ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾಧ ದಿನೇಶ ನಾಯರಿ (47) ತಂದೆ: ದಿ ರಾಮ ನಾಯರಿ ವಾಸ:ಕಾರ್ತಟ್ಟು ಸಾಲಿಗ್ರಾಮ  ಚಿತ್ರಪಾಡಿ ಗ್ರಾಮ ಬ್ರಹ್ಮಾವರ ಇವರು ದಿನಾಂಕ 28/02/2021 ರಂದು ಬೆಳಿಗ್ಗೆ 09:45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕೋಟ ಹೈಸ್ಕೂಲ್ ಕಡೆಯಿಂದ ಬ್ರಹ್ಮಾವರ ಕಡೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ಗುಂಡ್ಮಿ ಗ್ರಾಮದ ಗುಂಡ್ಮಿ ಬಸ್ ನಿಲ್ದಾಣದ ಬಳಿ ಹೋಗುವಾಗ ಅದೇ ಸಮಯಕ್ಕೆ KA-20-MC-1719 ನೇ ಮಾರುತಿ ಸ್ವಿಪ್ಟ ಕಾರು ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಕುಂದಾಪುರ ಕಡೆಯಿಂದ ಚಲಾಯಿಸಿಕೊಂಡು ಬಂದು ದಿನೇಶ ನಾಯರಿ ಇವರ ಕಾರಿನ ಮುಂದೆ ಓವರ್ ಟೇಕ್ ಮಾಡಿಕೊಂಡು ಹೋಗಿ ಮುಂದೆ ರಸ್ತೆಯ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಸವಾರನಿಗೆ ಹಿಂದಿನಿಂದ ಢಿಕ್ಕಿ ಹೊಡೆದನು. ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು  ಬೈಕ್ ಸವಾರ ಕಾರಿನ ಬೋನಟ್ ಮೇಲೆ ಹಾರಿ ಬಿದ್ದಿದ್ದು ,ಕಾರು ಚಾಲಕನು ಕಾರನ್ನು ನಿಯಂತ್ರಿಸದೇ ಅದೇ ಸ್ಥಿತಿಯಲ್ಲಿ  ಸುಮಾರು 100 ಅಡಿ ಗಳಷ್ಟು ಮುಂದೆ ಚಲಿಸಿ ನಿಂತಿರುತ್ತದೆ.ಆಗ ಕಾರಿನ ಬೋನಟ್ ಮೇಲಿನಿಂದ ಬೈಕ್ ಸವಾರನ ದೇಹವು ರಸ್ತೆಯ ಮೇಲೆ ಬಿತ್ತು, ತಲೆಯಿಂದ ರಕ್ತ  ರಸ್ತೆಯ ಮೇಲೆ ಚೆಲ್ಲಿರುತ್ತದೆ. ದಿನೇಶ ನಾಯರಿ ರವರು ಆತನನ್ನು ಎತ್ತಿ ಉಚಚರಿಸಿ ನೋಡಲಾಗಿ ಆತನ ತಲೆಗೆ ತೀವೃ ತರಹದ ಪೆಟ್ಟಾಗಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮೋಟಾರ್ ಸೈಕಲ್ ಸವಾರನ ಹೆಸರು ಸುಭಾಸ್ ಅಮೀನ್ ಆಗಿದ್ದು ಮೋಟಾರ್ ಸೈಕಲ್ ನಂಬ್ರ KA-20-EC-2235 ಆಗಿದ್ದು, ಕಾರು ಚಾಲಕ ಸ್ಟಾನಿ ತಾವ್ರೋ ಆಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ರಾಜೇಶ್‌(35) ತಂದೆ: ಲೋಕಯ್ಯ ಪೂಜಾರಿ, ವಾಸ: ಶೋಭಾ ನಿವಾಸ, ಕಮಲಾಕ್ಷ ನಗರ, ಮುರತಂಗಡಿ, ಸಾಣೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಹಾಲಿ ವಾಸ: ಲಕ್ಷ್ಮೀ ನಿವಾಸ, ಕಾಪು ಕನ್ಯಾ ಉಳಿಯಾರು ಗ್ರಾಮ, ಕಾಪು ತಾಲೂಕು ಇವರು ದಿನಾಂಕ  28/02/2021 ರಂದು ಕಾರ್ಕಳದಿಂದ ಕಾಪುಗೆ ಶಿರ್ವಾ ಮಾರ್ಗವಾಗಿ ತನ್ನ ಸ್ನೇಹಿತನ ಹೋಂಡಾ ಮ್ಯಾಟ್ರಿಕ್ಸ್ ದ್ವಿಚಕ್ರ ವಾಹನ ನಂಬ್ರ KA-20-EH-2570 ನೇದರಲ್ಲಿ ಸ್ನೇಹಿತ ಅಖಿಲ್‌ರವರನ್ನು ಹಿಂಬದಿ ಸವಾರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ  7:00 ಗಂಟೆಗೆ ಕಳತ್ತೂರು ರೈಸ್‌ಮಿಲ್‌ಬಳಿ ತಲುಪುವಾಗ ಎದುರುಗಡೆಯಿಂದ ಅಂದರೆ ಕಾಪು ಕಡೆಯಿಂದ ಶಿರ್ವಾ ಕಡೆಗೆ ಓರ್ವ ಸಿಲ್ವರ್‌ ಬಣ್ಣದ ಇನ್ನೋವಾ ಕಾರಿನ ಚಾಲಕನು ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ  ಬಂದು ರಾಜೇಶ್‌ ರವರು ಚಲಾಯಿಸುತ್ತಿದ್ದ  KA-20-EH-2570 ನೇ ದ್ಚಿಚಕ್ರವಾಹನಕ್ಕೆ ಡಿಕ್ಕಿ  ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಮೇತ ಇಬ್ಬರು ರಸ್ತೆಗೆ ಬಿದ್ದಿದ್ದು ರಾಜೇಶ್‌ ರವರ ಬಲ ಕಾಲಿನ ಪಾದದ ಬಳಿ ತೀವ್ರ ತರದ ಮೂಳೆ ಮುರಿತದ ಜಖಂ ಆಗಿದ್ದು, ಹಿಂಬದಿ ಸವಾರ ಅಖಿಲ್‌ರವರ ಬಲ ಕಾಲಿನ ಮೊಣಗಂಟಿಗೆ ಮತ್ತು ಬಲ ಕಾಲಿನ ಬೆರಳಿಗೆ ರಕ್ತ ಗಾಯವಾಗಿರುತ್ತದೆ. ಆದ್ದರಿಂದ ಸದ್ರಿ ಅಪಘಾತ ಪಡಿಸಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡದೆ ರಾಜೇಶ ರವರನ್ನು ಉಪಚರಿಸದೆ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021, ಕಲಂ 279, 337 , 338 IPC & 134(a)(b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.   
  • ಹಿರಿಯಡ್ಕ: ಪಿರ್ಯಾಧಿದಾರರಾದ ಪ್ರವೀಣ ಕುಲಾಲ(36), ತಂದೆ: ದಿ: ಸುಂದರ ಕುಲಾಲ, ವಾಸ: ಕೊಪ್ಪಳ ಮನೆ, ಕುಂಟಾಲಕಟ್ಟೆ, ಬೈರಂಪಳ್ಳಿ, ಹ ರಿಖಂಡಿಖೆ, ಅಂಚೆ, ಉಡುಪಿ ಇವರು ದಿನಾಂಕ 28/02/2021 ರಂದು ತನ್ನ ಮನೆಯಿಂದ ಕಾರ್ಕಳದ ಬೈಲೂರಿಗೆಂದು ತನ್ನ ಕಾರು ನಂಬ್ರ: ಎಮ್ ಹೆಚ್-02-ಸಿಡಿ-1522 ನೇದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12:30 ಗಮಟೆಗೆ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಅಂಚೆ ಕಚೇರಿಯ ಬಳಿ ಮಂಜುನಾಥ ಪೈ ರವರ ಮನೆಯ ಬಳಿ ತಲುಪುವಾಗ ಮೋಟಾರ್ ಸೈಕಲ್ ನಂಬ್ರ: ಕೆಎ-47-ಎಸ್-2553 ನೇದನ್ನು ಅದರ ಸವಾರ ಲೊಕೇಶ್ ನಾಯ್ಕ ನು ಕಾರ್ಕಳ ಕಡೆಯಿಮದ ಉಡುಪಿ ಕಡೆಗೆ ಕಾರ್ಕಳ- ಉಡುಪಿ ಡಾಮಾರು ರಸ್ತೆಯಲ್ಲಿ ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪ್ರವೀಣ ರvರ ಕಾರಿನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಈ ಘಟನೆಯಿಂದ ಕಾರಿನಲ್ಲಿದ್ದವರಿಗಾಗಲೀ, ಮೋಟಾರ್ ಸೈಕಲ್ ಸವಾರನಿಗಾಗಲೀ ಯಾವುದೇ ಗಾಯ ನೋವು ಉಂಟಾಗಿರುವುದಿಲ್ಲವಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಸುದೀರ್ (32) ತಂದೆ: ದಿ|| ಬೊಗ್ರ ವಾಸ: ಮನೆ ನಂ 2-1 ದೇವಿ ನಿಲಯ ಕಸ್ತೂರ್ಬಾ ನಗರ , ಚಿಟ್ಪಾಡಿ, 76 ಬಡಗುಬೆಟ್ಟು ಇವರೊಂದಿಗೆ ವಾಸವಿದ್ದ ಇವರ ಅಣ್ಣನಾದ ಸುರೇಶ (36)ರವರು ಅವಿವಾಹಿತನಾಗಿದ್ದು, ಸುಮಾರು ಹದಿನ್ನೈದು ವರ್ಷಗಳಿಂದ ವಿಪರೀತ ಮದ್ಯವ್ಯಸನಿಯಾಗಿದ್ದವರು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 27/02/2021 ರಂದು ಸಂಜೆ  5:30 ಗಂಟೆಯಿಂದ  6:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಾಲ್ನ ಪಕ್ಕದಲ್ಲಿರುವ ಮಲಗುವ ಕೋಣೆಯ ಮಾಡಿನ ಮರದ  ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ನಾರಾಯಣ ನರಸಿಂಹ ಶೆಟ್ಟಿ (46) ತಂದೆ: ನರಸಿಂಹ ರಾಮ ಶೆಟ್ಟಿ ವಾಸ: ಕಾಸರಕೋಡ,ಕಣಕಿಚಿಟ್ಟಾ ಗ್ರಾಮ ಹೊನ್ನಾವರ ತಾಲೂಕು ಉಡುಪಿ ಇವರ ತಮ್ಮ ರಾಘವೇಂದ್ರ ನರಸಿಂಹ ಶೆಟ್ಟಿ (41) ಎಂಬುವವರು ಕಾಸರಕೋಡಿನಲ್ಲಿ ಹೆಂಡತಿಯೊಂದಿಗೆ ವಾಸ್ತವ್ಯ ಇದ್ದಿದ್ದು ದಿನಾಂಕ 23/02/2021 ರಂದು ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಾರಾಯಣ ನರಸಿಂಹ ಶೆಟ್ಟಿ ರವರ ಅಕ್ಕನಾದ ಗೀತಾರವರ ಮನೆಯಾದ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಎತ್ತಾಬೇರು ಎಂಬಲ್ಲಿ ಇದ್ದಿದ್ದು ದಿನಾಂಕ 28/02/2021 ರಂದು ಬೆಳಿಗ್ಗೆ ಸಮಯ ಸುಮಾರು 8:00  ಗಂಟೆಗೆ ಉಸಿರಾಟದ ಸಮಸ್ಯೆಯಾಗಿ ನಾರಾಯಣ ನರಸಿಂಹ ಶೆಟ್ಟಿ ರವರ ಅಕ್ಕನ ಗಂಡ ಸುಬ್ರಹ್ಮಣ್ಯ ರವರು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ನಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಇವರ ತಮ್ಮ ಮೃತಪಟ್ಟಿರುವುದಾಗಿ ಧೃಢ ಪಡಿಸಿರುತ್ತಾರೆ. ನಾರಾಯಣ ನರಸಿಂಹ ಶೆಟ್ಟಿ ರವರ ತಮ್ಮ ಕಳೆದ 3 ವರ್ಷ ದಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ಈ ದಿನ ಬೆಳಿಗ್ಗೆ 09:00 ಗಂಟೆಗೆ ಅಸ್ತಮಾ ಕಾಯಿಲೆಯಿಂದಲೋ ಅಥವಾ ಬೇರೆ ಇನ್ಯಾವದೋ ಕಾಯಿಲೆಯಿಂದಲೋ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಶ್ರವಣ್ ಕುಮಾರ್ ಯು (24) ತಂದೆ: ಚಂದ್ರಕಾಂತ್ ಯು ವಾಸ: 4-344 ಸಿ2, ಮೊದಲನೆ ರಸ್ತೆ, ಹಯಗ್ರೀವ ನಗರ, ಶಿವಳ್ಳಿ ಗ್ರಾಮ ಉಡುಪಿ ಇವರ ದೊಡ್ಡಪ್ಪನಾದ ಡಾ|| ಶ್ರೀಕಾಂತ್ ಯು ರವರು ಸ್ವಂತ ಕೆಲಸದ ನಿಮಿತ್ತ ಕೇರಳಕ್ಕೆ ಸಂಸಾರದೊಂದಿಗೆ ಹೋಗದ್ದು ತನ್ನ ಮನೆಯಾದ ‘’ಯಶಪ್ರಜ್ಞಾ’’ ಶಾರದಾ ಕಲ್ಯಾಣ ಮಂಟಪ ಹತ್ತಿರವನ್ನು ನೋಡಿಕೊಳ್ಳುವರೇ ಶ್ರವಣ್ ಕುಮಾರ್ ಯು ರವರಿಗೆ ಬೀಗದ ಕೀ ನೀಡಿ ಹೋಗಿರುತ್ತಾರೆ. ಶ್ರವಣ್ ಕುಮಾರ್ ಯು ರವರು ದಿನಾಂಕ 27/02/2021 ರಂದು ಬೆಳಿಗ್ಗೆ 10:30 ಗಂಟೆಗೆ ಸದ್ರಿ ಮನೆಗೆ ಬೀಗ ಹಾಕಿ ತನ್ನ ಸ್ವಂತ ಮನೆಗೆ ಹೋಗಿದ್ದು ಅದೇ ದಿನ ರಾತ್ರಿ  11:15 ಗಂಟೆಗೆ ಮಲಗಿಕೊಳ್ಳಲು ಮನೆಗೆ ಬಂದಾಗ ಮನೆಯ ಮಹಡಿಯ ಬಾಗಿಲು ತೆರೆದಿರುವುದು ಕಂಡು ಬಂದಿದ್ದು ಮೇಲ್ಮಹಡಿ ಹಾಗೂ ಕೆಳ ಮಹಡಿಯಲ್ಲಿರುವ 2 ಬೆಡ್‌ರೂಂ ನಲ್ಲಿರುವ ಗೋದ್ರೇಜ್‌ಗಳು ಚೆಲ್ಲಾಪಿಲ್ಲಿಯಾಗಿದ್ದು ಗೋದ್ರೇಜ್‌ನಲ್ಲಿದ್ದ ಸುಮಾರು 4 ಪವನ್ ಚಿನ್ನದ ಸರ ಅಂದಾಜು ಮೌಲ್ಯ 1,20,000/- ಹಾಗೂ 20,000/- ರೂಪಾಯಿ ನಗದು ಹಣವನ್ನು ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2021 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080