ಅಭಿಪ್ರಾಯ / ಸಲಹೆಗಳು

 ಮನುಷ್ಯ ಕಾಣೆ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ದೀಕ್ಷಿತ್ ಇವರ ತಂದೆ ಸುಮಾರು 55 ವರ್ಷದ ದಿನೇಶ್ ನಾಯ್ಕ್ ಎಂಬವರು ದಿನಾಂಕ: 25/07/2022 ರಂದು ತನ್ನ ತಾಯಿ ಮನೆಯಿಂದ ಪಂಚನಬೆಟ್ಟು ಬಳಿಯ ತನ್ನ ಅಣ್ಣ ಮಾಧವ ನಾಯ್ಕ್‌‌ರವರ ಮಗ ಶ್ರೀಧರವರ ಮನೆಯಿಂದ ಬೆಳಿಗ್ಗೆ 7:30 ಗಂಟೆಗೆ ಹೊರಟು ಹೋದವರು ಮನೆಗೂ, ಸಂಬಂದಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಕೋಟ: ಮಧು ಬಿ.ಇ, ಪಿಎಸ್‌ಐ, ಕೋಟ ಪೊಲೀಸ್ ಠಾಣೆ ಇವರು  ದಿನಾಂಕ: 27.07.2022 ರಂದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಇಲಾಖಾ ವಾಹನದಲ್ಲಿ ಸಿಬ್ಬಂದಿಯ ರವರೊಂದಿಗೆ ಹಗಲು ರೌಂಡ್ಸ್‌ ಕರ್ತವ್ಯದಲ್ಲಿ ಗಾವಳಿ ಕಡೆ ಸಂಚರಿಸಿಕೊಂಡಿರುವಾಗ ಬಿದ್ಕಲ್‌ಕಟ್ಟೆಯಿಂದ ಸಾಯಿಬ್ರಕಟ್ಟೆ ಕಡೆಗೆ ಬರುತ್ತಿದ್ದ ಹಿಂಬದಿ ತೆರೆದ ಪಿಕಪ್‌ ವಾಹನದಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಬರುವುದನ್ನು ಕಂಡು ಅನುಮಾನಗೊಂಡು ನೋಡಿದಾಗ ಬೊಲೆರೋ ಪಿಕ್‌ಅಪ್‌ ವಾಹನ ಆಗಿದ್ದು ಅದರ ನೋಂದಣಿ ನಂ: KA 20 B 6630 ನೇ ಗೂಡ್ಸ್‌ ವಾಹನ ಆಗಿದ್ದು ಅದರಲ್ಲಿ 3 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂತು. ಸದ್ರಿ ಪಿಕಪ್‌ ವಾಹನದಲ್ಲಿ ಚಾಲಕ ಸೇರಿ ಇಬ್ಬರು ವ್ಯಕ್ತಿಗಳಿದ್ದು. ಅವರನ್ನು ಆ ಮೂರು ಜಾನುವಾರುಗಳ ಬಗ್ಗೆ ಕೇಳಲಾಗಿ ತಾವುಗಳು ತೋಟಕ್ಕೆ ದನದ ಗೊಬ್ಬರಕ್ಕಾಗಿ ತನ್ನ ಸ್ನೇಹಿತ ಕೊರ್ಗಿ ವಾಸಿ ಶೈಜು ಎಂಬಾತನಿಂದ ಒಂದು ದನ ಮತ್ತು ಒಂದು ಹೆಣ್ಣು ಕರು ಹಾಗೂ ಒಂದು ಗಂಡು ಕರುವನ್ನು ಸಾಕುವ ಉದ್ದೇಶದಿಂದ ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮನಗಂಡು ಪಂಚರನ್ನು ಬರಮಾಡಿಸಿಕೊಂಡು ಮಹಜರು ಮುಖೇನ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು  ಆರೋಪಿತ 1) ಸಿಬಿ ಜೋಸೆಪ್‌ (45 ವರ್ಷ) ತಂದೆ: ಜೋಸೆಪ್‌ ವಾಸ: ಬಿದ್ಕಲ್‌ಕಟ್ಟೆ ಹಾರ್ದಳ್ಳಿ - ಮಂಡಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು  2) ಕರುಣಾಕರ (50 ವರ್ಷ) ತಂದೆ: ಗೋವಿಂದ ಕುಲಾಲ್‌ ವಾಸ: ಗಾವಳಿಬೈಲು ಹಳ್ಳಾಡಿ - ಹರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರುಗಳ  ವಿರುದ್ಧ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2022  ಕಲಂ: 4, 5, 12 ಕರ್ನಾಟಕ ಪ್ರಾಣಿ ಹಿಂಸೆ ತಡೆ ಮತ್ತು ದೌರ್ಜನ್ಯ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-07-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080