ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 25/07/2022 ರಂದು ಪಿರ್ಯಾದಿದಾರರಾದ ಶ್ರೀನಿವಾಸ (52), ತಂದೆ: ಕೃಷ್ಣ ಖಾರ್ವಿ, ವಾಸ: ಗೀತಾ ನಿಲಯ ಕೋಡಿ ಕನ್ಯಾನ  ಗ್ರಾಮ ಬ್ರಹ್ಮಾವರ ತಾಲೂಕು  ಮತ್ತು ಅವರ ಅಣ್ಣ  ಮಂಗಳ  ಖಾರ್ವಿ (73) ರವರು ಕೆಲಸದ ನಿಮಿತ್ತ ಸಾಸ್ತಾನ  ಕಾರ್ಪೋರೇಶನ್ ಬ್ಯಾಂಕ್ ಬಳಿ ಬಂದಿದ್ದು  ಬೆಳಿಗ್ಗೆ 11:30 ಗಂಟೆಗೆ ಅಣ್ಣ ಮಂಗಳ ಖಾರ್ವಿರವರು  ಅಲ್ಲಿಂದ ಬೇರೆ ಕೆಲಸದ ನಿಮಿತ್ತ  ಅವರ KA-20-EA-9685 ನೇ ಟಿವಿಎಸ್  ವಿಗೋ ಸ್ಕೂಟಿಯಲ್ಲಿ  ಸಾಸ್ತಾನ ಪೇಟೆಗೆಂದು  ಹೊರಟು ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ ಉಡುಪಿ ಮುಖ್ಯ ರಸ್ತೆಗೆ ಹೋಗಿ  ಕ್ರಮದಂತೆ ರಸ್ತೆಯ ಎಡಭಾಗದಲ್ಲಿ  ಹೋಗುತ್ತಿರುವಾಗ  ಹಿಂದಿನಿಂದ ಕುಂದಾಪುರ ಕಡೆಯಿಂದ ಬಂದ KA-20-MA-6579 ನೇ ಹುಂಡೈ  ಕಾರು ಚಾಲಕ  ಕೌಶಿಕ್ ಶೆಟ್ಟಿ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಎಡ ಬದಿಗೆ ಚಲಾಯಿಸಿ  ಸ್ಕೂಟಿಗೆ ಢಿಕ್ಕಿ  ಹೊಡೆದ ಪರಿಣಾಮ ಸ್ಕೂಟಿ ಸವಾರ ಮಂಗಳ ಖಾರ್ವಿ  ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ  ತಲೆಯ ಬಲ ಭಾಗಕ್ಕೆ  ಹಾಗೂ ಎರಡೂ ಕಾಲುಗಳಿಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪ್ರಿಯಾ ಪ್ರಭು (40), ಗಂಡ: ರಾಘವ, ವಾಸ: 3-10 ಶ್ರೀನಿಧಿಮನೆ, ನಿಂಜೂರು ಅಂಚೆ ಮತ್ತು  ಗ್ರಾಮ  ಕಾರ್ಕಳ ತಾಲೂಕು ಇವರ ಗಂಡ ರಾಘವ (46) ಮತ್ತು ಮಗನೊಂದಿಗೆ ಕಾರ್ಕಳ ತಾಲೂಕು ನಿಂಜೂರು ಗ್ರಾಮದ ಶ್ರೀನಿಧಿ ಮನೆ ಎಂಬಲ್ಲಿ ವಾಸವಾಗಿದ್ದು ಕಾರ್ಕಳ ಎಸ್ ವಿ ಟಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 26/07/2022 ರಂದು ಬೆಳಗ್ಗೆ 08:15 ಕ್ಕೆ ಮಗನೊಂದಿಗೆ ಕಾಲೇಜಿಗೆ ಹೋಗಿದ್ದು, ಪಿರ್ಯಾದಿದಾರರಿಗೆ ತರಗತಿಯಲ್ಲಿ ಇರುವಾಗ ಮದ್ಯಾಹ್ನ 03:15 ಕ್ಕೆ ಗಂಡ ರಾಘವ ರವರು ಕರೆ ಮಾಡಿದ ವಿಚಾರ ಮನೆಗೆ ಬಂದು ಮೊಬೈಲ್  ನೋಡಿದಾಗ ತಿಳಿದು, ಕೂಡಲೇ ಗಂಡನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಕರಿಸದೇ ಇದ್ದಾಗ, ಪಿರ್ಯಾದಿದಾರರು ಗಂಡನ ಅಣ್ಣ ರಮೇಶ್ ರವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿಯದೇ ಇದ್ದು ಮನೆಯ ಸುತ್ತಾಮುತ್ತಾ ಹುಡುಕಾಡುತ್ತಾ ಹೋಗುವಾಗ ಸಂಜೆ 6:30 ಗಂಟೆಗೆ ಪಿರ್ಯಾದಿದಾರರಿಗೆ ಗಂಡನ ಅಣ್ಣ ರಮೇಶ್ ರವರು ಮನೆಯ ಪಕ್ಕದ ಹಾಡಿಯಲ್ಲಿ ರಾಘವ ರವರು ಅಂಗಾತನೆ ಮಲಗಿದ ಸ್ಥಿತಿಯಲ್ಲಿ ಇದ್ದು, ಪಕ್ಕದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಯಲ್ಲಿ ದ್ರವ ಪದಾರ್ಥ ಇದ್ದು, ಬಾಯಿಯಲ್ಲಿ ಬಿಳಿ ನೊರೆ ಇಳಿಯುತ್ತಿದ್ದು, ಅಂಗಿಯ ಜೇಬಿನಲ್ಲಿ ಮೋಬೈಲ್ ಇರುವುದಾಗಿ ತಿಳಿಸಿರುತ್ತಾರೆ. ರಾಘವ ರವರು ದಿನಾಂಕ  26/07/2022 ರಂದು ಮದ್ಯಾಹ್ನ 03:15 ಗಂಟೆಯಿಂದ ಸಂಜೆ 6:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 33/2022 ಕಲಂ: 174(C) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .‌

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿನಯ ಕುಮಾರ್ (46). ತಂದೆ : ದಿ. ನಾಗೇಶ್ ಶೆಟ್ಟಿ,  ಆಹಾರ ನಿರೀಕ್ಷಕರು, ಬೈಂದೂರು ತಾಲೂಕು ಇವರು ದಿನಾಂಕ 26/07/2022 ರಂದು ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 10:00 ಗಂಟೆಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ಖಾಜಿ ಹಸನ್ ರವರಿಗೆ ಸಂಬಂಧಿಸಿದ ಗೋದಾಮಿನಲ್ಲಿ ಮೊಹಿದ್ದೀನ್ ಎಂಬಾತ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಇರಿಸಿರುವ ಮಾಹಿತಿ  ದೊರೆತ ಮೇರೆಗೆ ಪಿರ್ಯಾದಿದಾರರು  ಶಿರೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗ ಪ್ರಕಾಶ್ ರಾಠೊಡ್ ರವರೊಂದಿಗೆ 10:30 ಗಂಟೆಗೆ ಶಿರೂರು ಹಡವಿನಕೋಣೆಗೆ ಹೋಗಿ, ಈ ಮಾಹಿತಿಯನ್ನು  ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ರವರಿಗೆ ತಿಳಿಸಿದ್ದು ಅವರೂ ಕೂಡಾ ಸಿಬ್ಬಂದಿಗಳೊಂದಿಗೆ 10:45 ಗಂಟೆಗೆ ಅಲ್ಲಿಗೆ ಬಂದಿದ್ದು, ಪಿರ್ಯಾದಿದಾರರು ಹಾಗೂ ಪೊಲೀಸರು  ಸೇರಿಕೊಂಡು ಶಿರೂರು ಹಡವಿನಕೋಣೆ ಎಂಬಲ್ಲಿರುವ ಖಾಜಿ ಹಸನ್ ರವರಿಗೆ ಸಂಬಂಧಿಸಿದ ಗ್ರೀನ್ ವಿವ್ ಕಂಪೌಂಡ್ ನಲ್ಲಿರುವ ಗೋದಾಮಿಗೆ ಹೋಗಿ ಪರಿಶೀಲಿಸಿದಾಗ  ಗೋದಾಮಿನಲ್ಲಿ ಅಕ್ಕಿ ತುಂಬಿದ ಬಿಳಿ ಬಣ್ಣದ ಪಾಲಿಥೀನ್ ಚೀಲಗಳನ್ನು ದಾಸ್ತಾನು ಇರಿಸಿದ್ದು ಕಂಡು ಬಂದಿದ್ದು, ಈ ಬಗ್ಗೆ ಗೋದಾಮಿನ ಮಾಲೀಕರಾದ ಖಾಜಿ ಹಸನ್ ರವರಲ್ಲಿ ವಿಚಾರಿಸಿದಲ್ಲಿ ಮೊಹಿದ್ದೀನ್, ತಂದೆ: ಅಬ್ದುಲ್ ಖಾದಿರ್, ವಾಸ: ಬೀಚ್ ರೋಡ್ ಕೊಟೇಶ್ವರ ಕುಂದಾಪುರ ತಾಲೂಕು ಎಂಬಾತನಿಗೆ ದಾನ್ಯ ವ್ಯಾಪಾರದ ಸಲುವಾಗಿ 11 ತಿಂಗಳ ಅವಧಿಗೆ ಬಾಡಿಗೆಗೆ ನೀಡಿರುವುದಾಗಿಯೂ, ಅದರಲ್ಲಿ ಅಕ್ಕಿ ದಾಸ್ತಾನು ಇರಿಸಿದ ಬಗ್ಗೆ ತನಗೆ ತಿಳಿದಿಲ್ಲವಾಗಿ ಹೇಳಿದ್ದು ,  ಅಕ್ಕಿ ತುಂಬಿದ ಚೀಲಗಳನ್ನು ಪರಿಶೀಲಿಸಿದಾಗ ತಲಾ 50 ಕೆಜಿಯಷ್ಟು ಬೆಳ್ತಿಗೆ ಅಕ್ಕಿ ಇರುವ  ಒಟ್ಟು 160 ಚೀಲಗಳು ಇದ್ದು, ಒಟ್ಟು 80 ಕ್ವಿಂಟಾಲ್ (8000 ಕೆಜಿ) ಅಕ್ಕಿ ಇರುವುದು ಕಂಡು ಬಂತು. ಈ ಅಕ್ಕಿಯ ಮೌಲ್ಯ  ರೂಪಾಯಿ 1,92,000/- ಆಗಿರುತ್ತದೆ. ಗೋದಾಮಿನಲ್ಲಿದ್ದ ಅಕ್ಕಿ ತುಂಬಿದ 160 ಚೀಲಗಳು ಹಾಗೂ 10 ಖಾಲಿ ಗೋಣಿ ಚೀಲಗಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು, ಆಪಾದಿತನು ಸರಕಾರ ವತಿಯಿಂದ ಫಲಾನುಭವಿಗಳಿಗೆ ವಿತರಿಸಲಾದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ 80 ಕ್ವಿಂಟಾಲ್ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಯಾವುದೇ ದಾಖಲೆಗಳಿಲ್ಲದೇ ಸಂಗ್ರಹಿಸಿ ಗೋದಾಮಿನಲ್ಲಿ ದಾಸ್ತಾನು ಇರಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 146/2022 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 27-07-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080