ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಈಶ್ವರ ಖಾರ್ವಿ (43), ತಂದೆ: ನಾಗ ಖಾರ್ವಿ, ವಾಸ; ಕೆಪ್ಪಿಮನೆ, ಓಲಗಮಂಟಪ, ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 25/07/2021 ರಂದು ಬೆಳಿಗ್ಗೆ 09:30 ಗಂಟೆಗೆ ಉಪ್ಪುಂದದ ಓಲಗಮಂಟಪದ ಬಳಿ ನಿಂತುಕೊಂಡಿರುವಾಗ ತಾರಪತಿ ಕಡೆಗೆ ಮೋಟಾರ್ ಸೈಕಲ್ KA-20-EF-0866 ನೇದರ ಸವಾರ ಮಂಜುನಾಥ ಸಹಸವಾರ ನಾಗರಾಜ ರವರನ್ನು ಕುಳ್ಳಿರಿಕೊಂಡು ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಉಪ್ಪುಂದ ಓಲಗಮಂಟಪದ ಹತ್ತಿರ ಸದಿನಮನೆ ಕುಪ್ಪು ಪೂಜಾರ್ತಿರವರ ಮನೆಯ ಎದುರು ಬರುತ್ತಿರುವಾಗ ಒಂದು ನಾಯಿ ರಸ್ತೆಗೆ ಅಡ್ಡ ಬಂದಿದ್ದು ಸವಾರನು ನಾಯಿಯನ್ನು ತಪ್ಪಿಸುವ ಭರದಲ್ಲಿ ಮೋಟಾರ್ ಸೈಕಲನ್ನು ಒಮ್ಮಲೇ ನಿರ್ಲಕ್ಷತನದಿಂದ ಎಡಕ್ಕೆ ತಿರುಗಿಸಿದಾಗ ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಸಹಸವಾರ ಎಡ ಕಾಲಿನ ಮೇಲೆ ಬಿದ್ದಿದ್ದು, ಸವಾರ ಮೋಟರ್ ಸೈಕಲ್ ಮೇಲೆ ಬಿದ್ದಿದ್ದು ಪರಿಣಾಮ ಸವಾರ ಮಂಜುನಾಥನಿಗೆ ಎಡಕಾಲಿಗೆ ಸ್ವಲ್ಪ ನೋವುಂಟಾಗಿದ್ದು ಸಹಸವಾರ ನಾಗರಾಜರವರಿಗೆ ಎಡಕಾಲಿಗೆ ಒಳನೋವು, ಎಡ ಕೈಯ ಅಂಗೈಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ನಾಗರಾಜರವರನ್ನು ಒಂದು ಓಮಿನಿ ಕಾರಿನಲ್ಲಿ ಕುಂದಾಪುರ ಶ್ರೀದೇವಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ:.279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಗಿರೀಶ್ ಬಿ. (42), ತಂದೆ: ದಿ| ತಿಮ್ಮ ಪೂಜಾರಿ, ವಾಸ: ಬಿ.ಟಿ ಕಾಂಪೌಂಡ್, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 23/07/2021 ರಂದು ರಾತ್ರಿ 8:30 ಗಂಟೆಯ ಸಮಯಕ್ಕೆ ಅವರ KA-20-X-2708 ನೇ ನಂಬ್ರದ  ಹೀರೋ ಹೊಂಡಾ ಕಪ್ಪು ಬಣ್ಣದ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ನ್ನು ಮನೆಯ ಕಾಂಪೌಂಡ್‌ನ ಒಳಗೆ ಅಂಗಳದಲ್ಲಿ ಇಟ್ಟಿದ್ದನ್ನು  ದಿನಾಂಕ  24/07/2021 ರಂದು ಬೆಳಿಗ್ಗೆ 07:00 ಗಂಟೆಗೆ ಎದ್ದು ನೋಡುವಾಗ ಯಾರೋ ಕಳ್ಳರು ಮೋಟಾರ್‌ಸೈಕಲ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರ್ ಸೈಕಲ್ ನ ಮೌಲ್ಯ ರೂಪಾಯಿ  20,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ಪವನ್ (20), ತಂದೆ: ದಿ ನಾರಾಯಣ ಮೂಲ್ಯ, ವಾಸ: 5 ಸೆಂಟ್ಸ್, ನಾಯಿರ್ ಬೆಟ್ಟು, ಕೌಡೂರು ಗ್ರಾಮ, ಬೈಲೂರು ಅಂಚೆ ಕಾರ್ಕಳ ತಾಲೂಕು ಇವರ ತಂದೆ ನಾರಾಯಣ ಮೂಲ್ಯ (58) ರವರು ಶಾರದ ಹೋಟೆಲ್ ಸುರತ್ಕಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು ಕಳೆದ ಒಂದು ವಾರದಿಂದ ಪಿರ್ಯಾದಿದಾರರ ತಂದೆ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದು ಪಿರ್ಯಾದಿದಾರರಲ್ಲಿ ಹೋಟೆಲ್ ಮಾಲೀಕರು ಕೆಲಸಕ್ಕೆ ಕಳುಹಿಸಿಕೊಡುವಂತೆ ಹೇಳಿದ್ದು ಅದರಂತೆ ದಿನಾಂಕ 26/07/2021 ರಂದು ಪಿರ್ಯಾದಿದಾರರು ತಂದೆಯವರನ್ನು ಬಸ್ಟ್ಯಾಂಡ್ ಗೆ ಬಿಟ್ಟು ಬಂದಿದ್ದು ಬೆಳಗ್ಗೆ 08:00 ಗಂಟೆಗೆ ಪರಿಚಯದ ಕಾಂತುರವರು ಪಿರ್ಯಾದಿದಾರರಲ್ಲಿ  ನಾರಾಯಣ ಮೂಲ್ಯ ರವರು ಬಾಣಾಲು ಎಂಬಲ್ಲಿ ಬರುತ್ತಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರ ತಂದೆಯವರನ್ನು ಮೋಟಾರ್ ಬೈಕ್ ನಲ್ಲಿ ಕುಳ್ಳಿರಿಸಿ ಬೈಲೂರು ಬಸ್ಟ್ಯಾಂಡ್ ಗೆ ಬಿಟ್ಟು ಹೋಗಿರುತ್ತಾರೆ. ಬೆಳಗ್ಗೆ 10:00 ಗಂಟೆ ಸುಮಾರಿಗೆ ಕಾಂತುರವರು ಪುನಃ ಕರೆ ಮಾಡಿ ನಾರಾಯಣ ಮೂಲ್ಯ ರವರ ಬಟ್ಟೆ ಬರೆಗಳ, ಚಪ್ಪಲಿ ಮೊಬೈಲ್ ಮನೆ ಹತ್ತಿರ ಇರುವ ಸರ್ಕಾರಿ ಬಾವಿ ಹತ್ತಿರ ಬಿದ್ದಿದಾಗಿ ತಿಳಿಸಿದ್ದು ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಬಂದು ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ  ಅಗ್ನಿಶಾಮಕ ದಳದವರು ಬಾವಿಗೆ ಇಳಿದು ಹುಡುಕಿದಾಗ ಪಿರ್ಯಾದಿದಾರರ ತಂದೆಯವರ ಮೃತ ದೇಹವು ದೊರೆತಿರುತ್ತದೆ. ಮೃತರು ವಿಪರೀತ ಮಧ್ಯವ್ಯಸನಿಯಾಗಿದ್ದು ಇದೇ ಕಾರಣದಿಂದ  ದಿನಾಂಕ 26/07/2021 ರಂದು ಬೆಳಗ್ಗೆ 08:00 ಗಂಟೆಯಿಂದ ಸಂಜೆ 04:00 ಗಂಟೆ ಮಧ್ಯಾವದಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಿಶ್ವನಾಥ ಖಾರ್ವಿ (31), ತಂದೆ; ಆನಂದ ಖಾರ್ವಿ ವಾಸ; ಚೌಕಿಮನೆ ಕರ್ಕಿಕಳಿ ಉಪ್ಪುಂದ  ಗ್ರಾಮ, ಬೈಂದೂರು ತಾಲೂಕು ಇವರ ಮಗ ಸರ್ವದ ( ಪ್ರಾಯ 2 ವರ್ಷ 1 ತಿಂಗಳು) ನನ್ನು ಪಿರ್ಯಾದಿದಾರರು  ದಿನಾಂಕ 26/07/2021 ರಂದು ಮಧ್ಯಾಹ್ನ 3:30 ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದು, ಮದ್ಯಾಹ್ನ 3:30 ಗಂಟೆಯಿಂದ ಸಂಜೆ 4:00 ಗಂಟೆಯ ಮಧ್ಯಾವಧಿಯಲ್ಲಿ , ಮನೆಯ ಕೋಣೆಯಲ್ಲಿ ಮಲಗಿದ್ದ ಪಿರ್ಯಾದಿದಾರರ ಮಗ ಸರ್ವದ  ಎದ್ದು ಮನೆಯಿಂದ ಹೊರಗೆ ಬಂದು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟು, ಮೃತದೇಹವು ತೇಲಿಕೊಂಡು ಹೋಗಿ ಎಡಮಾವಿನ ಹೊಳೆಯು ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ದೊರೆತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.        
     

ಇತ್ತೀಚಿನ ನವೀಕರಣ​ : 27-07-2021 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080