ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾಪು: ಪಿರ್ಯಾದಿ ರಿಶಾನ್ ಟಿ ಇವರು ರಿಶಾಲ್ ಕನ್‌ಸ್ಟ್ರಕ್ಷನ್‌ &ಡೆವಲಪರ್ಸ್‌ ಕಂಪೆನಿಯನ್ನು ನಡೆಸಿಕೊಂಡಿದ್ದು, ಪಿರ್ಯಾದಿದಾರರು ತನ್ನ ಮಾಲಕತ್ವದ KA098451, KA20D3100 ಮತ್ತು KA20AB1610 ನೇ ನಂಬ್ರದ ಮೂರು ಟಿಪ್ಪರ್‌ಗಳನ್ನು ಕೆಲಸ ಇಲ್ಲದೇ ಇದ್ದುದರಿಂದ ಅವರ ಮನೆಯ ಸಮೀಪ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು,  ಅವರ ಸೂಪರ್‌ ವೈಸರ್‌ ಲೋಹಿತಾಶ್ವ ಎಂಬವರು  ದಿನಾಲು ಬೆಳಗ್ಗೆ ಮತ್ತು ಸಾಯಂಕಾಲ ಟಿಪ್ಪರ್‌ಗಳನ್ನು ಚೆಕ್‌ ಮಾಡಿಕೊಂಡು ಬರುತ್ತಿದ್ದು, ಅದರಂತೆ ದಿನಾಂಕ 26/09/2021 ರಂದು 19.00 ಗಂಟೆಗೆ ಟಿಪ್ಪರ್‌ಗಳನ್ನು ಚೆಕ್‌ ಮಾಡಿ ಮನೆಗೆ ಹೋಗಿದ್ದು, ದಿನಾಂಕ 27/09/2021 ರಂದು ಬೆಳಗ್ಗೆ 08.00 ಗಂಟೆಯ ಸಮಯ ಟಿಪ್ಪರ್‌ಗಳನ್ನು ಚೆಕ್‌ ಮಾಡಲು ಹೋಗಿ ಟಿಪ್ಪರ್‌‌ಗಳನ್ನು ಸ್ಟಾರ್ಟ್‌ ಮಾಡಲು ನೋಡಿದಾಗ ಅವುಗಳು ಸ್ಟಾರ್ಟ್‌ ಆಗದೇ ಇದ್ದು, ಅವುಗಳ ಬ್ಯಾಟರಿಗಳು ನೋಡಿದಾಗ  ಮೂರು ಟಿಪ್ಪರ್‌‌ಗಳ  ಬ್ಯಾಟರಿಗಳನ್ನು  ದಿನಾಂಕ 26/09/2021 ರ 19:00 ಗಂಟೆಯಿಂದ ದಿನಾಂಕ 27/09/2021  ರ  ಬೆಳಗ್ಗೆ 08:00 ಗಂಟೆಯ  ನಡುವೆ ಯಾರೋ ಕಳ್ಳರು ಸದ್ರಿ   ಟಿಪ್ಪರ್‌ಗಳ ಮೂರು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಕಳವಾದ  ಮೂರು ಬ್ಯಾಟರಿಗಳ ಅಂದಾಜು ಮೌಲ್ಯ ಸುಮಾರು 24,000/- ರೂ ಆಗಬಹುದು. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2021  ಕಲಂ379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿ ಕೆ ಸುಬ್ಬಣ್ಣ ಶೆಟ್ಟಿ ಇವರು ಜಡ್ಡಿನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ದಿನಾಂಕ 22-09-2021 ರಂದು ಹಾಲು ಡೈರಿಯಲ್ಲಿ ಪಶು ಆಹಾರವನ್ನು ಮಾರಾಟ ಮಾಡಿ ಸಂಗ್ರಹಿಸಿದ ನಗದು ಹಣ ರೂಪಾಯಿ 25,047/- ಅನ್ನು ಹಾಲು ಪರೀಕ್ಷಕರಾದ ಆನಂದ ನಾಯ್ಕ ಅವರು ಸಂಗ್ರಹಿಸಿ ಹಾಲು ಡೈರಿಯ ಕಛೇರಿಯ ಮೇಜಿನ ಡ್ರಾವರಿನಲ್ಲಿ ಇರಿಸಿ ಸಂಜೆ 6:00 ಗಂಟೆಗೆ ಡೈರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 23-09-2021 ರಂದು  ಬೆಳಿಗ್ಗೆ 06:00 ಗಂಟೆಗೆ ಹಾಲು ಡೈರಿಗೆ ಬಂದಾಗ ಮೇಜಿನ ಡ್ರಾವರಿನಲ್ಲಿ ಇಟ್ಟಿದ್ದ  ಹಣ ರೂ 25,047/- ಅನ್ನು ಯಾರೋ ಕಳ್ಳರು ಕಳವು ಮಾಡಿದ್ದು ಕಛೇರಿಯ ಹಿಂಬದಿ ಕಿಟಕಿಯ ಎರಡು ಸರಳುಗಳನ್ನು ಬಗ್ಗಿಸಿರುವುದು ಕಂಡು ಬಂದಿದ್ದು ದಿನಾಂಕ 22-09-2021 ರಂದು  ಸಂಜೆ 18:00 ಗಂಟೆಯಿಂದ ದಿನಾಂಕ 23-09-2021 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯೆ ಅವಧಿಯಲ್ಲಿಯಾರೋ ಕಳ್ಳರು ಹಾಲು ಡೈರಿಯ ಕಿಟಕಿಯ ಸರಳನ್ನು ಬಗ್ಗಿಸಿ ಒಳ ಪ್ರವೇಶಿಸಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.   ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021  ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ : ಹರೀಶ  ಭಂಡಾರಿ ಪ್ರಾಯ 36 ವರ್ಷ   ಇವರು  ದಿನಾಂಕ  27.09.2021  ರಂದು  ಸುಮಾರು  14:15  ಘಂಟೆಗೆ  ಹೆಬ್ರಿ ತಾಲೂಕಿನ   ಬೆಳ್ವೆ ಗ್ರಾಮದ  ಕ್ಷೌರಿಕರ ಬೆಟ್ಟು   ಎಂಬಲ್ಲಿ  ಆತನ  ವಾಸದ   ಮನೆಯ ಬಳಿ  ಇರುವ    ಬಾವಿಯಿಂದ   ನೀರು  ತರಲು  ಹೋದಾಗ   ಆಕಸ್ಮಿಕವಾಗಿ ಆವರಣ ಇಲ್ಲದ  ಬಾವಿಗೆ   ಬಿದ್ದು ನೀರಿನಲ್ಲಿ   ಮುಳುಗಿ   ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 27-09-2021 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080