದೆಯರನ್ನು ಕೂಡಲೇ ನೆರೆಕೆರೆಯವರೆಲ್ಲ ಸೇರಿ ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಕುಂದಾಪುರದ ಚಿನ್ಮಯಿ ಆಸ್ಲತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದು. ಚಿನ್ಮಯಿ ಆಸ್ಪತ್ರೆಯ ವೈಧ್ಯಾಧಿಕಾರಿಯರು ಚಿಕಿತ್ಸೆ ನೀಡಿದ್ದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿದಾರರ ತಂದೆಯವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವೈಧ್ಯಾಧಿಕಾರಿಯವರು ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ 28/02/2022 ರಂದು ಬೆಳಿಗ್ಗೆ 07:30 ಗಂಟೆಗೆ ಬ್ರಹ್ಮಾವರ ತಾಲೂಕು ವಂಡಾರು ಗ್ರಾಮದ ಹೊಸ್ಮಕ್ಕಿ ಎಂಬಲ್ಲಿ ಉಬ್ಬಸ ಅನಾರೋಗ್ಯದಿಂದ ಬಳಲುತ್ತಿದ್ದ ಪಿರ್ಯಾದಿದಾರರಾದ ಶ್ರೀಮತಿ ರೇವತಿ (35), ಗಂಡ: ಸಂತೋಷ ಕುಲಾಲ್ , ಹೊಸ್ಮಕ್ಕಿ, ವಂಡಾರು ಗ್ರಾಮ  ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ  ತಂದೆ ವೆಂಕಟಕುಲಾಲ್ (72) ಇವರನ್ನು ಚಿಕಿತ್ಸೆಯ ಬಗ್ಗೆ ಮನೆಯಿಂದ ಉಡುಪಿ ಜಿಲ್ಲಾ ಅಜ್ಜ್ರರಕಾಡು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಬೆಳಿಗ್ಗೆ 11:55 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 03/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶೆಹೆನಾಜ್ (34), ತಂದೆ: ಉಸ್ಮಾನ್, ವಾಸ: ಪ್ಲಾಟ್ ನಂಬ್ರ: 1305,ಪ್ರಿನ್ಸ್ ಪ್ಯಾಲೇಸ್,ಉಡುಪಿ ಇವರು ಅಪಾದಿತ ಮೊಹಮ್ಮದ್ ಯೂಸುಫ್ ಎಂಬುವವರೊಂದಿಗೆ ದಿನಾಂಕ 01/01/2006 ರಂದು ವಿವಾಹವಾಗಿದ್ದು ಗಂಡು ಮಗು ಇರುತ್ತದೆ. ಆಪಾದಿತನು ಪಿರ್ಯಾದಿದಾರೊಂದಿಗೆ ಒಂದೆರಡು ವರ್ಷ ಅನೋನ್ಯವಾಗಿದ್ದು, ನಂತರದ ದಿನಗಳಲ್ಲಿ ಪಿರ್ಯಾದಿದಾರರಿಗೆ ನಿನ್ನ ತಂದೆ ಮದುವೆಯ ಸಮಯ ಏನೂ ನೀಡಿಲ್ಲ ಈಗಾಲಾದರೂ ಹಣವನ್ನು ನೀಡಬೇಕು ಇಲ್ಲದಿದ್ದಲ್ಲಿ  ನಿನಗೆ ನಮ್ಮ ಮನೆಯಲ್ಲಿ ಜಾಗವಿಲ್ಲ ನಿನಗೆ ತಲಾಖ್ ನೀಡಿ ನಾನು ಬೇರೆ ಮದುವೆ ಆಗುತ್ತೇನೆ ಎಂದು ಪಿಡಿಸುತ್ತಿದ್ದು, ಆಗಾಗ ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದನು.  ಆತನ ಹಿಂಸೆ ತಾಳಲಾರದೇ ಪಿರ್ಯಾದಿದಾರರು ಮಗುವಿನೊಂದಿಗೆ ತಾಯಿ ಮನೆಗೆ ಬಂದು ಉದ್ಯೋಗದ ಬಗ್ಗೆ ವಿದೇಶಕ್ಕೆ ಹೋಗಿರುತ್ತಾರೆ. ದಿನಾಂಕ 25/02/2022 ರಂದು ಮದ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರ ತಂದೆ ಮತ್ತು ತಾಯಿ ಉಡುಪಿ ಗುಂಡಿಬೈಲುಗೆ ಹೋಗುತ್ತಿದ್ದ ಸಂದರ್ಭ ಆಪಾದಿತ ಅವರನ್ನು ತಡೆದು ನಿಲ್ಲಿಸಿ ನಿಮ್ಮ ಮಗಳಿಗೆ ನಾನು ಹಣ ಕೊಡಲು ಹೇಳಿದ್ದೆ. ಆದರೆ ನೀವಾಗಲೀ ನಿಮ್ಮ ಮಗಳಾಗಲೀ ಈ ಬಗ್ಗೆ ಏನೂ ಮಾಡಿಲ್ಲ.ಈ ನಾನು ನಿಮ್ಮ ಮಗಳಿಗೆ  ತಲಾಖ್, ತಲಾಖ್, ತಲಾಖ್ ಹೇಳುತ್ತಿದ್ದೇನೆ. ಇನ್ನುನಿಮ್ಮ ಮಗಳ ಸಂಬಂಧ ಕಡಿದು ಹೋಯಿತು. ನಾನು ಬೇರೆ ಮದುವೆ ಆಗಿದ್ದೇನೆ. ನಿಮ್ಮಿಂದ ನನಗೆ  ಏನೂ ಮಾಡಲಾಗುವುದಿಲ್ಲ. ಈ ವಿಚಾರ ಪೊಲೀಸ್ ರಿಗೆ ತಿಳಿಸಿದಲ್ಲಿ ನಿಮ್ಮನ್ನು, ನಿಮ್ಮ ಮಗಳನ್ನು ಜೀವ ಸಹಿತ  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2022  ಕಲಂ: 498(ಎ), 323, 341, 506 ಐಪಿಸಿ ಮತ್ತು ಕಲಂ: 4 ಡಿಪಿ ಕಾಯ್ದೆ ಮತ್ತು ಕಲಂ: 4 Muslim Women Protection Of Right On Marriage Act-2019 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080