ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿ ಮಹಮದ್ ಅಜರ್ ಉಲ್ಲಾ ಇವರು ದಿನಾಂಕ 25/12/2021 ರಂದು ರಾತ್ರಿ ಸಮಯ ಸುಮಾರು 9.40 ಗಂಟೆಗೆ ಚಿತ್ರದುರ್ಗದಿಂದ ಕೆಎ 16 ಡಿ 8261  ನೇ ಪಿಕಪ್ ವಾಹನದಲ್ಲಿ ಹೂವುಗಳನ್ನು ತುಂಬಿಸಿಕೊಂಡು ಶಿವಮೊಗ್ಗ - ಆಗುಂಬೆ ಮಾರ್ಗವಾಗಿ ಉಡುಪಿ ಕಡೆಗೆ ಬರುವಾಗ ದಿನಾಂಕ 26/12/2021 ರಂದು ಬೆಳಗ್ಗಿನ ಜಾವ ಸಮಯ ಸುಮಾರು 2.30 ಗಂಟೆಗೆ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ 8 ನೇ ತಿರುವಿನಲ್ಲಿ ನಲ್ಲಿ ವಾಹನ ಚಲಾಯಿಸುತ್ತಿದ್ದ ಜಿ ಹಾಲೇಶನು ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ವಾಹನವು ಆತನ ನಿಯಂತ್ರಣ ತಪ್ಪಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ತಡೆಗೋಡೆ ಮುರಿದು ವಾಹನವು ಅಲ್ಲಿರುವ ಸುಮಾರು 15 ಅಡಿ ಕಂದಕಕ್ಕೆ ಬಿದ್ದಿದ್ದು, ವಾಹನ ಚಲಾಯಿಸುತ್ತಿದ್ದ ಜಿ ಹಾಲೇಶ ರವರ ಬಲ ಕಾಲಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾಧಿದಾರರಿಗೆ ಗುದ್ದಿದ ನೋವಾಗಿದ್ದು ಬೇರೆ ಯಾವುದೇ ಗಾಯವಾಗಿರುವುದಿಲ್ಲ. ಸದ್ರಿ ವಾಹನದ ಹಿಂದಿನಿಂದ ಬರುತ್ತಿದ್ದ ಪಿರ್ಯಾಧಿದಾರರ ಊರಿನ ಪಿಕಪ್ ವಾಹನ ಚಾಲಕ ಶಿವು ಎಂಬವರ ಸಹಾಯದಿಂದ ಪಿರ್ಯಾಧಿದಾರರು ಜಿ ಹಾಲೇಶ ಎಂಬವರನ್ನು ಕಂದಕದಿಂದ ಮೇಲೆ ಕರೆದುಕೊಂಡು ಬಂದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುವುದಾಗಿದೆ. ಈ ಅಪಘಾತಕ್ಕೆ ಆಗುಂಬೆ ಘಾಟಿಯ ತಿರುವಿನಲ್ಲಿ ಕೆಎ 16 ಡಿ 8261 ಪಿಕಪ್ ವಾಹನವನ್ನು ಅದರ ಚಾಲಕ ಜಿ ಹಾಲೇಶ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಕಾಣೆ ಪ್ರಕರಣ

  • ಹೆಬ್ರಿ: ಕರುಣಾಕರ ಶೆಟ್ಟಿ (55 ವರ್ಷ) ಎಂಬವರು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಅಲ್ಲದೇ ಗಲಾಟೆ ಮಾಡಿಕೊಂಡು ಈ ಹಿಂದೆ 4 -5 ಬಾರಿ ಮನೆ ಬಿಟ್ಟು ಹೋಗಿ 5 – 6 ದಿನಗಳ ನಂತರ ವಾಪಾಸು ಬರುತ್ತಿದ್ದರು. ದಿನಾಂಕ 20/12/2021 ರಂದು ಸಮಯ ಸುಮಾರು ಮಧ್ಯಾಹ್ನ 1.00 ಗಂಟೆಯ ಹೊತ್ತಿಗೆ ಮನೆಯಲ್ಲಿ ಗಲಾಟೆ ಮಾಡಿ ಹೆಬ್ರಿ ತಾಲೂಕು ಕುಚ್ಚೂರು ಗ್ರಾಮದ ಬಡ್ತಾನಬೈಲು ಅವರ ಮನೆಯ ಕೋಣೆಯಲ್ಲಿ ಮಲಗಿದ್ದವರನ್ನು 15.15 ಗಂಟೆಗೆ ನೋಡಿದ್ದು, ಸಮಯ ಸುಮಾರು ಸಂಜೆ 16.00 ಗಂಟೆಗೆ ಬಂದು ನೋಡುವಾಗ ಮಲಗಿದ್ದವರು ನಾಪತ್ತೆಯಾಗಿದ್ದು, ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ : ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ನಂಜಾನಾಯ್ಕ್ ಎನ್ ಇವರು ಬೆಳಿಗ್ಗೆ ಠಾಣೆಯಲ್ಲಿರುವಾಗ ಅಕ್ರಮ ಗೋವಧೆ ಮಾಡಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರನ್ನು  ಜೊತೆಗೆ ಕರೆದುಕೊಂಡು ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ  ಮಂಕಿ ಕ್ರಾಸ್ ಬಳಿ ಗೇರು ನಿಗಮದ ಗೇರು ಹಾಡಿಯಲ್ಲಿ ಒಂದು ಗೇರು ಮರಕ್ಕೆ ಒಂದು ಕಪ್ಪು ಬಣ್ಣದ ಜಾನುವಾರು(ಗುಡ್ಡ) ವನ್ನು ಕಟ್ಟಿ ಹಾಕಿ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ನೆಲದಲ್ಲಿ ಒಂದು ಹರಿದ ಪ್ಲಾಸ್ಟಿಕ್  ಚೀಲ ಹಾಸಿ ಅದರ ಮೇಲೆ ಚೂರಿ ಮತ್ತು ಮಾಂಸ ಕತ್ತರಿಸಲು ಉಪಯೋಗಿಸುವ ಮರದ ತುಂಡು ಇದ್ದಿದ್ದನ್ನುನೋಡಿ ಸಮಯ ಬೆಳಿಗ್ಗೆ 8:15 ಗಂಟೆಗೆ ದಾಳಿ ಮಾಡಿದ್ದು ಒಬ್ಬನು ಗೇರು ಮರದ ಹಾಡಿಯಲ್ಲಿ ಓಡಿ ಹೋಗಿರುತ್ತಾನೆ. ಮತ್ತೊಬ್ಬನನ್ನು ವಿಚಾರಿಸಲಾಗಿ ಮೊಹಮ್ಮದ್ ಇಬ್ರಾಹಿಂ @ ಬಬ್ಬ ಪ್ರಾಯ: 41 ವರ್ಷ, ತಂದೆ: ಬಿ. ಹಸನಬ್ಬ, ವಾಸ:ಅರ್ಷಾ ಮಂಜಿಲ್, ಸುಲ್ತಾನ್ ಮೊಹಲ್ಲಾ, ಗಂಗೊಳ್ಳಿ  ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು ಓಡಿ ಹೋದವನ ಹೆಸರು ತನಗೆ ಗೊತ್ತಿಲ್ಲವಾಗಿ ತಿಳಿಸಿರುತ್ತಾನೆ.  ಆಪಾದಿತನು ಮಾಂಸ  ಮಾಡುವ ಉದ್ದೇಶದಿಂದ ಬೀಡಾಡಿ ದನವನ್ನು ಕಳವು ಮಾಡಿ ತಂದು ಈ ದಿನ ಗೋವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರುವನ್ನು ಕಡಿಯಲು ಸಿದ್ಧತೆ  ನಡೆಸುತ್ತಿರುವುದಾಗಿದೆ. ಆಪಾದಿತನನ್ನು ವಶಕ್ಕೆ ಪಡೆದು ಆಪಾದಿತನಿಂದ ಕಪ್ಪು ಬಣ್ಣದ ಜಾನುವಾರು ಅಂದಾಜು ಮೌಲ್ಯ 2000/- ರೂ, ಕಬ್ಬಿಣದ ಹಿಡಿ ಇರುವ ಮಾಂಸ ಕತ್ತರಿಸುವ ಕತ್ತಿ-1, ಮರದ ಹಿಡಿ ಇರುವ ಚೂರಿ-1, ಹರಿದ  ಪ್ಲಾಸ್ಟಿಕ್ ಚೀಲ-1, ಮರದ ತುಂಡು-1 ಹಾಗೂ ನೈಲಾನ್ ಹಗ್ಗ-1 ನ್ನು  ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 , ಕಲಂ:  379 ಐ.ಪಿ.ಸಿ ಮತ್ತು ಕಲಂ: 4, 5, 7,12 The Karnataka Prevention of Slaughter and preservation  of cattle ordinance 2020 ನಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-12-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080