ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ:  ದಿನಾಂಕ 26/08/2021 ರಂದು ಫಿರ್ಯಾದಿ ಅಮೃತ ಕುಮಾರ ಶೆಟ್ಟಿ ಪ್ರಾಯ ೪೪ ವರ್ಷ ತಂದೆ: ಸಂಜೀವ ಶೆಟ್ಟಿ ವಾಸ: ಅನಿತಾ ನಿಲಯ ಕೊಪ್ಪರಗುಂಡಿ ಬೇಳಂಜೆ ಗ್ರಾಮ ಇವರು ಅವರು ಸ್ನೇಹಿತ ಬೋಜ ಶೆಟ್ಟಿ ರವರೊಂದಿಗೆ ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಬೇಳಂಜೆ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿರುವಾಗ ಅವರ ಮುಂದುಗಡೆ KA 20 ES 8244ನೇ ಹೊಂಡಾ ಡಿಯೋ  ಮೋಟಾರ್ ಸೈಕಲ್ ನ್ನು  ಚಿತ್ತರಂಜನ್ ಶೆಟ್ಟಿ ರವರು ಚಲಾಯಿಸಿಕೊಂಡು ಹೋಗುತ್ತಿರುವಾಗ ಅವರು ಸಂಜೆ ಸಮಯ ಸುಮಾರು 06:45 ಗಂಟೆಗೆ ಚಾರ ಗ್ರಾಮದ ಚಾರ ನವೋದಯ ಸೇತುವೆಯ ಸಮೀಪ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಬೇಳಂಜೆ ಕಡೆಗೆ KA 20 D 3552 ನೆ ಪಿಕಪ್ ವಾಹನವನ್ನು ಅದರ ಚಾಲಕ ಗಣೇಶ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದುದರಿಂದ ಚಿತ್ತ ರಂಜನ ಶೆಟ್ಟಿ ರವರು ರಸ್ತೆಗೆ ಬಿದ್ದು ಪಿಕಪ್ ವಾಹನದ ಮುಂದುಗಡೆ ಸಿಲುಕಿಕೊಂಡಿದ್ದ ಪರಿಣಾಮ ಆತನ ಬಲಭಾಗದ ಸೊಂಟದ ಹಿಂಬದಿಯಲ್ಲಿ ಅಳವಾದ ತೀವ್ರ ಸ್ವರೂಪದ ಗಾಯವಾಗಿ ರಕ್ತ ಬಂದಿರುತ್ತದೆ ಎಡಹಣೆಯ ಬಳಿ ಮತ್ತು ಮೂಗಿನ ಬಳಿ ತೀವ್ರ ಸ್ವರೂಪದ ಗಾಯವಾಗಿ ಮೃತಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 53/2021 US 279,304(A) IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ : ಪಿರ್ಯಾದಿ ಚಂದ್ರಶೇಖರ ಪಲ್ಲೇದ(49) ತಂದೆ: ಚೆನ್ನಬಸಪ್ಪ ಪಲ್ಲೇದ ವಾಸ: 901 ದಂಡಪುರ ಓಣಿ ನರಗುಂದ ಗದಗ ಜಿಲ್ಲೆ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ದಿನಾಂಕ 25/08/2021 ರಂದು ಪಿರ್ಯಾದಿದಾರರು ಉಡುಪಿಯ ಪುತ್ತೂರು ಗ್ರಾಮದ ನಿಟ್ಟೂರಿನ ಕೆಎಸ್ ಆರ್ ಟಿ ಸಿ ಬಸ್ಸಿನ  ಡಿಪೋದ ಎದುರಿನ  ಸಂತೆಕಟ್ಟೆ ಕಡೆಯಿಂದ ಕರಾವಳಿ ಕಡೆಗೆ ವಾಹನಗಳು ಹೋಗುವ ರಾ.ಹೆ-66 ರ ರಸ್ತೆಯ ಬದಿಯಲ್ಲಿ ತಮ್ಮ ಡಿಪೋದ ಬಸ್ಸಿಗಾಗಿ ಕಾಯುತ್ತಿರುವಾಗ ಸಮಯ ಸುಮಾರು ರಾತ್ರಿ 9-10 ಗಂಟೆಯ ಸಮಯಕ್ಕೆ KA 20 EP 8604 ನೇ ಸ್ಕೂಟರ್ ಸವಾರ ಅರುಣಕುಮಾರ್ ಬಾಡಿ ಎಂಬಾತ ತನ್ನ ಸ್ಕೂಟರ್ ನ್ನು ಸಂತೆಕಟ್ಟೆ ಕಡೆಯಿಂದ ಕರಾವಳಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ತೀರಾ  ಎಡಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಗೆ ಮತ್ತು ಕಣ್ಣಿಗೆ ಗುದ್ದಿದ ಗಾಯವಾಗಿದ್ದು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ  52/2021 ಕಲಂ  279, 337 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣ

 • ಬೈಂದೂರು: ಫಿರ್ಯಾದಿ ಪರಮೇಶ್ವರ ಆಚಾರಿ ಪ್ರಾಯ 61 ವರ್ಷ, ತಂದೆ; ಚೆನ್ನಯ್ಯ ಆಚಾರಿ, ವಾಸ; ಶ್ರೀ ಮಂಜುನಾಥೇಶ್ವರ ನಿಲಯ, ಮಡ್ಲಗೇರಿ, ಹೇರೂರು ಗ್ರಾಮ, ಇವರ ಅಣ್ಣನ ಬಾಬ್ತು ಜಾಗದ ಸರ್ವೇ ನಂಬ್ರ 257/4 ರಲ್ಲಿ ಟ್ರಾನ್ಸ್ ಫಾರಂ ಕಂಬಗಳನ್ನು ಹಾಕಲು ಕೆ ಇ ಬಿ ಗುತ್ತಿಗೆದಾರರು ಬಂದಿದ್ದು  ಆ ಸಮಯ ಫಿರ್ಯಾದಿದಾರರು ಹಾಗೂ ಅವರ ಅಣ್ಣ ಮಹಾಬಲ ಆಚಾರಿಯವರು ಅಲ್ಲೇ ನಿಂತುಕೊಂಡಿದ್ದು ಸಮಯ ಸುಮಾರು 05:30 ಗಂಟೆಗೆ ಆಪಾದಿತರಾದ ನಾರಾಯಣ ಆಚಾರಿ ಮತ್ತು ಗುರುರಾಜ ಆಚಾರಿ ರವರು ಫಿರ್ಯಾದಿದಾರರ ಅಣ್ಣನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಆಪಾದಿತ ನಾರಾಯಣ ಆಚಾರಿಯು ಈ ಜಾಗದಲ್ಲಿ ವಿದ್ಯುತ್ ಕಂಬ ಹಾಕಲು ಗುಂಡಿ ತೆಗೆಯಬೇಡಿ ಎಂದು ಫಿರ್ಯಾದಿದಾರರ ಅಣ್ಣನಿಗೆ ಹೇಳಿದಾಗ ಫಿರ್ಯಾದಿದಾರರ ಅಣ್ಣನು ಗುಂಡಿ ತೆಗೆದರೆ ಯಾವುದೇ ತೊಂದರೆ ಆಗುವುದಿಲ್ಲವೆಂದು ಹೇಳಿದಾಗ ಆಪಾದಿತ ನಾರಾಯಣ ಆಚಾರಿಯು ತಾನು ತಂದಿದ್ದ ಕತ್ತಿಯಿಂದ ಫಿರ್ಯಾದಿದಾರರ ಅಣ್ಣನಿಗೆ ಹೊಡೆದ ಪರಿಣಾಮ ಫಿರ್ಯಾದಿದಾರರ ಅಣ್ಣನಿಗೆ ಭುಜಕ್ಕೆ ಕತ್ತಿ ತಾಗಿದ್ದು, ಫಿರ್ಯಾದಿದಾರರ ಅಣ್ಣನು ಕತ್ತಿಯನ್ನು ಹಿಡಿದುಕೊಂಡು ಹೊಡೆಯದಂತೆ ತಡೆದರು. ನಂತರ ಆಪಾದಿತ ಗುರುರಾಜ ಆಚಾರಿಯು ಫಿರ್ಯಾದಿದಾರರ ಆಣ್ಣನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಕೆಲಸ ಮಾಡುತ್ತಿದ್ದ ಕೆ ಇ ಬಿ ಗುತ್ತಿಗೆದಾರರ ಹಾರೆಯಿಂದ ಫಿರ್ಯಾದಿದಾರರ ಅಣ್ಣನ ತಲೆಗೆ ಹೊಡೆದು, ಕುತ್ತಿಗೆಗೆ ಕೈ ಹಾಕಿ ಎಳೆದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ತುಂಡಾಗಿ ಬಿದ್ದು ಹೋಗಿದ್ದು ಆಗ ಫಿರ್ಯಾದಿದಾರರು ಜೋರಾಗಿ ಕೂಗಿಕೊಂಡಾಗ ಫಿರ್ಯಾದಿದಾರರ ಅಣ್ಣನ ಹೆಂಡತಿ ಹಾಗೂ ಮಕ್ಕಳು ಬರುವುದನ್ನು ಆಪಾದಿತರು ನೋಡಿ ಇಲ್ಲಿ ಕಂಬ ಹುಗಿದರೆ ನಿಮ್ಮನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದು ಫಿರ್ಯಾದಿದಾರರ ಅಣ್ಣನಿಗೆ ಕೆನ್ನೆಯ ಬಳಿ ಮತ್ತು ಕಿವಿಗೆ ತೀವ್ರತರಹದ ರಕ್ತಗಾಯ ಹಾಗೂ ಕೈಗೆ ಸಣ್ಣಪುಟ್ಟ ಗಾಯವಾಗಿ ಭುಜಕ್ಕೆ ಗುದ್ದಿದ ನೋವುಂಟಾಗಿದ್ದು ಗಾಯಗೊಂಡ ಫಿರ್ಯಾದಿದಾರರ ಅಣ್ಣನನ್ನು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಎತ್ತಿ ಉಪಚರಿಸಿದ್ದು ನಂತರ ಫಿರ್ಯಾದಿದಾರರ ಅಣ್ಣನನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 140/2021 ಕಲಂ: 447.324. 327. 504. 506 ಜೊತೆಗೆ 34 ಐಪಿಸಿ . ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ದಿನಾಂಕ 26/08/2021 ರಂದು ಫಿರ್ಯಾದಿ ಮಹಾಬಲ ಪೊಲೀಸ್ ಸಹಾಯಕ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ  ಇವರಿಗೆ ಠಾಣಾ ಗುಪ್ತಮಾಹಿತಿ ಪಿಸಿ 2631 ನೇ ಅಶೋಕ ರಾಠೋಡ್ ರವರು ಕರೆಮಾಡಿ ಶಿರೂರಿನ ಮಾರ್ಕೇಟ್ ನ್ಯೂ-ಕಾಲೋನಿಯಲ್ಲಿ ಒಂದು ಮನೆಯ ಆವರಣದಲ್ಲಿ  ಸುಮಾರು 50-60 ಜನರನ್ನು ಸೇರಿಸಿಕೊಂಡು ರಾಜಕೀಯ ಕಾರ್ಯಕ್ರಮ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದು  ಫಿರ್ಯಾದಿದಾರರು ಹೊಯ್ಸಳ ಇಲಾಖಾ ಜೀಪು ನಂಬ್ರ KA20G236 ನೇದರಲ್ಲಿ ಠಾಣಾ ಸಿಬ್ಬಂದಿಳೊಂದಿಗೆ ಹೊರಟು ಸಂಜೆ 18:30 ಗಂಟೆಗೆ  ಶಿರೂರು ಮಾರ್ಕೇಟ್ ನ್ಯೂ ಕಾಲೋನಿ ತಲುಪಿದಾಗ ಅಲ್ಲಿ ಒಂದು ಮನೆಯ ಆವರಣದಲ್ಲಿ ಸುಮಾರು 50 ರಿಂದ 60 ಜನ ಹೆಂಗಸರು, ಗಂಡಸರು ಸೇರಿಕೊಂಡು ಕೋವಿಡ್-19, 3 ನೇ ರೂಪಾಂತರಿ ಅಲೆ ಬರುವ ಸಾದ್ಯತೆ ಇರುವ ಬಗ್ಗೆ  ಮಾನ್ಯ ಸರ್ಕಾರವು ನೀಡಿದ ಆದೇಶ ಮತ್ತು ಮಾನ್ಯ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು ಉಡುಪಿ ಜಿಲ್ಲೆ ಇವರ ಆದೇಶದಂತೆ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಅರಿತು, ಎಲ್ಲಾ ಸಾಮಾಜೀಕ, ರಾಜಕೀಯ, ದಾರ್ಮಿಕ, ಇತರೆ ಸಭೆಗಳು ಹಾಗೂ ಸಮಾರಂಭಗಳು ಮತ್ತು ಸಾರ್ವಜನಿಕರು ಒಟ್ಟುಗೂಡುವುದನ್ನು ನಿಷೇದಿಸಿ ಆದೇಶ ಹೊರಡಿಸಿದ್ದರೂ  ವೇದಿಕೆ ನಿರ್ಮಿಸಿಕೊಂಡು ಯಾವುದೇ ಸರಿಯಾಗಿ ಮಾಸ್ಕ ಗಳನ್ನು ಧರಿಸದೇ ಸಾಮಾಜಿಕ ಅಂತರವನ್ನು ಕಾಪಾಡದೇ  ವೇದಿಕೆ ನಿರ್ಮಿಸಿಕೊಂಡು “ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಗ್ರಾಮ ಪಂಚಾಯತ್ ಸಮಿತಿ ಶಿರೂರು, ನೂತನ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ  ಎಂದು ಬರೆದಿರುವ ಬ್ಯಾನರನ್ನು ಸಿಟೌಟಿನ ಗೋಡೆಗೆ ಅಳವಡಿಸಿ ಕಾರ್ಯಕ್ರಮ ನಡೆಸುತ್ತಿದ್ದು ಇದರಲ್ಲಿ ಸುಮಾರು 50-60  ಜನರು ಸೇರಿದ್ದು ಇವರು ಸಾಂಕ್ರಾಮಿಕ ರೋಗ ಹರಡುವ ರೀತಿಯಲ್ಲಿ ಇದ್ದು ಮಾನ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಉಲ್ಲಘಿಸಿರುವುದನ್ನು ಕಂಡು  ಅಲ್ಲಿ  ಸೇರಿದವರಲ್ಲಿ, ಯಾರು  ಆಯೋಜಕರು ಎಂದು ಕೇಳಿದಾಗ  ಶಿರೂರಿನ ಮಾರ್ಕೆಟನ ನ್ಯೂ ಕಾಲೋನಿಯ ಶೋಯಬ್ ರವರು ಸದ್ರಿ ಕಾರ್ಯಕ್ರಮದ ಆಯೋಜಕರು ಎಂದು ತಿಳಿಸಿದಂತೆ  ಶೋಯಬ್ ರವರನ್ನು ವಿಚಾರಸಿದಾಗ ಶಿರೂರು ಗ್ರಾಮ ಪಂಚಾಯತನ ಎಸ್ ಡಿ ಪಿ ಯಾ ನೂತನ ಕಾರ್ಯಕರ್ತರ ಪಕ್ಷ ಸೇರಿವಿಕೆ ಕಾರ್ಯಕ್ರಮವನ್ನು ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ ಅಲ್ಲಿ ವೇದಿಯಲ್ಲಿದ್ದವರ ಹೆಸರು ವಿಳಾಸ ವಿಚಾರಿಸಲಾಗಿ 1) ಎಸ್ ಡಿ ಪಿ ಐ ಅದ್ಯಕ್ಷ ಶಿರೂರು  ಘಟಕದ ಶೋಯಬ್ ಅರೆಹೊಳೆ  2) ಪಿ ಎಫ್ ಐ ಶಿರೂರು ಘಟಕದ ಅದ್ಯಕ್ಷ ಅನ್ವರ್ ಹಸನ್ 3) ಮಹ್ಮದ್ ಶಾಕಿರ್ ಎಸ್ ಡಿ ಪಿ ಐ ಕಾರ್ಯಕರ್ತ  ,4) ಮಾಮ್ದು ಜಫ್ರಿ ಎಸ್ ಡಿ ಪಿ ಐ ಕಾರ್ಯಕರ್ತ  5) ಅಬ್ದುಲ್ ವಾಹಿದ್ , 6) ಆದಂ ಅಕ್ಬರ್ ,ಹಾಗೂ ಇತರರು ಎಂದು ತೀಳಿಸಿರುತ್ತಾರೆ, ಆ ಸಮಯದಲ್ಲಿ ಶೋಯಭರವರ ಮನೆಯ ಹೊರಗಡೆ ಛಾಯಚಿತ್ರ (ಪೊಟೋ) ತೆಗೆಯುವಾಗ ಅಲ್ಲಿ ಸೇರಿದವರೆಲ್ಲ ಹೋಗಿರುತ್ತಾರೆ. ನಂತರ ಫಿರ್ಯಾದಿದಾರರು ಈ ಬಗ್ಗೆ ವಿಚಾರವನ್ನು ಮಾನ್ಯ ತಹಶಿಲ್ದಾರರು ಬೈಂದೂರು ರವರಿಗೆ  ಕರೆಮಾಡಿ ತಿಳಿಸಿದ ಮೇರೆಗೆ ಶಿರೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸತೀಶ ಹೋಬಳಿದಾರ  ಮತ್ತು ಬೈಂದೂರು ಕಂದಾಯ ನಿರೀಕ್ಷಕರಾದ ಮಂಜುನಾಥ ರವರುನ್ನು ಕಳುಹಿಸಿಕೊಟ್ಟಿರುತ್ತಾರೆ,  ಅವರುಗಳ ಸಮಕ್ಷಮ ಪರಿಶೀಲಿಸಿದಲ್ಲಿ ಸದ್ರಿ ಮೇದಿಕೆಯಲ್ಲಿ“ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಗ್ರಾಮ ಪಂಚಾಯತ್ ಸಮಿತಿ ಶಿರೂರು ನೂತನ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ  ಎಂದು ಬರೆದಿರುವ ಬ್ಯಾನರ್ ಇದ್ದು ಇದರ ಕೇಳಭಾಗದಲ್ಲಿ ಕುರ್ಚಿಗಳನ್ನು ಅಳವಡಿಸಿದ್ದು ಯಾವುದೇ  ಕಾರ್ಯಕ್ರಮದ ಪರವಾನಗೆಯನ್ನು ಪಡೆಯದೇ ಸರ್ಕಾರ ಹಾಗೂ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಗಿಸಿ ಕೋವಿಡ್ 19  ಸಾಂಕ್ರಾಮಿಕ ರೋಗ ಹರಡುವ ರೀತಿಯಲ್ಲಿ ವರ್ತಿಸಿದ್ದರಿಂದ  ಪಂಚಾಯತುದಾರರ ಸಮಕ್ಷಮ ಸ್ಥಳದಲ್ಲೆ ಮಹಜರು ಕ್ರಮ  ಜರುಗಿಸಿ ಅಲ್ಲಿದ್ದ ಬ್ಯಾನರ್  ಹಾಗೂ 4 ಪ್ಲಾಸ್ಟೀಕ್ ಕುರ್ಚಿಯನ್ನು ಮುಂದಿನ ನಡವಳಿಕೆಯ  ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 141/2021 ಕಲಂ 269 ಐಪಿಸಿ, ಕಲಂ  5 (1), (4) THE KARNATAKA EPIDEMIC DISEASES ACT 2020 ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

 • ಪಿರ್ಯಾದಿ ಸುಸ್ಮೀತಾ ಶೆಟ್ಟಿ(35) ತಮದೆ: ಪ್ರಭಾಕರ ಶೆಟ್ಟಿ ವಾಸ: 204, ಸಂಕೈಗುಡ್ಡೆ, ಬಿಜೈ, ಮಂಗಳೂರು ಇವರು ತನ್ನ ತಾಯಿ ಹಾಗೂ ಮಗಳೊಂದಿಗೆ ಮಂಗಳೂರಿನ ಬಿಜೈನಲ್ಲಿ  ವಾಸವಾಗಿದ್ದು, ತಂದೆ ಪ್ರಭಾಕರ ಶೆಟ್ಟಿ (72) ರವರು ನಿವೃತ್ತ ಶಿಕ್ಷಕರಾಗಿದ್ದು, ಪೆರ್ಡೂರಿನ ವಿಳಾಸದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು, ಒಬ್ಬರೇ  ಇರುವುದಾಗಿದೆ.  ಪಿರ್ಯಾದಿದಾರರು ಹಾಗೂ ಅವರ ತಾಯಿ ಆಗಾಗ ತಂದೆ ಮನೆಗೆ ಬಂದು ಹೋಗುತ್ತಿದ್ದರು.  ಪಿರ್ಯಾದಿದಾರರ ತಂದೆಯವರು ದಿನಾಂಕ:24/08/2021ರ ಮಧ್ಗಾಹ್ನ 2:20 ಗಂಟೆಗೆ ತಾಯಿಯವರಲ್ಲಿ ಮಾತನಾಡಿರುವುದಾಗಿದೆ.  ದಿನಾಂಕ; 26/08/2021 ರಂದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ತಂದೆಯ ಅಣ್ಣನ ಮಗಳಾದ ಅನಿತಾಳು  ಪಿರ್ಯಾದಿದಾರರಿಗೆ ಪೋನ್ ಮಾಡಿ ಚಿಕ್ಕಪ್ಪನಾದ ಪ್ರಭಾಕರ ಶೆಟ್ಟಿ ರವರ ಮೃತ ದೇಹ ಮನೆಯ ಬಾವಿಯಲ್ಲಿ ತೇಲುತ್ತಿರುವುದಾಗಿ ಕೆಲಸಕ್ಕೆ ಬಂದ ಬಾಲಕೃಷ್ಣ ರವರು ನೋಡಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಬಿಜೈಗೆ ಹೋಗಿ ತನ್ನ ಅಮ್ಮನನ್ನು ಕರೆದುಕೊಂಡು ಪೆರ್ಡೂರಿನ ಅಲಂಗಾರಿನ ಮನೆಗೆ ಬಂದು  ತೋಟದ ಬಾವಿಯಲ್ಲಿ  ಕವುಚಿ ಬಿದ್ದು, ತೇಲುವ ಸ್ಥಿತಿಯಲ್ಲಿದ್ದ ತನ್ನ ತಂದೆಯ ಮೃತ ಶರೀರವನ್ನು ನೋಡಿರುತ್ತಾರೆ. ಸದ್ರಿ ಬಾವಿಗೆ ಆವರಣ ಇಲ್ಲದೆ ಇದ್ದು, ಬಾವಿಯ ಮೇಲ್ಭಾಗದಲ್ಲಿ ನೀರು ಸೇದಲು ಅಡ್ಡಲಾಗಿ ಹಾಕಿದ್ದ ಮರದ ದಂಡಿಗೆ ಜ್ಯಾರಿದ್ದು,  ಹಾಗೂ ಪಂಪಿಗೆ ಕಟ್ಟಿದ ವೈಯರ್ ತುಂಡಾಗಿರುವುದು ಮತ್ತು ಬಾವಿಯ ಮೇಲ್ಭಾಗದಲ್ಲಿ 2 ತುಂಡು ಪೈಪು ಬಿದ್ದಿರುವುದು ಕಂಡು ಬಂದಿದ್ದು, ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಮನೆಯ ಒಳಗಿನ ಗೋಡ್ರೇಜ್ ನ ಬಾಗಿಲು ತೆರೆದಿರುತ್ತದೆ.   ಪಿರ್ಯಾದಿದಾರರ ತಂದೆಯವರು  ದಿನಾಂಕ: 24/08/2021 ರ ಮಧ್ಯಾಹ್ನ 2:20 ಗಂಟೆಯಿಂದ ಈ ದಿನ ದಿನಾಂಕ: 26/08/2021 ರ ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ತೋಟದ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪ್ ರಿಪೇರಿ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜ್ಯಾರಿ ಬಾವಿಗೆ ಬಿದ್ದು ಬಾವಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದ್ದು, ಆದರೆ ಮನೆಯ ಬಾಗಿಲು ತೆರೆದಿದ್ದು, ಮತ್ತು ಗೋಡ್ರೇಜ್ ನ ಬಾಗಿಲು ತೆರೆದಿರುವುದರಿಂದ ತಂದೆಯವರ ಮರಣದಲ್ಲಿ ಸಂಶಯವಿದ್ದು, ಈ ಬಗ್ಗೆ ಕೂಲಂಕುಶ ತನಿಖೆ ನಡೆಸುವಂತೆ ಕೋರಿದ್ದಾರೆ. ಈ ಬಗ್ಗೆ ಹಿರಿಯಡ್ಕಪೊಲೀಸ್‌ ಠಾಣಾ  ಯುಡಿಆರ್ ನಂಬ್ರ:19/2021 ಕಲಂ: 174 (3) (iv) ಸಿಆರ್ ಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 27-08-2021 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080