ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ:  ದಿನಾಂಕ  26.11.2022 ರಂದು ಸುಮಾರು 18;45  ಘಂಟೆಗೆ  ಫಿರ್ಯಾದಿ: ಅರುಣ್  ನಾಯ್ಕ  ಪ್ರಾಯ  32 ವರ್ಷ ತಂದೆ, ಚಂದ್ರಶೇಖರ  ನಾಯ್ಕ ವಾಸ, ಹಳನೀರು ಬೆಟ್ಟು   ಕೊಂಚಾಡಿ ಅಲ್ಬಾಡಿ  ಗ್ರಾಮ  ಇವರ ತಂದೆ ,   ಚಂದ್ರ ಶೇಖರ  ಇವರು  ಹೆಬ್ರಿ ತಾಲೂಕಿನ   ಅಲ್ಬಾಡಿ ಗ್ರಾಮದ  ಕೊಂಚಾಡಿ  ಹಳನೀರು ಬೆಟ್ಟು  ಎಂಬಲ್ಲಿ ಕೆ.ಎ, 20- ಡಿ.4249 ನೇ  ನಂಬ್ರದ  ಬಸ್ಸಿಗೆ  ಶೇಡಿಮನೆಗೆ ಕೊಡಲು ವೀಳ್ಯದೆಲೆ  ಪಾರ್ಸಲ್  ನೀಡಿ  ಬಸ್ಸಿನ  ಬಾಗಿಲಿನಿಂದ ಕೆಳಗಡೆ  ಇಳಿಯುತ್ತಿರುವಾಗ  ಬಸ್ಸಿನ   ನಿರ್ವಾಹಕ  ಚಂದ್ರ  ಶೇಖರ ನಾಯ್ಕ  ಇವರು  ಬಸ್ಸಿನಿಂದ   ಕೆಳಗಡೆ ಇಳಿಯುವ  ಮೊದಲೇ   ಬಸ್ಸನ್ನು  ಚಲಾಯಿಸುವಂತೆ  ಚಾಲಕನಿಗೆ  ಸೂಚನೇ  ನೀಡಿದ್ದು, ಆಗ  ಬಸ್ಸಿನ   ಚಾಲಕ ಒಮ್ಮಲೇ  ಬಸ್ಸನು  ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ  ಪರಿಣಾಮ   ಚಂದ್ರ ಶೇಖರ  ನಾಯ್ಕ ಇವರು    ಬಸ್ಸಿನಿಂದ ಕೆಳಗಡೆ  ಬಿದಿದ್ದು, ಆಗ   ಬಸ್ಸಿನ ಹಿಂಬದಿಯ  ಟಯರ್   ಚಂದ್ರಶೇಖರ  ನಾಯ್ಕ ಇವರ  ಸೊಂಟದ ಮೆಲೆ  ಹತ್ತಿ ಹೋಗಿದ್ದು, ಇದರ ಪರಿಣಾಮ  ಗಾಯಗೊಂಡ ಚಂದ್ರ  ಶೇಖರ  ನಾಯ್ಕ ಇವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು  ಬಂದಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ  ವೈದ್ಯರು  ಮೃತಪಟ್ಟಿರುತ್ತಾರೆ ಎಂದು  ತಿಳಿಸಿರುತ್ತಾರೆ. ಈ ಬಗ್ಗೆ   ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2022  ಕಲಂ: 279,304(ಎ)  ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಎಂ.ಚಾಂದ್‌ ಹುಸೈನ್ ಪ್ರಾಯ 38 ವರ್ಷ  ತಂದೆ:ಒನ್ನೂರ್‌ ಸಾಬ್‌  ವಿಳಾಸ: ಮಷೀದಿ ಬಳಿ, ಹಂಪನಕಟ್ಟೆ ದನಾಪೂರ್‌ ಪೋಸ್ಟ್  ಹೊಸಪೇಟೆ ಇವರು ಮಹೇಂದ್ರ ಲಾರಿ ನಂಬ್ರ KA-19-AA-6748 ನೇಯದರಲ್ಲಿ ಚಾಲಕರಾಗಿದ್ದು  ದಿನಾಂಕ 26/11/2022 ರಂದು ಸಂಜೆ ಮಂಗಳೂರಿನ ಎನ್.ಎಂ.ಪಿ.ಟಿ. ಯಿಂದ ಕಲ್ಲಿದ್ದಲು ಲೋಡ್ ಮಾಡಿಕೊಂಡು ಬಳ್ಳಾರಿಗೆ ಹೊರಟು ಸಾಯಿಬರಕಟ್ಟೆ-ಹಾಲಾಡಿ ಮಾರ್ಗವಾಗಿ ಚಲಾಯಿಸಿಕೊಂಡು ಹೋಗುತ್ತ ರಾತ್ರಿ 10-00 ಗಂಟೆಯ ಸಮಯಕ್ಕೆ ಹಳ್ಳಾಡಿ ಹರ್ಕಾಡಿಯ ಗಾವಳಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ, ಪಿರ್ಯಾದಿದಾರರ  ಎದುರಿನಿಂದ ಅಶೋಕ ಲೈಲ್ಯಾಂಡ್ ಲಾರಿ ನಂಬ್ರ KA-06-AB-1080  ಲಾರಿಯನ್ನು ಅದರ ಚಾಲಕ ಶೇಖರ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಓಮ್ಮೇಲೆ ನಿರ್ಲಕ್ಷವಾಗಿ ಬಲಕ್ಕೆ ಚಲಾಯಿಸಿ,ಪಿರ್ಯಾದಿದಾರರ ಲಾರಿಯ ಎದುರಿಗೆ ಡಿಕ್ಕಿ ಹೊಡೆದನು. ಪರಿಣಾಮ ಎರಡೂ ಲಾರಿಯು ಜಖಂಗೊಂಡಿದ್ದು, ಹಾಗೂ ಈ ಅಪಘಾತದಿಂದ ಪಿರ್ಯಾದಿದಾರರ  ಎಡ ಕೈಗೆ ಒಳ ನೋವು ಉಂಟಾಗಿದ್ದು, ಡಿಕ್ಕಿ ಹೊಡೆದ ಲಾರಿ ನಂಬ್ರ KA-06-AB-1080 ನೇ, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ವಿಶ್ವನಾಥ ಪೂಜಾರಿ ಎಂಬವರಿಗೆ ಎರಡೂ ಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಕೈಗೆ ಮುಖಕ್ಕೆ ತಲೆಗೆ ತೀವೃವಾದ ಗಾಯವಾಗಿದ್ದು, ಹಾಗೂ ಲಾರಿಯ ಚಾಲಕ ಶೇಖರ ಎಂಬವರಾಗಿದ್ದು, ಅವರಿಗೆ ಯಾವುದೇ ಗಾಯ ಆಗಿರುವುದಿಲ್ಲ . ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  207/2022 ಕಲಂ: 279, 3378,338, ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಮನಜೀತ್ ಕುಮಾರ(22) ತಂದೆ: ಜಯಪ್ರಕಾಶ ವಾಸ:ಸುಲ್ತಾನ್ ಪುರ,ಬೀರ್ ಸಿಂಗ್ ಪುರ ಉತ್ತರಪ್ರದೇಶ ಇವರ ತಮ್ಮ ಮನೋಜ್ ಕುಮಾರ (20 ವರ್ಷ) ಇವರು  ಜ್ಞಾನೇಶ್ವರ  ರವರ ಮಾಲೀಕತ್ವದ ಶ್ರೀ ವಿಘ್ನೇಶ್ವರ -1 IND-KA-02-MM-4624 ಬೋಟಿನಲ್ಲಿ ಕಲಾಸಿಗಳಾಗಿ  ಕೆಲಸ ಮಾಡಿಕೊಂಡಿದ್ದು , ದಿನಾಂಕ: 16-11-2022 ರಂದು ಮೀನುಗಾರಿಕೆ ಬಗ್ಗೆ ಅರಬ್ಬಿಸಮುದ್ರಕ್ಕೆ ಹೋಗಿ ಮೀನುಗಾರಿಕೆ ಮುಗಿಸಿ ಈ ದಿನ ದಿನಾಂಕ: 26-11-2022ರಂದು ಮಲ್ಪೆ ಬಂದರಿಗೆ ಬಂದು ಮೀನು ಖಾಲಿ ಮಾಡಿ ಬೋಟ್ ನ್ನು ಬಂದರಿನ ಪಶ್ಚಿಮ ಬದಿಯ ಧಕ್ಕೆ ಯಲ್ಲಿ ಲಂಗರು ಹಾಕಿ  ಬೋಟಿನ ದುರಸ್ತಿ ಕಾರ್ಯ  ಇರುವುದರಿಂದ  ಬೊಟಿನ ಮಾಲಕರು ಅನಿಲ್  ಎಂಬ ಪಿಟ್ಟರ ನ್ನು  ಕರೆದುಕೊಂಡು ಬಂದಿದ್ದು ಪಿರ್ಯಾದಿದಾರರು ಹಾಗೂ  ಪಿರ್ಯಾದಿದಾರರ ತಮ್ಮ ಮನೋಜ್ ಕುಮಾರ ರವರಿಗೆ ಸಹಾಯಕರಾಗಿ ಕೆಲಸ ಮಾಡಲು ಮಾಲಕರು ತಿಳಿಸಿದ್ದು ,ಮಧ್ಯಾಹ್ನ ಸಮಯ ಸುಮಾರು 1:30 ಗಂಟೆಯ ಸಮಯಕ್ಕೆ ವೇಲ್ಡಿಂಗ್ ಕೆಲಸ ಮಾಡುತ್ತಿರುವಾಗ  ಜನರೇಟರಿಗೆ ಅಳವಡಿಸಿದ  ವೈಲರ್  ನಲ್ಲಿ ಅಧಿಕ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡವರನ್ನು  ಚಿಕಿತ್ಸೆ  ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ  ವೈದ್ಯರು ಸಮಯ ಸುಮಾರು 2:00 ಗಂಟೆಗೆ ಈಗಾಗಲೇ   ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಬೋಟಿನ ಮಾಲಕರಾದ ಜ್ಞಾನೇಶ್ವರ ಹಾಗೂ ಪಿಟ್ಟರ್ ಅನಿಲ್ ಕುಮಾರ ಬೋಟಿನಲ್ಲಿ ವೆಲ್ಡಿಂಗ್  ಕೆಲಸ ಮಾಡಲು ಯಾವುದೇ  ಅಗತ್ಯ ಜೀವ ರಕ್ಷಕ ಸಾಧನಗಳನ್ನು ನೀಡದೆ ನಿರ್ಲಕ್ಷ್ಯತನ  ವಹಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ  106/2022 ಕಲಂ 304(ಎ) ,ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 27-11-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080