ಅಭಿಪ್ರಾಯ / ಸಲಹೆಗಳು

ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಫೈಸಲ್ ಅಹಮದ್ ಕೆ (36), ತಂದೆ: ಸುಲೇಮಾನ್ ಸಾಹೇಬ್ ಕೆ,ವಾಸ: ಬೈತುಲ್ ಅಮನ್, ಹೂಡೆ, ಪಡುತೋನ್ಸೆ ಗ್ರಾಮ, ಉಡುಪಿ ಇವರು ದಿನಾಂಕ 11/10/2021 ರಂದು ಮಕ್ಕಳ ಕಲ್ಯಾಣ ಸಮಿತಿ ಉಡುಪಿಯಲ್ಲಿ ಅನಾಥ ಬಾಲಕನಾದ ರಾಹುಲ್ @ ಮುಪೀಜ್ @ ಮೆಹಪೋಜ್ (18) ಎಂಬಾತನನ್ನು ಪೋಷಕತ್ವದಡಿಯಲ್ಲಿ ಕಾನೂನು ಪ್ರಕಾರವಾಗಿ ಆತನ ಮುಂದಿನ ಶಿಕ್ಷಣ ಹಾಗೂ ಭವಿಷ್ಯದ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುವುದಾಗಿ ಮಕ್ಕಳ ಕಲ್ಯಾಣ ಸಮಿತಿಯಿಂದ ಕರೆದುಕೊಂಡು ತನ್ನ ಮನೆಗೆ ಹೋಗಿ, ಹೂಡೆ ನಿವಾಸಿ ಸೈಫಾನ್‌ನ ಬಳಿ ವೆಲ್ಡಿಂಗ್ ಕೆಲಸಕ್ಕೆ ಸೇರಿಸಿದ್ದು, ಸೈಫಾನ್ ಮನೆಯಲ್ಲಿ ಇರುತ್ತಿದ್ದನು. ದಿನಾಂಕ 22/11/2201 ರಂದು ರಾತ್ರಿ ಸುಮಾರು 9:00 ಗಂಟೆಗೆ ಹೂಡೆಯ ಕೆಪ್ಪತೋಟ ಬಳಿ ನಿಂತಿದ್ದ ರಾಹುಲನನ್ನು ವಿಚಾರಿಸಿ ಆತನ ಬಳಿ ಇದ್ದ ಬ್ಯಾಗ್‌ಅನ್ನು ಪರಿಶೀಲಿಸಿದಾಗ ಸುಮಾರು 1500/- ರೂಪಾಯಿ ಚಿಲ್ಲರೆ ಹಣ ಇದ್ದು ಅದರ ಬಗ್ಗೆ ಕೇಳಿದಾಗ ಆತನು ಸರಿಯಾಗಿ ಏನೂ ತಿಳಿಸದೆ ಇದ್ದು ಆತನಿಗೆ ಬೈದು ಸೈಫ್ ರವರ ಮನೆಗೆ ಕಳುಹಿಸಿರುತ್ತಾರೆ. ದಿನಾಂಕ 23-11-2021 ರಂದು ಬೆಳಿಗ್ಗೆ ಸುಮಾರು 7:45 ಗಂಟೆ ಸಮಯಕ್ಕೆ ರಾಹುಲ್‌ ಇತನು ಫೈಸಲ್ ಅಹಮದ್ ಕೆ ಇವರ ನಂಬ್ರಕ್ಕೆ ಕರೆ ಮಾಡಿ ಕುಂದಾಪುರ ಕಡೆಗೆ ಹೋಗುವುದಾಗಿ ತಿಳಿಸಿ ವಾಪಾಸು ಮನೆಗೆ ಬಂದಿರುವುದಿಲ್ಲ, ಆತನು ಮನೆಗೆ ಬರಬಹುದೆಂದು 2 ದಿನ ಕಾದಿದ್ದು ಆತನು ಇದುವರೆಗು ಮನೆಗೆ ಬಂದಿರುವುದಿಲ್ಲ , ಆದ್ದರಿಂದ ರಾಹುಲ್ @ ಮುಪೀಜ್ @ ಮೆಹಪೋಜ್ ಈತನು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 128/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾಧ ಗಣೇಶ್ ಕೋಟ್ಯಾನ್, (55) ತಂದೆ: ದಿ. ಕೋಟಿ ಪೂಜಾರಿ, ವಾಸ: #2-1-108 ಎ1, ಗುಂಡಿಬೈಲು, ಕುಂಜಿಬೆಟ್ಟು ಗ್ರಾಮ, ಉಡುಪಿ ಇವರ ಬಾವ ನಾಗರಾಜ ಚೀಂಕ್ರ ಪೂಜಾರಿ (55) ಎಂಬುವರು ದಿನಾಂಕ 26/11/2021 ರಂದು ಮಧ್ಯಾಹ್ನ ಮೊಬೈಲ್ ಸಿಮ್ ಬದಲಿಸಲು, ಅವರ ಪರಿಚಯದ ಮಿಥುನ್ ಹಾಗೂ ಕಾರು ಚಾಲಕ ಖಾಸಿಂ ರವರೊಂದಿಗೆ ಕಾಪುಗೆ ಹೊರಟಿದ್ದು, ಸಮಯ 15:45 ಗಂಟೆಯವೇಳೆಗೆ ಕಾಫು ತಾಲೂಕು ಬಡಾ ಗ್ರಾಮದ ಉಚ್ಚಿಲ ಪೇಟೆ ತಲುಪುತ್ತಿದ್ದಂತೆ ಹಿಂದೆ ಕುಳಿತಿದ್ದ ನಾಗರಾಜ ರವರು ಒಮ್ಮೆಲೇ ಹಾ! ಎಂದು ಉಸಿರಾಡಿದ್ದು, ತಕ್ಷಣ ಕಾರು ನಿಲ್ಲಿಸಿ ನೋಡಿದಾಗ ನಾಗರಾಜರವರು ಏನೂ ಮಾತನಾಡದೇ, ಬೆವತು ಹೋಗಿದ್ದರು. ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಕಾಪು ಪ್ರಶಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ, ನಾಗರಾಜರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿಯವರು ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಶೇಖರ ಪೂಜಾರಿ (46) ತಂದೆ: ದಿ, ಎಲ್ಲು ಪೂಜಾರಿ  ವಾಸ: ನಾಗಾರಾಜ ನಿಲಯ, ಮೂಡು ಪೆರಂಪಳ್ಳಿ, ಶಿವಳ್ಳಿ ಗ್ರಾಮ ,ಉಡುಪಿ ಇವರ ತಮ್ಮ ರವಿ (44) ಇವರು ವಿಪರೀತ  ಮದ್ಯಪಾನ ಸೇವನೆ ಹವ್ಯಾಸವನ್ನು ಉಳ್ಳವರಾಗಿದ್ದರು. ದಿನಾಂಕ 25/11/2021 ರಂದು ಸಂಜೆ 04:45 ಗಂಟೆಗೆ ಮನೆಯಿಂದ ಹೋಗಿದ್ದು ಹುಡುಕಿದಾಗ ಪತ್ತೆಯಾಗಿರುವುದಿಲ್ಲ, ಈ ದಿನ ಬೆಳಿಗ್ಗೆ ಪಿರ್ಯಾದಿದಾರರು ಹುಡುಕುತ್ತಾ ಭೂತಪಾಡಿ ಕಡೆಗೆ ಹೋಗಿದ್ದು ಅಲ್ಲಿ ರವಿ ಮರಕ್ಕೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿದ್ದವನನ್ನು ನೋಡಲಾಗಿ ಆತನು ಮೃತ ಪಟ್ಟಿದ್ದು, ರವಿ ದಿನಾಲೂ ಮದ್ಯಪಾನ ಸೇವನೆ ಮಾಡುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25/11/2021 ರ ಸಂಜೆ 04:45 ಗಂಟೆಯಿಂದ ದಿನಾಂಕ 26/11/2021 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವದಿಯಲ್ಲಿ ಕುತ್ತಿಗೆಗೆ ನೇಣು ಬಿಗುದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಬಾಲಸುಬ್ರಹ್ಮಣೀ (52),ತಂದೆ: ರಾಮಸ್ವಾಮಿ  ವಾಸ: ರೂಮ್ ನಂಬ್ರ 503,ಎ  ಬ್ಲಾಕ್ 5 ನೇ ಮಹಡಿ, ನಿಟ್ಟೆ ಕಾಲೇಜಿನ ವಸತಿ ಗೃಹ ನಿಟ್ಟೆ ಗ್ರಾಮ ಕಾರ್ಕಳ ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮ ನಿಟ್ಟೆ ಕಾಲೇಜಿನ ವಸತಿ ಗೃಹದ ಎ ಬ್ಲಾಕ್ ನ 5 ನೇ ಮಹಡಿಯಲ್ಲಿ ರೂಮ್ ನಂಬ್ರ 503 ರಲ್ಲಿ ತಮ್ಮ ಪತ್ನಿ ಶ್ರೀಮತಿ ಕಮಲ ಪ್ರಿಯಾ ಬಿ (48) ಇವರೊಂದಿಗೆ ವಾಸವಿದ್ದು, ಇವರ ಪತ್ನಿ  ದಿನಾಂಕ 24/11/2021 ರ ಸಂಜೆ 7:30 ಗಂಟೆಗೆ ತಾವು ವಾಸ್ತವ್ಯವಿದ್ದ ಮನೆಯ ಬಾಲ್ಕನಿಯಲ್ಲಿ ಸ್ಟೂಲ್ ನ ಮೇಲೆ ನಿಂತು ಬಟ್ಟೆ ಒಣಗಿಸುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಕೆಳಕ್ಕೆ ಬಿದ್ದು, ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿಯವರು ಚಿಕಿತ್ಸೆಯಲ್ಲಿದವರು ಚಿಕಿತ್ಸೆಗೆ ಸ್ಪಂದಿಸದೇ  ದಿನಾಂಕ 26/11/2021 ರಂದು 12:55 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಶಂಕರನಾರಾಯಣ: ದಿನಾಂಕ 26/11/2021 ರಂದು 11:25  ಗಂಟೆಗೆ ಘಂಟೆಗೆ ಆರೋಪಿ ಸೀತಾರಾಮ  ಕುಲಾಲ್ (45) ತಂದೆ,ಬಸವ ಕುಲಾಲ್ ವಾಸ, ಶ್ರೀಬ್ರಾಹ್ಮೀ ನಿಲಯ ಕುಂದುರುಗುಂಡಿ ಆಜ್ರಿ ಅಂಚೆ  & ಗ್ರಾಮ ಕುಂದಾಪುರ ಸಿದ್ದಾಪುರ ಗ್ರಾಮದ ಜನ್ಸಾಲೆ ಶ್ರೀ ಬ್ರಾಹ್ಮೀ ಕ್ಯಾಂಟಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಉಮೇಶ ಶೆಟ್ಟಿ ಇವರು ನೀಡುವ ಕಮೀಷನ  ಹಣಕ್ಕಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟದ ಬಗ್ಗೆ  ಹಣ ಸಂಗ್ರಹ ಮಾಡುತ್ತಿರುವಾಗ ಶ್ರೀಧರ್ ನಾಯ್ಕ ಪಿಎಸ್ಐ ಶಂಕರನಾರಾಯಣ ಪೊಲೀಸ್  ಠಾಣೆ ಇವರು ಖಚಿತ ಮಾಹಿತಿಯಂತೆ ದಾಳಿ ನಡೆಯಿಸಿ ವಶ ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ ನಗದು ಹಣ ರೂಪಾಯಿ 510/- ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 105/2021  ಕಲಂ:  78(i) (iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 26/11/2021 ರಂದು ಅಶೋಕ್ ಕುಮಾರ್. ಪಿಎಸ್‌ಐ (ಕಾ&ಸು) ಪಡುಬಿದ್ರಿ ಪೊಲೀಸ್ ಠಾಣೆ ಇವರು ಠಾಣಾ  ಉಸ್ತುವಾರಿಯಲ್ಲಿರುತ್ತಾ, ಬೆಳಿಗ್ಗೆ 08:30 ಗಂಟೆಗೆ  ಠಾಣಾ ವಿಶೇಷ ಮಾಹಿತಿ  ಕರ್ತವ್ಯದ ಸಿಬ್ಬಂದಿ  ಹೆಚ್.ಸಿ.ಯೋಗೀಶ್ ರವರು ಕರೆ ಮಾಡಿ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಕೆಳಪೇಟೆಯ ದೇವಸ್ಥಾನದ ಹತ್ತಿರ ರಸ್ತೆ ಬದಿಯಲ್ಲಿ ಸಾರ್ವಜನಿಕ  ಸ್ಥಳದಲ್ಲಿ  ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ನೀಡಿದ ಖಚಿತ ಮಾಹಿತಿಯಂತೆ, ಠಾಣಾ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದ್ರಿ ಸ್ಥಳಕ್ಕೆ ತಲುಪಿ 09:05 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ, ಮೊಹಮ್ಮದ್ ರಫೀಕ್ ಎಂಬಾತನನ್ನು ವಿಚಾರಣೆಗೊಳಪಡಿಸಿ, ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ. 570/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 111/2021 ಕಲಂ: 78(i) (iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 26/11/2021 ರಂದು ಜಯ ಕೆ. ಪಿಎಸ್‌ಐ (ತನಿಖೆ) ಪಡುಬಿದ್ರಿ ಪೊಲೀಸ್ ಠಾಣೆ ಇವರು ಠಾಣಾ ಉಸ್ತುವಾರಿಯಲ್ಲಿರುತ್ತಾ, ಮಧ್ಯಾಹ್ನ 12:00 ಗಂಟೆಗೆ ಹೆಜಮಾಡಿ ಗ್ರಾಮದ ಬೀಟ್ ಕರ್ತವ್ಯದ ಸಿಬ್ಬಂದಿ  ರುದ್ರೇಶ್ ರವರು ಕರೆ ಮಾಡಿ ಹೆಜಮಾಡಿ ಗ್ರಾಮ ಹೆಜಮಾಡಿ ಜಂಕ್ಷನ್ ಬಸ್‌ಸ್ಟಾಂಡ್‌ ಬಳಿ ಸಾರ್ವಜನಿಕ  ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ನೀಡಿದ ಖಚಿತ ಮಾಹಿತಿಯಂತೆ, ಠಾಣಾ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದ್ರಿ ಸ್ಥಳಕ್ಕೆ ತಲುಪಿ 09:05 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ, ಚೇತನ್ ಪೂಜಾರಿ ಎಂಬಾತನನ್ನು ವಿಚಾರಣೆಗೊಳಪಡಿಸಿ, ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,130/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 112/2021 ಕಲಂ: 78(i) (iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 26/11/2021 ರಂದು ಪಿರ್ಯಾದಿದಾರರಾದ ಸಂತೋಷ  ಬಿ.ಪಿ ಪೊಲೀಸ್‌ಉಪನಿರೀಕ್ಷಕರು (ಕಾ & ಸು), ಕೋಟ ಪೊಲೀಸ್‌ ಠಾಣೆ ಇವರು ಠಾಣೆಯಲ್ಲಿರುವಾಗ ಸಂಜೆ 16:00 ಗಂಟೆಗೆ ತೆಕ್ಕಟ್ಟೆ ಗ್ರಾಮದ ಬೀಟ್ ಸಿಬ್ಬಂದಿ ಹೆಚ್ ಸಿ ಅಶೋಕ ಶೆಟ್ಟಿ ರವರು ಕರೆ ಮಾಡಿ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಮೀನು ಮಾರ್ಕೆಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ನೀಡಿದಂತೆ  ಪಂಚರನ್ನು ಬರಮಾಡಿಕೊಂಡು, ಅಶೋಕ ಶೆಟ್ಟಿ. ರಾಜು  ರವರುಗಳನ್ನು ಕರೆದು ಕೊಂಡು ಇಲಾಖಾ ಜೀಪ್‌ನಂಬ್ರ KA-20 G-0238 ನೇದರಲ್ಲಿ ಠಾಣೆಯಿಂದ ಮಾಹಿತಿ ಬಂದ ಸ್ಥಳಕ್ಕೆ ಹೊರಟು 16:15  ಘಂಟೆಗೆ ಸ್ಥಳಕ್ಕೆ ತಲುಪಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಿದಲ್ಲಿ ಮೀನು ಮಾರ್ಕೇಟ್ ನಿಂದ 30 ಅಡಿ ಪಶ್ಚಿಮಕ್ಕೆ ಮಲ್ಯಾಡಿ ಕಡೆಗೆ ಹಾದು ಹೋಗುವ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಜೋರಾಗಿ ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಪಣವಾಗಿ ಕಟ್ಟುತ್ತಿದ್ದಿರುವುದು ಕಂಡು ಬಂದಿರುತ್ತದೆ. ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ನಡೆಸುವ ಬಗ್ಗೆ ಸಿಬ್ಬಂದಿಗಳಿಗೆ ಸೂಚಿಸಿ 16:30 ಗಂಟೆಗೆ ದಾಳಿ ನಡೆಸಿದಲ್ಲಿ ಸಮವಸ್ತ್ರದಲ್ಲಿದ್ದವರನ್ನು ಕಂಡ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು ಸದ್ರಿ ಸ್ಥಳದಲ್ಲಿದ್ದ ಮಟ್ಕಾ ಜುಗಾರಿ ಆಟದಲ್ಲಿ ನಿರತ ಆರೋಪಿ ಸುಮಂತ (37) ತಂದೆ: ಕೃಷ್ಣ ಜಿ ಕುಂದರ್ ವಾಸ: ಭಗವತಿ ನಿಲಯ ಕೋಟತಟ್ಟು ಪಡುಕೆರೆ ಮಣೂರು ಗ್ರಾಮ  ಬ್ರಹ್ಮಾವರ ಇತನನ್ನು ಸುತ್ತುವರಿದು ಹಿಡಿದು ವಿಚಾರಿಸಿದಲ್ಲಿ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿರುವ ಬಗ್ಗೆ ತಿಳಿಸಿರುತ್ತಾನೆ ಆತನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ  ಒಟ್ಟು  1100/-ರೂಪಾಯಿ ಹಾಗೂ ಆತನ ಕೈಯಲ್ಲಿದ್ದ ಮಟ್ಕಾಚೀಟಿ ಹಾಗೂ ಬಾಲ್ ಪೆನ್ ನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪ್ರಕರಣ ದಾಖಲಿಸುವರೆ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 202/2021 ಕಲಂ: 78(i) (iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ವಾರಂಬಳ್ಳಿ  ಗ್ರಾಮದ ಬ್ರಹ್ಮಾವರ ಆಕಾಶವಾಣಿ ಬಳಿ ಹೋಟೆಲ್‌ ಮಂದಾರ್ತಿ ಕಟ್ಟಡದ ಪಕ್ಕದ ಗೂಡಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆನಂದ, (45) ತಂದೆ:ಕೃಷ್ಣಯ್ಯ ಶೆಟ್ಟಿ, ವಾಸ: ದೇವಿ ನಿಲಯ, ಪೇತ್ರಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಎಂಬವರು ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಸದ್ರಿ ಗ್ರಾಮದ ಬೀಟ್ ಸಿಬ್ಬಂದಿ ಇವರು ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಮಾಹಿತಿ ನೀಡಿದ್ದು, ಸದ್ರಿ ಮಾಹಿತಿಯನ್ನು ಇವರು ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ನಿರ್ದೇಶನದಂತೆ  ಠಾಣಾ ಸಿಬ್ಬಂದಿಯವರ ಜೊತೆ ಇಲಾಖಾ ಜೀಪಿನಲ್ಲಿ ಸದ್ರಿ  ಸ್ಥಳಕ್ಕೆ ಮಧ್ಯಾಹ್ನ 4:45 ಗಂಟೆಗೆ ತೆರಳಿ ಅಲ್ಲೇ ಹತ್ತಿರ ಗೂಡಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು 00 ರಿಂದ 99 ರ ಒಳಗೆ ಬರೆಯಿಸಿದ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಧ್ಯಾಹ್ನ 4:50 ಗಂಟೆಗೆ ಇವರು ಸಿಬ್ಬಂದಿಯವರ ಜೊತೆ ದಾಳಿ ನಡೆಸಿದಾಗ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು,  ಆರೋಪಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು  ಸ್ವಂತ ಲಾಭಕ್ಕಾಗಿ ಉಪಯೋಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ಆರೋಪಿತನ ಅಂಗ ಜಪ್ತಿ ಮಾಡಲಾಗಿ ಆತನ ವಶದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ ರೂಪಾಯಿ 1100/-, ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ದೊರೆತಿದ್ದು, ಈ ಸ್ವತ್ತುಗಳನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 191/2021 ಕಲಂ: 78(i) (iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ದಯಾನಂದ ನಾಯ್ಕ (48) ತಂದೆ: ನಾರಾಯಣ ನಾಯ್ಕ, ವಾಸ: ಖಾರ್ವಿಕೇರಿ ರಸ್ತೆ ಕಸಬಾ ಗ್ರಾಮ, ಕುಂದಾಪುರ ಇವರು ದಿನಾಂಕ 26/11/2021 ರಂದು ಬೆಳಿಗ್ಗೆ 11:30 ರ ಸುಮಾರಿಗೆ ಕುಂದಾಪುರ ಹೊಸ ಬಸ್ಸು ನಿಲ್ದಾಣದ ಬಳಿ ಮೊಬೈಲ್‌ಗೆ ಕರೆನ್ಸಿ ಹಾಕಲು ಹೋದಾಗ ಆಪಾದಿತ ಕಾಳಪ್ಪ ನಾಯ್ಕ ಎಂಬವರು ಇವರ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಬಗ್ಗೆ ಅಲ್ಲಸಲ್ಲದ ಆರೋಪಗಳನ್ನು ಮಾಡುತ್ತೀಯಾ ಎಂದು ತಿಳಿಸಿ ಸಿಟ್ಟಿನಿಂದ ತನ್ನ ಹೆಲ್ಮೆಟ್ ನಿಂದ ದಯಾನಂದ ನಾಯ್ಕ ಇವರ ಎಡಕೆನ್ನೆಗೆ, ಎಡಭುಜಕ್ಕೆ, ಬಲಮೊಣಕೈಗೆ, ಹೊಟ್ಟೆಗೆ ಬಲವಾಗಿ ಹೊಡೆದು ಇನ್ನು ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ. ಆಪಾದಿತನು ಈ ಹಿಂದೆ ಮೂರು ಬಾರಿ ದಯಾನಂದ ನಾಯ್ಕ ರವರೊಂದಿಗೆ ಜಗಳಕ್ಕೆ ಬಂದಿದ್ದು ಮುಂದೆ ಕೂಡ ಹಲ್ಲೆ ಮಾಡುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 341, 504, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 27-11-2021 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080