ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ  ಅನಿಲ್  ಶೆಟ್ಟಿ (46), ತಂದೆ : ದಿ. ಸುಂದರ  ಶೆಟ್ಟಿ, ವಾಸ : ಕಕ್ಕು ಕೋಚ ಶೆಟ್ಟಿ ಮನೆ, ಕೊಪ್ಪಲಂಗಡಿ, ಮಲ್ಲಾರು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಹಾಗೂ ಅವರ ಅಣ್ಣ ಕಿಶೋರ ಶೆಟ್ಟಿ (48) ರವರು ದಿನಾಂಕ 26/09/2022 ರಂದು ಸಂಜೆ  7:00 ಗಂಟೆಗೆ ಮಲ್ಲಾರು ಗ್ರಾಮದ ಕೊಪ್ಪಲಂಗಡಿಯ ಅಬ್ದುಲ್ ರೆಹಮಾನ್ ರವರ ಮನೆ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು-ಉಡುಪಿ ರಸ್ತೆಯನ್ನು ದಾಟಿ,  ಉಡುಪಿ - ಮಂಗಳೂರು ರಸ್ತೆಯನ್ನು ದಾಟುತ್ತಾ ರಸ್ತೆಯ ಅಂಚಿನಲ್ಲಿರುವಾಗ  ಶ್ರೇಯಸ್‌‌ ರವರು ರಾಷ್ಟ್ರೀಯ  ಹೆದ್ದಾರಿ 66 ರಲ್ಲಿ  ತನ್ನ KA-20-ES-1473 ನೇ ಮೋಟಾರು ಸೈಕಲ್‌ನ್ನು ಉಡುಪಿ ಕಡೆಯಿಂದ ಅತೀವೇಗ ಹಾಗೂ ತೀವೃ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಕಿಶೋರ ಶೆಟ್ಟಿ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕಿಶೋರ ಶೆಟ್ಟಿರವರು  ರಸ್ತೆಗೆ ಬಿದಿದ್ದು, ಢಿಕ್ಕಿ ಹೊಡೆದ ಮೋಟಾರು ಸವಾರನು ಮೋಟಾರು ಸಮೇತ ರಸ್ತೆಗೆ ಬಿದ್ದಿರುತ್ತಾನೆ. ರಸ್ತೆಗೆ ಬಿದ್ದ ಕಿಶೋರ ಶೆಟ್ಟಿ ರವರಿಗೆ ಎರಡು ಕಿವಿಯಲ್ಲಿ ಹಾಗೂ ಮೂಗಿನಲ್ಲಿ ರಕ್ತ ಬರುತ್ತಿದ್ದು, ಎಡಗಾಲಿನ ಮೊಣಗಂಟಿನ  ಕೆಳಭಾಗದ ಮೂಳೆ ಮುರಿತವಾಗಿ ಪ್ರಜ್ಞೆ ತಪ್ಪಿದ್ದು, ಪಿರ್ಯಾದಿದಾರರು ಕಿಶೋರ ಶೆಟ್ಟಿ ರವರನ್ನು ಕೂಡಲೇ 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದಕೊಂಡು ಬಂದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಮೋಟಾರ್ ಸೈಕಲ್‌ ಸವಾರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಮೋಟಾರು ಸೈಕಲ್‌ ಸಂಪೂರ್ಣ ಜಖಂ ಗೊಂಡಿರುತ್ತದೆ.‌ ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಭಾಸ್ಕರ ಶೆಟ್ಟಿ (67), ತಂದೆ: ದಿ. ಪರಮೇಶ್ವರ ಶೆಟ್ಟಿ, ವಾಸ: ಕುಂಭಾಶಿ, ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 26/09/2022 ರಂದು ಬೆಳಿಗ್ಗೆ 09:30 ಗಂಟೆಗೆ ಕುಂಭಾಶಿಯಿಂದ ತನ್ನ KA-20-H-7824 ನೇದರಲ್ಲಿ ಹಾಲಾಡಿಗೆ ಹೋಗಿದ್ದು, ನಂತರ ಹೈಕಾಡಿಯಿಂದ ಕುಂಭಾಶಿ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ 12:40 ಗಂಟೆಗೆ ಹೊಂಬಾಡಿ ಎಂಬಲ್ಲಿ ತಲುಪಿದಾಗ ಪಿರ್ಯಾದಿದಾರರ ಎದುರಿನಲ್ಲಿ ಅದೇ ಮಾರ್ಗದಲ್ಲಿ ಕೋಟೇಶ್ವರ ಕಡೆಗೆ KA-20-EJ-6645 ನೇ ಮೋಟಾರು ಸೈಕಲನ್ನು ಅದರ ಸವಾರ ಜಯಶೀಲ ಶೆಟ್ಟಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ರಸ್ತೆಯ ಎಡಬದಿಯಿಂದ ಬಲಬದಿಗೆ ಬೈಕನ್ನು ಯಾವುದೇ ಸೂಚನೆ ನೀಡದೇ ತಿರುಗಿಸಿ ಪಿರ್ಯಾದಿದಾರರ ಬೈಕಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಬದಿಯ ಭುಜದ ಹಿಂಬದಿ ತೀವೃ ಗಾಯವಾಗಿದ್ದು, ಬಲಬದಿಯ ತೊಡೆಯ ಬಳಿ ತರಚಿದ ಗಾಯ ಹಾಗೂ ಬಲಬದಿಯ ಕಾಲಿನ ಗಂಟಿನ ಮೇಲ್ಬಾಗದಲ್ಲಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್. ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 158/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ವಿಜಯ ದೇವಾಡಿಗ (65), ತಂದೆ:ದಿ. ಮುತ್ತಯ್ಯ ದೇವಾಡಿಗ, ವಾಸ: ಅಬ್ಬೇಡಿ ಮೇಲ್ಮನೆ ನಡ್ಸಾಲು  ಗ್ರಾಮ,ಪಡುಬಿದ್ರಿ ಅಂಚೆ,ಕಾಪು ತಾಲೂಕು  ಉಡುಪಿ ಇವರ ತಮ್ಮ ರಾಮ ದೇವಾಡಿಗ (60) ಎಂಬುವವರು ದಿನಾಂಕ 26/09/2022 ರಂದು ಗದ್ದೆಯಲ್ಲಿ 13:30 ಗಂಟೆಗೆ ಹುಲ್ಲು ತೆಗೆಯುತ್ತಿರುವಾಗ ಅವರ ಕೈ ಬೆರಳಿಗೆ ಯಾವುದೋ ವಿಷ ಜಂತು ಕಚ್ಚಿರುವುದಾಗಿ ಪಿರ್ಯಾದಿದಾರರ ತಂಗಿಯವರಾದ ಯಶೋಧ ಮತ್ತು ಯಮುನಾ ರವರಲ್ಲಿ ಮನೆಗೆ ಬಂದು ತಿಳಿಸಿದಾಗ ಕೂಡಲೇ ಒಂದು ವಾಹನದಲ್ಲಿ ಹಾಕಿಕೊಂಡು ಕಿನ್ನಿಗೋಳಿ ಕಾಂಟೇಸ ವೈದ್ಯಾಧಿಕಾರಿಯವರಲ್ಲಿ ತೋರಿಸಿದಾಗ ವೈದ್ಯರು ಚಿಕಿತ್ಸೆ ಕೊಡಿಸಿ ವಿಷವು ವಿಪರೀತವಾಗಿ ಏರುತ್ತಿದ್ದು, ಕೂಡಲೇ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಫತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಕರೆದುಕೊಂಡು ಹೋಗಿ ವೈದ್ಯರು 16:30 ಗಂಟೆಗೆ ಚಿಕಿತ್ಸೆ ನೀಡುತ್ತಿರುವಾಗ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 22/2022, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಜ್ಯೋತಿ ಹೆಗ್ಡೆ (46), ತಾಯಿ: ಹರಿಣಾಕ್ಷಿ ಹೆಗ್ಗಡ್ತಿ, ವಾಸ: ದೊಡ್ಡಬೀಡು ಮನೆ  ಕುಕ್ಕೆಹಳ್ಳಿ ಅಂಚೆ ಮತ್ತು ಗ್ರಾಮ ಇವರ ಅಜ್ಜಿ ಗಿರಿಜಮ್ಮ ಹೆಗ್ಗಡ್ತಿಯವರಿಂದ ವಿಭಾಗ ಪತ್ರದ ಮೂಲಕ ಬಂದ ಆಸ್ತಿಯನ್ನು ಸುಮಾರು 25 ವರ್ಷಗಳಿಂದ ಸ್ವಾಧೀನಹೊಂದಿ ಅನುಭವಿಸಿಕೊಂಡು ಬರುತ್ತಿದ್ದು, ಆಸ್ತಿಯಲ್ಲಿ 2007 ರಲ್ಲಿ ಪಿರ್ಯಾದಿದಾರರು ಮನೆ ನಿರ್ಮಾಣ ಮಾಡಿಕೊಂಡಿದ್ದು ಹಾಗೂ ಪಿರ್ಯಾದಿದಾರರು ಕುಕ್ಕೆಹಳ್ಳಿಗೆ ಬರುವ  ಪೂರ್ವದಲ್ಲಿ ಅವರ ಚಿಕ್ಕಪ್ಪ ಹಾಗೂ ಚಿಕ್ಕಮ್ಮ  ಅವರಿಗೆ ಬಂದ ಕುಟುಂಬದ ಆಸ್ತಿಯಲ್ಲಿ  ಮನೆ ಮಾಡಿಕೊಂಡಿದ್ದು  2007 ರಲ್ಲಿ ಪಿರ್ಯಾದುದಾರರು ಭೂ ಮಾಪನ ಅಧಿಕಾರಿಗಳಿಂದ ಅಳತೆ ಮಾಡಿಸಿ ಅಳತೆ ಸಮಯದಲ್ಲಿ ಪಿರ್ಯಾದಿದಾರಿಗೆ ಸಂಬಂಧಿಸಿದ ಜಾಗವನ್ನು ಅವರ ಚಿಕ್ಕಪ್ಪ ಅತಿಕ್ರಮ ಪ್ರವೇಶ ಮಾಡಿರುವುದು  ಕಂಡು ಬಂದತೆ ಜಾಗಕ್ಕೆ ತಂತಿ ಬೇಲಿ  ಮಾಡಿಕೊಂಡಿರುತ್ತಾರೆ. ನಂತರ ಪಿರ್ಯಾದುದಾರರು ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಮಣಿಪಾಲದಲ್ಲಿ ವಾಸವಾಗಿದ್ದು ಈ ಸಮಯ ಪಿರ್ಯದುದಾರರ ಚಿಕ್ಕಪ್ಪ ಸುಧಾಕರ ಹೆಗ್ಡೆಯವರು ದಿನಾಂಕ 26/09/2022 ರಂದು ಪಿರ್ಯದಿದಾರರ ಸರ್ವೆ ನಂಬ್ರ: 77/35 ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿ ಹಾಕಿರುವ ತಂತಿ ಬೇಲಿಯನ್ನು ತೆಗೆದು ನಷ್ಟ ಮಾಡಿ ಅಕ್ರಮ ಪ್ರವೇಶ ಮಾಡಿ ಜಾಗದ ಮುಖಾಂತರ ಅವರ ಕಟ್ಟಡಕ್ಕೆ ದಾರಿ ಮಾಡಿಕೊಂಡು  ತೋಟದಲ್ಲಿ ತಿರುಗಾಡಿ ತೋಟ ಹಾಳು ಮಾಡಿದಲ್ಲದೆ ಅವರ ಕೆಲಸವರಾದ ಅಮ್ಮಣ್ಣಿ ಮತ್ತು ಸತೀಶರವರಿಂದ ತೋಟದಲ್ಲಿದ್ದ ಅಡಿಕೆ ಸಂಗ್ರಹಿಸಿದ್ದು, ಅಲ್ಲದೆ  ಸರ್ವೆ ನಂಬ್ರ: 77/27 ಸಿ ಸ್ಥಳಕ್ಕೂ ಅಕ್ರಮ ಪ್ರವೇಶ ಮಾಡಿ ಹುಲ್ಲುಗಳನ್ನು ಕಿತ್ತು ನಷ್ಟವನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ:  447, 427, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 27-09-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080