ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಹರೀಶ (30), ತಂದೆ: ನಾರಾಯಣ ಶೆಟ್ಟಿಗಾರ,  ವಾಸ: ಹರಾಟೆ ಮನೆ ಮೊಳಹಳ್ಳಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರ ಅಣ್ಣ ಅಶೋಕ ಶೆಟ್ಟಿಗಾರ (38) ರವರು ಮಂಗಳೂರಿನ ಕಾವೂರಿನಲ್ಲಿ  ಹೊಟೆಲ್ ಕೆಲಸ ಮಾಡಿಕೊಂಡಿದ್ದು,  ಒಂದು ವಾರದ ಹಿಂದೆ ರಜೆ ಮಾಡಿ ಮನೆಗೆ ಬಂದಿದ್ದು, ಮನೆಯಲ್ಲಿ ದಿನಾಲು ಶರಾಬು ಸೇವನೆ ಮಾಡಿಕೊಂಡಿದ್ದು,  ಬೆಳಿಗ್ಗೆ ಕೂಡ ಶರಾಬು ಕುಡಿದು ಮದ್ಯಾಹ್ನ ಮನೆಯಿಂದ ಹೊರಗಡೆ ಹೋದವರು 12:00 ಗಂಟೆಯಿಂದ 2:15 ಗಂಟೆಯ ಮಧ್ಯಾವಧಿಯಲ್ಲಿ ಕುಡಿತದ ಅಭ್ಯಾಸದಿಂದ  ಆರೋಗ್ಯ ಸಮಸ್ಯೆ ಉಂಟಾಗಿ ಮನೆಯ ಬಳಿಯ ರಸ್ತೆಯ ಬಳಿ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ಮೇರಿ ಡಿಸೋಜ (53), ಗಂಡ : ಹೆನ್ರಿ ಡಿಸೋಜ, ವಾಸ : ಕುಮೇರಿ ಮನೆ, ದೊಡ್ಡಪಲ್ಕೆ, ಬೊಂಡುಕುಮೇರಿ ಮರ್ಣೆ ಗ್ರಾಮ, ಕಾಕಳ ತಾಲೂಕು ಇವರ ಗಂಡನ ಅಣ್ಣ ಲಿಗೋರಿ ಪಿ. ಡಿಸೋಜ (65) ಎಂಬುವವರು ದಿನಾಂಕ 27/01/2023 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ತಿಂಡಿ ತಿಂದು ಹೋಗಿದ್ದು, ಮಧ್ಯಾಹ್ನ 12:30 ಗಂಟೆಗೆ ಲಿಗೋರಿ ಪಿ. ಡಿಸೋಜರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರರವರು ಪಿರ್ಯಾದಿದಾರರಿಗೆ ಕರೆ ಮಾಡಿ ಲಿಗೋರಿ ಪಿ. ಡಿಸೋಜರವರು ಮನೆಯಲ್ಲಿ ಬಿದ್ದು ಪ್ರಜ್ಞೆ ತಪ್ಪಿದಂತಿದ್ದಾರೆ ಎಂಬುದಾಗಿ ತಿಳಿಸಿದಂತೆ ಹೋಗಿ ನೋಡಲಾಗಿ, ಅಂಗಾತನೆ ಬಿದ್ದಿದ್ದರು. ಅವರು ಬಿ.ಪಿ ಮಾತ್ರೆ ಉಪಯೋಗಿಸುತ್ತಿದ್ದು ದಿನಾಂಕ 27/01/2023 ರಂದು  12:30 ಗಂಟೆಗೆ ಮನೆಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು, ತಲೆಯ ಹಿಂಬದಿಗೆ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದವರನ್ನು ಕೂಡಲೇ 108 ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿ ಆಗಲೇ ಮೃತಪಟ್ಟಿರುವುದಾಗಿ 15:00 ಗಂಟೆಗೆ ವೈದ್ಯರು ತಿಳಿಸಿರುವುದಾಗಿದೆ.  ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 05/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಮಂಜುಳಾ ಕರ್ಕೇರಾ (46), ಗಂಡ: ವಿಶ್ವನಾಥ, ವಾಸ: ಅರಸಿಕಟ್ಟೆ ಹೌಸ್‌, ಬಂಟಕಲ್‌ಅಂಚೆ    ಕುರ್ಕಾಲು  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಎಸ್‌.ಪಿ.ಸಿ.ಎ. ಪ್ರಾಣಿ ದಯಾ ಸಂಘದಲ್ಲಿ ಕಮಿಟಿ  ಸದಸ್ಯೆಯಾಗಿ   ಸೇವೆಯನ್ನು  ಮಾಡುತ್ತಿರುವುದಾಗಿದೆ. ದಿನಾಂಕ 27/01/2023  ರಂದು  ಮಧ್ಯಾಹ್ನ  2:00  ಗಂಟೆರಿಗೆ  ಪಿರ್ಯಾದಿದಾರರ ಮೊಬೈಲ್‌ಗೆ  ವಾಟ್ಸ್‌ಪ್‌ ಮುಖಾಂತರ    ಅವರ ಸ್ನೇಹಿತ ನಾಯಿಗೆ ಇಬ್ಬರು  ಸೇರಿಕೊಂಡು  ಒಬ್ಬಾತನು ಕೋಲಿನಿಂದ ಹೊಡೆದು  ಸಾಯಿಸಿದ  ಬಳಿಕ ಆತನು ಒಂದು ಗೋಣಿ ಚೀಲದಲ್ಲಿ ಎಳೆದುಕೊಂಡು ಬಂದು ಇನ್ನೊಂದು ಗೋಣಿ ಚೀಲದಲ್ಲಿ ಹಾಕುತ್ತಿರುವ  ದೃಶ್ಯಾವಳಿಯನ್ನು ಕಳುಹಿಸಿರುತ್ತಾರೆ.   ಈ ವೀಡಿಯೋವನ್ನು  ಪಿರ್ಯಾದಿದಾರರು ನೋಡಿ ವಿಚಾರವನ್ನು  ಕೇಳಿದಾಗ  ಅವರು  ದಿನಾಂಕ 27/01/2023  ರಂದು ಬೆಳಿಗ್ಗೆ 10:30 ಗಂಟೆಯಿಂದ  11:00 ಗಂಟೆಯ ನಡುವಿನ ಅವಧಿಯಲ್ಲಿ  ಶಿರ್ವ  ಗ್ರಾಮದ  ಬಂಟಕಲ್‌ ವಾದಿ ಮಧ್ವರಾಜ್‌ ಇನ್ಸುಸ್ಟ್ಯೂಟ್‌ ಆಫ್‌ ಟೆಕ್ನಾಲಜಿ  ಕಾಲೇಜಿನ  ಕ್ಯಾಂಪಸ್‌ನ ಒಳಗಡೆ  ಇದ್ದ  ಬಿಳಿ  ಬಣ್ಣದ ಬೀದಿ ನಾಯಿಯನ್ನು ಅದೇ  ಕಾಲೇಜಿನ ಗಾರ್ಡನ್‌ ಕೆಲಸ ಮಾಡುತ್ತಿರುವ  ನಾಗರಾಜ್ ಮತ್ತು ವಾರ್ಡನ್‌ ಕೆಲಸ ಮಾಡುತ್ತಿರುವ  ರಾಜೇಶ್‌ರವರು  ಸೇರಿಕೊಂಡು  ನಾಗರಾಜ್ ಎಂಬಾತನು ನಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ್ದು, ಈ ದೃಶ್ಯಾವಳಿಯನ್ನು ಅದೇ ಕಾಲೇಜ್‌ನ ವಿದ್ಯಾರ್ಥಿಯೊಬ್ಬರು ವೀಡಿಯೋ ರೆಕಾರ್ಡ್‌ಮಾಡಿ ಕಳುಹಿಸಿರುತ್ತಾರೆ ಎಂಬ ವಿಚಾರವನ್ನು ತಿಳಿಸಿರುತ್ತಾರೆ.  ಆದುದರಿಂದ ಬೀದಿ ನಾಯಿಯನ್ನು  ಕೋಲಿನಿಂದ ಹೊಡೆದು  ಸಾಯಿಸಿದ ನಾಗರಾಜ್‌ ಹಾಗೂ ರಾಜೇಶ್‌ರವರುಗಳ ವಿರುದ್ಧ  ಸೂಕ್ತ  ಕಾನೂನು  ಕ್ರಮ  ಕೈಗೊಳ್ಳ ಬೇಕಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ:  429 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 28-01-2023 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080