ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

 • ಬೈಂದೂರು: ದಿನಾಂಕ 22-10-2022  ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿ ರಮೇಶ್ ಗೌಡ   ಪ್ರಾಯ: 28 ವರ್ಷ ತಂದೆ: ಗೋಪಾಲ ಗೌಡ ವಾಸ: ಹೊಸಾಡು, ಮೂಡ್ಲಗದ್ದೆ, ಕಾಲ್ತೋಡುಗ್ರಾಮ ಇವರ ತಮ್ಮ ಹರೀಶ್ ಗೌಡ ರವರು   ಉದಯ ಗೌಡ ರವರ KA 20 EC 2792 ನೇ  ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿ ಬೈಂದೂರಿನಿಂದ ಅರೆಹೊಳೆ ಕಡೆಗೆ ಹೋಗುತ್ತಿದ್ದು ಉದಯ ಗೌಡ ರವರು ಮೋಟಾರುಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಿರಿಮಂಜೇಶ್ವರ ಗ್ರಾಮದ ನಾಗೂರು ಸಂದೀಪನ್ ಆಂಗ್ಲ ಮಾದ್ಯಮ ಶಾಲೆಯ ಎದುರಿನ ರಾಹೆ 66 ರಸ್ತೆ ತಲುಪಿದಾಗ ದನವೊಂದು ರಸ್ತೆಗೆ ಅಡ್ಡ  ಬಂದು ಮೋಟಾರು ಸೈಕಲ್ ಗೆ ತಾಗಿದ ಪರಿಣಾಮ ಮೋಟಾರು ಸೈಕಲ್ ನೊಂದಿಗೆ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು  ಅಪಘಾತದ ಪರಿಣಾಮ ಫಿರ್ಯಾದುದಾರರ ತಮ್ಮ  ಹರೀಶ್ ಗೌಡ ರವರಿಗೆ  ತಲೆಗೆ ಸಣ್ಣ ಪುಟ್ಟ ಗಾಯ ಮತ್ತು ಬೆನ್ನಿಗೆ ಒಳ ನೋವು ಆದವರನ್ನು  ಚಿಕಿತ್ಸೆ  ಬಗ್ಗೆ ಫಿರ್ಯಾದುದಾರರು ಹಾಗೂ ರಾಜು ರವರು 108 ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷೀಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿದ್ದು ಬೆನ್ನಿನಲ್ಲಿ ಮೂಳೆ ಬಿರುಕು ಆಗಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 214/2022 ಕಲಂ. 279 , 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆ ಪ್ರಕರಣ:

 • ಗಂಗೊಳ್ಳಿ: ಫಿರ್ಯಾದಿ ಬಿ, ಶೇಖರ ಕುಂದರ್‌(59 ವರ್ಷ), ತಂದೆ; ಮುಡೂರ, ವಾಸ: ಸುಷ್ಮಾನಿವಾಸ, ಜನತಾ ಕಾಲೋನಿ, ಮರವಂತೆ ಗ್ರಾಮ ಇವರು “ಸಾಗರದೀಪಾ” ಎಂಬ ಭೋಟಿನ ಪಾಲುದಾರರಾಗಿರುತ್ತಾರೆ. ಪಿರ್ಯಾದಿದಾರರು ಸದ್ರಿ ಬೋಟ್‌ನಲ್ಲಿ ಗಣೇಶ, ರವಿ, ರಘುವೀರ ಹಾಗೂ ಇತರರೊಂದಿಗೆ ದಿನಾಂಕ: 26/10/2022 ರಂದು 22:30 ಗಂಟೆಗೆ ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್‌ರಸ್ತೆಯ ಬಳಿ ಇರುವ ಮ್ಯಾಂಗನೀಸ್‌ ವಾರ್ಪನಿಂದ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಬಗ್ಗೆ  ಹೊರಟಾಗ ಬೋಟ್‌ನಲ್ಲಿ ಕುಳಿತಿರುವ ರಘುವೀರ ತಂಡೇಲ (28 ವರ್ಷ)ಎಂಬವರು  ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ  ಬಿದ್ದು ಕಾಣೆಯಾಗಿದ್ದು, ಸದ್ರಿಯವರನ್ನು ನದಿಯಲ್ಲಿ ಹುಡುಕಾಡಿದಲ್ಲಿ ಈವರೆಗೆ ಪತ್ತೆಯಾಗಿರುವುದಿಲ್ಲ.ಕಣೆಯಾದವರ ವಿವರ: ಸಾಧಾರಣ ಶರೀರ ಗೋದಿ ಮೈಬಣ್ಣಕಪ್ಪು ಸಣ್ಣ  ಗಡ್ಡ ಎತ್ತರ: 5  ಅಡಿ 6 ಇಂಚು ಕೆಂಪು  ಬಣ್ಣದ ತುಂಬು ತೋಳಿನ ಶರ್ಟ್ ಬೂದು ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರೆಮಾಂಕ  96/2022  ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ ನಗರ: ಪಿರ್ಯಾದಿ ರತ್ನಾಕರ (52) ತಂದೆ: ದಿ.ಶಿವರಾಮ ಪೂಜಾರಿ, ವಾಸ: ಪಿಲಾರ್‌ಖಾನ್‌ ಸೂಡ ಗ್ರಾಮ ಇವರ ತಮ್ಮನಾದ ಸುಧಾಕರ(50) ಎಂಬವರು ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಮನೆ ನಂ. 2ಬಿ 79, ಕಸ್ತೂರ್ಬಾನಗರ, ಚಿಟ್ಪಾಡಿ ಎಂಬಲ್ಲಿ ವಾಸವಾಗಿದ್ದು, ತನ್ನ ಮಗನ ಅಂಗವೈಕಲ್ಯ ಕಾರಣದಿಂದ ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಸರಿಯಾಗಿ ಕೆಲಸಕ್ಕೂ ಹೋಗದೇ ಇದ್ದು, ಮಾನಸಿಕವಾಗಿ ನೊಂದು  ದಿನಾಂಕ: 26/10/2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 27/10/2022 ರಂದು ಬೆಳಿಗ್ಗೆ 07:00 ಗಂಟೆಯ ಮದ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಯುಡಿ ಆರ್  42/2022ಕಲಂ 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿ ಪ್ರಕಾಶ್ ಕೋಟ್ಯಾನ್ (44 ವರ್ಷ), ತಂದೆ: ದಿ. ಕೃಷ್ಣಪ್ಪ ಪಾಲನ್, ವಾಸ: ಹಂಪನಕಟ್ಟೆ ಪೆಟ್ರೋಲ್ ಬಂಕ್ ಬಳಿ, ಪಡುತೋನ್ಸೆ ಗ್ರಾಮ ಇವರ ತಾಯಿಯ ತಂಗಿಯ ಮಗನಾದ ಪ್ರವೀಣ್ ಬೆಳ್ಚಡ (39) ಎಂಬವರು ನೇಜಾರು ನಿಡಂಬಳ್ಳಿ ರೋಡ್‌ ಎಂಬಲ್ಲಿರುವ ಅವರ ತಾಯಿಯ ಮನೆಯಲ್ಲಿ ವಾಸವಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಹೆಂಡತಿಯು ಮನಸ್ತಾಪಗೊಂಡು ಮಗಳೊಂದಿಗೆ ಮೂರು ವರ್ಷಗಳಿಂದ ಆಕೆಯ ತವರು ಮನೆಯಲ್ಲಿ ವಾಸವಾಗಿರುವುದಾಗಿದೆ. ಪ್ರವೀಣ್ ಬೆಳ್ಚಡ ರವರು ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದುಕೊಂಡಿದ್ದು, ಅವರು ಮನೆಯಿಂದ ದಿನಾಂಕ 18.10.2022 ರಂದು ರಾತ್ರಿ 9:00 ಗಂಟೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅವರನ್ನು ಹುಡುಕಾಡುತ್ತಿರುವಾಗ ದಿನಾಂಕ 21.10.2022 ರಂದು ಬ್ರಹ್ಮಾವರ ಬಾರ್ಕೂರು ದೊಡ್ಡ ಬ್ರಿಡ್ಜ್, ಮಟಪಾಡಿ ಕ್ರಾಸ್ ಬಸ್ಸ್ ನಿಲ್ದಾಣದ ಬಳಿ ಪ್ರವೀಣ್ ಬೆಳ್ಚಡ ರವರ KA.20.EY.3890 ನೇ ಮೊಟಾರ್ ಸೈಕಲ್‌ದೊರೆತಿರುತ್ತದೆ. ನಂತರ ದಿನಾಂಕ 27.10.2022 ರಂದು ಬೆಳಿಗ್ಗೆ 06:30  ಗಂಟೆಯ ಸಮಯಕ್ಕೆ ಬ್ರಹ್ಮಾವರ  ತಾಲೂಕು, ಹಂದಾಡಿ ಗ್ರಾಮದ, ಕಂಬಳಗದ್ದೆ ಸಮೀಪದ ದಿಲೀಪ್ ಶೆಟ್ಟಿ ತೆಂಕುಮನೆ ಎಂಬವರಿಗೆ ಸೇರಿದ ಜಾಗದ ಪಕ್ಕದ ಸೀತಾನದಿ ಹೊಳೆಗೆ ಸೇರುವ ತೋಡಿನ ನೀರಿನಲ್ಲಿ ಪ್ರವೀಣ್ ಬೆಳ್ಚಡರವರ ಮೃತದೇಹ ಕೊಳೆತು ಸ್ಥಿತಿಯಲ್ಲಿ ದೊರೆತಿರುತ್ತದೆ. ಪ್ರವೀಣ್ ಬೆಳ್ಚಡ ರವರು  ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾದ ಕಾರಣದಿಂದ ಮಾನಸಿಕವಾಗಿ  ನೊಂದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾರ್ಕೂರು ಸಮೀಪದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 50/2022 ಕಲಂ 174  ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 27-10-2022 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080