ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಫಾತೀಮಾ ಮುನೀರ್ (23), ಗಂಡ: ಮೊಹಮ್ಮದ್ ಇಸ್ಮಾಯಿಲ್, ವಾಸ:  ಹೆಚ್ ಎನ್ ಕೆ ಎಮ್ ಕಾಂಪೌಂಡ್ , ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 25/06/2022 ರಂದು ರಾತ್ರಿ 9:50 ಗಂಟೆಗೆ  ಮನೆಯಲ್ಲಿರುವಾಗ ಆರೋಪಿ ಅಲ್ಪಾಜ್  ಹಾಗೂ ಇತರ 7 ಜನರು KA-41-Z-7695 ನೇ ಕಾರು ಹಾಗೂ ಕೆಂಪು ಬಣ್ಣದ ಸ್ಕೂಟರನಲ್ಲಿ  ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಅವರಲ್ಲಿ 4 ಜನ ಆಪಾದಿತರು ಮನೆಯೊಳಗೆ  ಕೈಯಲ್ಲಿ ತಲವಾರು, ಚೂರಿ, ರಾಡ್ ನ್ನು ಹಿಡಿದುಕೊಂಡು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಗಂಡನಿಗೆ ಅವಾಚ್ಯ ಶಬ್ಧಗಳಿಂದ ಬೈದು ಕರೆದಾಗ ಪಿರ್ಯಾದಿದಾರರು ಅಲ್ಲಿಗೆ ಹೋದಾಗ ತಲವಾರನ್ನು ಹಿಡಿದುಕೊಂಡ ಆಪಾದಿತನು ಪಿರ್ಯಾದಿದಾರರ ಗಂಡನಿಗೆ ತುಳಿಯುತ್ತಿರುವಾಗ ತಪ್ಪಿಸಲು ಹೋದಾಗ ಆತನು ಪಿರ್ಯಾದಿದಾರರ  ಕೈಯನ್ನು  ಹಿಡಿದೆಳೆದು ಕುತ್ತಿಗೆಯನ್ನು  ಹಿಡಿದು  ದೂಡಿ ಹಾಕಿ, ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಚೈನ್ ಹಾಗೂ ಕೈಯಲ್ಲಿದ್ದ  6 ಗ್ರಾಂ ತೂಕದ  ಬ್ರಾಸಲೈಟ್  ಬಿದ್ದು ಹೋಗಿದ್ದು  ಆ ಸಮಯ ಪಿರ್ಯಾದಿದಾರರ ತಂದೆ ಹಾಗೂ ಅಣ್ಣ ಅಲ್ಲಿಗೆ  ತಪ್ಪಿಸಲು  ಬಂದಾಗ ತಲವಾರು ಪಿರ್ಯಾದಿದಾರರ  ಅಣ್ಣನ ಎಡಗೈ ತೋಳಿಗೆ ತಾಗಿ ರಕ್ತಗಾಯವಾಗಿದ್ದು ಆಗ ಅವರೆಲ್ಲರೂ ಬೊಬ್ಬೆ ಹಾಕಿದಾಗ ಆಸುಪಾಸಿನವರು ಬರುವುದನ್ನು  ನೋಡಿ  ಆರೋಪಿತರೆಲ್ಲರೂ  ಸೇರಿ  ಬೆದರಿಕೆ  ಹಾಕಿ ಅವರು ಬಂದ ಕಾರು  ಹಾಗೂ ಸ್ಕೂಟರ್ ನಲ್ಲಿ ಹೋಗಿರುತ್ತಾರೆ. ಆರೋಪಿತರು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆ ಹಾಗೂ ಬಲಕೈಗೆ  ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 143, 147, 148, 448, 323,324,  354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶಂಶೀರ ಅಹಮ್ಮದ್ (28), ತಂದೆ : ಇದ್ದಿನಬ್ಬ, ವಾಸ : ಸಫಾತ್ ಮಂಜಿಲ್ ಭಾಸ್ಕರ ನಗರ ಉಚ್ಚಿಲ ಗ್ರಾಮ ಮತ್ತು ಅಂಚೆ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ತನ್ನ ತಂದೆಯ ಬಸ್ಸು ನಂಬ್ರ KA-40-A-0783 ನೇದನ್ನು ದಿನಾಂಕ 24/06/2022  ರಂದು ಉಡುಪಿ ಕಡೆಯಿಂದ ಕಟೀಲು ಕಡೆಗೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಎಡದಿಕ್ಕಿನಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ, ಮೂಳೂರು ಸುನ್ನಿ ಸೆಂಟರ ಬಳಿ ತಲುಪುತ್ತಿದ್ದಂತೆ ಸಂಜೆ 4:28 ಗಂಟೆಗೆ KA-14-B-3312 ನೇ ಸಾಹಿಲ್ ಬಸ್ಸನ್ನು ಓವರ್‌‌ಟೇಕ್ ಮಾಡಿ  ಪಿರ್ಯಾದಿದಾರರ ಬಸ್ಸಿಗೆ ಅಡ್ಡ ನಿಲ್ಲಿಸಿ ಬಸ್ಸಿನಿಂದ ರಾಯಿಜ್, ಸಮೀರ್ ಡಿಜಿ ಮತ್ತು ಹಾಸೀಮ್ ಇಳಿದು ಪಿರ್ಯಾದಿದಾರರ ಬಸ್ಸಿಗೆ ಹತ್ತಿ ಪಿರ್ಯಾದಿದಾರರ ಕಾಲರ್‌ಪಟ್ಟಿ ಹಿಡಿದು ಕೈಯಿಂದ ಹೊಡೆಯುತ್ತಿರುವಾಗ KA-19-MC-1099 ನೇ ಕಾರಿನಿಂದ ಸಲೀಂ, ಜಪ್ಟಲ್ ಖಾದರ್ ಮತ್ತು ಇನ್ನೊಬ್ಬ ವ್ಯಕ್ತಿ ಇಳಿದು ಪಿರ್ಯಾದಿದಾರರ ಬಸ್ಸನ್ನು ಹತ್ತಿ ಅವಾಚ್ಯ ಶಬ್ದದಿಂದ ಬೈದು, ಪಿರ್ಯಾದಿದಾರರ ಗಾಡಿಯ ಚಾವಿ ತೆಗೆದು ಪಿರ್ಯಾದಿದಾರರನ್ನು ದೂಡಿ ಹಾಕಿರುವುದಾಗಿ  ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ 341, 385, 504, 506, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಬಿ.ಪಿ ಉಪೇಂದ್ರ ಪೈ  (67), ತಂದೆ: ದಿವಂಗತ ಬಿ.ಪಿ. ರಘನಾಥ ಪೈ. ವಾಸ: ಮನೆ ನಂ 540/2 ರಘನಾಥ  ಪಾಂಡುರಂಗ ದೇವಸ್ದಾನದ ರಸ್ತೆ, ಚಾಂತಾರು ಗ್ರಾಮ ಬ್ರಹ್ಮಾವರ ತಾಲೂಕು ಇವರ ಮನೆಯ ಎದುರು ರಸ್ತೆ ಚಾಂತಾರು ಗ್ರಾಮದ ಸರ್ವೆ ನಂಬ್ರ  82/15 0.02 ಸೆಂಟ್ಸ್‌ ಸ್ಧಳದ ಉತ್ತರ ದಿಕ್ಕಿನಲ್ಲಿರುವ ದೇವದಾರ ಮರ ಕಡಿಯುವುದಕ್ಕೆ ಒಬ್ಬಾತ ಮರ ಹತ್ತಿದ ವೇಳೆ  ದಿನಾಂಕ 26/06/2022 ರಂದು ಬೆಳಿಗ್ಗೆ 7:00 ಗಂಟೆಗೆ ಪಿರ್ಯಾದಿದಾರರು ಮರ ಕಡಿಯುವವನ್ನು ಕರೆಯಿಸಿ ಮರ ಕಡಿಯ ಬಾರದು ಅದು ತತ್‌ ಗಡಿಯಲ್ಲಿ ಇದೆ  ಜಾಗ ಆಳತೆ ಮಾಡಿಸಿ ಅಮೇಲೆ ಮರ ಕಡಿಯಬೇಕೆಂದು ಹೇಳಿದ್ದ ಆದರೆ ಎದುರು ಮನೆಯ ಚಂದ್ರಕಾಂತ, ಸೂರ್ಯಕಾಂತ, ಪ್ರಭಾವತಿ, ಮಾಲತಿ ಹಾಗೂ ಮಾಲತಿಯ ಮಗ ಚೇತನ ಸೇರಿಕೊಂಡು  ಪಿರ್ಯಾದಿದಾರರಿಗೆ ಹೊಡೆಯಲು  ಬಂದು  ಮಾಲತಿ  ಹಾಗೂ ಪ್ರಭಾವತಿ ಎನ್ನುವವರು ಕಲ್ಲಿನಿಂದ  ಪಿರ್ಯಾದಿದಾರರ ಎಡಭಾಗದ ಕಾಲಿಗೆ ಪೆಟ್ಟಾಗಿದ್ದು ಕೆಲವು ಕಲ್ಲಗಳನ್ನು ಪಿರ್ಯಾದಿದಾರರು ತಪ್ಪಿಸಿಕೊಂಡಿರುತ್ತಾರೆ. ನಂತರ ಕಾಲಿಗೆ ಆದ ಗಾಯದ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರ ರೋಗಿಯಾಗಿ  ಚಿಕಿತ್ಸೆಯನ್ನು ಪಡೆದುಕೊಂಡು 7:40 ಗಂಟೆಗೆ ಮನೆಗೆ ಬಂದು  ಮರ  ಕಡಿಯ ಬಾರದು  ಇದು  ನಿಮ್ಮ ಸ್ಧಳ  ಅಲ್ಲ ಸ್ಧಳದ ಆರ್‌.ಟಿ.ಸಿ  ರುಕ್ಮಿಣಿ ಅಮ್ಮ ಎನ್ನುವವರ ಹೆಸರಿನಲ್ಲಿರುವುದು  ಹಾಗೂ ಈ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಕೇಸು ದಾಖಲಾಗಿರುತ್ತದೆ ಇದು ನಿಮಗೆ ಸಂಬಂಧ ಪಟ್ಟಿಲ್ಲ ಎಂದು ಹೇಳಿದ್ದಕ್ಕೆ ಚಂದ್ರಕಾಂತ ಕತ್ತಿ ಹಿಡಿದು ಪಿರ್ಯಾದಿದಾರರನ್ನು ಕಡಿಯಲು ಬಂದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 143, 147, 148, 447, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  


.  

ಇತ್ತೀಚಿನ ನವೀಕರಣ​ : 27-06-2022 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080