ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ದಿನಾಂಕ 27/02/2021 ರಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಪಿರ್ಯಾದಿದಾರರಾಧ ರಾಮಚಂದ್ರ ಶೆಟ್ಟಿ, (63) ತಂದೆ: ಗಿರಿಯ ಶೆಟ್ಟಿ, ವಾಸ: ಅಯೋಧ್ಯ, ಕುಚ್ಚಿಕಾಡು, ಕುಚ್ಚಿಕಾಡು, ಪಳ್ಳಿಗುಡ್ಡೆ, ಕಟಪಾಡಿ ಅಂಚೆ ,ಕೋಟೆ ಗ್ರಾಮ, ಕಾಪು ಇವರ ಮಾವ ಶಂಕರ ಶೆಟ್ಟಿ ಎಂಬುವವರು ಕಾಪು ತಾಲೂಕು  ಬಡಾ ಗ್ರಾಮದ ಉಚ್ಚಿಲ ಪೋಲ್ಯ ರಸ್ತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯ ಪೂರ್ವ ಅಂಚಿನಲ್ಲಿ ರಸ್ತೆ ದಾಟಲು ನಿಂತಿರುವ ಸಮಯ ಆರೋಪಿ ಮೊಹಮ್ಮದ್ ರಾಜಿಕ್  ಎಂಬುವವರು KA-14-EQ-5848ನೇ ನಂಬ್ರದ ಮೋಟಾರು ಸೈಕಲ್ ನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ  ನಿರ್ಲಕ್ಷವಾಗಿ ಚಲಾಯಿಸಿಕೊಂಡು ಬಂದು ಶಂಕರ್ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ ಶೆಟ್ಟಿ ಯವರ ಎಡಕಾಲಿಗೆ, ಹಣೆಗೆ ಹಾಗೂ ಮುಖಕ್ಕೆ ಮೈಗೆ ತರಚಿದ ಗಾಯವಾಗಿರುವುದಲ್ಲದೇ ಎಡಕಾಲಿನ ಮೂಳೆ ಮುರಿತವಾಗಿರುತ್ತದೆ ಗಾಯಾಳು ಉಡುಪಿ ಆದರ್ಶ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 27/02/2021 ರಂದು ಸಮಯ ಸುಮಾರು ಬೆಳಿಗ್ಗೆ 10:00 ಗಂಟೆಗೆ, ಕುಂದಾಪುರ  ತಾಲೂಕಿನ,ಕಸಬಾ ಗ್ರಾಮದ, ಹೋಲಿ ರೋಜರಿ ಚರ್ಚ್ ಮೇನ್ ಗೇಟ್ ಬಳಿ ಆಪಾದಿತ ಅಭಿಷೇಕ್  ಎಂಬವರು KA-20-EP-7654ನೇ ಸ್ಕೂಟರ್‌ನಲ್ಲಿ ಪಿರ್ಯಾದಿದಾರರಾದ ಕಿರಣ್ (18) ತಂದೆ: ಕೃಷ್ಣ ಪೂಜಾರಿ ವಾಸ: ಲಚ್ಚ ನಿಲಯ, ಚರ್ಚ್ರೋಡ್ ಕುಂದಾಪುರ ಕಸಬಾ ಗ್ರಾಮ ಕುಂದಾಪುರ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅಚಲ ಸಭಾಭವನ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು, ಹೋಲಿ ರೋಜರಿ ಚರ್ಚ್ ಮೇನ್ ಗೇಟ್ ಬಳಿ  ತಲುಪುವಾಗ ನಾಯಿಯೊಂದು ಅಡ್ಡ ಬಂದ ಕಾರಣ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಯತೀರ ಬಲಭಾಗಕ್ಕೆ  ಹೋಗಿ ನೀರು ಹೋಗುವ ಚರಂಡಿಗೆ ಬಿದ್ದ ಪರಿಣಾಮ ಕಿರಣ ರವರ ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಒಳ ಜಖಂ, ಎಡ ಭುಜಕ್ಕೆ ಓಳನೋವು ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಫಿರ್ಯಾದಿದಾರರಾದ ಶ್ರೀಮತಿ ಸವಿತಾ ಹೆಗ್ಡೆ (38) ಗಂಡ: ಅಜಿತ್ ಹೆಗ್ಡೆ ವಾಸ: ಮಂಜರಬೆಟ್ಟು ಹೆಬ್ರಿ ಗ್ರಾಮ ಹೆಬ್ರಿ ಇವರ ಗಂಡ ಅಜಿತ್ ಹೆಗ್ಡೆ(42) ರವರು ದಿನಾಂಕ 25/02/2021 ರಂದು ರಾತ್ರಿ ಹೆಬ್ರಿ-ಬಚ್ಚಪ್ಪು ರಸ್ತೆಯಲ್ಲಿ ಅವರ KA-20-Z-8652 (Ford Figo ) ಕಾರನ್ನು  ಮನೆಯ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ರಾತ್ರಿ ಸಮಯ ಸುಮಾರು 08:45 ಗಂಟೆಗೆ ಹೆಬ್ರಿ ಗ್ರಾಮದ ಗುಳಿಬೆಟ್ಟು ಎಂಬಲ್ಲಿ ತಲುಪುವಾಗ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಬಲಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅವರ ಹಣೆಯ ಬಳಿ ತರಚಿದ ಗಾಯವಾಗಿರುತ್ತದೆ, ಬಲಕಾಲು ಮೊಣಕಾಲು ಕೆಳಗೆ ತರಚಿದ ಗಾಯವಾಗಿರುತ್ತದೆ ಹಾಗೂ ಅವರ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗುದ್ದಿದ ನೋವಾಗಿದ್ದು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 26/02/2021 ರಂದು ಪಿರ್ಯಾದಿದಾರರಾದ ಅನಿತಾ (57), ಗಂಡ: ನಿತ್ಯಾನಂದ ಗಾಣಿಗ ವಾಸ: ನಾಯಕವಾಡಿ ರಾಮ ಮಂದಿರ ಬಳಿ  ಗುಜ್ಜಾಡಿ ಗ್ರಾಮ, ಕುಂದಾಪುರ ಇವರು ತನ್ನ ಗಂಡ ನಿತ್ಯಾನಂದ ಗಾಣಿಗ ಎಂಬವರ ಜೊತೆಯಲ್ಲಿ KA-20-EL-1962 TVS STAR CITY PLUS ನೇ  ಮೋಟಾರು ಸೈಕಲಿನಲ್ಲಿ ಸಹ ಸವಾರಳಾಗಿ ಕುಳಿತು - ಗುಜ್ಜಾಡಿ ಪೇಟೆಯಿಂದ ಮನೆಯ ಕಡೆಗೆ ಹೊರಟಿದ್ದರು. ರಾತ್ರಿ ಸುಮಾರು 7:00  ಗಂಟೆಗೆ  ಗಂಗೊಳ್ಳಿ-ತ್ರಾಸಿ ಮುಖ್ಯ ರಸ್ತೆಯಲ್ಲಿ ಗುಜ್ಜಾಡಿ ಗ್ರಾಮದ ಬೆಣ್ಗೇರೆ  ಕ್ರಾಸ್ ಸಮೀಪ ತಲುಪುವಾಗ ಮೋಟಾರು ಸೈಕಲನ್ನು ಚಲಾಯಿಸುತ್ತಿದ್ದ ನಿತ್ಯಾನಂದ  ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ರಸ್ತೆಯಲ್ಲಿ ನಾಯಿ ಓಡಿ ಬರುವುದನ್ನು ನೋಡಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ಅನಿತಾ ರವರ ಬಲ ಕೈ ತೋಳಿಗೆ ಮೂಳೆ ಮುರಿತ  ಉಂಟಾಗಿ ಎದೆಗೆ  ಗುದ್ದಿದ ನೋವು ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರುಕ್ಷಿಣಿ ಹಂದೆ (64) ಗಂಡ: ಎಸ್ ಎ ಮೂರ್ತಿ ವಾಸ: ಕೇರ್ ಆಫ್ ರಾಮಚಂದ್ರ  ಉಪಾಧ್ಯಾಯ, ಶ್ರೀ ಕೃಷ್ಣ ಕೃಪಾ, ಕಟ್ಟೆ ಅಚಾರ್ಯ ಮಾರ್ಗ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಮಗನಾದ ಪವನ್ ಡಿ (34) ಎಂಬವರು ದಿನಾಂಕ 27/02/2021 ತನ್ನ ಮನೆಯಾದ ಶ್ರೀಕೃಷ್ಣ ಕೃಪಾ ಕಟ್ಟೆ ಅಚಾಯರ ಮಾರ್ಗ, ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಎಂಬಲ್ಲಿಂದ ಬೆಳಿಗ್ಗೆ 11:00 ಗಂಟೆಗೆ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ ಎಲ್ಲಾ ಕಡೆಗಳಲ್ಲಿ ಹುಡುಕಿ ಈ ವರೆಗೆ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ದಿವ್ಯಾ ನಾಯ್ಕ (38) ಗಂಡ: ಜಗದೀಶ್ ನಾಯ್ಕ, ಸ್ಟೇಶನ್ ಮಾಸ್ಟರ್, ಬಾರ್ಕೂರು ರೈಲ್ವೇ ಸ್ಟೇಶನ್, ಬಾರ್ಕೂರು. ಇವರು ಬಾರ್ಕೂರು ರೈಲ್ವೇ ಸ್ಟೇಶನ್ ಮಾಸ್ಟರ್ ಆಗಿದ್ದು, ದಿನಾಂಕ 27/02/2021 ರಂದು ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು ಎಂಬಲ್ಲಿ ಬಾರ್ಕೂರು ನಿಂದ ಉಡುಪಿಗೆ ಹೋಗುವ ರೈಲ್ವೇ ಟ್ರ್ಯಾಕ್ KM 684/1-2 ರ ಬದಿಯಲ್ಲಿ ರೈಲು ಡಿಕ್ಕಿಯಾಗಿ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಸದ್ರಿ ಟ್ರ್ಯಾಕ್ ಮೇಲೆ ಟ್ರೈನ್ ನಂ 00207 ಡಿಎನ್ ಬಾರ್ಕೂರಿನಿಂದ 13:05 ಗಂಟೆಗೆ ಹೊರಟು 13:16 ಗಂಟೆಗೆ ಉಡುಪಿ ರೈಲ್ವೇ ಸ್ಟೇಶನ್ ತಲುಪಿದ್ದು, ಸದ್ರಿ ಘಟನೆಯು 13:12 ಗಂಟೆಗೆ ಸಂಭವಿಸಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಮಹಮ್ಮದ್ ಹನೀಪ್ (55) ತಂದೆ: ದಿ. ಅಬ್ದುಲ್ ಅಜೀಜ್ ವಾಸ: ಮನೆ ನಂಬ್ರ 5-101 ಕುಡ್ತಿಮಾರ್ ಹೌಸ್ ಮಲ್ಲಾರು ಗ್ರಾಮ ಕಾಪು ಇವರು ಮಲ್ಲಾರು ಜಾಮೀಯ ಮಸೀದಿಯ ಸದಸ್ಯರಾಗಿದ್ದು ದಿನಾಂಕ 26/02/2021 ರಂದು ಮಧ್ಯಾಹ್ನ ಪ್ರಾರ್ಥನೆಗೆಂದು ಮಲ್ಲಾರು ಜಾಮೀಯ ಮಸೀದಿಗೆ  ಬಂದು ಪ್ರಾರ್ಥನೆ ಮುಗಿಸಿ ಮಧ್ಯಾಹ್ನ  1:45 ಗಂಟೆ ಸುಮಾರಿಗೆ ಮನೆಗೆ ಹೋಗಲು ಮಸೀದಿಯ ಹೊರಗಡೆ ರಸ್ತೆಯಲ್ಲಿ ಹೋಗುತ್ತಿರುವಾಗ ಮಸೀದಿಯ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವ ವಿಚಾರದಲ್ಲಿ ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹನೀಸ್, ಮಹಮ್ಮದ್ ಅಕ್ರಂ, ಮಹಮ್ಮದ್ ಆರೀಫ್, ಅಬಿದಾಲಿ ಮತ್ತು ಇತರರು ಸೇರಿಕೊಂಡು ಮಹಮ್ಮದ್ ಹನೀಪ್ ರವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ತಲೆಗೆ, ಭುಜಕ್ಕೆ ಕಾಲಿಗೆ, ಕೈಯಿಂದ ಮತ್ತು ದೊಣ್ಣೆಯಿಂದ ಹೊಡೆದು ಕೆಳಗಡೆ ದೂಡಿದ್ದು ಪರಿಣಾಮ ಇವರು ರಸ್ತೆಗೆ ಬಿದ್ದು ಅವರ ತಲೆಗೆ ಭುಜಕ್ಕೆ ಮತ್ತು ಕಾಲಿಗೆ ಗುದ್ದಿದ ನೋವಾಗಿದ್ದು ಈ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 143,147, 323, 324, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಉಡುಪಿ: ಪಿರ್ಯಾದಿದಾರರಾಧ ಪ್ರೀತಿ ಎಂ. (31), ಗಂಡ: ಶರತ್ ಕುಮಾರ್ ಎ.ಎಸ್. ವಾಸ: ಪದ್ಮಶ್ರೀ, ವಿಷ್ಣುಮೂರ್ತಿ ದೇವಸ್ಥಾನ ರಸ್ತೆ, ಮಧ್ವನಗರ, ಕೊಡವೂರು ಪೋಸ್ಟ್ ಮತ್ತು ಗ್ರಾಮ, ಉಡುಪಿ ಇವರು, HDFC ಬ್ಯಾಂಕ್, ಉಡುಪಿ ಶಾಖೆಯಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 17/11/2020 ರಂದು ಅವರ ಮೇಲಿನ ಖಾತೆಯಿಂದ ಕ್ರಮವಾಗಿ ರೂಪಾಯಿ. 10,000/- + 10,000/- + 8,000/-  ಮತ್ತು 500/- ಒಟ್ಟು ರೂಪಾಯಿ 28,500/- ಹಣ,  ಮೈಸೂರು ಎಂಬಲ್ಲಿ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಪ್ರೀತಿ ಎಂ ರವರ ಮೊಬೈಲ್ ಗೆ ಸಂದೇಶ ಬಂದಿದ್ದು, ಅದೇ ದಿನ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25/02/2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಇವರು, ತನ್ನ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಅರಿವಿಗೆ ಬಾರದೇ ಮೋಸದಿಂದ ಎ.ಟಿ.ಎಂ. ಕಾರ್ಡ್‌ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿ ಹಣವನ್ನು ವಂಚಿಸಿರಬಹುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 66(C), 66(D) ಐ.ಟಿ.ಆಕ್ಟ್ & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಉಡುಪಿ: ಪಿರ್ಯಾದಿದಾರರಾಧ ಮಸೂದ (32) ಗಂಡ: ಮೊಹಮ್ಮದ್ ಆಯೂಬ್ ಖಾಜಿ, ವಾಸ: ಬಿ.ಕಣಬೂರ್ ಹನುಮಾನ್ ಗಲ್ಲಿ, ಬಾಳೆಹೊನ್ನೂರು, ಚಿಕ್ಕಮಂಗಳೂರು ಇವರು, ಕೆನರಾ ಬ್ಯಾಂಕ್, ಬಾಳೆಹೊನ್ನೂರು ಶಾಖೆಯಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ಹೊಂದಿರುತ್ತಾರೆ. ಆದರೆ, ದಿನಾಂಕ 17/11/2020 ರಂದು 10:04 ಗಂಟೆ ಸುಮಾರಿಗೆ ಅವರ ಮೇಲಿನ ಖಾತೆಯಿಂದ ರೂಪಾಯಿ 10,500/- ಹಣ,  ಮಡಿಕೇರಿ ಎಂಬಲ್ಲಿ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಇವರ ಮೊಬೈಲ್ ಗೆ ಸಂದೇಶ ಬಂದಿದ್ದು, ಅದೇ ದಿನ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25/02/2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಮಸೂದ ರವರು, ತನ್ನ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಅರಿವಿಗೆ ಬಾರದೇ ಮೋಸದಿಂದ ಎ.ಟಿ.ಎಂ. ಕಾರ್ಡ್‌ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿ ಹಣವನ್ನು ವಂಚಿಸಿರಬಹುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 66(C), 66(D) ಐ.ಟಿ.ಆಕ್ಟ್ & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಫರ್ಜಾನ, (47) ಗಂಡ: ಆಯೂಬ್ ಶೇಕ್ ವಾಸ: ಆಲ್ ಹಮಗುಲ್ಶನ್, ಅಂಬಲಪಾಡಿ, ಉಡುಪಿ ಇವರ ಮಗಳು ಶ್ರೀಮತಿ ಅರ್ಪಾ ಆಯೂಬ್ ಹಾಗೂ ಅಳಿಯ ತನ್ವೀರ್ ಸುಲೇಮಾನ್ ಇವರುಗಳು ವಿದೇಶದಲ್ಲಿ ಉಧ್ಯೋಗದಲ್ಲಿದ್ದು, ದಿನಾಂಕ 07/12/2020 ರಂದು ರಾತ್ರಿ 8:00 ಗಂಟೆಗೆ ಫರ್ಜಾನ ರವರ ಮಗಳು ಅರ್ಪಾ ಆಯೂಬ್ ಇವರು ಸಿಂಡಿಕೇಟ್ ಬ್ಯಾಂಕ್ ಬ್ರಹ್ಮಗಿರಿ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ರೂಪಾಯಿ 10,300/- ಹಣ ಕಾಸರಗೋಡು ಎಂಬಲ್ಲಿ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಅವರ ಮೊಬೈಲ್ ಗೆ ಸಂದೇಶ ಬಂದಿರುವ ವಿಚಾರವನ್ನು ತಿಳಿಸಿದ್ದು, ಇವರು ಕೂಡಲೇ ಬ್ಯಾಂಕ್ ಗೆ ಹೋಗಿ, ಎ.ಟಿ.ಎಂ. ಕಾರ್ಡ್‌ಹಾಗೂ ಖಾತೆಯನ್ನು ಬ್ಲಾಕ್ ಮಾಡಿಸಿರುತ್ತಾರೆ. ಅಲ್ಲದೇ ದಿನಾಂಕ 04/02/2020 ರಂದು ಫರ್ಜಾನ ರವರ ಅಳಿಯ ತನ್ವೀರ್ ಸುಲೇಮಾನ್ ಇವರು ಸಾಲಿಗ್ರಾಮ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಹೊಂದಿದ್ದ ಎಸ್.ಬಿ. ಖಾತೆಯಿಂದ ಕ್ರಮವಾಗಿ ರೂಪಾಯಿ 10,000/- + 10,000/- ಹಣವು ಕಾಸರಗೋಡು ಎಂಬಲ್ಲಿ ವಿದ್ ಡ್ರಾ ಆಗಿರುವ ಬಗ್ಗೆ ಸಂದೇಶ ಬಂದಿರುವ ವಿಚಾರವನ್ನು ತಿಳಿದು, ಇವರು ಸಾಲಿಗ್ರಾಮ ಎಸ್.ಬಿ.ಐ. ಬ್ಯಾಂಕ್ ಗೆ ತೆರಳಿ ಅಳಿಯ ಹೊಂದಿರುವ ಎ.ಟಿ.ಎಂ. ಕಾರ್ಡ್‌ಹಾಗೂ ಖಾತೆಯನ್ನು ಬ್ಲಾಕ್ ಮಾಡಿರುತ್ತಾರೆ. ಆದರೆ, ದಿನಾಂಕ 25/02/2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಫರ್ಜಾನ ರವರ ಅಳಿಯ ಹಾಗೂ ಮಗಳ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಸೈಬರ್ ಠಾಣೆಗೆ ಬಂದು, ಫರ್ಜಾನ ರವರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ, ಎ.ಟಿ.ಎಂ. ಕಾರ್ಡ್‌ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಹಾಗೂ ಫರ್ಜಾನರವರ ಅಳಿಯ ಹಾಗೂ ಮಗಳು ಹೊಂದಿರುವ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೂಕ್ತ ಭದ್ರಿಕೆ ಇಲ್ಲದೇ ವಿದ್ ಡ್ರಾ ಆಗುವಂತೆ ಮಾಡಿರುವ ಹಾಗೂ ವಂಚನೆಯಿಂದ ಕಳೆದುಕೊಂಡಿರುವ ಹಣವನ್ನು ಈವರೆಗೂ ಮರುಪಾವತಿಸದೇ ಇರುವ ಬ್ಯಾಂಕ್ ಅಧಿಕಾರಿಗಳ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 66(C), 66(D) ಐ.ಟಿ.ಆಕ್ಟ್ & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಗೋಪಾಲಕೃಷ್ಣ ಎಸ್. ಕಿದಿಯೂರ್, (71), ತಂದೆ: ಶೇಷ ಸುವರ್ಣ, ವಾಸ: ಶ್ರೀ ವಿನಾಯಕ, ಕುಂಜಿಗುಡ್ಡೆ, ಅಂಬಲಪಾಡಿ ಇವರು ಕೆನರಾ ಬ್ಯಾಂಕ್, ಉಡುಪಿ ಶಾಖೆಯಲ್ಲಿ  ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ಹೊಂದಿರುತ್ತಾರೆ. ಆದರೆ, ದಿನಾಂಕ 18/11/2020 ರಂದು 9:47 to 9:50 ಗಂಟೆ ಸುಮಾರಿಗೆ ಅವರ ಮೇಲಿನ ಖಾತೆಯಿಂದ ಕ್ರಮವಾಗಿ, ರೂಪಾಯಿ 10,000/- + 10,000/- + 10,000/- + 10,000/- ಒಟ್ಟು ರೂಪಾಯಿ 40,000/- ಹಣ,  ಬೆಂಗಳೂರು ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಇವರ ಮೊಬೈಲ್ ಗೆ ಸಂದೇಶ ಬಂದಿದ್ದು, ಅದೇ ದಿನ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25/02/2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಇವರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಠಾಣೆಗೆ ಬಂದು ಇವರು ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ, ಎ.ಟಿ.ಎಂ. ಕಾರ್ಡ್‌ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ದೂರು ನೀಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 66(C), 66(D) ಐ.ಟಿ.ಆಕ್ಟ್ & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಶ್ರೀಪತಿ ಬಲ್ಲಾಳ್, (42), ತಂದೆ: ಎ.ಕೆ.ಆರ್. ಬಲ್ಲಾಳ್, ವಾಸ: ಪದ್ಮರಾಜ ನಿಲಯ, ಅಂಬಲಪಾಡಿ ಇವರು, ಸಿಂಡಿಕೇಟ್ ಬ್ಯಾಂಕ್, ಆದಿ ಉಡುಪಿ ಶಾಖೆಯಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ಹೊಂದಿರುತ್ತಾರೆ. ಆದರೆ, ದಿನಾಂಕ 17/11/2020 ರಂದು 09:50 to 09:52 ಗಂಟೆ ಸುಮಾರಿಗೆ ಅವರ ಮೇಲಿನ ಖಾತೆಯಿಂದ ಕ್ರಮವಾಗಿ, ರೂ. 10,000/- + 10,000/- + 500/- ಒಟ್ಟು ರೂಪಾಯಿ 20,500/- ಹಣ,  ಮಡಿಕೇರಿ ಎಂಬಲ್ಲಿಯ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಇವರ ಮೊಬೈಲ್ ಗೆ ಸಂದೇಶ ಬಂದಿದ್ದು, ಅದೇ ದಿನ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25/02/2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಇವರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಠಾಣೆಗೆ ಬಂದು, ಇವರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ, ಎ.ಟಿ.ಎಂ. ಕಾರ್ಡ್‌ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ದೂರು ನೀಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: 66(C), 66(D) ಐ.ಟಿ.ಆಕ್ಟ್ & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2021 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080