ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಫಿರ್ಯಾದಿದಾರರಾದ ಚನ್ನಕೇಶವ ಗೌಡ ರವರು ದಿನಾಂಕ: 25.08.2021 ರಂದು ಅವರ ಬಾಬ್ತು ಕಾರಿನಲ್ಲಿ ಕೆಲಸದ ಬಗ್ಗೆ ಮನೆಯಿಂದ ಕುಂದಾಪುರಕ್ಕೆ ಹೊರಟು ಅವರ ಸ್ನೇಹಿತ ಪ್ರಕಾಶ್ ಶೆಟ್ಟಿ ಯವರನ್ನು ಕರೆದುಕೊಂಡು ಹೋಗಲು ಅವರಿಗೆ ಉಪ್ಪೂರು ಜಾತಬೆಟ್ಟು ಬಳಿ ಬಂದು ನಿಲ್ಲುವಂತೆ ಹೇಳಿದ್ದು ಅದರಂತೆ ಪಿರ್ಯಾದಿದಾರರು ಕಾರನ್ನು ರಾಹೆ 66 ರಲ್ಲಿ ಚಲಾಯಿಸಿಕೊಂಡು ಉಪ್ಪೂರು ಗ್ರಾಮದ, ಜಾತಬೆಟ್ಟು ಬಸ್ಸ್ ನಿಲ್ದಾಣದ ಬಳಿ ಬಂದಾಗ ಪ್ರಕಾಶ್ ಶೆಟ್ಟಿಯವರು ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತು ಕೊಂಡು ಪಿರ್ಯಾದಿದಾರರು ಬರುವುದನ್ನು ಕಾಯುತ್ತಿದ್ದು, ಆಗ ಪಿರ್ಯಾದಿದಾರರು ಹಾರ್ನು ಹಾಕಿ ಪ್ರಕಾಶ್ ಶೆಟ್ಟಿಯವರನ್ನು ಕಾರಿನ ಬಳಿ ಬರುವಂತೆ ಹೇಳಿದಾಗ ಪ್ರಕಾಶ್ ಶೆಟ್ಟಿ ಯವರು ಒಂದು ರಸ್ತೆಯನ್ನು ದಾಟಿ ರಸ್ತೆಯ ಡಿವೈಡರ್ ಮಧ್ಯೆ ಬಂದು ನಿಂತು ಕಾರಿನ ಬಳಿ ಬರಲು ರಸ್ತೆಯನ್ನುದಾಟುತ್ತಿರುವಾಗ  ಬೆಳಿಗ್ಗೆ 10:45 ಗಂಟೆಗೆ  ಆರೋಪಿ ರವೀಂದ್ರ ಎಂಬವರು ತನ್ನ ಬಾಬ್ತು KA.20.U.9810 ನೇ ಬಜಾಜ್ ಪ್ಲಾಟಿನಂ ಮೋಟಾರ್‌ಸೈಕಲ್‌ನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ರಾಹೆ 66 ರಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪ್ರಕಾಶ್ ಶೆಟ್ಟಿ ಯವರಿಗೆ ಡಿಕ್ಕಿ ಹೊಡೆದನು. ಈ ಅಪಘಾತದ ಪರಿಣಾಮ ಪ್ರಕಾಶ್ ಶೆಟ್ಟಿ ಹಾಗೂ ಆರೋಪಿ ರಸ್ತೆಗೆ ಬಿದ್ದು, ಪ್ರಕಾಶ್ ಶೆಟ್ಟಿ ಅವರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತ ಹಾಗೂ ಎಡಕೈ ಮತ್ತು ಎಡ ಭುಜದ ಬಳಿ ಒಳ ಜಖಂ ಆಗಿರುತ್ತದೆ. ಆರೋಪಿಗೂ ಸಹ ರಕ್ತ ಗಾಯವಾಗಿರುತ್ತದೆ. ಗಾಯಾಳು ಪ್ರಕಾಶ್ ಶೆಟ್ಟಿಯವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ  279, 338    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ:ಪಿರ್ಯಾದಿ ಗಣೇಶ್‌‌‌‌‌‌‌ ಶೆಟ್ಟಿ  ಇವರ ಚಿಕ್ಕಪ್ಪ  ಮೃತ  ಸದಾಶಿವ  ಶೆಟ್ಟಿ ರವರು  ಹಾರ್ದಳ್ಳಿ -  ಮಂಡಳ್ಳಿ  ಗ್ರಾಮದ  ಬಿದ್ಕಲ್‌‌ಕಟ್ಟೆ  ಕೊಂಗೇರಿ  ಎಂಬಲ್ಲಿ  ಅವರ  ಮನೆಯಲ್ಲಿ  ವಾಸವಾಗಿರುತ್ತಾರೆ.  ಅವರು  ವಿಪರೀತ  ಶರಾಬು  ಕುಡಿಯುವ  ಹವ್ಯಾಸ  ಹೊಂದಿದ್ದು, ಶರಾಬು ಕುಡಿದು  ಕೆಲವೊಮ್ಮೆ ಅವರು  ಮನೆಯಲ್ಲಿ  ಹಾಗೂ  ಬಿದ್ಕಲ್‌‌‌ಕಟ್ಟೆ  ಜಂಕ್ಷನ್‌‌‌‌‌ ನಲ್ಲಿರುವ  ಶ್ರೀರಾಮ ದೇವಸ್ಥಾನದಲ್ಲಿ  ಮಲಗುತ್ತಾರೆ. ಮೃತ ಸದಾಶಿವ  ಶೆಟ್ಟಿರವರು  ಸರಿಯಾಗಿ  ಆಹಾರ  ತೆಗೆದುಕೊಳ್ಳದೆ ವಿಪರೀತ  ಶರಾಬು  ಕುಡಿಯುವ  ಹವ್ಯಾಸ  ಹೊಂದಿದ್ದು,  ಅವರು ನಿನ್ನೆ  ದಿನ  ಸಂಜೆಯಿಂದ  ಈ  ದಿನ  ದಿನಾಂಕ  27/08/2021  ರಂದು ಬೆಳಿಗ್ಗೆ 07:30  ಗಂಟೆಯ ಮಧ್ಯಾವಧಿಯಲ್ಲಿ  ಅವರ ಆರೋಗ್ಯದಲ್ಲಿ  ಸಮಸ್ಯೆಯಾಗಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಕಾಪು: ಮೃತ ಮೊದಂ ಬೋರೊ ಪ್ರಾಯ : 50 ವರ್ಷ  ತಂದೆ : ದೆಬರ್ ಬೋರೊ ರವರು ಉದ್ಯಾವರ ಯಶಸ್ವಿನಿ ಫೀಶ್‌ಮಿಲ್‌ ನಲ್ಲಿ ದಿನಾಂಕ 26.08.2021 ರಂದು ರಾತ್ರಿ10.00 ಗಂಟೆಯಿಂದ ದಿನಾಂಕ 27.08.2021ರಂದು  ಬೆಳಗ್ಗೆ 06.00 ಗಂಟೆಯವರೆಗೆ  ಸೆಕ್ಯುರಿಟಿ  ಗಾರ್ಡ ಕೆಲಸ ನಿರ್ವಹಿಸಿ ವಿಶ್ರಾಂತಿ ಬಗ್ಗೆ ಫೀಶ್‌ಮಿಲ್ ನ ಹಾಸ್ಟೇಲ್‌ ಗೆ ಹೋಗಿದ್ದು ಬೆಳಗ್ಗೆ 06.45 ಗಂಟೆಯ ಸಮಯಕ್ಕೆ  ಪಿರ್ಯಾದಿ ಪ್ರಜ್ವಲ್ ಇವರಿಗೆ  ರಮೇಶ ಎಂಬವರು ಫೋನ್ ಮಾಡಿ ಮೊದಂ ಬೋರೊ ಎಂಬವರು  ಹಾಸ್ಟೇಲ್‌ನಲ್ಲಿ  ಮುಖ ತೊಳೆಯುವಾಗ ಬಿದ್ದಿದ್ದು ಅವರು ಮಾತನಾಡುವ ಸ್ಥೀತಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದಂತೆ ಪಿರ್ಯಾದಿದಾರರು ಹಾಸ್ಟೇಲ್  ಗೆ   ಹೋಗಿ  ಅವರನ್ನು ಉಪಚರಿಸಿ ನೋಡುವಾಗ  ಅವರು ಮಾತನಾಡದ  ಸ್ಥಿತಿಯಲ್ಲಿದ್ದು  ಪಿರ್ಯಾದಿದಾರರು  ಒಂದು   ವಾಹನದಲ್ಲಿ  ಉಡುಪಿ ಹೈಟೆಕ್  ಆಸ್ಪತ್ರೆಗೆ  ನಂತರ ಉಡುಪಿ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು  ಬಂದಲ್ಲಿ  ಅಲ್ಲಿನ  ವೈದ್ಯರು  ದಿನಾಂಕ 27.08.2021  ರಂದು  ಬೆಳಗ್ಗೆ  07.45 ಗಂಟೆಗೆ  ಮೋದಂ  ಬೋರೊ  ಈಗಾಗಲೇ  ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಕುಂದಾಪುರ: ಪಿರ್ಯಾದಿ ಸತೀಶ ಶೆಟ್ಟಿ ಇವರ ತಾಯಿ  ಪಾರ್ವತಿ ಶೆಡ್ತಿ ಪ್ರಾಯ:68 ವರ್ಷ ರವರು ಸುಮಾರು ಒಂದು ವರ್ಷದಿಂದ ಕಾಲು ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ದಿನಾಂಕ 26-08-2021 ರಂದು 18:50 ಗಂಟೆಗೆ ಚಿಕಿತ್ಸೆಯ ಬಗ್ಗೆ  ಕೋಟೇಶ್ವರದ ಎನ್‌.ಆರ್‌.ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ರೋಗ ಉಲ್ಬಣಗೊಂಡ ಪರಿಣಾಮ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಕರೆದುಕೊಂಡು ಹೋದಲ್ಲಿ 22:10 ಕ್ಕೆ ಪರೀಕ್ಷಿಸಿದ  ಕೆ.ಎಂ.ಸಿ ಆಸ್ಪತ್ರೆಯ ವೈಧ್ಯರು ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

    ಕಳವು ಪ್ರಕರಣ

  • ಪಡುಬಿದ್ರಿ: ಉಡುಪಿ ಜಿಲ್ಲೆ ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜರಕಟ್ಟೆಯ ಗುರುಕೃಪಾ ಕಟ್ಟಡದ ನೆಲ ಮಾಳಿಗೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ದಿನಾಂಕ: 26.08.2021 ರ ರಾತ್ರಿ 21:30   ಗಂಟೆಯಿಂದ ದಿನಾಂಕ : 27.08.2021 ರ ಬೆಳಿಗ್ಗೆ  08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಎಟಿಎಂ ಕೇಂದ್ರದ ಎದುರಿನ ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಎಟಿಎಂ ಮೆಷಿನನ್ನು ಒಡೆದು ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿ, ಎಟಿಎಂ ಮೆಷಿನ್ ಕೇಂದ್ರಕ್ಕೆ ಅಳವಡಿಸಿದ್ದ ಸಿಸಿ ಕೆಮರಾಗಳನ್ನು ಒಡೆದು ಹಾಳು ಮಾಡಿದ್ದು, ನಂತರ ಅಲ್ಲಿಯೇ ಇದ್ದ ಸುಮಾರು 14,000/- ರೂಪಾಯಿ ಮೌಲ್ಯದ ಡಿವಿಆರ್‌‌ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2021 ಕಲಂ:  457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-08-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080