ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

 • ಪಡುಬಿದ್ರಿ: ದಿನಾಂಕ 19/06/2021 ರಂದು ಮಧ್ಯಾಹ್ನ 12:30 ಗಂಟೆಗೆ ಬಡಾ ಗ್ರಾಮದ ಬುದಗಿ ಪೆಟ್ರೋಲ್ ಬಂಕ್ ನಿಂದ ಸಲ್ಪ ಮುಂದೆ ಯುಟರ್ನ ಡಿವೈಡರ್ ಬಳಿ ರಾಹೆ 66 ರಲ್ಲಿ ಮಂಗಳೂರು ಉಡುಪಿ ರಸ್ತೆಯಲ್ಲಿ ಪಿರ್ಯಾದಿದಾರರಾದ ನೋರಾ ರೀಟಾ ಡಿಸೋಜಾ (50), ಗಂಡ: ಡೆನ್ನಿಸ್ ಪೌಲ್‌ಡಿಸೋಜಾ ,ವಾಸ: ಇಮೂನ್ಯುಯಲ್ ಬಂಡಸಾಲೆ, ಕೆಮ್ಮುಂಡೇಲು ಅಂಚೆ, ಎಲ್ಲೂರು ಗ್ರಾಮ, ಕಾಪು ತಾಲೂಕು ಇವರ ಗಂಡ ಡೆನ್ನಿಸ್ ಪೌಲ್‌ ಡಿಸೋಜಾ (54) ಎಂಬುವವರು KA 20 EM 8639 ನೇ ನಂಬ್ರದ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಆರೋಪಿ ಸುವಿನ್ ಅದೇ ರಸ್ತೆಯಲ್ಲಿ KA 19 MD 0493 ನೇ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡೆನ್ನಿಸ್ ಪೌಲ್‌ ಡಿಸೋಜಾ ರವರು ಚಲಾಯಿಸುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಉಂಟು ಮಾಡಿದ ಪರಿಣಾಮ ಡೆನ್ನಿಸ್‌ ಪೌಲ್‌ ಡಿಸೋಜಾ ರವರ ತಲೆಗೆ ಗಂಭೀರ ಗಾಯ ಉಂಟಾಗಿ ಉಡುಪಿ ಆದರ್ಶ ಆಸ್ಪತ್ತೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ :279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ : ದಿನಾಂಕ 25/06/2021ರಂದು ಸಂಜೆ 19:15 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ನಟರಾಜ್‌ ಕಾಮತ್‌, ಪ್ರಾಯ: 39, ತಂದೆ: ರಾಘವೇಂದ್ರ ಕಾಮತ್‌, ವಾಸ: ಸರಳಬೆಟ್ಟು, ಹೆರ್ಗಾ ಗ್ರಾಮ, ಉಡುಪಿ ಇವರು ತನ್ನ ಅಟೋ ರಿಕ್ಷಾದಲ್ಲಿ ಈಶ್ವರ ನಗರದ ವೈಷ್ಣವಿ ಸಭಾಭವನದ ಸಮೀಪದ ಡಿವೈಡರ್ ಬಳಿ ಹೋಗುತ್ತಿರುವಾಗ ರಸ್ತೆಯಲ್ಲಿ ವೈಷ್ಣವಿ ಸಭಾಭವನದ ಕಡೆಯಿಂದ KA 20 EU 4230 ನೇ ಸ್ಕೂಟರನ್ನು ಅದರ ಸವಾರ ನಾದ ಜಗನ್ನಾಥ ನಾಯ್ಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರಿನಿಂದ ರಂಜಿತ ರವರು ಸವಾರಿ ಮಾಡಿಕೊಂಡು ಹೊಗುತಿದ್ದ KA 20 EM 1550 ನೇ ಸ್ಕೂಟರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಎರಡೂ ಸ್ಕೂಟರ ಸವಾರರು ಸ್ಕೂಟರಸಮೇತ ರಸ್ತೆಗೆ ಬಿದ್ದು ರಂಜಿತ ರವರ ಎಡ ಕೈ ಮೂಳೆ ಮುರಿತ ಹಣೆ ಮತ್ತು ಬಲ ಭುಜ ಕ್ಕೆ ಗಾಯ ಉಂಟಾಗಿರುತ್ತದೆ ಹಾಗೂ ಆಪಾದಿತನಿಗೂ ಸಾಮನ್ಯ ಸ್ವರೂಪದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

 • ಮಣಿಪಾಲ: ಪಿರ್ಯಾದಿದಾರರಾದ ಬಾಬುಸಾಬ್‌ ದಂಗನ್ನವರ್‌, ವಾಸ: ಪ್ರಗತಿನಗರ ಪಾಲಿಟೆಕ್ನಿಕ್‌ ಕಾಲೇಜ್‌ ಬಳಿ, ಪ್ರಗತಿನಗರ,ಅಲೆವೂರು, ಉಡುಪಿ ಇವರ ಅಣ್ಣನ ಮಗ ಸೈದುಸಾಬ್ ಡೆಂಗೆನ್ನವರ್ ಪ್ರಾಯ: 20 ವರ್ಷ ಇವರು ಕಳೆದ 3 ತಿಂಗಳಿನಿಂದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಲೇಬರ್ ಕಾಂಟ್ರಾಕ್ಟರ್ ಗೋಕುಲ್ ಎಂಬವರ ಬಾಬ್ತು ಇಂಡಸ್ಟ್ರೀಯಲ್ ಏರಿಯಾದಲ್ಲಿ ಇರುವ ಸ್ಟಾಫ್ ರೂಮ್ ನಲ್ಲಿ ವಾಸವಾಗಿದ್ದು ದಿನಾಂಕ 25/06/2021 ರಂದು ಸಂಜೆ 5:30 ಗಂಟೆಯಿಂದ ರಾತ್ರಿ 9:30 ಗಂಟೆಯ ಮಧ್ಯಾವಧಿಯಲ್ಲಿ ಸ್ಟಾಫ್ ರೂಮ್ನಲ್ಲಿ ಪ್ಯಾನಿಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತ ಸೈದುಸಾಬ್ನಿಗೆ ಮದ್ಯಪಾನ, ಸಿಗರೇಟ್ ಸೇದುವ ಹವ್ಯಾಸವಿದ್ದು ಆತನು ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ : 174 ಸಿ.ಆರ್‌‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

 • ಕುಂದಾಪುರ: ದಿನಾಂಕ 26/06/2021 ರಂದು 19:30 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ನಗರದ ಲಕ್ಷ್ಮಿನಾರಾಯಣ ದೇವಸ್ಥಾನ ಬಳಿ ಬಳಿ ಆಪಾದಿತರಾದ 1) ಸುಶಾಂತ್ ಮೆಂಡನ್ , 22 ವರ್ಷ, ತಂದೆ: ಭಾಸ್ಕರ ಮೆಂಡನ್, ವಾಸ: ರಾಮ್ ಲೀಲಾ, ಬೀಚ ರಸ್ತೆ ಕುಂಭಾಶಿ, 2) ಆದಿತ್ಯ ಖಾರ್ವಿ, 21 ವರ್ಷ,ತಂದೆ: ದಿ.ರಾಮಖಾರ್ವಿ, ವಾಸ: ಗಿರಿಜಾ ಶ್ರೀನಿವಾಸ ನಿಲಯ, ಜೆ,ಎಂ, ರಸ್ತೆಮದ್ದುಗುಡ್ಡೆ ಕುಂದಾಪುರ ಇವರು ಪಿರ್ಯದಿದಾರರಾದ ಪರೀಕ್ಷಿತ್ ಕುಮಾರ್ (24) ತಂದೆ: ದಿ/ ರಂಗಬಾಬು, ವಾಸ: ಗದ್ದೆಮನೆ, ಎ.ಕೆ.ಜಿ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ತಡೆದು ನಿಲ್ಲಿಸಿ ಸುಶಾಂತ್ ಮೆಂಡನ್ ನು ಪಿರ್ಯಾದಿದಾರರನ್ನು ಬೈಕಿನಿಂದ ಕೆಳಗೆ ಇಳಿ ಎಂದು ಹೇಳಿ ಪಿರ್ಯಾದಿದಾರರು ಬೈಕಿನಿಂದ ಕೆಳಗೆ ಇಳಿದಾಗ ಆರೋಪಿತರು ಕೈಯನ್ನು ಹಿಡಿದು ಆದಿತ್ಯನು ಕೆಳಗೆ ದೂಡಿದನು ಆಗ ಸುಶಾಂತನು ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರ ಹಣೆಗೆ ಹಾಗೂ ಬಲಗೈಗೆ ಹೊಡೆದಿದ್ದು ಆ ಸಮಯ ಪಿರ್ಯಾದಿದಾರರ ತಲೆಗೆ ಹಾಗೂ ಬಲಗೈ ಬೆರಳಿಗೆ ರಕ್ತ ಗಾಯವಾಗಿರುತ್ತದೆ. ಆರೋಪಿತರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2019ಕಲಂ: 341, 324, 504, 506, r/w 34 IPC, , & 3(1)(r), 3(2)(V-a) SC/ST (POA) Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 27-06-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ