ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 26/08/2022 ರಂದು ಬೆಳಿಗ್ಗೆ ಸುಮಾರು 9:25  ಗಂಟೆಗೆ,  ಕುಂದಾಪುರ  ತಾಲೂಕಿನ, ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯ ಶ್ರೀ ಮಹಾಗಣಪತಿ ಕ್ರಾಸ್‌ ಬಳಿ, SH 52 ರಸ್ತೆಯಲ್ಲಿ, ಆಪಾದಿತ ಸಾಗರ  ಎಂಬವರು  KA-20-EY-2941ನೇ ಬೈಕನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಕೊಟೇಶ್ವರ ಕಡೆಯಿಂದ ಹಳ್ನಾಡು ಕಡೆಗೆ ಪಿರ್ಯಾದಿದಾರರಾದ  ಶ್ರೀಮತಿ ರೇಷ್ಮಾ ಬಂಗೇರ (33) ಗಂಡ: ಪ್ರದೀಪ್‌ ಬಂಗೇರ ವಾಸ: ಮೇಪು ಕೊಟೇಶ್ವರ ಗ್ರಾಮ, ಕುಂದಾಪುರ   ಎಂಬವರು KA20-EG-2579ನೇ ಸುಜುಕಿ ಆಕ್ಸೆಸ್‌ಸ್ಕೂಟರ್‌ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ಬಲಬದಿಗೆ ತಿರುಗಿಸಲು ನಿಲ್ಲಿಸಿಕೊಂಡಿದ್ದ ಸದ್ರಿ ಸ್ಕೂಟರ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ರೇಷ್ಮಾ ಬಂಗೇರ ರವರ ಎಡಕಾಲಿನ ಕೋಲು ಕಾಲಿಗೆ ಹಾಗೂ ಮೊಣಗಂಟಿಗೆ ರಕ್ತಗಾಯ ಹಾಗೂ ಒಳಜಖಂ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2022  ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಚಂದ್ರಹಾಸ  ಎಂ (೩೩) ತಂದೆ:ರಾಮ ಪೂಜಾರಿ ವಾಸ: ಮನೆ ನಂಬ್ರ : 2-92-1, ಮೈರಬೆಟ್ಟು ಹೌಸ್, ಆರಂಬೋಡಿ ಗ್ರಾಮ ಮತ್ತು ಪೋಸ್ಟ್, ಬೆಳ್ತಂಗಡಿ ತಾಲೂಕು. ಇವರು ದಿನಾಂಕ 16/08/2022 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಎದುರುಗಡೆ ಅಂದರೆ ಮಣಿಪಾಲದಿಂದ ಪರ್ಕಳ ಕಡೆಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ ಕೀ ಸಮೇತ ನಿಲ್ಲಿಸಿ ಹೋಗಿದ್ದ KA 21 S 2925 ನೇ HONDA CB UNICORN ಮೋಟಾರ್‌ಸೈಕಲ್‌ನ್ನು ಮಧ್ಯಾಹ್ನ ಸಮಯ ಸುಮಾರು 3:00 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರು ಮೋಟಾರು ಸೈಕಲನ್ನು ಆಸ್ಪತ್ರೆ ಸುತ್ತಮುತ್ತ ಹಾಗು ಇತರ ಕಡೆಗಳಲ್ಲಿ ಹುಡುಕಾಡಿದ್ದು, ಇದುವರೆಗೆ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  120/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಮಹಿಮಾ ಹೇರ್ಳೆ ಜಿ  (28) ಗಂಡ : ಹರಿಪ್ರಸಾದ್ ವಾಸ: ಶಂಕರ ನಿಲಯ ಶಿರಿಬೀಡು ಉಡುಪಿ ಉಡುಪಿ ತಾಲ್ಲೂಕು ಇವರ ಗಂಡ ಹರಿಪ್ರಸಾದ್ (31) ರವರು ಇವರ ಮನೆಯಾದ ಶಂಕರ ನಿಲಯ ಶಿರಿಬೀಡು ಉಡುಪಿಯಿಂದ ದಿನಾಂಕ 25/08/2022 ರಂದು ಬೆಳಿಗ್ಗೆ 08.45  ಗಂಟೆಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನ ಕಾಪುವಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ಮಹಿಮಾ ಹೇರ್ಳೆ ಜಿ ರವರಲ್ಲಿ ತಿಳಿಸಿರುತ್ತಾರೆ. ನಂತರ ಇವರು ಸಂಜೆ 04:00 ಗಂಟೆಗೆ ಕರೆ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಲ್ಲಿ ತಡವಾಗುವುದಾಗಿ ತಿಳಿಸಿರುತ್ತಾರೆ. ಬಳಿಕ ಮಹಿಮಾ ಹೇರ್ಳೆ ಜಿ ರವರ ಅತ್ತೆ ಕರೆ ಮಾಡಿ ಮನೆಗೆ ಬೇಗ ಬರುವಂತೆ ತಿಳಿಸಿರುತ್ತಾರೆ. ನಂತರ ಸಂಜೆ 07.00 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದ್ದು, ಶಿರ್ವ ಬ್ರಾಂಚ್ ನ್ ಮ್ಯಾನೇಜರ್ ಗೆ ವಿಚಾರಿಸಿದಲ್ಲಿ ಹರಿಪ್ರಸಾದ್ ಸಂಜೆ 06:00 ಗಂಟೆಗೆ ಕಾಪುವಿನಿಂದ ಮನೆಗೆ ಹೋಗುತ್ತೇನೆ. ಎಂದು ಹೇಳಿ ಹೋಗಿರುತ್ತಾರೆ. ಎಂದು ತಿಳಿಸಿರುತ್ತಾರೆ. ಪರಿಚಯದವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ ಮನೆಗೂ ಬಾರದೇ  ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಸೃಜನ್ ಎ (೨೫) ತಂದೆ: ಆಂಟೋನಿ ತಿರುವನಂತಪುರಂ, ಕೇರಳ ಇವರ ತಂದೆ  ಆಂಟೋನಿ ಜೆ (55) ರವರು ಕೇರಳದಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/08/2022 ರಂದು ಡೆನ್ಸನ್ ರವರ ಬೋಟಿನಲ್ಲಿ ಕೊಚ್ಚಿನ್ ಬಂದರಿನಿಂದ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ಹೊರಟು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡಿಕೊಂಡು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಿ ಪುನ: ಮೀನುಗಾರಿಕೆಗೆ ದಿನಾಂಕ 20/08/2022 ರಂದು ಮೀನುಗಾರಿಕೆಗೆ ತೆರಳಿದ್ದು ಸಮುದ್ರದಲ್ಲಿ ಗಾಳಿ ಮತ್ತು ಅಲೆಗಳ ಅಬ್ಬರ ಜಾಸ್ತಿಯಾಗಿ  ಇದ್ದುದರಿಂದ ದಿನಾಂಕ 23/08/2022 ರಂದು ವಾಪಸ್ಸು ಮಲ್ಪೆ ಬಂದರಿಗೆ ಬಂದು ತನ್ನ ಪರಿಚಯದವರ ರೂಮಿನಲ್ಲಿ  ಉಳಿದುಕೊಂಡಿರುತ್ತಾರೆ. ಸೃಜನ್ ಎ  ರವರ ತಂದೆ ಶರಾಬು ಕುಡಿಯುವ ಅಭ್ಯಾಸ ಇರುತ್ತದೆ. ದಿನಾಂಕ 25/08/2022 ರಂದು ಸೃಜನ್ ಎ ರವರ ತಂದೆ ಅಸ್ವಸ್ಥಗೊಂಡಿರುವುದಾಗಿ ಬೋಟಿನ ಮಾಲಕರಿಗೆ ರೂಮಿನಲ್ಲಿ ರುವವರು ತಿಳಿಸಿದಂತೆ, ಬೋಟಿನ ಮಾಲಕರು ಸೃಜನ್ ಎ ರವರ ತಂದೆಯನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಬಿಪಿ ಜಾಸ್ತಿ ಆಗಿ ಮೆದುಳಿನಲ್ಲಿ  ರಕ್ತಸ್ರಾವವಾಗಿರುವುದಾಗಿ ತಿಳಿಸಿ ಹೆಚ್ಚಿನ  ಚಿಕಿತ್ಸೆಗೆ  ಮಂಗಳೂರು ವೆನ್ಲಾಕ್  ಅಸ್ಪತ್ರೆಗೆ ಕರೆದುಕೊಂಡು  ಹೋಗಲು ತಿಳಿಸಿದಂತೆ  ಬೋಟಿನ ಮಾಲಕರು  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ದಾಖಲಿಸಿದ್ದು, ಸೃಜನ್ ಎ ರವರ ತಂದೆಯವರು ದಿನಾಂಕ 25/08/2022 ರಂದು ಚಿಕಿತ್ಸೆ ಫಲಕಾರಿಯಾಗದೇ  ಮಧ್ಯಾಹ್ನ 12:50 ಗಂಟೆಗೆ ಮೃತಪಟ್ಟಿರುವುದಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗಿ ಅಥವಾ ಇನ್ಯಾವುದೋ  ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 46/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಮಾಧಕ ವಸ್ತು ಸೇವನೆ ಪ್ರಕರಣ

 • ಮಣಿಪಾಲ: ದಿನಾಂಕ 24/08/2022 ರಂದು ಮಣಿಪಾಲ ಪೊಲೀಸ್ ಠಾಣಾ ಪಿಎಸ್ಐ ರಾಜ ಶೇಖರ ವಂದಲಿ ಇವರು ಠಾಣಾ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್‌, ಹೆಚ್‌ಸಿ 160 ತೋಮ್ಸನ್‌, ಪಿಸಿ 04 ರೇವಣ ಸಿದ್ದ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ 08:30 ಗಂಟೆಗೆ ಶಿವಳ್ಳಿ ಗ್ರಾಮದ ಅನಂತ ನಗರ ಉಡುಪಿ ಗ್ರೂಪ್‌ ಆಫ್‌ ಇನ್ಟಿಟ್ಯೂಶನ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಮುಹಮ್ಮದ್‌ ಶಾಕಿರ್‌ ಸಿ (22) ತಂದೆ: ಉಮರ್‌ಎ.ಕೆ, ವಾಸ: ವೆರೋನಿಕ ಅಪಾರ್ಟ್‌ಮೆಂಟ್‌, ಸರಳಬೆಟ್ಟು, ಮಣಿಪಾಲ. ಖಾಯಂ ವಿಳಾಸ: ಸುಬೈದಾ ಮಂಝಿಲ್‌ಹೌಸ್‌, ವೆಲ್ಲಾಚಲ ಅಂಚೆ, ಕೊಡಕ್ಕಾಡ್‌ಗ್ರಾಮ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. ಎಂದು ತಿಳಿಸಿರುತ್ತಾನೆ, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಹೆಚ್‌ಸಿ 1094 ಇಮ್ರಾನ್‌ ಹಾಗೂ ಹೆಚ್‌ಸಿ 164 ಪ್ರಸನ್ನ ರವರ ಜೊತೆಯಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/08/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2022 ಕಲಂ: 27(ಬಿ) NDPS ರಂತೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 24/08/2022 ರಂದು ಮಣಿಪಾಲ ಪೊಲೀಸ್ ಠಾಣಾ ಪಿಎಸ್ಐ ರಾಜಶೇಖರ ವಂದಲಿ ಇವರು ಠಾಣಾ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್‌, ಹೆಚ್‌ಸಿ 160 ತೋಮ್ಸನ್‌, ಪಿಸಿ 04 ರೇವಣ ಸಿದ್ದ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ 09:30 ಗಂಟೆಗೆ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶೀಂಬ್ರ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಅಶ್ವಲ (20) ತಂದೆ: ಮ್ಯಾಥ್ಯೂ, ವಾಸ: C/O ಪ್ರಶಾಂತ್‌, ಜಯನ್ನ ಮನೆ ಹತ್ತಿರ, ಅನಂತ ನಗರ 2 ನೇ ಹಂತ, ಮಣಿಪಾಲ. ಖಾಯಂ ವಿಳಾಸ: ಚಿರವಾಯಲಿಲ್ ಹೌಸ್,ಾಲಕ್ಕಾಡು ಅಂಚೆ ಮತ್ತು ಗ್ರಾಮ, ತಲಿಪ್ಪುರಂಬು ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ.  ಎಂದು ತಿಳಿಸಿರುತ್ತಾನೆ, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಹೆಚ್‌ಸಿ 1094 ಇಮ್ರಾನ್‌ ಹಾಗೂ ಹೆಚ್‌ಸಿ 164 ಪ್ರಸನ್ನ ರವರ ಜೊತೆಯಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೊಪೀತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/08/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 118/2022 ಕಲಂ: 27(ಬಿ) NDPS ರಂತೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 24/08/2022 ರಂದು ಮಣಿಪಾಲ ಪೊಲೀಸ್ ಠಾಣಾ ಎಎಸ್ಐ ಮನೋಹರ್‌ಎ.ಕೆ. ಇವರು ಠಾಣಾ ಹೆಚ್‌ಸಿ 1094 ಇಮ್ರಾನ್‌ ಹಾಗೂ ಹೆಚ್‌ಸಿ 164 ಪ್ರಸನ್ನ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ 18.00 ಗಂಟೆಗೆ ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ದರ್ಶ್‌ಕುಮಾರ್‌ಜಾವುರ್, (18) ತಂದೆ: ವಿನೋದ್‌ ಕುಮಾರ್‌ಜಾವುರ್, ವಾಸ: ರೂಂ ನಂಬ್ರ 004. ಲೋಯಲ್‌ರೆಸಿಡೆನ್ಸಿ, ಈಶ್ವರ ನಗರ, ಮಣಿಪಾಲ. ಖಾಯಂ ವಿಳಾಸ: ಹೀರನಂದನಿ, ಪೊವಾಯಿ, ಗೋಲ್ಡನ್‌ ಓಕ್‌, B 102, D Mart ಹತ್ತಿರ, ಮುಂಬಯಿ, ಮಹಾರಾಷ್ಟ್ರ ರಾಜ್ಯ.  ಎಂದು ತಿಳಿಸಿರುತ್ತಾನೆ, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಹೆಚ್‌ಸಿ 1094 ಇಮ್ರಾನ್‌ ಹಾಗೂ ಹೆಚ್‌ಸಿ 164 ಪ್ರಸನ್ನ ರವರ ಜೊತೆಯಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 26/08/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2022 ಕಲಂ: 27(ಬಿ) NDPS ರಂತೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-08-2022 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080