ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ದಿನೇಶ್ ಇವರು ಮತ್ತು ಪಿರ್ಯಾಧಿದಾರರ ಅಣ್ಣ ಜಗದೀಶರವರು  ದಿನಾಂಕ: 26-07-2021 ರಂದು  ಸಂಜೆ 5:20  ಗಂಟೆಗೆ ಹೆಮ್ಮಾಡಿ ಕಡೆಯಿಂದ ಜಡ್ಕಲ್‌ ಕಡೆಗೆ ಮಹೇಂದ್ರರವರು ಚಲಾಯಿಸುತ್ತಿದ್ದ  KA20EJ7870 ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸಹಸವಾರರಾಗಿ ಕುಳಿತು ಹೋಗುತ್ತಿದ್ದಾಗ ಆರೋಪಿ ಮಹೇಂದ್ರ ಮೋಟಾರು  ಸೈಕಲ್‌ನ್ನು ಚಿತ್ತೂರು  ಗ್ರಾಮದ ರಾಜ್ಯ  ಹೆದ್ದಾರಿ 27 ರಲ್ಲಿ ಡಾ: ಅತುಲ್‌ ಕ್ಲಿನಿಕ್‌ ಸಮೀಪ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರು ಸೈಕಲ್‌  ಮುಂದಿನಿಂದ  ಚಿತ್ತೂರು ಕಡೆಯಿಂದ ಜಡ್ಕಲ್‌ ಕಡೆಗೆ ಸೀತಾರಾಮ ಆಚಾರಿಯವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA 20 EQ 9638 ನೇ ಸ್ಕೂಟರ್‌ನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಗಲಿಬಿಲಿಗೊಂಡು ಎಡಕ್ಕೆ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮೋಟಾರು ಸೈಕಲ್‌ನ  ನಿಯಂತ್ರಣ ತಪ್ಪಿ  ಚರಂಡಿಗೆ  ಮೋಟಾರು ಸೈಕಲ್‌ ಸಮೇತ  ಮಗುಚಿ  ಬಿದ್ದ  ಪರಿಣಾಮ  ಮೋಟಾರು ಸೈಕಲ್‌ನಲ್ಲಿ  ಹಿಂಬದಿ ಸವಾರರಾದ ಪಿರ್ಯಾಧಿದಾರರಿಗೆ ಬಲ ಕೈ ಮೊಣಗಂಟು, ಬಲ ಕಾಲು ಮೊಣಗಂಟು, ಬಲಕಾಲಿನ ಬೆರಳುಗಳಿಗೆ  ಪೆಟ್ಟಾಗಿ  ರಕ್ತಗಾಯವಾಗಿದ್ದು ಹಾಗೂ ಜಗದೀಶರವರಿಗೆ ಬಲ ಕಾಲು  ಮೊಣಗಂಟು, ಬಲಕಿವಿ ಮತ್ತು ಬಲ ಹಣೆಯ ಬಳಿ ಪೆಟ್ಟಾಗಿ  ರಕ್ತಗಾಯವಾಗಿದ್ದು ಆರೋಪಿ ಮಹೇಂದ್ರನ ಬಲಕಾಲು ಮೊಣಗಂಟು , ಬಲಕಾಲಿನ ಬೆರಳು ಎಡ ಕಿವಿಗೆ ಪೆಟ್ಟಾಗಿ ರಕ್ತಗಾಯವಾಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.ಅಪಘಾತದ ಪರಿಣಾಮ ಸ್ಕೂಟರ್‌ ಸವಾರ ಸೀತಾರಾಮ ಆಚಾರಿರವರು ಸ್ಕೂಟರ್‌ ಸಮೇತ ರಸ್ತೆಗೆ  ಬಿದ್ದು ಮೈ ಕೈಗೆ   ಪೆಟ್ಟಾಗಿ  ಚಿತ್ತೂರು ಅತುಲ್‌ ಕ್ಲಿನಿಕ್‌ನಲ್ಲಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-07-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ