ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿ ವಿನಯ್‌ ಕುಮಾರ್‌  ಇವರು ದಿನಾಂಕ:25/05/2023 ರಂದು 16:45 ಗಂಟೆಗೆ ಮನೆಯಿಂದ ಕಾಪು ಪೇಟೆಗೆ ತನ್ನ ಬಾಬ್ತು ಸೈಕಲ್ಲಿನಲ್ಲಿ ಹೊರಟವರು ರಾ.ಹೆ 66 ಮಂಗಳೂರು-ಉಡುಪಿ ರಸ್ತೆಯ ಪಶ್ಚಿಮ ಅಂಚಿನಲ್ಲಿ ಕಾಪು ಕಡೆಗೆ ಹೋಗುತ್ತಿರುವಾಗ  ಈ ದಿನ ಸಮಯ ಸುಮಾರು 16:55 ಗಂಟೆಗೆ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ –ಉಡುಪಿ ಕಡೆಗೆ ಕೆ.ಎ-19-ಇ.ಜೆಡ್-7339‌ ನೇ ಸ್ಕೂಟರ್‌ ಸವಾರ ಶೇಖ್‌ ಮಹಮ್ಮದ್‌ ಅಪ್ತಾಭ್‌ ಎಂಬವನು ತನ್ನ ಬಾಬ್ತು ಸ್ಕೂಟರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿಯಾ೯ದಿದಾರರ  ತಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿಯಾ೯ದಿದಾರರು ಸೈಕಲ್‌ ಸಹಿತ ರಸ್ತೆಗೆ ಬಿದ್ದಿದ್ದು, ಅಪಘಾತಪಡಿಸಿದ ಸ್ಕೂಟರ್‌ ಸವಾರನು ಕೂಡ ರಸ್ತೆಗೆ ಬಿದ್ದಿರುತ್ತಾನೆ. ಈ ಅಪಘಾತದಿಂದ ಪಿಯಾ೯ದಿದಾರರ ತಂದೆಯ ತಲೆಯ ಹಿಂಬದಿಗೆ ತೀವೃ ರಕ್ತ ಗಾಯವಾಗಿದ್ದು, ಕಿವಿಯಿಂದ ರಕ್ತ ಸೋರುತ್ತಿದ್ದು ಎರಡು ಕಣ್ಣುಗಳಿಗೆ ಪೆಟ್ಟಾಗಿದ್ದು ಪ್ರಜ್ಞಾಹೀನಾ ಸ್ಥಿತಿಯಲ್ಲಿರುತ್ತಾರೆ. ಗಾಯಗೊಂಡ ಇಬ್ಬರನ್ನು ಅಲ್ಲಿಯೇ ಇದ್ದ ಪಿಯಾ೯ದಿದಾರರ ಸಂಬಂದಿ ನಿತಿನ್‌ ರಾಜ್‌ ಎಂಬವರು ಸ್ಥಳೀಯರ ಸಹಕಾರದಿಂದ ಉಡುಪಿಯ ಆದಶ೯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2023,  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಹಿರಿಯಡ್ಕ: ದಿನಾಂಕ 24/05/2023 ರಂದು ಪಿರ್ಯಾದಿ ಸೋನ್ಸ್ ಈಲೆಟ್ ಎಡ್ವರ್ಡ್ ಇವರು ಅವರ  ತಾಯಿ ಸಾರಾ ಸೋನ್ಸ್ ರವರ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ಬಾಬ್ತು KA18 M 6382 ನೇ ಮಾರುತಿ 800 ಕಾರಿನಲ್ಲಿ ಪಿರ್ಯಾದಿದಾರರು ಚಾಲಕರಾಗಿ ಕೊಪ್ಪದಿಂದ ಮಣಿಪಾಲಕ್ಕೆ ಬರುತ್ತಿರುವಾಗ ಪೆರ್ಡೂರು ಗ್ರಾಮದ ಪಕ್ಕಾಲು ಎಂಬಲ್ಲಿ ಬೆಳಿಗ್ಗೆ 07:35 ಗಂಟೆಗೆ ತಲುಪಿದಾಗ ಫಿರ್ಯಾದುದಾರರ ಎದುರಿನಿಂದ ಅಂದರೆ ಹಿರಿಯಡ್ಕ ಕಡೆಯಿಂದ ಹೆಬ್ರಿ ಕಡೆಗೆ KA 51 D 9445  ನೇ ಗಜಾನನ ಬಸ್ಸಿನ ಚಾಲಕ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಫಿರ್ಯಾಧಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಕಾರಿನ ಗಾಜಿನ ಪುಡಿ ತಾಗಿ ಫಿರ್ಯಾಧಿದಾರರ ಬಲಕಣ್ಣಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿರುತ್ತದೆ. ಈ ಅಪಘಾತಕ್ಕೆ  KA 51 D 9445  ನೇ ಗಜಾನನ ಬಸ್ಸಿನ ಚಾಲಕ ಗಿರೀಶ್  ರವರ ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯೇ  ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ 279, 338, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ

 • ಕುಂದಾಪುರ:  ಪಿರ್ಯಾದಿ ದೇವೇಂದ್ರ ಇವರರು ಹೀರೋ ಕಂಪನಿಯ KA 20 EF 6524 ನೇ  PASSION PRO MOTOR CYCLE ವಾಹನದ ನೊಂದಣಿ ಮಾಲೀಕರಾಗಿದ್ದು ಸದ್ರಿ ವಾಹನವನ್ನು  ದಿನಾಂಕ 23/05/2023 ರಂದು ಬೆಳಿಗ್ಗೆ 09:00 ಗಂಟೆಗೆ ಎಂದಿನಂತೆ ತಾನು ಕೆಲಸ ಮಾಡುವ ವಡೇರಹೋಬಳಿಯ ಶಾಂತಿನಿಕೇತನ ರಸ್ತೆಯಲ್ಲಿರುವ PARAMOUNT ENGINEERING WORKS ಎಂಬ ಗ್ಯಾರೇಜ್‌ ಎದುರು ನಿಲ್ಲಿಸಿದ್ದು, ಅದೇ ದಿನ ಮಧ್ಯಾಹ್ನ 14:00 ಗಂಟೆಗೆ ಸದ್ರಿ ವಾಹನವನ್ನು ನಿಲ್ಲಿಸಿದ ಜಾಗದಲ್ಲಿ ನೋಡಿದಾಗ ಮೋಟಾರ್‌ ಸೈಕಲ್‌ ಇರದೆ ಇದ್ದು ನಂತರದಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ  ಸದ್ರಿ ಮೋಟಾರು ಸೈಕಲನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು  ಹೋಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 40,000/- ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಕುಂದಾಪುರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023  ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಫಿರ್ಯಾದಿ ಕೃಷ್ಣ ಇವರು ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆಯಲ್ಲಿ ಹೆಂಡತಿ ಮಂಜುಳ ಮತ್ತು ಮಕ್ಕಳಾದ ಅನಿತ, ಚಿತ್ರ ಮತ್ತು ಪ್ರಿಯ(13 ವರ್ಷ) ರವರೊಂದಿಗೆ ವಾಸಮಾಡಿಕೊಂಡಿದ್ದು, ಪಿರ್ಯಾದಿದಾರರ ಮೂರನೆ ಮಗಳು ಪ್ರಿಯ 7 ನೇ ತರಗತಿ ಪಾಸ್ ಆಗಿ ಈಗ ರಜೆಯಲ್ಲಿ ಇದ್ದಾಳೆ. ದಿನಾಂಕ: 26.05.2023 ರಂದು ಎಲ್ಲರೂ ಎಂದಿನಂತೆ ಕೆಲಸಕ್ಕೆ ಹೋಗಿದ್ದು ಪ್ರಿಯಾ ಒಬ್ಬಳೆ ಮನೆಯಲ್ಲಿ ಇರುತ್ತಾಳೆ. ಪಿರ್ಯಾದಿದಾರರ ನೆರೆಮನೆಯ ಈಶ್ವರ ಎಂಬುವವರು ಬಂದು ಪಿರ್ಯಾದುದಾರರಿಗೆ ಪ್ರಿಯಾಳು ಕೋಣೆಯಲ್ಲಿ ನೇಣು ಹಾಕಿಕೊಂಡಿರುವುದಾಗಿ ತಿಳಿಸಿದ್ದು, ಪ್ರಿಯಾಳು ನೆರೆಮನೆಯ ಪವಿತ್ರ ಎಂಬುವವರಿಗೆ ಸಮಯ ಬೆಳಿಗ್ಗೆ 09:30 ಗಂಟೆಗೆ ಊಟಕ್ಕೆ ಸಾಂಬಾರು ಬೇಕೆಂದು ಕೇಳಿದ್ದು ಪವಿತ್ರರವರು ಸಾಂಬಾರು ತೆಗೆದುಕೊಂಡು 13:30 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದಾಗ ಎದುರಿನ ಬಾಗಿಲು ಹಾಕಿಕೊಂಡಿದ್ದು ಪ್ರಿಯ ಎಂದು ಕೂಗಿದರೂ ಬಾಗಿಲು ತೆಗೆಯದೇ ಇದ್ದುದರಿಂದ  ಮನೆಯ ಹಿಂದಿನ ಕಿಟಕಿಯಲ್ಲಿ ಬೆಡ್ ರೂಮಿನಲ್ಲಿ ನೋಡಿದಾಗ ಪ್ರಿಯಾಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2023 ಕಲಂ: 174  ಸಿ.ಆರ್.ಪಿ.ಸಿ ‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ ಕೆಮ್ಮಣ್ಣು ಅಂತೊಟ್ಟು ನಿವಾಸಿ ಪಿರ್ಯಾದಿ ಲಕ್ಷ್ಮಣ್ ಪೂಜಾರಿ  ಇವರ ಮಗಳು ಮಾನ್ವಿ  ಪ್ರಾಯ 9 ವರ್ಷ ಈಕೆ ದಿನಾಂಕ 26/05/2023 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರರ ಮನೆಯ ಬಳಿ ಇರುವ ಪಿರ್ಯಾದಿಯ ಚಿಕ್ಕಪ್ಪ ಉದಯ ಪೂಜಾರಿ ಎಂಬವರ ಮನೆಯ ಬಳಿ  ನೆರೆಕರೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಆಕೆಯ ಕುತ್ತಿಗೆಗೆ  ಸುತ್ತಿಕೊಂಡವಳನ್ನು ಚಿಕಿತ್ಸೆ ಬಗ್ಗೆ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಅಲ್ಲಿಯ ವೈದ್ಯಾಧಿಕಾರಿಯವರಲ್ಲಿ ತೋರಿಸಿದಲ್ಲಿ ವೈದ್ಯಾಧಿಕಾರಿಯವರು ಮಾನ್ವಿಯನ್ನು  ಪರೀಕ್ಷಿಸಿ   ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2023 ಕಲಂ: 174  ಸಿ.ಆರ್.ಪಿ.ಸಿ ‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-05-2023 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080