ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಬೈಂದೂರು: ಫಿರ್ಯಾದಿ ನಾಗರಾಜ ಖಾರ್ವಿ ಇವರು ಎಂದಿನಂತೆ ದಿನಾಂಕ 28/01/2022 ರಂದು ಬೆಳಿಗ್ಗೆ ಮೀನುಗಾರಿಕೆ ಕೆಲಸದ ಬಗ್ಗೆ ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ರೋಹಿತ್ ರವರೊಂದಿಗೆ ರಾ ಹೆ 66 ರಲ್ಲಿ ಉಪ್ಪುಂದದಿಂದ ಮರವಂತೆ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 5:40 ಗಂಟೆಗೆ ಕಂಬದಕೋಣೆ ಶಾಲೆಯಿಂದ ಸ್ವಲ್ಪ ಮುಂದಕ್ಕೆ ಹೋಗುವ ಸಮಯದಲ್ಲಿ ನಾವುಂದದ ನಾಗರಾಜ ಖಾರ್ವಿಯವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA 20 EX 1193 ನೇದರಲ್ಲಿ ಫಿರ್ಯಾದುದಾರರ ಎದುರುಗಡೆಯಿಂದ ಅಂದರೆ ಉಪ್ಪುಂದ ಕಡೆಯಿಂದ ಕುಂದಾಫುರ ಕಡೆಗೆ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಕಂಬದಕೋಣೆ ವಿಜಯ ಬ್ಯಾಂಕ್ ಎದುರು ತಲುಪುತ್ತಿದ್ದಾಗ ರಾ ಹೆ 66 ರ ರಸ್ತೆಯ ಬಲ ಬದಿಯಿಂದ ಎಡಬದಿಗೆ ದನವೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸುವ ಭರದಲ್ಲಿ ನಾಗರಾಜನು ಮೋಟಾರ್ ಸೈಕಲ್ ನ್ನು ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿದ ಕಾರಣ ಮೋಟಾರ್ ಸೈಕಲ್ ನಾಗರಾಜನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದನು. ಪರಿಣಾಮ ನಾಗರಾಜನು ರಸ್ತೆಯ ಎಡಬದಿಯ ಡಿವೈಡರ್ ಮೇಲೆ ಬಿದಿದ್ದು, ಆತನ ತಲೆಗೆ ಡಿವೈಡರ್ ಬಡಿದಿದ್ದು, ಮೋಟಾರ್ ಸೈಕಲ್ ರಸ್ತೆಯ ಎಡಬದಿಯಲ್ಲಿ ಬಿದ್ದಿರುತ್ತದೆ. ಫಿರ್ಯಾದಿದಾರರು ಹಾಗೂ ರೋಹಿತ್ ರವರು ಕೂಡಲೇ ಸ್ಥಳಕ್ಕೆ ತೆರಳಿ ಆತನನ್ನು ಎತ್ತಿ ಉಪಚರಿಸಿದ್ದು, ಆತನ ತಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದು, ಪ್ರಜ್ಞಾಹೀನಾ ಸ್ಥಿತಿಯಲ್ಲಿ ಇದ್ದನು.  ಕೂಡಲೇ ಒಂದು ಅಂಬುಲೆನ್ಸ್ ವಾಹನದಲ್ಲಿ ನಾಗರಾಜ ಖಾರ್ವಿಯವರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ನಾಗರಾಜ ಖಾರ್ವಿರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 24/2022 ಕಲಂ. 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಪಡುಬಿದ್ರಿ: ಪಿರ್ಯಾದಿ ಗೋಪಿನಾಥ ಇವರ ತಂಗಿಯ ಮಗ ಗುರುಪ್ರಸಾದ್ (21) ಎಂಬುವರು ದಿನಾಂಕ: 27.01.2022 ರಂದು ಸಂಜೆ ಆತನ  ಬಾಬ್ತು KA-20-EW-6407 ನೇ ನಂಬ್ರದ ಸ್ಕೂಟರ್‌‌ನಲ್ಲಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-01 ರಲ್ಲಿ ಪಡುಬಿದ್ರಿ ಕಡೆಯಿಂದ ಕಂಚಿನಡ್ಕ ಕಡೆಗೆ ಬರುತ್ತಾ ಸಮಯ ಸುಮಾರು 17:10 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಕಂಚಿನಡ್ಕದ  ಸಮ್‌‌ಕಾಮ್ ಚಿಕನ್ ಸ್ಟಾಲ್‌ ಎದುರು ಹೋಗುತ್ತಿರುವಾಗ KA-20-EU-6740 ನೇ ನಂಬ್ರದ ಮೋಟಾರ್ ಸೈಕಲ್  ಸವಾರ ಆಕಾಶ್ ಎಂಬಾತನು ತನ್ನ ಬಾಬ್ತು ಮೋಟಾರ್‌‌ ಸೈಕಲ್ಲನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಗುರುಪ್ರಸಾದ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌‌ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಎರಡೂ ಮೋಟಾರ್ ಸೈಕಲ್ ಸವಾರರು  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಗುರುಪ್ರಸಾದನ ತಲೆಗೆ ತೀವ್ರ ರಕ್ತಗಾಯವಾಗಿರುತ್ತದೆ. ಆರೋಪಿ ಮೋಟಾರ್ ಸೈಕಲ್ ಸವಾರನ ಬಲಕೈ ತಟ್ಟಿನ ಬಳಿ ತರಚಿದ ಗಾಯವಾಗಿರುತ್ತದೆ, ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 10/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿ ಅಮ್‌ಲೇಶ್‌ ಸಿಂಗ್‌ ಇವರು ನಂದಿಕೂರು ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಶ್ರೀ ಚಕ್ರ ಕಂಟೈನರ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದುದಾರರಿಗೆ ದಿನಾಂಕ:27/01/2022 ರಂದು ಜ್ವರ ಬಂದಿದ್ದುದರಿಂದ ಚಿಕಿತ್ಸೆ ಬಗ್ಗೆ ಸಂಜೆ 6:30 ಗಂಟೆ ಸುಮಾರಿಗೆ ಪ್ಯಾಕ್ಟರಿಯಲ್ಲಿ ಸೇಫ್ಟಿ ಆಫಿಸರ್‌ ಆಗಿ ಕೆಲಸ ಮಾಡಿಕೊಂಡಿದ್ದ ವಿನೋದ್‌ ದೇವಾಡಿಗ ಎಂಬವರ ಬಾಬ್ತು ಮೋಟಾರು ಸೈಕಲ್‌ ನಂಬ್ರ KA-20-EW-2462 ರಲ್ಲಿ ಸಹಸವಾರನಾಗಿ ಕುಳಿತುಕೊಂಡು ಹೊರಟು ಸಂಜೆ 6:40 ಗಂಟೆ ಸುಮಾರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಕಾರ್ಕಳ-ಪಡುಬಿದ್ರಿ ಜಂಕ್ಷನ್‌ ತಲುಪಿ ಆಸ್ಪತ್ರೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-66 ನ್ನು ದಾಟಲು ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುವ ಏಕಮುಖ ಸಂಚಾರ ರಸ್ತೆಯ ಪೂರ್ವದ ಅಂಚಿನಲ್ಲಿ ಮೋಟಾರು ಸೈಕಲ್‌ ನಿಲ್ಲಿಸಿ ಕಾಯುತ್ತಿರುವಾಗ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-20-AA-8500 ನೇ ಲಾರಿ ಚಾಲಕ ಶಹೀದ್‌ನು ತನ್ನ ಬಾಬ್ತು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆಯ ಅಂಚಿನಲ್ಲಿ ರಸ್ತೆ ದಾಟಲು ನಿಂತಿದ್ದ KA-20-EW-2462 ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರ್‌ ಸೈಕಲ್‌ನ ಸವಾರ ಹಾಗೂ ಸಹಸವಾರ ಮೋಟರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಮೋಟರ್‌ ಸೈಕಲ್‌ ಸವಾರ ವಿನೋದ್‌ ದೇವಾಡಿಗ ರವರ ಬಲಕಾಲಿನ ಪಾದದಿಂದ ಮೇಲ್ಬಾಗದಲ್ಲಿ ಮೂಳೆ ಮುರಿತದ ತೀವೃ ಗಾಯವಾಗಿದ್ದು, ಹಾಗೂ ಸಹಸವಾರರಾದ ಪಿರ್ಯಾದಿದಾರರಿಗೆ ಎಡೈಗೆ ತರಚಿದ ಗಾಯ ಆಗಿರುತ್ತದೆ. ನಂತರ ಗಾಯಾಳುಗಳಿಗೆ ಪಡುಬಿದ್ರಿಯ ಶ್ರೀ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ವಿನೋದ್‌ ದೇವಾಡಿಗನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 11/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿ ಶ್ರೀಮತಿ ಭಾನುಮತಿ ಎಮ್ ಆರ್ ನಾಯರಿ ಇವರಿಗೆ ದಿನಾಂಕ: 04/05/2015 ರಂದು 1 ನೇ ಆರೋಪಿ ರಾಮಚಂದ್ರ ಕೆ ನಾಯರಿ ಯೊಂದಿಗೆ ಬ್ರಹ್ಮಾವರ ಧರ್ಮಾವರಂ ಅಡಿಟೋರಿಯಂ ನಲ್ಲಿ ಜಾತಿ ಪದ್ದತಿಯಂತೆ ಶಾಸ್ತ್ರೀಕ್ತವಾಗಿ ಮದುವೆಯಾಗಿರುತ್ತದೆ. ಮದುವೆಯ ನಿಶ್ಚಿತಾರ್ಥದ ದಿನಾಂಕ: 22/01/2015 ರಂದು ಆರೋಪಿತರ ಬೇಡಿಕೆಯಂತೆ ಪಿರ್ಯಾಧಿದಾರರ ತಂದೆ 5 ಲಕ್ಷ ರೂ ವರದಕ್ಷಿಣೆಯನ್ನು ಪಿರ್ಯಾದಿದಾರರ ಮನೆಯಲ್ಲಿ ಆರೋಪಿತರಿಗೆ  ನೀಡಿದ್ದು, 30 ಪವನ್ ಚಿನ್ನಾಭರಣವನ್ನು ಪಿರ್ಯಾದಿದಾರರಿಗೆ ಹಾಕಿರುತ್ತಾರೆ. ಮದುವೆಯ ನಂತರ ಪಿರ್ಯಾದಿದಾರರು 1ಮತ್ತು 2 ನೇ ಆರೋಪಿತ ಶ್ರೀಮತಿ ಬೇಬಿ ನಾಯರಿ ಯಾನೆ ನಾಗವೇಣಿ  ಇವರೊಂದಿಗೆ ಚಿತ್ರದುರ್ಗಾ ದಲ್ಲಿ ವಾಸವಾಗಿದ್ದು, 1ಮತ್ತು 2 ನೇ ಆರೋಪಿತರು ಪಿರ್ಯಾದಿದಾರರು ನೀಡಿದ ವರದಕ್ಷಿಣೆ ಕಡಿಮೆ ಆಯಿತೆಂದು ಪಿರ್ಯಾದಿದಾರರಿಗೆ ಕೊಂಕು ಮಾತುಗಳಿಂದ ನೋಯಿಸುತ್ತಿದ್ದರು. ಮದುವೆಯ ನಂತರ 1 ನೇ ಆರೋಪಿಯು ತನಗೆ ಹಣದ ಅಗತ್ಯತೆ ಇದೆ ಎಂದು ಹೇಳಿ ಪಿರ್ಯಾಧಿದಾರರ ತಂದೆಯ ಮನೆಯಿಂದ ಹಣವನ್ನು ತಂದುಕೊಡುವಂತೆ ಪಿರ್ಯಾದಿದಾರರನ್ನು ಒತ್ತಾಯಿಸಿ ಹಿಂಸಿಸುತ್ತಿದ್ದು, ಪಿರ್ಯಾದಿದಾರರ ತಂದೆ 2 ಲಕ್ಷ ರೂಪಾಯಿಯನ್ನು 1 ನೇ ಆರೋಪಿತನಿಗೆ ಪಾವತಿಸಿರುತ್ತಾರೆ. ಆದರೂ 1 ನೇ ಆರೋಪಿಯು ಪಿರ್ಯಾದಿದಾರರಿಗೆ ಮನೆಯಿಂದ  ಚಿನ್ನ ತರುವಂತೆ ಒತ್ತಾಯಿಸಿ ಅವಾಚ್ಯವಾಗಿ ಬೈದು , ವೈವಾಹಿಕ ಜೀವನಕ್ಕೆ 10/01/2018 ರಂದು ರಿಧಿಮಾ ಎಂಬ ಮಗು ಹುಟ್ಟಿದ್ದು ಮಾಡಿ ಮಗುವನ್ನು ಹಾಗೂ ಪಿರ್ಯಾದಿದಾರರನ್ನು ನೋಡಲು ಬಂದಿರುವುದಿಲ್ಲ. 4 ಮತ್ತು 5 ನೇ ಆರೋಪಿತರಾದ ವಿಶ್ವನಾಥ ಮತ್ತು ಶ್ರೀಮತಿ ಗೀತಾ  ರವರು ಸಹ ಪಿರ್ಯಾದಿದಾರರು  ತಂದೆ ಮನೆಯಿಂದ ವರದಕ್ಷಿಣೆ ತರಲಿಲ್ಲವೆಂದು 1 ನೇ ಆರೋಪಿತನಿಗೆ ಪ್ರಚೋದಿಸುತ್ತಿದ್ದರು. 6 ನೇ ಆರೋಪಿ ವಸಂತ ನಾಯರಿಯು 1 ನೇ ಆರೋಪಿಯ ಹತ್ತಿರ ಪಿರ್ಯಾದಿದಾರರ ಬಗ್ಗೆ ಇಲ್ಲಸಲ್ಲದನ್ನು ಹೇಳಿ 1 ನೇ ಆರೋಪಿ ಪಿರ್ಯಾದಿದಾರರಿಗೆ ಹೊಡೆಯುವಂತೆ  ಪ್ರಚೋದಿಸುತ್ತಿದ್ದನು. 7 ಮತ್ತು 8 ನೇ ಆರೋಪಿತ ವಿದ್ಯಾ ನಾಯರಿ ಮತ್ತು ರಶ್ಮಿ ನಾಯರಿ ಇವರು ಪಿರ್ಯಾದಿದಾರರು ಅವರಿಗೆ ಮರ್ಯಾದೆ ಕೊಡಲಿಲ್ಲ ವೆಂದು 1 ನೇ ಆರೋಪಿಗೆ  ಚುಚ್ಚು ಮಾತು ಹೇಳಿಕೊಟ್ಟು 1 ನೇ ಆರೋಪಿತನು ನಿಂದಿಸಿ ಹೊಡೆಯುವಂತೆ  ಮಾಡುತ್ತಿದ್ದು, ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ. 1 ನೇ ಆರೋಪಿಯು ಜೂನ್ 2021 ರಲ್ಲಿ ಸಾಲಿಗ್ರಾಮದಲ್ಲಿ ಬಾಡಿಗೆ ಮನೆ ಮಾಡಿದ್ದು ಆಸಮಯ 3 ನೇ ಆರೋಪಿ  ರವಿರಾಜ ನಾಯರಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಬಂದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದು 1 ನೇ ಆರೋಪಿ 3 ನೇ ಆರೋಪಿಗೆ ಸಾಥ್ ನೀಡಿರುತ್ತಾರೆ. 1ನೇ ಆರೋಪಿಯು ಪಿರ್ಯಾದಿದಾರರನ್ನು ಮತ್ತು ಮಗುವನ್ನು  ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದು, ಪಿರ್ಯಾದಿದಾರರನ್ನು ಮತ್ತು ಮಗುವನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ. 1ರಿಂದ 8 ನೇ ಆರೋಪಿತ ರು ಸಮಾನ ಉದ್ದೇಶದಿಂದ  ಪಿರ್ಯಾದಿದಾರರಿಗೆ  ವೈವಾಹಿಕ ಹಿಂಸೆ, ವರದಕ್ಷಿಣೆ ಹಿಂಸೆ  ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಮಹಿಳಾ ಠಾಣೆ  ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 09/2022 ಕಲಂ:498(A), 504,323,506,149 IPC,3,4,DP ACT ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಆರೋಪಿತರಾದ ಗುರುರಾಜ್ ಮತ್ತು ವಿಜಯ ಶೆಟ್ಟಿ ಇವರು ಆರೋಪಿ ರಮೇಶ್ ಶೆಟ್ಟಿಯೊಂದಿಗೆ ಸೇರಿ ಮಹಿಳೆಯರನ್ನು ಉಡುಪಿ ತಾಲೂಕು, ಮೂಡನಿಡಂಬೂರು ಗ್ರಾಮದ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಎಸ್. ಆರ್. ಯಾತ್ರಿ ನಿವಾಸ್ ಲಾಡ್ಜ್ ರೂಮ್ ನಂಬ್ರ 109  ಮತ್ತು 110 ರಲ್ಲಿ ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಿ ವೇಶ್ಯಾವಾಟಿಕೆಯಿಂದ ಅಕ್ರಮವಾಗಿ ಹಣವನ್ನು ಗಳಿಸುತ್ತಿದ್ದು, ಖಚಿತ ವರ್ತಮಾನದ ಮೇರೆಗೆ  ದಿನಾಂಕ:27/01/2022 ರಂದು 12:10 ಗಂಟೆವರೆಗೆ  ಮಹಿಳಾ ಪೊಲೀಸ್ ಠಾಣಾ  ಪೊಲೀಸ್ ನಿರೀಕ್ಷಕರು ಮತ್ತು ಉಡುಪಿ ನಗರ ಪೊಲೀಸ್  ಠಾಣಾ  ಪೊಲೀಸ್  ನಿರೀಕ್ಷಕರು  ಸಿಬ್ಬಂದಿಯವರೊಂದಿಗೆ ಜಂಟಿಯಾಗಿ ದಾಳಿ ನಡೆಸಿ ಆರೋಪಿತರಾದ ಗುರುರಾಜ್, ವಿಜಯ ಶೆಟ್ಟಿ, ಹೇಮಂತ್  ಕುಮಾರ್ ಮತ್ತು ಸಂದೀಪ್ ಮೊಗವೀರ ಇವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂದಿಸಿದ ಸಾಕ್ಷ್ಯ ಸ್ವತ್ತುಗಳನ್ನು  ಮಹಜರು ಮುಖೇನ ಸ್ವಾಧೀನಪಡಿಸಿ ಕೊಂಡಿದ್ದು ಈ ಬಗ್ಗೆ ಮಹಿಳಾ ಠಾಣೆ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ:3,4,5,6,7 ಅನೈತಿಕ ವ್ಯವಹಾರ (ನಿಷೇಧ) ಅಧಿನಿಯಮ 1956 ಕಾಯ್ದೆ ನಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

 • ಅಜೆಕಾರು: ಪಿರ್ಯಾದಿ ಶಿವಪ್ರಸಾದ್ ಇವರ ಸ್ನೇಹಿತನಾದ ಮೃತ್ಯುಂಜಯನು ಅಜೆಕಾರಿನ ಸುನೀಲ್ ರವರ ಕೃಷಿ ಯಂತ್ರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮರ್ಣೆ ಗ್ರಾಮದ ದೊಡ್ಡಪಲ್ಕೆಯ ಮೌರೀಸ್ ರೋಡ್ರಿಗಸ್ ರವರ ಬಾಡಿಗೆ ಮನೆಯಲ್ಲಿ ಒಬ್ಬನೆ ಇದ್ದನು. ಫಿರ್ಯಾದುದಾರರು ಬೆಳಿಗ್ಗೆ 07:00 ಗಂಟೆಯ ಸಮಯಕ್ಕೆ ಅವನಿಗೆ ಮೇಸೆಜ್ ಹಾಗು 2 ಬಾರಿ ಕರೆಯನ್ನು ಕೂಡಾ ಮಾಡಿದ್ದು, ಕರೆಯನ್ನು ಸ್ವೀಕರಿಸದ ಕಾರಣ ಬೆಳಿಗ್ಗೆ 07:20 ಗಂಟೆಗೆ ಅವನು ವಾಸವಿದ್ದ  ಬಾಡಿಗೆ ಬಂದು ನೋಡಿದಾಗ ಮನೆಯ ಬಾಗಿಲು ಲಾಕ್ ಆಗದ ಕಾರಣ ಒಳಗೆ ಹೋಗಿ ನೋಡಲಾಗಿ  ಮನೆಯ ಒಳಗಡೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 28-01-2022 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080