ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ:  ದಿನಾಂಕ  26.11.2022 ರಂದು     ಸುಮಾರು  08;15  ಘಂಟೆಗೆ   ಫಿರ್ಯಾದಿ : ಭಾಸ್ಕರ ಕುಲಾಲ್ ಪ್ರಾಯ 49 ವರ್ಷ ತಂದೆ, ಕೃಷ್ಣಮೂರ್ತಿ ವಾಸ, ಬಾಳೆಜೆಡ್ಡು ಹೊಸಂಗಡಿ ಅಂಚೆ ಮತ್ತು ಗ್ರಾಮ ಇವರು ಕೆಎ.02 ಜೆಎ.4797 ನೇ ನಂಬ್ರದ ಮೋಟಾರ್   ಸೈಕಲ್‌‌‌‌ನಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ  ಸಿದ್ದಾಪುರ ಪೆಟ್ರೋಲ್‌ ಬಂಕ್ ಬಳಿ  ಹೊಸಂಗಡಿ ಕಡೆಯಿಂದ  ಸಿದ್ದಾಪುರ  ಕಡೆಗೆ  ಬರುತ್ತಿರುವಾಗ ಅರೋಪಿಯು  ಕೆಎ.20 ಎಮ್ಎ.0880 ನೇ ನಂಬ್ರದ  ಕಾರಿನ ಚಾಲಕ ಸಿದ್ದಾಪುರ ಪೆಟ್ರೋಲ್ ಬಂಕ್ ಬಳಿ  ಕಾರನ್ನು ಅತೀ ವೇಗ  ಹಾಗೂ   ಅಜಾಗರೂಕತೆಯಿಂದ  ಚಲಾಯಿಸಿ ಕೊಂಡು  ಒಮ್ಮಲೇ ಕಾರನ್ನು ಯು ಟರ್ನ್ ಮಾಡಿ, ಪಿರ್ಯಾಧುದಾರರು ಚಲಾಯಿಸಿಕೊಡು ಹೊಗುತ್ತಿದ್ದ  ಮೋಟಾರ್  ಸೈಕಲ್‌ಗೆ  ಡಿಕ್ಕಿ  ಹೊಡೆದಿದ್ದು, ಇದರ ಪರಿಣಾಮ  ಮೋಟಾರ್ ಸೈಕಲ್‌  ಸವಾರ  ಮೋಟಾರ್  ಸೈಕಲ್  ಸಮೇತ   ರಸ್ತೆಯ ಮೇಲೆ  ಬಿದ್ದಿದ್ದು  ಇದರ  ಪರಿಣಾಮ  ಮೋಟಾರ್ ಸೈಕಲ್  ಸವಾರನ  ಬಲ ಕೈ  ಭುಜದ ಬಳಿ ಮೂಳೆ ಮುರಿತದ ಗಾಯವಾಗಿದೆ ಚಿಕಿತ್ಸೆಯ ಬಗ್ಗೆ ಕೋಟೇಶ್ಚರದ ಡಾ, ಎನ್,ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2022  ಕಲಂ: 279,   338 ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
   

ಹೆಂಗಸು ಕಾಣೆ ಪ್ರಕರಣ

 • ಶಂಕರನಾರಾಯಣ:  ದಿನಾಂಕ:25/11/2022 ರಂದು ಬೆಳಿಗ್ಗೆ 10:30  ಗಂಟೆಗೆ ಪಿರ್ಯಾದಿ ರತ್ನಾಕರ ಪ್ರಾಯ 25  ವರ್ಷ  ತಂದೆ:  ಬಸವ      ವಾಸ, ಶುಭಕರ ನಿಲಯ, ಕಾಸನಕಟ್ಟೆ, ಸಿದ್ದಾಪುರ   ಗ್ರಾಮ  ಇವರ ಮನೆಯಿಂದ ಇವರ ತಾಯಿ ತನ್ನ ಮನೆಯಾದ ಆಲೂರಿನ ಗುಡ್ಡೆಯಂಗಡಿಗೆ ಹೋಗಿ ಬರುವುದಾಗಿ ಪಿರ್ಯಾದಿದಾರರ ಅಕ್ಕ ಶ್ರೀಲತಾಳ ಬಳಿ ಹೇಳಿ ಹೋದವರು  ಗುಡ್ಡೆಯಂಗಡಿಗೂ ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. .ಪಿರ್ಯಾದಿದಾರರ ತಾಯಿ ಕಮಲರವರ  ಪತ್ತೆಯ ಬಗ್ಗೆ ಸ್ನೇಹಿತರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಿ ಪತ್ತೆಗೆ ಪ್ರಯತ್ನಿಸಿದರೂ ಪತ್ತೆಯಾಗಿಲ್ಲವಾಗಿರುವುದಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2022   ಕಲಂ:   ಹೆಂಗಸು  ಕಾಣೆ  ಯಂತೆ ಪ್ರಕರಣ ದಾಖಲಿಸಲಾಗಿದೆ.    

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿ : ಶ್ರೀಮತಿ.ಸುಮನ ಪ್ರಾಯ 33 ವರ್ಷ ಗಂಡ ರಾಘವೇಂದ್ರ ಗಾಣಿಗ ವಾಸ ರಘುನಂದನ ನಿಲಯ ಮೂಡುಗಣಪತಿ, ದೇವಸ್ಥಾನ ಬಳಿ ಅಂಬಾಗಿಲು ಇವರ  ಮನೆಯವರಿಗೆ ಹಾಗೂ ಆರೋಪಿತರುಗಳಾದ 1.  ಆಕಾಶ ಪೂಜಾರಿ 2.ಯಶೋಧಾ ಪೂಜಾರಿ,3.ಕಾಜೂಲ್4.ಜ್ಯೋತಿಕಾ ಇವಗೆ ದಾರಿಯ ವಿಚಾರದಲ್ಲಿ ತಕರಾರು ಇದ್ದು  ದಿನಾಂಕ 26-11-2022 ರಂದು ಬೆಳಿಗ್ಗೆ 08.15 ಗಂಟೆಗೆ ಪಿರ್ಯಾದುದಾರರ ಮನೆ ಬಳಿ ಬಂದು “ನನಗೆ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೋಗಲು ದಾರಿ ಬೇಕು ನಿಮ್ಮ ಮನೆಯ ಮೆಟ್ಟಿಲು ಮೋಟಾರ್ ಸೈಕಲ್ ಹೋಗುವಾಗ ತಾಗುತ್ತದೆ ಮೆಟ್ಟಿಲನ್ನು ಒಡೆದು ನನಗೆ ರಸ್ತೆ ಮಾಡಿಕೊಡಿ ಎಂಬುದಾಗಿ ಹೇಳಿದಕ್ಕೆ ಫಿರ್ಯಾದುದಾರ ಗಂಡ  ನಮ್ಮ ಜಾಗದಲ್ಲಿ ಮೊಟಾರ್ ಸೈಕಲ್ ಕೊಂಡು ಹೊಗುವುದು ಬೇಡ ಎಂಬುದಾಗಿ ಹೇಳಿದಕ್ಕೆ ಆರೋಪಿಗಳು ಬೈದಿದ್ದು, ಈ ಬಗ್ಗೆ  ಫಿರ್ಯಾದಿದಾರರರ ಅತ್ತೆ  ಪಾರ್ವತಿ ರವರು ಬೈಂದೂರು ಪೊಲೀಸ್ ಠಾಣೆಗೆ ದೂರು ಅರ್ಜಿ ನೀಡಿ ಫಿರ್ಯಾದುದಾರರು ತನ್ನ ಗಂಡ ರಾಘವೇಂದ್ರ ಗಾಣಿಗ ಹಾಗೂ ಅತ್ತೆ ಯೊಂದಿಗೆ ಮನೆಗೆ ವಾಪಾಸ್ಸು ಹೋಗುತ್ತಿದ್ದು ಮಧ್ಯಾಹ್ನ 12.45 ಘಂಟೆಗೆ ಮನೆ ಬಳಿ ಆರೋಪಿಗಳು ತಡೆದು ನಿಲ್ಲಿಸಿ, ನೀವು ದಾರಿ ವಿಚಾರದಲ್ಲಿ ಪೊಲೀಸ್ ಠಾಣೆಗೆ ಬಾರಿ ಕಂಪ್ಲೆಂಟ್ ಕೋಡುತ್ತಿರಾ ಎಂದು ಹೇಳಿ 1 ನೇ ಆರೋಪಿ ಫಿರ್ಯಾದಿದಾರರ ಗಂಡನನ್ನು ಎಳೆದಾಡಿದಾಗ ಫಿರ್ಯಾದಿದಾರಾರ ಗಂಡ ತಪ್ಪಿಸಿಕೊಂಡು ಮನೆಯೊಳಗೆ ಹೋದಾಗ ಆರೋಪಿಯು ಫಿರ್ಯಾದಿದಾರರ ಮನೆಯೊಳಗೆ ಹೋಗಿ ಕಾಲರ್ ಪಟ್ಟಿ ಹಿಡಿದು ಕೈಯಿಂದ ಹೊಡೆದು ದೂಡಿ ಹಾಕಿದ್ದು ಆ ಸಮಯ ಗಲಾಟೆ ಬಿಡಿಸಲು ಬಂದ ಫಿರ್ಯಾದಿದಾರರಿಗೆ ಹಾಗೂ ಫಿರ್ಯಾದುದಾರರ ತಮ್ಮ ಪ್ರಸನ್ನ ರವರಿಗೆ ಆರೋಪಿಗಳು ಕೈಯಿಂದ ಹೊಡೆದು ದೂಡಿ ಅವಾಚ್ಯಾ ಶಬ್ದಗಳಿಂದ ಬೈದಿರುತ್ತಾರೆ. ಗಲಾಟೆ ನಡೆಯುವ ಸಂದರ್ಭ ಬೊಬ್ಬೆ ಕೇಳಿ ಆಸುಪಾಸಿನವರು ಬರುವುದನ್ನು ನೋಡಿ ಆರೋಪಿಗಳು ಫಿರ್ಯಾದಿದಾರರನ್ನು ಮತ್ತು ಅವರ ಮನೆಯವರನ್ನು ಉದ್ದೇಶಿಸಿ ಇವತ್ತು ನೀವು ಬಚಾವ್ ಆಗಿದ್ದಿರಿ ಮುಂದಕ್ಕೆ ನಿಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 229/2022 ಕಲಂ 341, 448, 354, 323, 504, 506 R/W 34 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.      
 • ಬೈಂದೂರು: ಪಿರ್ಯಾದಿ : ಯಶೋದ ಪೂಜಾರ್ತಿ ಪ್ರಾಯ 54 ವರ್ಷ ಗಂಡ ಬಾಬು ಪೂಜಾರಿ ವಾಸ ಸೌಜನ್ಯ ನಿಲಯ , ಬೆಟ್ಟಿನಮನೆ, ಉಪ್ಪುಂದ ಗ್ರಾಮ ಇವರು ಮಕ್ಕಳಾದ ಆಕಾಶ್ ಪೂಜಾರಿ , ಮಗಳು ಕಾಜೊಲ್, ಹಾಗೂ ಕಾಜೋಲಿನ ಸ್ನೇಹಿತೆ ಜ್ಯೋತಿಕಳೊಂದಿಗೆ ವಾಸ ಮಾಡಿಕೊಂಡಿದ್ದು, ಫಿರ್ಯಾಧಿದಾರರ ಮನೆ ಬಳಿ ಆರೋಪಿತರಾದ  ರಾಘವೇಂದ್ರ ಗಾಣಿಗ  ಮತ್ತು ಪ್ರಸನ್ನ ಗಾಣಿಗರವರು ವಾಸ ಮಾಡಿ ಕೊಂಡಿದ್ದು, ಪಿರ್ಯಾಧಿದಾರರಿಗೆ ಮತ್ತು ಆರೋಪಿತರಿಗೆ ದಾರಿ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಾನ್ಯ  ಸಿವಿಲ್ ನ್ಯಾಯಾಲಯದಲ್ಲಿ  ವ್ಯಾಜ್ಯವಿರುತ್ತದೆ. ದಿನಾಂಕ 26-11-2022 ರಂದು  ಮದ್ಯಾಹ್ನ 12.45 ಗಂಟೆಗೆ ಫಿರ್ಯಾಧಿದಾರರು ಆಕಾಶ್ ಪೂಜಾರಿ , ಮಗಳು ಕಾಜೊಲ್, ಹಾಗೂ ಕಾಜೋಲಿನ ಸ್ನೇಹಿತೆ ಜ್ಯೋತಿಕಳೊಂದಿಗೆ ಪಾರ್ವತಿ ಗಾಣಿಗರವರ ಮನೆಯ ಎದುರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ರಾಘವೇಂದ್ರ ಗಾಣಿಗ  ಮತ್ತು ಪ್ರಸನ್ನ ಗಾಣಿಗರವರು  ತಡೆದು ನಿಲ್ಲಿಸಿ  ನೀವು  ಈ ದಾರಿಯಲ್ಲಿ  ತಿರುಗ ಬೇಡಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಆಕಾಶ್ ಪೂಜಾರಿಗೆ ಕುತ್ತಿಗೆಗೆ  ಕೈ ಹಾಕಿ ಕೈಯಿಂದ ಹೊಡೆದು ಗೋಡೆಗೆ ದೂಡಿದ್ದು,  ಆ ಸಮಯದಲ್ಲಿ ಕಾಜೊಲ್ ಮತ್ತು ಜ್ಯೋತಿಕರವರು ಗಲಾಟೆಯನ್ನು ತಪ್ಪಿಸಲು ಹೋದಾಗ  ಕಾಜೊಲ್ ಮತ್ತು ಜ್ಯೋತಿಕರವರನ್ನು ದೂಡಿ ಹಲ್ಲೆ ಮಾಡಿರುತ್ತಾರೆ. ಗಲಾಟೆಯ ಬೊಬ್ಬೆ ಕೇಳಿ ಆಸುಪಾಸಿನವರು ಬರುವುದನ್ನು ಕಂಡು ಆರೋಪಿಗಳು ಇವತ್ತು ನೀವು ಬಚವಾದೀರಿ.  ಮುಂದಕ್ಕೆ ನೀವು ಈ ದಾರಿಯಲಿ ಬಂದರೆ ಕೊಲ್ಲುವುದಾಗಿ  ಬೆದರಿಕೆ ಹಾಕಿ ಹೋಗಿರುತ್ತಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅ.ಕ್ರ : 230/2022 ಕಲಂ.341 323, 354, 504, 506 ಜೊತೆಗೆ 34  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 27-11-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080