ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪ್ರವೀಣ್‌ ನಾಯ್ಕ್‌, (39), ತಂದೆ: ಗೋಕುಲ್‌ ನಾಯ್ಕ್‌, ವಾಸ: ರಾಜೀವ ನಗರ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ  25/12/2022 ರಂದು ಸಂಜೆ 17:45 ಗಂಟೆಗೆ  ಕುಕ್ಕುಂದೂರು  ಗ್ರಾಮದ  ದುರ್ಗಾನಗರ  ಜಂಕ್ಷನ್‌ನಲ್ಲಿ  ಇರುವಾಗ  ಕಾರ್ಕಳ –ಉಡುಪಿ ರಸ್ತೆಯಲ್ಲಿ  ಕಾರ್ಕಳ ಕಡೆಯಿಂದ  ಉಡುಪಿ ಕಡೆಗೆ   ಟಿವಿಎಸ್ ಅಪಾಚೆ  ದ್ವಿಚಕ್ರ  ವಾಹನ KA-20-EB-9338 ನ್ನು ಅದರ  ಸವಾರ  ಸುಧೀರ್ (36) ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದು ಅದೇ ಸಮಯಕ್ಕೆ ನಕ್ರೆ ಕಡೆ ಒಳರಸ್ತೆಯಿಂದ ಟಿವಿಎಸ್ ಎಕ್ಸ್ ಎಲ್  KA-20-HA-0050    ಮೋಪೆಡನ್ನು  ಅದರ  ಸವಾರ  ಈಶ್ವರ ಎಂಬುವವರು  ಮುಖ್ಯ ರಸ್ತೆಯಲ್ಲಿ  ಹೋಗಿ ಬರುವ ವಾಹನಗಳನ್ನು  ಗಮನಿಸದೇ ದುಡುಕುತನದಿಂದ ಕಾರ್ಕಳ –ಉಡುಪಿ ಮುಖ್ಯ ರಸ್ತೆಗೆ  ಸವಾರಿ  ಮಾಡಿಕೊಂಡು ಬಂದು  ದುರ್ಗಾನಗರ ಜಂಕ್ಷನ್‌ನಲ್ಲಿ ಸುಧೀರ್ ರವರು ಸವಾರಿ ಮಾಡಿಕೊಂಡು  ಬರುತ್ತಿದ್ದ  ದ್ವಿಚಕ್ರ ವಾಹನಕ್ಕೆ  ಡಿಕ್ಕಿ  ಹೊಡೆದ  ಪರಿಣಾಮ  ಎರಡೂ ವಾಹನಗಳೊಂದಿಗೆ ಸವಾರರು  ರಸ್ತೆಗೆ   ಬಿದ್ದ  ಪರಿಣಾಮ ಸುಧೀರ್‌ರವರ ಎಡಭುಜಕ್ಕೆ  ಹಾಗೂ ಸೊಂಟಕ್ಕೆ  ಒಳಜಖಂ ಆಗಿದ್ದು , ಡಿಕ್ಕಿ  ಹೊಡೆದ ಟಿವಿಎಸ್ ಮೊಪೇಡ್  ಸವಾರನೂ ಸಹಾ  ಗಾಯಗೊಂಡಿರುತ್ತಾನೆ.  ಗಾಯಾಳು ಸುಧೀರ್‌ರವರು ಉಡುಪಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 158/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ : ಪಿರ್ಯಾದಿದಾರರಾದ ಶಶಿಕುಮಾರ್ (19), ತಂದೆ: ಅಣ್ಣಪ್ಪ ಮೊಗವೀರ, ವಾಸ: : 2/97 ಬಿ, ಕುಂಜಿಬೆಟ್ಟು ಗುಳ್ಳಾಡಿ, ಬೇಳೂರು ಗ್ರಾಮ, ಕುಂದಾಪುರ ತಾಲೂಕು ಇವರು  ದಿನಾಂಕ 25/12/2022 ರಂದು ಸ್ನೇಹಿತನಾದ ದಿನೇಶ್ ಕುಲಾಲ್ ರವರೊಂದಿಗೆ ಅವರ ಬೈಕ್ ನಂಬ್ರ KA-20-ED-8875 ನೇದರಲ್ಲಿ ಸಹ ಸವಾರನ್ನಾಗಿ ಕುಳಿತುಕೊಂಡು ಬ್ರಹ್ಮಾವರ ಹೋಗಿ ನಂತರ ವಾಪಾಸು ಮನೆಗೆ ಬರುತ್ತಿರುವಾಗ   ಮಧ್ಯಾಹ್ನ  2:45 ಗಂಟೆಗೆ ಪಾಂಡೇಶ್ವರದ ಚರ್ಚ ಬಳಿ ಬ್ರಹ್ಮಾವರ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಬಂದ ಮಿನಿ ಬಸ್ ನಂಬ್ರ KA-20-D-2115 ನೇದನ್ನು ಅದರ ಚಾಲಕನಾದ ಪ್ರವೀಣ್ ಶೆಟ್ಟಿ ರವರು ಪಾಂಡೇಶ್ವರದ ಯು-ಟರ್ನ್ ನಲ್ಲಿ ಯಾವುದೇ ಸೂಚನೆ ನೀಡದೇ ಕುಂದಾಪುರ ಕಡೆಗೆ ತಿರುಗಿಸಿದ ಪರಿಣಾಮ ಕ್ರಮದಂತೆ ಹೋಗುತ್ತಿದ್ದ ದಿನೇಶ್ ಕುಲಾಲ್ ಸವಾರಿ ಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲು ಮೂಳೆ ಮುರಿತದ ಗಾಯವಾಗಿ, ಬಲಕಣ್ಣಿಗೆ ಗಾಯ ವಾಗಿರುವುದಲ್ಲದೇ  ಬೈಕ್ ಸವಾರನಿಗೆ ತಲೆಗೆ, ಹಣೆಗೆ, ಗಲ್ಲಕ್ಕೆ ತೀವೃ ತಹದ ಗಾಯವಾಗಿ ಕಾಲಿಗೆ ತರಚಿದ ಗಾಯವಾಗಿರುತ್ತದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 233/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ : ದಿನಾಂಕ 26/12/2022  ರಂದು  ಮಧ್ಯಾಹ್ನ 3:15  ಗಂಟೆಗೆ ಕುಂದಾಪುರ  ತಾಲೂಕಿನ, ಬಳ್ಕೂರು ಗ್ರಾಮದ ಪಾನಕದಕಟ್ಟೆಯ  ಶ್ರೀನಿವಾಸ  ಕಾಂಪ್ಲೆಕ್ಸ್‌ಬಳಿ,  ರಾಜ್ಯ ಹೆದ್ದಾರಿ  52 ರಸ್ತೆಯಲ್ಲಿ,  ಅಪರಿಚಿತ  ಚಾಲಕ, ನೊಂದಣಿ ನಂಬ್ರ ಇಲ್ಲದ  ಹೊಸ ಕ್ರೇನ್‌‌ನ್ನು ಕುಂದಾಪುರ  ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಅದೇ  ದಿಕ್ಕಿನಲ್ಲಿ  ಪಿರ್ಯಾದಿದಾರರಾದ ದಿನೇಶ್‌ಪೂಜಾರಿಯವರು KA-20-ER-8736ನೇ  ಬೈಕಿನಲ್ಲಿ  ಪ್ರಶಾಂತ  ಮೋಗವೀರರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ ಬೈಕಿಗೆ ಹಿಂದಿನಿಂದ ಡಿಕ್ಕಿ  ಹೊಡೆದ  ಪರಿಣಾಮ ದಿನೇಶ್‌ಪೂಜಾರಿಯವರ ಬಲಭುಜ, ಬಲಕೈ, ಬಾಲ ಕಾಲಿಗೆ ಗಾಯವಾಗಿ  ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿದ್ದು, ಪ್ರಶಾಂತ  ಮೋಗವೀರರವರ ಎದೆಗೆ, ಹಾಗೂ ದೇಹದ ಇತರೆ  ಅಂಗಾಂಗಗಳಿಗೆ ಗಂಭೀರ ಗಾಯವಾಗಿ ಮೂಗು ಹಾಗೂ  ಬಾಯಿಂದ ರಕ್ತಸ್ರಾವವಾಗಿ  ಮೃತಪಟ್ಟಿರುತ್ತಾರೆ. ಆಪಾದಿತ ಅಪರಿಚತ ಚಾಲಕ   ಕ್ರೇನ್‌‌‌ನ್ನು ರಸ್ತೆಯ  ಬದಿಯಲ್ಲಿ  ಕ್ರೇನ್‌‌ನ್ನು ನಿಲ್ಲಿಸಿ ಅಪಘಾತ  ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2022  ಕಲಂ: 279,  337, 304 (ಎ)  ಐಪಿಸಿ   & 134 (A) (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ದಿನಾಂಕ 25/12/2022 ರಂದು 18:45 ಗಂಟೆಗೆ ಪಿರ್ಯಾದಿದಾರರಾದ ಲಿಂಗಪ್ಪ ಮೂಲ್ಯ (44), ತಂದೆ: ದಿ. ತನಿಯ, ವಾಸ: ಪುನಾರ್‌ಜಂತ್ರ, ಬೆಳ್ಮಣ್ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ ಇವರು ಬಸ್ಸಿನಲ್ಲಿ ಬೆಳ್ಮಣ್‌ ಪೇಟೆಗೆ ಬಂದು ಬೆಳ್ಮಣ್‌ ಪೇಟೆಯಲ್ಲಿ ಬಸ್ಸಿನಿಂದ ಇಳಿದು ಕಾರ್ಕಳ ತಾಲೂಕು ಬೆಳ್ಮಣ್  ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಬೆಳ್ಮಣ್ ಟೆಂಪೋ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ  ಬೆಳ್ಮಣ್ ಟೆಂಪೋ ನಿಲ್ದಾಣ ಕಡೆಗೆ ರಸ್ತೆ ದಾಟಲು ರಸ್ತೆಯ ಬಲ ಬದಿಯಿಂದ ಎಡ ಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ KA-19-AC- 3189  ನೇ ನಂಬ್ರದ ಕಾರು  ಚಾಲಕನು ಕಾರನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಾದ  ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಕೆನ್ನೆಗೆ, ಕಣ್ಣಿನ ಬಳಿ, ಬಲ ಅಂಗೈ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 151/2022 ಕಲಂ:: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ದಿನಾಂಕ 26/12/2022 ರಂದು ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬ್ರಾಮರಿ ಎಂಬಲ್ಲಿ ಹಾದುಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ KA-19-AB-4863 ನೇ ನಂಬ್ರದ ಟಿಪ್ಪರ್ ಚಾಲಕನು ತನ್ನ  ಟಿಪ್ಪರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ  ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದ KA-20-AA-5244 ನೇ ನಂಬ್ರದ ಕ್ರಿಸ್ತ ಜ್ಯೋತಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಭಾಗದಲ್ಲಿ ಇದ್ದ ಇಬ್ಬರಿಗೆ ಹಾಗೂ ಮುಂಭಾಗದಲ್ಲಿ ಇದ್ದ ಮೂವರಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲದೇ ಈ ಅಪಘಾತದಿಂದಾಗಿ ಬಸ್ಸು, ಟಿಪ್ಪರ್ ಹಾಗೂ ವಿದ್ಯುತ್ ಕಂಬ ಜಖಂಗೊಂಡಿರುವುದಾಗಿದೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 152/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಯುವರಾಜ್  (33) ,ತಂದೆ:ಮಂಜುನಾಥ್ , ವಾಸ: ಕೆದುರು  ಹೌಸ್, ಚೇಳೂರು ಪೋಸ್ಟ್, ಕುರ್ನಾಡು ಗ್ರಾಮ, ಬಂಟ್ವಾಳ   ತಾಲೂಕು ,ದ.ಕ  ಜಿಲ್ಲೆ ಇವರು ದಿನಾಂಕ 26/12/2022 ರಂದು ತನ್ನ ಕಾರು ನಂಬ್ರ KA-19-MC-7355  ನೇದರಲ್ಲಿ ಕೆಲಸದ  ನಿಮಿತ್ತ ಕಾರ್ಕಳಕ್ಕೆ ಹೋಗಿದ್ದು, ಅಲ್ಲಿಂದ ಕೆಲಸ ಮುಗಿಸಿ ವಾಪಾಸು ಕಾರ್ಕಳದಿಂದ ಬೆಳ್ಮಣ್ ಮಾರ್ಗವಾಗಿ ಕಟಪಾಡಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದು ಮಧ್ಯಾಹ್ನ 12:05 ಗಂಟೆ ಸಮಯಕ್ಕೆ ಶಿರ್ವ – ಕಟಪಾಡಿ ಸಾರ್ವಜನಿಕ ರಸ್ತೆಯ ಪ್ರಿನ್ಸ್ ಪಾಯಿಂಟ್ ಬಳಿ ತಲುಪುವಾಗ ಎದುರುಗಡೆಯಿಂದ KA-01-AH -3545 ನೇ ನೊಂದಣಿ ಸಂಖ್ಯೆಯ ನವೀನ್ ಬಸ್ಸನ್ನು ಅದರ ಚಾಲಕನು ಪ್ರಿನ್ಸ್‌ಪಾಯಿಂಟ್‌ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ರಸ್ತೆಯಲ್ಲಿ ನಿಲ್ಲಿಸಿದ್ದು ಎದುರುಗಡೆಯಿಂದ ವಾಹನ ಬರುತ್ತಿದ್ದರಿಂದ ಪಿರ್ಯಾದಿದಾರರು ತನ್ನ ಕಾರನ್ನು ಸುಮಾರು 5 ಮೀಟರ್ ಅಂತರ ದಲ್ಲಿ ಬಸ್ಸಿನ  ಹಿಂದುಗಡೆ ನಿಲ್ಲಿಸಿದ್ದು. ಆ  ಸಮಯದಲ್ಲಿ ಪಿರ್ಯಾದಿದಾರರ ಹಿಂಬದಿಯಿಂದ ಓರ್ವ ಟಾಟಾ ಟೆಂಪೋ ಚಾಲಕನು ಟೆಂಫೊವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ನಿಂತಿದ್ದ  ಪಿರ್ಯಾದುದಾರರ ಕಾರಿನ  ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಮುಂದಕ್ಕೆ ಚಲಿಸಿ ಎದುರು ನಿಂತಿದ್ದ ಬಸ್ಸಿನ ಹಿಂಬದಿಗೆ ತಾಗಿ ನಿಂತಿತು. ಇದರಿಂದ ಪಿರ್ಯಾದಿದಾರರ ಕಾರಿನ ಹಿಂಬದಿ ಮುಂಬದಿ ಜಖಂ ಗೊಂಡಿರುತ್ತದೆ. ನಂತರ ಅಪಘಾತಪಡಿಸಿದ ಟೆಂಪೋದ ನಂಬ್ರ ನೋಡಲಾಗಿ KA-50-A-0802 ನೇ ನೊಂದಣಿ ಸಂಖ್ಯೆಯ ಟಾಟ ಏಸ್‌ಟೆಂಪೋ ಆಗಿದ್ದು ಟೆಂಪೋ ಕೂಡ ಜಖಂಗೊಂಡಿರುತ್ತದೆ. ಟೆಂಪೋ ಚಾಲಕನ ಹೆಸರು ಕೇಳಲಾಗಿ ಸುರೇಂದ್ರ ಆಚಾರ್ಯ ಎಂದು ತಿಳಿಸಿದನು. ಈ ಅಪಘಾತದಿಂದ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ಪಿರ್ಯಾದಿದಾರರಾದ ಮಹೇಶ್‌ ಅಂಚನ್(50)‌, ತಂದೆ:ದಿ. ಬಿ. ಅಮೀನ್‌,  ವಾಸ : “ಆಯುದೀಪ್” ಮಥಾಯಸ್‌ ಕಂಪೌಂಡ್‌, ಅಚ್ಚಡ ರಸ್ತೆ, ಮೂಡಬೆಟ್ಟು ಗ್ರಾಮ ಇವರು ದಿನಾಂಕ 26/12/2022 ರಂದು ಮಟ್ಟುವಿನಲ್ಲಿರುವ ತನ್ನ ತಾಯಿ ಮನೆಗೆ ಅವರ ಮೋಟಾರ್‌ ಸೈಕಲ್ಲಿನಲ್ಲಿ ಬರುತ್ತಿದ್ದು 04:00 ಗಂಟೆಗೆ  ಕೋಟೆ ಗ್ರಾಮದ ಅಂಬಾಡಿ ಚಚಿ೯ನ ಮಸಣದ ಬಳಿ ತಲುಪುವಾಗ, ಎದುರುಗಡೆಯಿಂದ ಸದಾನಂದ ಸುವರ್ಣ ರವರು ತನ್ನ KA--19-EU-8070 ನೇ ಮೋಟಾರು ಸೈಕಲ್‌ನಲ್ಲಿ ಅನುಷ್‌ರವರನ್ನು ಸಹ ಸವಾರನಾಗಿ ಕುಳ್ಳರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮೋಟಾರು ಸೈಕಲ್‌ನ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ಮೋಟಾರು ಸೈಕಲ್‌ಸಮೇತ, ಮೋಟಾರ್ ಸೈಕಲ್‌ ಸವಾರ  ಸದಾನಂದ ಸುವರ್ಣ  ರಸ್ತೆಯ ಎಡಬದಿಯ ಹುಲ್ಲಿನ ಮೇಲೆ ಹಾಗೂ ಸಹ ಸವಾರ ಅನುಷ್‌ರವರು ರಸ್ತೆಯ ಮೇಲೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಅನುಷ್‌ಗೆ ಎಡ ಕಿವಿಯ ಮೇಲೆ ರಕ್ತ ಗಾಯವಾಗಿ ರಕ್ತ ಬರುತ್ತಿದ್ದು, ಮತ್ತು ಎಡಕೆನ್ನೆಗೆ ತರಚಿದ ಗಾಯವಾಗಿದ್ದು, ಪ್ರಜ್ಞೆ ತಪ್ಪಿ ಮಾತನಾಡದೇ ಇದ್ದು, ಮೋಟಾರ್ ಸೈಕಲ್‌ ಸವಾರ  ಸದಾನಂದ ಸುವರ್ಣ ಯಾವುದೇ ಗಾಯಗಳು ಆಗಿರುವುದಿಲ್ಲ. ಅಲ್ಲಿ ವಾಕಿಂಗ್‌ಗೆ ಹೋಗುತ್ತಿದ್ದ ಆಸ್ಟೀನ್‌ ಎಂಬವರ ಸಹಾಯದಿಂದ ಅನುಷ್‌ ನನ್ನು ಒಂದು ವಾಹನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ.  ಪಿರ್ಯಾದಿದಾರರು ಅಪಘಾತದಿಂದ ಗಾಯಗೊಂಡು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನುಷ್‌ನ ಆರೈಕೆಯಲ್ಲಿದ್ದು, ಠಾಣೆಗೆ ಬಂದು ದೂರು ನೀಡುವರೇ ವಿಳಂಬವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 144/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ : ಪಿರ್ಯಾದಿದಾರರಾದ ಸುಧೀರ (28), ತಂದೆ: ಸಂಜೀವ ಪೂಜಾರಿ, ವಾಸ: ಸುರ್ಗಿಕಟ್ಟೆ ಮಂದಾರ್ತಿ ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರಿಗೆ  ದೊಡ್ಡಮ್ಮನ ಮಗಳು ಸಂಗೀತಾ ರವರು ಕರೆ ಮಾಡಿ ಅಜ್ಜಿ  ಚಿಕ್ಕು ರವರು ಹಳ್ಳಾಡಿ-ಹರ್ಕಾಡಿ ಗ್ರಾಮದ ಗಾವಳಿಯ ಎಂಬಲ್ಲಿ  ದಿನಾಂಕ  26/12/2022 ರಂದು ಬೆಳಿಗ್ಗೆ 11:15  ಗಂಟೆಗೆ ತೋಟದಲ್ಲಿರುವ ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋದಾಗ ಪಕ್ಕದಲ್ಲೇ ಇದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದೂ ನಂತರ ಪಿರ್ಯಾದಿದಾರರು ಕೂಡಲೇ ಅಜ್ಜಿಯನ್ನು ಬಿದ್ಕಲಕಟ್ಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಅಜ್ಜಿ ಚಿಕ್ಕುರವರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 53/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಅಮಾಸೆಬೈಲು: ಪಿರ್ಯಾದಿದಾರರಾದ ಶಾರದಾ(37), ಗಂಡ: ಶ್ರೀನಿವಾಸ @ ಸ್ಕರಿಯ, ವಾಸ: ಹೊನಕನ ಬೈಲು ಹೊಸಂಗಡಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ಇವರ ಗಂಡ, ಮಕ್ಕಳು ದಿನಾಂಕ 24/12/2022 ರಂದು 20:00 ಗಂಟೆಗೆ  ಊಟ ಮಾಡಿ ಮಲಗಿದವರು 25/12/2022 ರ ಬೆಳ್ಳಿಗ್ಗೆ  03:00 ಗಂಟೆಯ ಸಮಯಕ್ಕೆ ಮಕ್ಕಳಿಗೆ ಔಷದ ಕೊಡಲು ನಿದ್ದೆಯಿಂದ ಎದ್ದು ನೋಡಿದಾಗ ಪಿರ್ಯಾದಿದಾರರ ಗಂಡ ಮಲಗಿದ ಜಾಗದಲ್ಲಿ ಇರಲಿಲ್ಲ ಸುತ್ತ ಮುತ್ತ ಹುಡುಕಾಡಿದರು ಕಾಣಲಿಲ್ಲ. ನಂತರ ದಿನಾಂಕ 26/12/2022 ರವರೆಗೂ ನೆರೆಕೆರೆಯವರೊಂದಿಗೆ ಸೇರಿ ಹೊಸಂಗಡಿಯ  ಸುತ್ತ ಮುತ್ತ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ದಿನಾಂಕ 26/12/2022 ರಂದು ಸಂಜೆ 18:00: ಗಂಟೆಯ ಸಮಯಕ್ಕೆ ಹೊನಕನ ಬೈಲು ಪರಿಸರದಲ್ಲಿ ಹುಡುಕಾಡುವಾಗ ಹೊನಕನ ಬೈಲು ಕೆರೆಯಲ್ಲಿ ನನ್ನ ಗಂಡ ಶ್ರೀನಿವಾಸ @ ಸ್ಕರಿಯ ರವರ ಮೃತ ದೇಹ ಪತ್ತೆಯಾಗಿರುತ್ತದೆ. ದಿನಾಂಕ 24/12/2022 ರಂದು  ರಾತ್ರಿ ಶ್ರೀನಿವಾಸ @ ಸ್ಕರಿಯ ರವರು ಬಹಿರ್ದೆಸೆಗೆಂದು ಹೊನಕನ ಬೈಲು ಕೆರೆಯ ಬಳಿಗೆ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು  ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ವಿಶು ಶೆಟ್ಟಿ (50), ತಂದೆ: ದಿ. ಗುಂಡು ಶೆಟ್ಟಿ ,ವಾಸ: ಅಂಬಲಪಾಡಿಗ್ರಾಮ, ಉಡುಪಿ ತಾಲೂಕು ಇವರು ಉಡುಪಿಯಲ್ಲಿ  ಸಮಾಜ ಸೇವಕರಾಗಿದ್ದು,  ದಿನಾಂಕ 26/12/2022 ರಂದು ಮದ್ಯಾಹ್ನ 2:15 ಗಂಟೆಗೆ  ಅಂಬಲಪಾಡಿ ಗ್ರಾಮದ ಬ್ರಹ್ಮಚಾರಿ ಬೆಟ್ಟು ಅಣ್ಣಾಜಿ ಬಲ್ಲಾಳ್‌ರವರ ಬಾಡಿಗೆ ಮನೆಯ ಒಳಗೆ ಶ್ರೀನಿವಾಸ ಸಾಲ್ಯಾನ್ (62) ರವರು ಪ್ರಜ್ಞಾಹೀನ  ಸ್ಥಿತಿಯಲ್ಲಿ  ಮಲಗಿರುವುದಾಗಿ  ನೆರೆಮನೆಯ ಉದಯ ಕುಮಾರ್ ಎಂಬವರು ಕರೆ  ಮಾಡಿ  ತಿಳಿಸಿದಂತೆ  ಸ್ಥಳಕ್ಕೆ  ತೆರಳಿ ವ್ಯಕ್ತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಸಂಜೆ 4:15  ಗಂಟೆಗೆ  ಪರೀಕ್ಷಿಸಿದ  ವೈದ್ಯರು ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 50/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀ ಸುಬ್ಬಯ್ಯ ಗೌಡ (49), ತಂದೆ: ದಿ. ಅಮ್ಮು ಗೌಡ, ವಾಸ:ಶ್ರೀಪೊಣ್ಣೆದಡಿ ಹೌಸ್, ನೂರಾಳ್ ಬೆಟ್ಟು ಅಂಚೆ  ನೂರಾಳ್ ಬೆಟ್ಟು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರಿಗೂ ನೆರೆಕೆರೆಯ ವಾಸಿ ಸುಂದರ ಗೌಡ ರವರಿಗೂ ದಾರಿಯ ವಿಚಾರದಲ್ಲಿ ತಕರಾರು ಇದ್ದು ಈ ಹಿಂದೆ ಇದೇ ವಿಚಾರದಲ್ಲಿ ಹಲವಾರು ಬಾರಿ ಮಾತಿಗೆ ಮಾತಾಗಿದ್ದು,  ದಿನಾಂಕ 26/12/2022 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರು ತನ್ನ ಸ್ನೇಹಿತೆ ಶ್ರೀಮತಿ ಸುಜಾತಾರವರೊಂದಿಗೆ ತನ್ನ KA-20-EM-1677 ನೇದರಲ್ಲಿ ಕೆಲಸಕ್ಕೆ ಹೋಗುತ್ತಿರುವಾಗ ಶೇಡಿಮಾರು ಎಂಬಲ್ಲಿ ಆರೋಫಿ ಕೃಷ್ಣ ಹಾಗೂ ಸುಂದರ ಗೌಡರವರು ಅಲ್ಲಿಗೆ ಬೈಕಿನಲ್ಲಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ   ಈ ದಾರಿಯಲ್ಲಿ ಹೋಗಬೇಡ ಎಂದು ಎಷ್ಟು ಸಾರಿ ಹೇಳುವುದು, ಇನ್ನೊಮ್ಮೆ ಈ ದಾರಿಯಲ್ಲಿ ಹೋದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಪಿರ್ಯಾದಿದಾರರು  ಈ ದಾರಿಯಲ್ಲಿ ಹೋಗದೇ ಇನ್ನೇನು ಆಕಾಶದಲ್ಲಿ ಹೋಗುವುದಾ ಎಂದು ಕೇಳಿದಾಗ ಆರೋಫಿ ಕೃಷ್ಣನು ರಸ್ತೆಯಲ್ಲಿ ಬಿದ್ದಿದ್ದ ಕಲ್ಲಿನಿಂದ ಪಿರ್ಯಾದಿದಾರರ ಎಡ ಕಣ್ಣಿನ ಬಳಿ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಆರೋಪಿ ಸುಂದರ ಕೈಯಿಂದ ಪಿರ್ಯಾದಿದಾರರ ಬೆನ್ನಿಗೆ ಗುದ್ದಿ ಹಲ್ಲೆ ಮಾಡಿದ್ದು ಗಾಯಾಳು ಸುಬ್ಬಯ್ಯ ಗೌಡರವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಹೋಗಿ  ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 150/2022  ಕಲಂ : 341, 504, 506, 324, 323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ:  ದಿನಾಂಕ  25/12/2022 ರಂದು  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ದೀಪಕ್‌ (23) ಎಂಬಾತನನ್ನು  ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ  ದೇವರಾಜ ಟಿ.ವಿ  ರವರು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು , ಆರೋಪಿ ದೀಪಕ್‌ (23) ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 225/2022 ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ದಿನಾಂಕ  25/12/2022 ರಂದು  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಆದಿನಾಥ್‌ ಎಸ್‌ ಗಾಣಿಗ (29) ಎಂಬಾತನನ್ನುಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ  ದೇವರಾಜ ಟಿ.ವಿ  ರವರು ವಶಕ್ಕೆ ಪಡೆದು  ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿ ಆದಿನಾಥ್‌ ಎಸ್‌ ಗಾಣಿಗ (29) ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ 26/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 226/2022 ಕಲಂ: 27(b) NDPS Act  ರಂತೆ ಪ್ರಕರಣದ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  25/12/2022 ರಂದು  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಶರತ್‌ (24)  ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ  ದೇವರಾಜ ಟಿ.ವಿ  ರವರು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿ ಶರತ್‌ (24) ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ 26/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 227/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  25/12/2022 ರಂದು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಮೊಹಮ್ಮದ್‌ ಆಜಮ್‌ (37) ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ  ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ  ದೇವರಾಜ ಟಿ.ವಿ  ರವರು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿ ಮೊಹಮ್ಮದ್‌ ಆಜಮ್‌ (37) ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 229/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  25/12/2022 ರಂದು  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಅನುಪಮ್‌ (24) ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ  ದೇವರಾಜ ಟಿ.ವಿ  ರವರು  ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು,  ಆರೋಪಿ ಅನುಪಮ್‌ (24)ರ್ಷ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 228/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 27-12-2022 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080