ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಪಿರ್ಯಾದಿ ಅರವಿಂದ ಇವರು ದಿನಾಂಕ 26/06/2022 ರಂದು ಸಂಜೆ ಸುಮಾರು7.45  ಗಂಟೆಯ ಸಮಯಕ್ಕೆ ತನ್ನ ಅಜ್ಜಿ ಪದ್ದು ಪೂಜಾರ್ತಿ (77) ರವರೊಂದಿಗೆ ಮನೆಯ ಪಕ್ಕದ ಕೋಟ ತಟ್ಟು ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಎಸ್. ಟಿ ಕಾಲೊನಿ ರಸ್ತೆಯಲ್ಲಿ  ರಾಷ್ಟ್ರೀಯ ಹೆದ್ದಾರಿ ಕಡೆಗೆ ನಡೆದುಕೊಂಡು ಬರುವಾಗ  ರಾ. ಹೆ  ಕಡೆಯಿಂದ KA20EP4328 ಸವಾರ ಪರಿಚಯದ  ಚಂದ್ರ ಶೇಖರ ಎಂಬಾತನು ತನ್ನ ಬಾಬ್ತು ಮೋಟಾರ್ ಸೈಕಲನ್ನು  ಅತೀವೇಗ ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು ಬಂದು ಎದುರಿನಲ್ಲಿ ರಸ್ತೆಯ ಬಲ ಬದಿಯಲ್ಲಿ ಹೋಗುತ್ತಿದ್ದ ಅಜ್ಜಿ ಪದ್ದು ಪೂಜಾರ್ತಿ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಪದ್ದು ಪೂಜಾರ್ತಿ ರವರುರಸ್ತೆಗೆ ಬಿದ್ದರು.ಪರಿಣಾಮ ಅವರ ಸೊಂಟದ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಬಲ ಕಾಲಿಗೆ ತರಚಿದ ತೀವೃ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 279.338 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ಶಶಿಧರ ಹೆಚ್ ಸಿ. ಮಲ್ಪೆ ಪೊಲಿಸ್ ಠಾಣೆ ಕೊಡವೂರು ಗ್ರಾಮ ಇವರು  ಮಲ್ಪೆ ಪೊಲೀಸ್ ಠಾಣೆಯಲ್ಲಿ  ರಾತ್ರಿ ಠಾಣಾ ಪ್ರಭಾರ ಕರ್ತವ್ಯದಲ್ಲಿರುವಾಗ  ದಿನಾಂಕ: 27-06-2022 ರಂದು ರಾತ್ರಿ  1:00 ಗಂಟೆಯ ಸಮಯಕ್ಕೆ ಮಲ್ಪೆ ಪೊಲೀಸ್ ಠಾಣಾ ಎದುರಿನ ರಸ್ತೆಯಲ್ಲಿ ಶಬ್ದ ಕೇಳಿ ಪಿರ್ಯಾದಿದಾರರು ಹಾಗೂ ಠಾಣಾ ಪಹರೆ ಕರ್ತವ್ಯದಲ್ಲಿರುವ  ಪಿಸಿ  ಸಚಿನ್ ರವರು ಠಾಣೆಯಿಂದ  ಹೊರಗೆ ಬಂದು ನೋಡಿದಾಗ  ಒಂದು ಕಾರು ಪೊಲೀಸ್ ಠಾಣಾ ಆವರಣ ಗೋಡೆಗೆ ಢಿಕ್ಕಿ   ಹೊಡೆದು ನಿಂತಿದ್ದು , ಅಲ್ಲಿಗೆ ಹೋಗಿ ನೋಡಿದಾಗ  ಚಾಲಕ  ಹಾಗೂ ಪ್ರಯಾಣಿಕರು  ಕಾರಿನಿಂದ  ಹೊರಗೆ ಬಂದಿರುತ್ತಾರೆ , ವಾಹನ ಢಿಕ್ಕಿ ಹೊಡೆದ ಪರಿಣಾಮ  ಪೊಲೀಸ್ ಠಾಣೆಯ ಎದುರಿನ ಆವರಣದ ಗೋಡೆ ಸಂಪೂರ್ಣ ಜಖಂ ಗೊಂಡಿರುತ್ತದೆ, ಡಿಕ್ಕಿ ಹೊಡೆದ ವಾಹನ ಅಲ್ಲೆ ನಿಂತಿದ್ದು ,ಅದರ ನಂಬ್ರ ನೋಡಲಾಗಿ  OR-05- AJ-1237  PAJERO  ಕಾರು ಆಗಿರುತ್ತದೆ. . ಸದ್ರಿ ಕಾರು ಜಖಂಗೊಂಡಿರುತ್ತದೆ . ಕಾರಿನ  ಚಾಲಕನ  ಹೆಸರು ವಿಚಾರಿಸಲಾಗಿ ಅಮಿತೇಶ ಆಗಿದ್ದು, ಆತನು ಮೇಲ್ನೋಟಕ್ಕೆ ಮಧ್ಯ ಸೇವನೆ ಮಾಡಿರುವುದು ಕಂಡುಬಂದಿರುತ್ತದೆ.  OR-05- AJ-1237  PAJERO   ಕಾರಿನ ಚಾಲಕ ಅಮಿತೇಶ ತನ್ನ ವಾಹನವನ್ನುಅಜಾಗರೂಕತೆ ಹಾಗು ನಿರ್ಲಕ್ಷ್ಯತನದಿಂದ  ವಢಬಾಂಡೇಶ್ವರ  ಸರ್ಕಲ್ ನಿಂದ ಮಲ್ಪೆ ಬೀಚ್ ಕಡೆಗೆ ಚಲಾಯಿಸಿಕೊಂಡು ಬಂದು ಪೊಲೀಸ್ ಠಾಣಾ ಎದುರಿನ ಆವರಣ ಗೋಡೆಗೆ  ಡಿಕ್ಕಿ ಹೊಡೆದು ಜಖಂ ಗೊಳಿಸಿ ಸಾರ್ವಜನಿಕ ಆಸ್ತಿಗೆ  ಹಾನಿ ಮಾಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ 279, 427 ಐಪಿಸಿ ಮತ್ತು  3 ಪಿಡಿಪಿಪಿ ಆ್ಯಕ್ಟ್  & 185 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಮಾಸೆಬೈಲು: ಫಿರ್ಯಾದಿ ಲೋಕೇಶ್ ನಾಯ್ಕ  ಇವರ ತಂದೆ ನಾರಾಯಣ ನಾಯ್ಕ ಎಂಬುವರಿಗೆ ಕೆಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಸಂಪೂರ್ಣವಾಗಿ ಗುಣಮುಖವಾಗದೇ ಇದ್ದು ಹಾಗೂ ಶರಾಬು ಕುಡಿಯುವ ಚಟ ಹೊಂದಿದ್ದು  ದಿನಾಂಕ:26/06/2022 ರಂದು ರಾತ್ರಿ 09:00 ಗಂಟೆಯಿಂದ 09:15 ಗಂಟೆಯ ಮಧ್ಯದ ಅವಧಿಯಲ್ಲಿ ಇದೇ ಕಾರಣದಿಂದ ಮನನೊಂದು ಅಮಾಸೆಬೈಲು ಗ್ರಾಮದ ಗೋಳಿಕಾಡು ಶೇಡಿಹೊಂಡ ಎಂಬಲ್ಲಿ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 27-06-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080