ಅಭಿಪ್ರಾಯ / ಸಲಹೆಗಳು

ಕಾಣೆಯಾದ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ರವಿ ಗುರುಪುತ್ರಪ್ಪ ಹಟ್ಟಿ (28) ತಂದೆ: ಗುರುಪುತ್ರಪ್ಪ ಹಟ್ಟಿ ವಾಸ: ಹಟ್ಟಿ, ಸೋಮನಕೊಪ್ಪ, ಕುಳಗೇರಿ ಕ್ರಾಸ್ ಪೋಸ್ಟ್ , ಬಾದಾಮಿ ತಾಲೂಕು ಬಾಗಲಕೋಟೆ ಇವರ ತಮ್ಮ ಫೂರ್ಣಾನಂದನು ಆತನ ಹೆಂಡತಿ ಮತ್ತು ಮಗಳೊಂದಿಗೆ ಸುಮಾರು 1 ವರ್ಷದಿಂದ ಕುಂದಾಪುರದಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ 19/10/2022 ರಂದು ಸಂಜೆ 04:00 ಗಂಟೆಗೆ ರವಿ ಗುರುಪುತ್ರಪ್ಪ ಹಟ್ಟಿ ರವರ ತಮ್ಮನ ಹೆಂಡತಿ ಶ್ರೀಮತಿ ಪಾರ್ವತಿ (25) ರವರು ತನ್ನ ಮಗು 5 ವರ್ಷ ಪ್ರಾಯದ ವಿಧ್ಯಾಳೊಂದಿಗೆ ಕುಂದಾಪುರದ ಆಶೀರ್ವಾದ ಹೋಟೆಲಿನಲ್ಲಿ ಕೆಲಸಕ್ಕೆಂದು ಹೋದವಳು ಸಂಜೆ 04:00 ಗಂಟಗೆ ಟಿಟಿ ರೋಡ್‌ನಲ್ಲಿರುವ ತನ್ನ ಬಾಡಿಗೆ ಮನೆಗೆ ಬಂದು ಊರಿಗೆ ಹೋಗುತ್ತೇನೆ ಎಂದು ಹೇಳಿ ತನ್ನ ಮಗಳೊಂದಿಗೆ ಹೋದವಳು ಈವರೆಗೂ ವಾಪಾಸ್ಸು ಮನೆಗೂ ಬಾರದೇ ಊರಿಗೂ ಹೋಗದೇ ಕಾಣೆಯಾಗಿದ್ದು ಈ ಬಗ್ಗೆ ಊರಿನಲ್ಲಿ ಹಾಗೂ ಕುಂದಾಪುರದ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 116/2022 ಕಲಂ: Women and child Missing ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಾರರಾದ ಎಂ ಸಂತೋಷ (26) ತಂದೆ: ಆಂಜನೇಯ ವಾಸ: ಬೀರಲಿಂಗೇಶ್ವರ ರಸ್ತೆ ಮಡಿವಾಳರ ಹನುಮಂತಪ್ಪರ ಮನೆ, ಮಲೆ ಬೆನ್ನೂರು, ಹರಿಹರ ತಾಲೂಕು ದಾವಣಗೆರೆ ಇವರು ದಿನಾಂಕ 25/10/2022 ರಂದು ತನ್ನ KA-17 P-7641 ನೇ ಮಾರುತಿ ಓಮ್ನಿ ಕಾರಿನಲ್ಲಿ ಚಾಲಕನಾದ ನಾನು ಮತ್ತು ನನ್ನ ಚಿಕ್ಷಪ್ಪ ರಾಜೇಶ್, ನನ್ನ ಮಾವ ಲಿಂಗರಾಜು, ನನ್ನ ಅಳಿಯನಾದ ಮಾನುರವರು ಊರಿನಿಂದ ಹೊರಟು ಶಿವಮೊಗ್ಗ ಉಡುಪಿಯಾಗಿ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ದಿನಾಂಕ 26/10/2022 ರಂದು ಸಮಯ ಸುಮಾರು ಬೆಳಿಗ್ಗೆ 4:30 ಗಂಟೆಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಲಕ್ಷ್ಮೀ ವಿಲಾಸ್ ಹೋಟೇಲ್ ಎದುರು ತಲುಪಿದಾಗ ನನ್ನ ಹಿಂದಿನಿಂದ ಬಂದ ಕಾರು ಚಾಲಕನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ನನ್ನ ಓಮ್ನಿ ಕಾರಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಮಂಗಳೂರು ಉಡುಪಿ ರಸ್ತೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಾನುವಿನ ತುಟಿಗೆ, ನನ್ನ ಮಾವನ ಬಲಗೈಗೆ ತರಚಿದ ಗಾಯವಾಗಿದ್ದು, ನನ್ನ ಚಿಕ್ಕಪ್ಪ ರಾಜೇಶನ ಬಲ ಭುಜದ ಬಳಿ ಮೂಳೆ ಜಖಂ ಆಗಿರುತ್ತದೆ. ನನಗೆ ಯಾವುದೇ ಗಾಯವಾಗಿರುವುದಿಲ್ಲ. ಬಳಿಕ ಅಪಘಾತ ಪಡಿಸಿದ ಕಾರನ್ನು ನೋಡಲಾಗಿ ಕಾರು ನಂಬ್ರ KA-19 MJ-9638 ನೇ celerio ಕಾರು ಚಾಲಕ ಭವಿತ್ ಕುಮಾರ್ ತಂದೆ: ವೈ ಚಂದ್ರ ಶೇಖರ, ಮಂಗಳೂರು ಎಂಬುದಾಗಿ ತಿಳಿದಿರುತ್ತದೆ. ಬಳಿಕ ಗಾಯಾಳುಗಳನ್ನು 108 ಆ್ಯಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರದುಕೊಂಡು ಹೋಗಿ ಮಾನು ಮತ್ತು ಲಿಂಗರಾಜುರವರನ್ನು ದಾಖಲಿಸಿ ರಾಜೇಶನನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಸದ್ರಿ ಅಪಘಾತಕ್ಕೆ KA-19 MJ-9638 ನೇ celerio ಕಾರು ಚಾಲಕ ಭವಿತ್ ಕುಮಾರ್ ನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ನಾನು ಗಾಯಾಳುವಿನ ಆರೈಕೆಯಲ್ಲಿರುವುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಫು: ಪಿರ್ಯಾದಿದಾರರಾದ ಸಂದೇಶ್ ಪೂಜಾರಿ (40) ತಂದೆ : ದಿ. ಚಂದ್ರ ಶೇಖರ ವಾಸ : ಸೌಮ್ಯ ನಿವಾಸ, ಉದ್ಯಾವರ ಬೋಳಾರಗುಡ್ಡೆ ಇವರ ತಂದೆ ಚಂದ್ರಶೇಖರ (65), ಎಂಬುವರಿಗೆ ಸುಮಾರು 40 ವರ್ಷಗಳಿಂದ ಮದ್ಯಪಾನ ಸೇವನೆ ಮಾಡುವ ಚಟವಿದ್ದು, ಅವರಿಗೆ 4 ತಿಂಗಳುಗಳ ಹಿಂದೆ ಪಾರ್ಶ್ವವಾಯು ತುತ್ತಾಗಿದ್ದು, ಈ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು ಇದೇ ವಿಷಯದಲ್ಲಿ ವೈದ್ಯರ ಸಲಹೆಯಂತೆ ಅವರಿಗೆ ಮದ್ಯಪಾನವನ್ನು ನೀಡದೆ ಇದ್ದು, ಇದೇ ಕಾರಣದಿಂದ ತಂದೆಯವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26/10/2022 ರಂದು ಮಧ್ಯಾಹ್ನ 13:30 ಗಂಟೆಯಿಂದ 15:30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಸ್ವಂತ ಮನೆಯಾದ ಉದ್ಯಾವರ ಗ್ರಾಮದ ಬೋಳಾರಗುಡ್ಡೆ ಗಣೇಶ ನಗರದ ಸೌಮ್ಯ ನಿವಾಸ ಎಂಬ ಮನೆಯ ಹಾಲ್ ನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33/2022 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಳಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-10-2022 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080