ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು:  ದಿನಾಂಕ 26/01/2022 ರಂದು ರಾತ್ರಿ 8:30 ಗಂಟೆಗೆ  ಪಿರ್ಯಾದಿದಾರರಾದ ಸಂಜೀವ ಮೊಗವೀರ (42), ತಂದೆ:ಮಂಜು  ಮೊಗವೀರ, ವಾಸ: ನಾಗಿ ಮನೆ ದೊಂಬೆ , ಪಡುವರಿ ಗ್ರಾಮ , ಬೈಂದೂರು  ತಾಲೂಕು ಇವರು ಬೈಂದೂರಿನಲ್ಲಿ ಕೆಲಸ ಮುಗಿಸಿ ತನ್ನ ಮನೆಯಾದ ದೊಂಬೆಗೆ ಮೋಟಾರು ಸೈಕಲ್ ನಲ್ಲಿ  ಹೋಗುತ್ತಾ  ಪಡುವರಿ ಗ್ರಾಮದ  ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಸೊಮೇಶ್ವರ  ರಸ್ತೆಯಲ್ಲಿ  ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಬೈಂದೂರಿನಿಂದ ದೊಂಬೆ ಕಡೆಗೆ ಆರೋಪಿ ಈಶ್ವರ ಖಾರ್ವಿ ಮೋಟಾರು ಸೈಕಲ್ ನಂಬ್ರ KA-20-EM-0023 ನೇದರಲ್ಲಿ  ಹಿಂಬದಿಯಲ್ಲಿ  ಪ್ರದೀಪ ಖಾರ್ವಿಯರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋಗುತ್ತಿರುವಾಗ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ರಸ್ತೆಯ ತಿರುವಿನಲ್ಲಿ ಆರೋಪಿ ಈಶ್ವರ ಖಾರ್ವಿಯ ನಿಂಯತ್ರಣ ತಪ್ಪಿ  ಮೋಟಾರು ಸೈಕಲ್ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಅಪಘಾತದ ಪರಿಣಾಮ ಸವಾರ ಹಾಗೂ ಸಹ ಸವಾರರಿಬ್ಬರೂ  ರಸ್ತೆಗೆ ಬಿದ್ದು  ಸಹ ಸವಾರ ಪ್ರದೀಪ ಖಾರ್ವಿ ಯವರಿಗೆ ಬಲ ಕಾಲಿಗೆ ಹಾಗೂ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಸವಾರನಿಗೆ ಸೊಂಟಕ್ಕೆ ಒಳ ನೋವು ಉಂಟಾದವರನ್ನು ಚಿಕಿತ್ಸೆ ಬಗ್ಗೆ 108 ವಾಹನದಲ್ಲಿ  ಬೈಂದೂರು  ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಹೋದಲ್ಲಿ  ವೈದ್ಯರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ ಸವಾರ ಈಶ್ವರ ಖಾರ್ವಿ ಯವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಪ್ರದೀಪ ಖಾರ್ವಿಯರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಮಣಿಪಾಲ ಕೆಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಅಸ್ಲಾಮ ಪಯಾಜ್ ಎನ್ (30), ತಂದೆ: ಮೋಯಿದ್ದಿನ್ ಕೊಯಾ, ವಾಸ: ಮಲ್ಲೊಳ್ಳಿ ಮನೆ ಕೇಯಿಕೋಡು ಚರುವನ್ನೂರು ಗ್ರಾಮ ಇವರು ದಿನಾಂಕ 27/01/2022 ರಂದು ತನ್ನ KL-10-AV-3694 ನೇ ಕಾರಿನಲ್ಲಿ  ಕೇರಳದಿಂದ ಆಗುಂಬೆ ಕಡೆ ಹೋಗುವಾಗ 15:45 ಗಂಟೆಗೆ ಆಗುವಾಗ ಪೆರ್ಡೂರು ಗ್ರಾಮ ಮುಳ್ಳುಗುಡ್ಡೆಯ ಗೋವಿಂದ ಕುಲಾಲ್ ರವರ ಮನೆಯ ತಲುಪುತ್ತಿದ್ದಂತೆ  ರಾಷ್ಟ್ಟ್ರೀಯ ಹೆದ್ದಾರಿ 169 ಎ ರಲ್ಲಿ ಎದುರಿನಿಂದ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಬರುವ ಓರ್ವ ಕಾರು ಚಾಲಕ ತನ್ನ KA-20-MC-1797 ನೇ ದನ್ನು ನಿರ್ಲಕ್ಷತನದಿಂದ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿಗೆ ಬಲ  ಬದಿಯ ಟೈರ್ ಗೆ ಡಿಕ್ಕಿ  ಹೊಡೆದ ಪರಿಣಾಮ ಕಾರು ತನ್ನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ತೋಡಿಗೆ ಬಿದ್ದ ಪರಿಣಾಮ ಆಪಾದಿತರ ಕಾರಿನಲ್ಲಿದ್ದ ಓರ್ವ ಹೆಂಗಸಿಗೆ ಕುತ್ತಿಗೆಗೆ ರಕ್ತಗಾಯವಾಗಿರುವುದಾಗಿದೆ . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 28-01-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080