ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿಜಯ ಪೂಜಾರಿ (52), ತಂದೆ: ದಿ.ಲಿಂಗ ಪೂಜಾರಿ, ವಾಸ; ಬಡಿನ ಮನೆ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 25/12/2021 ರಂದು ಅವರ ಮೋಟಾರ್ ಸೈಕಲ್ ನಂಬ್ರ KA-20-EJ-0449 ನೇದರಲ್ಲಿ ಅವರ ಹೆಂಡತಿ ಮನೆಯಾದ ಮರವಂತೆಗೆ ಹೋಗಲು ರಾತ್ರಿ 07:45 ಗಂಟೆಗೆ ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66 ರ ನಾವುಂದ ಬಡಾಕೆರೆ ಯು ಟರ್ನ ಬಳಿ ಬಲಬದಿಯ ಇಂಡಿಕೇಟರ್ ಹಾಕಿ ಯು ಟರ್ನ ಮಾಡುವ ಸಮಯ ನಾವುಂದ ಕಡೆಯಿಂದ ಕುಂದಾಪುರ ಕಡೆಗೆ KA-20-D-0519 ಟಿಟಿ ವಾಹನವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ತೀವ್ರ ತರದ ರಕ್ತಗಾಯವಾಗಿದ್ದು, ಬಲಕಾಲಿನ ಮೊಣಗಂಟು ಹಾಗೂ ಬಲಕಾಲಿನ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು ಗಾಯಗೊಂಡವರನ್ನು ಟಿಟಿ ವಾಹನ ಚಾಲಕ ಹಾಗೂ ಸಾರ್ವಜನಿಕರು ಎತ್ತಿ ಉಪಚರಿಸಿ ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋದಲ್ಲಿ ಪರೀಕ್ಷಿಸಿದ ವೈದ್ಯರು ಒಳ ರೋಗಿಯಾಗಿ ದಾಖಲಿಸಿಕೊಂಡು ಫಿರ್ಯಾದಿದಾರರ ಬಲಕೈಯ ಹೆಬ್ಬೆರಳು ತುಂಡಾಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 211/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 26/12/2021 ರಂದು  ಸಂಜೆ 4.00 ಗಂಟೆಗೆ ಉಡುಪಿಯ  ಪುತ್ತೂರು  ತಾಲುಕಿನ  ನಿಟ್ಟೂರು  ಜಂಕ್ಷನ್ನ  ಬಳಿ  ರಸ್ತೆ ದಾಟಲು ರಸ್ತೆಯ ಬದಿಯಲ್ಲಿ  ನಿಂತಿರುವಾಗ KA- 01-MR-8463  ನೇ ಕಾರಿನ ಚಾಲಕ  ಕೃಷ್ಣ ಅಯ್ಯಂಗಾರ್ ಎಂಬುವವರು ಉಡುಪಿ ಕರಾವಳಿ  ಕಡೆಯಿಂದ  ಸಂತೆಕಟ್ಟೆ  ಕಡೆಗೆ   ರಾಷ್ಟೀಯ  ಹೆದ್ದಾರಿ  66 ರಲ್ಲಿ  ತನ್ನ  ಕಾರನ್ನು  ಚಲಾಯಿಸಿಕೊಂಡು ಬಂದು ನಿಟ್ಟರೂ ಜಂಕ್ಷನ್ ಬಳಿ ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ  ತೀರಾ  ಎಡ ಬದಿಗೆ  ಚಲಾಯಿಸಿ  ಪಿರ್ಯಾದಿದಾರರಾದ ಚಂದು (70), ತಂದೆ : ಮೆಣ್ಪ, ಶ್ರೀ  ದೇವಿ  ನಿಲಯ  ಕೊಡಂಕೂರು  ನಿಟ್ಟೂರು  ಅಂಚೆ  ಉಡುಪಿ  ತಾಲೂಕು ಇವರಿಗೆ  ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದಿದಾರರು  ರಸ್ತೆಗೆ ಬಿದ್ದು  ಎಡಕೈ  ಎಡ ಕಾಲು  ಮತ್ತು  ತಲೆಗೆ  ಗಾಯವಾಗಿ  ಉಡುಪಿ  ಹೈಟೆಕ್  ಅಸ್ಪತ್ರೆಯಲ್ಲಿ   ಒಳರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿರುವುದಾಗಿದೆ.   ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ : ದಿನಾಂಕ 26/12/2021 ರಂದು ವಸಂತ (52) ಇವರು ಸಂಜೆ 5:15 ಗಂಟೆಗೆ ಅವರ ಪತ್ನಿ ವನಿತಾ ರವರನ್ನು ಅವರ KA-05 ME-1383 ನೇ ನಂಬರಿನ ಇಂಡಿಕಾ ಕಾರಿನಲ್ಲಿ ಕರೆದುಕೊಂಡು ಬರಲು ವಸಂತ ರವರ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಹಿಂದಕ್ಕೆ ರಸ್ತೆಯ ಕಡೆಗೆ ತೆಗೆಯುವಾಗ  ಕಾರು ಅವರ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಾಯಿಸಿ ಅವರ ಪಕ್ಕದ ಮನೆಯಾದ ಆಶಾ ನಾಯ್ಕ ರವರ ಮನೆಯ ಕಂಪೌಂಡ ಗೋಡೆಗೆ ತಾಗಿ ಗೋಡೆ ಒಡೆದು  ಬಳಿಕ ಆಶಾ ರವರ ವಾಸದ ಮನೆಯ ಗೋಡೆಗೆ ಬಡಿದು ಗೋಡೆ ಜರಿದಿದ್ದು  ಕಾರಿನಲ್ಲಿದ್ದ  ವಸಂತ ರವರು ಹೊರಗೆ ಎಸೆಯಲ್ಪಟ್ಟು ಹಣೆಗೆ, ಹುಬ್ಬಿಗೆ ಗಾಯವಾಗಿ, ಎದೆಗೆ ಹಾಗೂ ತಲೆಯ ಭಾಗಕ್ಕೆ ತೀವೃ ತರದ ಗುದ್ದಿದ ನೋವುಂಟಾಗಿದ್ದು ಅವರನ್ನು ಪಿರ್ಯಾದಿದಾರರು, ಎದುರು ಮನೆಯ ಆಶಾ ನಾಯ್ಕ, ಜಲಜ ಹಾಗೂ ಅಲ್ಲಿ ಸೇರಿದ್ದ ಇತರರು ಸೇರಿ ಉಪಚರಿಸಿ ಚಿಕಿತ್ಸೆ ಬಗ್ಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ವಸಂತ ರವರನ್ನು ಪರೀಕ್ಷೀಸಿದ ವೈದ್ಯರು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 304(A) ಐಪಿಸಿ and 184 IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ : ಪಿರ್ಯಾದಿದಾರರಾದ ಶಿವಾನಂದ (50), ತಂದೆ: ಶೇಖಪ್ಪ, ವಿಳಾಸ: ದೇವಿ ನಗರ, 2 ನೇ  ಕ್ರಾಸ್‌, ಪರ್ಕಳ, ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ಮಗಳು  ಸರಸ್ವತಿ (16) ಇವರು ಯಾವುದೋ ಕಾರಣಕ್ಕೆ ಮಾನಸಿಕ ಖಿನ್ನತೆ ಒಳಗಾಗಿ ದಿನಾಂಕ 26/12/2021 ರಂದು  ಬೆಳಿಗ್ಗೆ 10:30 ಗಂಟೆಯಿಂದ  ಮಧ್ಯಾಹ್ನ 12:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮಾಡಿನ ಮರದ ಪಕ್ಕಾಸಿಗೆ ಚೂಡಿದಾರದ ವೇಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ವತ್ತೂರಿ ದಿವ್ಯಾ (49), ಗಂಡ:ವಿ ವಿ ಎಸ್ ರಾಮ್ ಕಿರಣ್, ವಾಸ: 1401, ಆದಿತ್ಯ ಹೈಟ್ಸ್ ಬಿ ಪಿ ರಾಜು ಮಾರ್ಗ್ .ಕೊಂದಾಪುರ್ ವೈಟ್ ಫೀಲ್ಡ್  ಹೈದರಾಬಾದ್ ಇವರ ಗಂಡ ವಟ್ಟೂರಿ ವೆಂಕಟ ಸತ್ಯ ರಾಮ ಕಿರಣ್ ರವರಿಗೆ 50 ವರ್ಷ ಪ್ರಾಯವಾಗಿದ್ದು ಪಿರ್ಯಾದಿದಾರರು ಮತ್ತು ಅವರ ಗಂಡ ಮತ್ತು ಮಗ ದಿನಾಂಕ:24/12/2021 ರಂದು ಪಿರ್ಯಾದಿದಾರರ ಗಂಡನ ಪರಿಚಯದ ವಿಶ್ವನಾಥ ಪೈ ರವರ ಮಗನ ಮದುವೆ ಪ್ರಯುಕ್ತ ಬಂದು ಕಾಪು ತಾಲೂಕು ಮಲ್ಲಾರಿನ ಪ್ಯಾಲೇಸ್ ಗಾರ್ಡಿನಲ್ಲಿ ಉಳಿದುಕೊಂಡಿದ್ದು ದಿನಾಂಕ 26/12/2021 ರಂದು ಪಿರ್ಯಾದಿದಾರರು ಅವರ ಗಂಡ ಹಾಗೂ ಮಗ ಮಲ್ಲಾರಿನ ಪ್ಯಾಲೇಸ್ ಗಾರ್ಡನ್‌ನಿಂದ ಸಂಜೆ 05:15 ಗಂಟೆಗೆ ಮಲ್ಪೆ ಬೀಚ್ ಗೆ ತನ್ನ  ಕಾರು ನಂಬ್ರ TS-13-EH -5167 ನೇ ಕಾರಿನಲ್ಲಿ ಹೊರಟಿದ್ದು ಕಾರನ್ನು ವಟ್ಟೂರಿ ವೆಂಕಟ ಸತ್ಯ ರಾಮ ಕಿರಣ್ ರವರು ಡ್ರೈವಿಂಗ್ ಮಾಡುತ್ತಿದ್ದು ಪಿರ್ಯಾದಿದಾರರು ಮತ್ತು ಅವರ ಮಗ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದು, ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪಾಂಗಳ ಸಮೀಪ ಹೋಗುವಾಗ ವಟ್ಟೂರಿ ವೆಂಕಟ ಸತ್ಯ ರಾಮ ಕಿರಣ್ ರವರಿಗೆ 05:45 ಗಂಟೆಯ ಸಮಯಕ್ಕೆ ಉಸಿರಾಡಲು ಕಷ್ಟವಾಗಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರಿನ ಬಾಗಿಲನ್ನು ತೆರೆದು  ಹೊರಗಡೆ ಬಂದು  ಕಾರನ್ನು ಹಿಡಿದುಕೊಂಡು ನಿಂತಿದ್ದು  ಆ ಸಮಯ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಕಾರಿನವರು ಏನಾಯಿತು ಎಂದು ವಿಚಾರಿಸಿ ನಮ್ಮನ್ನು ಅವರ ಕಾರಿನಲ್ಲಿ ಕುಳ್ಳಿರಿಸಿಕೊಂಡು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈಧ್ಯರು ವಟ್ಟೂರಿ ವೆಂಕಟ ಸತ್ಯ ರಾಮ ಕಿರಣ್ ರವರು ಈಗಾಗಲೇ ಮೃತಪಟ್ಟಿರುವುದಾಗಿ  ಸಂಜೆ 06:00 ಗಂಟೆಗೆ ತಿಳಿಸಿದ್ದು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ಸಂಜೆ 07:06 ಗಂಟೆಗೆ  ವೈಧ್ಯಾಧಿಕಾರಿಗಳು ವಟ್ಟೂರಿ ವೆಂಕಟ ಸತ್ಯ ರಾಮ ಕಿರಣ್ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಶಂಕರನಾರಾಯಣ: ದಿನಾಂಕ 26/12/2021  ರಂದು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ವರಾಹಿ ನೀರಾವರಿ ಇಲಾಖೆಯ ವಸತಿ ಗೃಹದ ನಿರೀಕ್ಷಣಾ ಮಂದಿರದ ಬಳಿ ಸಾರ್ವಜನಿಕ  ಸ್ಥಳದಲ್ಲಿ  ಇಸ್ಪೀಟ್ ಎಲೆಗಳಿಂದ ಅಂದರ್  -ಬಾಹರ್  ಇಸ್ಪೀಟ್  ಜುಗಾರಿ  ಆಟ  ಆಡುತ್ತಿರುವುದಾಗಿ ಸುದರ್ಶನ್ .ಬಿ. .ಎನ್, ಪೊಲೀಸ್ ಉಪನಿರೀಕ್ಷಕರು (ತನಿಖೆ), ಶಂಕರನಾರಾಯಣ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಅರೋಪಿತರಾದ 1.  ಜಯರಾಮ ಪ್ರಾಯ 35  ವರ್ಷ, ತಂದೆ: ದಿ ಅಂಕಣ್ಣ ವಾಸ ವರಾಹಿ ನೀರಾವರಿ ಕಾಲೋನಿ   ಸಿದ್ದಾಪುರ ಗ್ರಾಮ , 2. ಸತೀಶ ಪ್ರಾಯ 38 ವರ್ಷ, ತಂದೆ:  ಶಿವರಾಮ್ಶೆಟ್ಟಿ, ವಾಸ:  ವರಾಹಿ ನೀರಾವರಿ ಕಾಲೋನಿ ಚೆಕ್ ಪೋಸ್ಟ್ ಹತ್ತಿರ  ಸಿದ್ದಾಪುರ ಗ್ರಾಮ, 3. ವಿಶ್ವನಾಥ ಪ್ರಾಯ 37 ವರ್ಷ, ತಂದೆ: ದಿವಂಗತ ಅಡಿವೆಪ್ಪ, ವಾಸ; ವರಾಹಿ ನೀರಾವರಿ ಕಾಲೋನಿ ಸಿದ್ದಾಪುರ ಗ್ರಾಮ,  4. ಕೃಷ್ಣ  ಕುಮಾರ್ ಪ್ರಾಯ 49  ವರ್ಷ ತಂದೆ ದಿವಂಗತ  ಬಚ್ಚು ಪೂಜಾರಿ  ವಾಸ; ಮೋರ್ಟ ಶಾಲೆಯ ಹತ್ತಿರ   ಬೆಳ್ಳಾಲ ಅಂಚೆ ಮತ್ತು ಗ್ರಾಮ  ಕುಂದಾಪುರ ತಾಲೂಕು, 5. ರಾಘವೇಂದ್ರ ಪ್ರಾಯ 34  ವರ್ಷ, ತಂದೆ : ಚಂದ್ರ ಆಚಾರಿ, ವಾಸ: ವರಾಹಿ ನೀರಾವರಿ ಕಾಲೋನಿ  ಚೆಕ್ ಪೋಸ್ಟ್ ಹತ್ತಿರ  ಜಬ್ಲಾಡಿ ಸಿದ್ದಾಪುರ ಗ್ರಾಮ, 6. ರಾಘವೇಂದ್ರ ಆಚಾರಿ ಬಿ  ಪ್ರಾಯ  38  ವರ್ಷ, ತಂದೆ: ಲಕ್ಷ್ಮಣ ಆಚಾರಿ, ವಾಸ: ವರಾಹಿ ನೀರಾವರಿ ಕಾಲೋನಿ  ಚೆಕ್ ಪೋಸ್ಟ್ ಹತ್ತಿರ ಸಿದ್ದಾಪುರ ಗ್ರಾಮ  ಕುಂದಾಪುರ ತಾಲೂಕು ಉಡುಪಿ ಜಲ್ಲೆ, 7. ರೋಹಿತ್  ಪ್ರಾಯ  30  ವರ್ಷ, ತಂದೆ: ಶೇಷಗಿರಿ  ಹೆಬ್ಬಾರ್, ವಾಸ; ಶಿವಪಂಚಾಕ್ಷರಿ  ಪಟೇಲ್ ಕಪೌಂಡು ಮಹಾಗಣಪತಿ ದೇವಸ್ಥಾನದ ಹತ್ತಿರ  ಸಿದ್ದಾಪುರ ಅಂಚೆ ಮತ್ತು ಗ್ರಾಮ ಇವರನ್ನು ವಶಕ್ಕೆ ಪಡೆದು ಅಂದರ - ಬಾಹರ್ ಆಟಕ್ಕೆ ಬಳಸಿದ ಇಸ್ವೀಟ್‌ ಎಲೆ,- 52, ನಗದು – 5025/  ಹಾಗೂ ಹಳೆಯ ದಿನಪತ್ರಿಕೆ ವಶಪಡಿಸಿಕೊಂಡಿರುತ್ತಾರೆ  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116 /2021 ಕಲಂ:  87 ಕೆ ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-12-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080