ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶಶಾಂಕ್ ಶೆಟ್ಟಿ, (23) ತಂದೆ: ರಮಾನಂದ ಶೆಟ್ಟಿ,  ವಾಸ: ಕಾವೇರಿ ಕೃಪಾ, ಪದ್ಮನಾಭ ನಗರ, ಸಾಣೂರು ಗ್ರಾಮ, ಕಾರ್ಕಳ ಇವರು ದಿನಾಂಕ 26/05/2022 ರಂದು ಮನೆಯಿಂದ ಮೋಟಾರ್ ಸೈಕಲ್ ನಲ್ಲಿ ಮಿಯ್ಯಾರಿಗೆ ಹೊರಟಿದ್ದು ಪುಲ್ಕೇರಿ ಬೈಪಾಸ್ ಕಡೆಯಿಂದ ಬಜಗೋಳಿ ಕಡೆಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಸುಮಾರು ಬೆಳಗ್ಗೆ 10:55 ಗಂಟೆಗೆ ಆಭರಣ ಶೋರೂಮ್ ಬಳಿ ತಲುಪುವಾಗ ಶಶಾಂಕ್ ಶೆಟ್ಟಿ ರವರ ಎದುರಿನಲ್ಲಿ ಪುಲ್ಕೇರಿ ಕಡೆಯಿಂದ ಬಜಗೋಳಿ ಕಡೆಗೆ ಸಿಯಾನ್ ಡಿ ಸೋಜಾ, (23) ರವರು KA-20 EW-2982 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬರುತ್ತಿರುವಾಗ, ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ KA-19 HA-4393 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಆನಂದ ಎಂಬಾತನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸಿಯಾನ್ ಡಿ ಸೋಜಾ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ  ಸಿಯಾನ್ ಡಿ ಸೋಜಾ ರವರಿಗೆ ಎಡಕಾಲು ಮೂಳೆಮುರಿತಗೊಂಡಿದ್ದು, ಎಡಕೈ ಹಾಗೂ ತಲೆಯ ಹಿಂಬದಿಗೆ ಒಳಜಖಂಗೊಂಡಿರುತ್ತದೆ. ಹಾಗೂ ಅಪಾದಿತ ಆನಂದನಿಗೆ ಎಡಕಾಲಿನ ಬಳಿ ತರಚಿದ ಗಾಯವಾಗಿರುತ್ತದೆ.  ಚಿಕಿತ್ಸೆಯ ಬಗ್ಗೆ ಸಿಯಾನ್ ಡಿ ಸೋಜಾ ರವರನ್ನು ಕಾರ್ಕಳ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ಕೌಶಿಕ್‌ ದೇವಾಡಿಗ, (22) ತಂದೆ: ಚಂದ್ರಶೇಖರ ದೇವಾಡಿಗ, ವಾಸ: ಬಂಕಾಡಿ ಹೌಸ್‌, ಪಾದೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು, ಉಡುಪಿ ಇವರು ದಿನಾಂಕ 25/05/2022 ರಂದು ತನ್ನ ಸ್ನೇಹಿತನ ಸ್ಕೂಟರ್‌ KA-20 EY-0739 ನೇಯದನ್ನು ಸವಾರಿ ಮಾಡಿಕೊಂಡು ಮಜೂರಿಗೆ ಹೋಗಿದ್ದು, ಕೆಲಸ ಮುಗಿಸಿ ವಾಪಸ್ಸು ಮನೆಗೆ ತೆರಳುತ್ತಿರುವ ಸಮಯ ಸುಮಾರು 16:45 ಗಂಟೆಗೆ ಪಾದೂರು ಗ್ರಾಮದ ಕೆಸರುಗದ್ದೆ ಸಮೀಪ ತಿರುವು ತಲುಪುವಾಗದ ಕ್ರೂಡ್‌ ಆಯಿಲ್‌ ಕಡೆಯಿಂದ ಚಂದ್ರನಗರ ಕಡೆಗೆ KA-20 Z-2302 ನೇಯ ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೌಶಿಕ್‌ ದೇವಾಡಿಗ ರವರು ಸವಾರಿಮಾಡಿಕೊಂಡು ಹೋಗುತ್ತಿದ್ದ KA-20 EY-0739 ನೇಯ ಸ್ಕೂಟರ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಕೌಶಿಕ್‌ ದೇವಾಡಿಗ ರವರ ಬಲ ಕಾಲಿನ ಕೊಲು ಕಾಲಿಗೆ ರಕ್ತಗಾಯ ಹಾಗೂ ಒಳಜಖಂ ಆಗಿರುತ್ತದೆ. ಈ ಅಪಘಾತಕ್ಕೆ KA-20 Z-2302 ನೇಯ ಕಾರಿನ ಚಾಲಕ ಮೊಹಮ್ಮದ್‌ ಫಾರೂಕ್‌ನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಮಂಜು ಕೆ (22) ತಂದೆ: ಕೃಷ್ಣ ಮೂರ್ತಿ, ಎಸ್ ವಾಸ: ತಿರುಮಲ ದೇವಸ್ಥಾನದ  ಹತ್ತಿರ ,ಆಡನೂರು , ಗ್ರಾಮ ಮತ್ತು ಅಂಚೆ, ಹೊಳಲ್ಕೆರೆ , ತಾಲೂಕು ಇವರ ತಂದೆಯವರು ಅನಾರೋಗ್ಯದ ನಿಮಿತ್ತಾ ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ದಿನಾಂಕ 24/05/2022 ರಂದು ಅಸ್ಪತ್ರೆಯಿಂದ ಬಿಡುಗಡೆಯಾಗುವವರಿದ್ದು ಅವರನ್ನು ಊರಿಗೆ ಕರೆದುಕೊಂಡು ಹೋಗುವರೆ ಮಂಜು ಕೆ ರವರು ಕಾರು ನಂಬ್ರ KA-16 C-8986 ನೇ ದರಲ್ಲಿ ಅಡನೂರಿನಿಂದ ಮಣಿಪಾಲಕ್ಕೆ  12:00 ಗಂಟೆಗೆ ಹೊರಟು ಬಂದಿದ್ದು ಸಮಯ  ಸುಮಾರು 5:40 ಗಂಟೆಗೆ ಪೆರ್ಡೂರಿನಿಂದ ಮಣಿಪಾಲ ಕಡೆ ಹೋಗುವ  ದಾರಿ ಮಧ್ಯೆ ಎನ್‌ಎಚ್‌169 (ಎ)  ರಾ. ಹೆ ಯ ಪಕ್ಕಾಲಿ ಹೆಬ್ಬಾರ್ ಸೇತುವೆ  ಬಳಿ ತಿರುವಿನಲ್ಲಿ ಎದುರುಗಡೆಯಿಂದ ಪೆರ್ಡೂರು ಕಡೆ ಹೋಗುವ KA-20-C-6876 ನೇ ಬಸ್ಸಿನ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಬದಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಮಂಜು ಕೆ ರವರಿಗೆ ಬಲಕಣ್ಣಿನ ಹುಬ್ಬು, ಮೂಗು, ಹಾಗೂ ಬಲಕೆನ್ನೆಗೆ ರಕ್ತಗಾಯವಾಗಿರುತ್ತದೆ. ಮಂಜು ಕೆ ರವರಿಗೆ ಕಣ್ಣಿನ ಹುಬ್ಬಿನ ಬಳಿ ಶಸ್ತ್ರ ಚಿಕಿತ್ಸೆ ಆಗಿದ್ದು ಅಲ್ಲದೆ ಚಾಲಕ ವಸಂತರವರು ಇವರ ಅರೈಕೆಯಲ್ಲಿದ್ದುದ್ದರಿಂದ ದೂರು ನೀಡಲು ತಡವಾಗಿರುವುದಾಗಿದೆ. ಈ ಅಪಘಾತಕ್ಕೆ ಬಸ್ ನಂಬ್ರ KA-20-C-6876 ನೇ ಬಸ್ ಚಾಲಕನ ಅತೀವೇಗ ಹಾಗೂ ಅಜಾಗರೂಗಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿದಾರರಾಧ ಶ್ರೀಧರ (27) ತಂದೆ: ಸಂಜೀವ  ಶೆಟ್ಟಿ ವಾಸ: ಮಾವಿನಕಾರು  ಕೊಲ್ಲೂರು ಗ್ರಾಮ ಬೈಂದೂರು ಇವರು ದಿನಾಂಕ 25/05/2022 ರಂದು ಕೆಲಸದ ನಿಮಿತ್ತ  ತನ್ನ KA-20 EC-2211 ನೇ ಮೋಟಾರು ಸೈಕಲ್‌ನ್ನು  ಕೊಲ್ಲೂರು ಕಡೆಯಿಂದ  ಚಿತ್ತೂರು ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿದಾಗ ಸಂಜೆ 5:00 ಗಂಟೆಗೆ ಕುಂದಾಪುರ ತಾಲೂಕು ಇಡೂರು - ಕುಂಜ್ಞಾಡಿ ಗ್ರಾಮದ  ರಾಜ್ಯ ಹೆದ್ದಾರಿ  ಇಡೂರು  ಹೈಗುಳಿ ದೇವಸ್ಥಾನದ  ಮುಖಮಂಟಪ ಬಳಿ  ತಲುಪಿದಾಗ ಎದರುಗಡೆಯಿಂದ ಚಿತ್ತೂರು ಕಡೆಯಿಂದ  ಜಡ್ಕಲ್  ಕಡೆಗೆ  ಆರೋಪಿ ಕಿರಣ ತನ್ನ KA-20 ED-1493 ನೇ ಮೋಟಾರು ಸೈಕಲ್‌ನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ತೀರಾ ಬಲ ಬದಿಗೆ ಚಲಾಯಿಸಿ ಶ್ರೀಧರ ರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೋಟಾರು ಸೈಕಲ್‌ಸವಾರರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು, ಶ್ರೀಧರ ಇವರಿಗೆ  ಬಲ ಕಾಲು ಮೂಳೆ ಮುರಿತ ಹಾಗೂ ಬಲಭುಜಕ್ಕೆ  ಒಳಜಖಂ ನೋವು ಹಾಗೂ ಮುಖಕ್ಕೆ ರಕ್ತಗಾಯ ಉಂಟಾಗಿ ಪಿರ್ಯಾಧಿದಾರರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು  ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣೆಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಹಾಗೂ ಆರೋಪಿಗೂ ಪೆಟ್ಟಾಗಿದ್ದು ಕುಂದಾಪುರ ಚಿನ್ಮಯಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾಧ ಅಲ್ಪೋನ್ಸ್ ಪಿಂಟೊ (56) ತಂದೆ: ಲಿಯೋ ಪಿಂಟೋ ವಾಸ: ಶ್ರೀ ಲಕ್ಷ್ಮೀ ಆಂಜನೇಯ ಭಜನಾ ಮಂದಿರದ ಬಳಿ ಬೋಳ್ಜೆ ಉದ್ಯಾವರ ಗ್ರಾಮ ಮತ್ತು ಅಂಚೆ ಉಡುಪಿ ಇವರಿಗೆ ದಿನಾಂಕ 25/05/2022 ರಂದು ಸಮಯ ಸುಮಾರು ರಾತ್ರಿ 10.00 ಗಂಟೆಗೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ಜೈಹಿಂದ ಸರ್ಕಲ್‌‌ನಿಂದ ತನ್ನ ಮನೆಯಾದ ಬೋಳ್ಜೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ರಶೀದ್ ರವರು ತನ್ನ ಮೋಟಾರು ಸೈಕಲ್‌ ‌ನಂಬ್ರ ಕೆಎ-20 ಇ.ಎಕ್ಸ್‌.ಝಡ್-5910 ನೇದನ್ನು ಉಡುಪಿ ಕಡೆಯಿಂದ ಅತೀ ವೇಗ ಹಾಗೂ ಅಜಾರೂಕತೆಯಿಂದ ಸವಾರ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಇವರು ಮಣ್ಣು ರಸ್ತೆಯಲ್ಲಿ ಬಿದ್ದಿದ್ದು, ಢಿಕ್ಕಿ ಹೊಡೆದ ಮೋಟಾರು ಸೈಕಲ್‌ನೂ ಸ್ವಲ್ಪ ದೂರದಲ್ಲಿ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು,  ಅಲ್ಪೋನ್ಸ್ ಪಿಂಟೊ ರವರಿಗೆ ಪಾದದ ಗಂಟಿಗೆ, ತೀವೃ ತರಹದ ಮೂಳೆ ಮುರಿತದ ಒಳ ಜಖಂ ಆಗಿದ್ದು,  ರಶೀದ್ ರವರಿಗೂ ಪೆಟ್ಟಾಗಿದ್ದು, ಅಲ್ಲಿದ್ದ ಜನರು ಉಪಚರಿಸಿ ನೋಡಿ ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಸುಬ್ರಹ್ಮಣ್ಯ ಗಾಣಿಗ (29) ತಂದೆ: ಆನಂದ ಗಾಣಿಗ ವಾಸ: ಸುಬ್ರಹ್ಮಣ್ಯ  ನಿಲಯ, ಯಡೇರಿ, ಕಾಲ್ತೋಡು ಗ್ರಾಮ & ಪೋಸ್ಟ್ , ಬೈಂದೂರು ಇವರು ದಿನಾಂಕ 25/05/2022 ರಂದು  12:00 ಗಂಟೆಗೆ ತನ್ನ ಬಾವನ KA-20 EL-6855 ನೇ ಮೋಟಾರು ಸೈಕಲ್ ನಲ್ಲಿ ಹಳಗೇರಿಯಿಂದ ತನ್ನ ಮನೆಯಾದ ಯಡೇರಿ ಗೆ ಬರುತ್ತಿರುವಾಗ ಬಿಜೂರು ಗ್ರಾಮದ ಹೊಸಕೋಟೆ ಬಳಿಯ ತಿರುವು ರಸ್ತೆಯಲ್ಲಿ KA-20 EY-4394  ನೇ ಮೋಟಾರು ಸೈಕಲ್ ಸವಾರನು ಆತನ  ಮೋಟಾರು ಸೈಕಲ್ ನ್ನು ಎದುರಿನಿಂದ ಅಂದರೆ ಹಳಗೇರಿ ಕಡೆಯಿಂದ ಯಡೇರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲ  ಬದಿಗೆ ಚಲಾಯಿಸಿಕೊಂಡು  ಬಂದು ಮೋಟಾರು ಸೈಕಲ್ ಗೆ ಡಿಕ್ಕಿ  ಹೊಡೆದ ಪರಿಣಾಮ ಸುಬ್ರಹ್ಮಣ್ಯ ಗಾಣಿಗ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಎಡ ಕೈ ಮೂಳೆ ಮುರಿತ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಆರೋಪಿಗೂ ಎಡ ಬದಿಯ ಕಣ್ಣಿನ ಬಳಿ ಸಣ್ಣ ಪುಟ್ಟ ಗಾಯವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಜಯರಾಮ ಬೋವಿ (48) ತಂದೆ: ಕೊರಗು ಬೋವಿ ವಾಸ: ಸಿಕ್ಸಾಲು ಮನೆ, ಜಡ್ಕಲ್ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 25/05/2022 ರಂದು 17:20 ಗಂಟೆಗೆ ತನ್ನ KA-21 J-7080 ನೇ ಮೋಟಾರು ಸೈಕಲ್ ನಲ್ಲಿ ಹೆಂಡತಿ ರೇವತಿಯವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಹೆಮ್ಮಾಡಿಯಿಂದ ಕಾಲ್ತೋಡಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಹೋಗುತ್ತಾ ನಾವುಂದ ಗ್ರಾಮದ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ತಲುಪಿದಾಗ ಇವರ ಹಿಂದಿನಿಂದ KA-65- 8535 ನೇ ಲಾರಿಯನ್ನು ಅದರ ಚಾಲಕನು ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಜಯರಾಮ ಬೋವಿ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಜಯರಾಮ ಬೋವಿ ರವರು ಹಾಗೂ ಸಹ ಸವಾರಳಾದ ರೇವತಿ ರವರು ಮೋಟಾರು ಸೈಕಲ್ ಸಮೇತ ರಸ್ತೆ ಬಿದ್ದು , ಲಾರಿಯ ಚಕ್ರವು ಪಿರ್ಯಾದುದಾರರ ಹೆಂಡತಿ ರೇವತಿ ರವರ ಎಡ ಕೈಯ ಮೇಲೆ  ಹತ್ತಿಕೊಂಡು ಹೋಗಿ ಎಡ ಕೈಗೆ ತೀವ್ರ  ಸ್ವರೂಪದ ರಕ್ತಗಾಯ, ಹಣೆಗೆ ತಲೆಯ ಹಿಂಭಾಗಕ್ಕೆ , ಎಡ ಭುಜಕ್ಕೆ ರಕ್ತಗಾಯ  ಹಾಗೂ ಬಲ ಭುಜಕ್ಕೆ ತರಚಿದ ಗಾಯವಾಗಿದ್ದು  ಜಯರಾಮ ಬೋವಿ ರವರಿಗೆ ಬಲ ಕೈ ಗೆ ತರಚಿದ ಗಾಯ, ಬಲ ಕೈ ಕಿರು ಬೆರಳಿಗೆ ಜಖಂ ,ಬಲ ಹಾಗೂ ಎಡ ಕಾಲಿನ ಮೊಣಕಾಲಿಗೆ ತರಚಿದ ಗಾಯ ಹಾಗೂ ಬೆನ್ನಿಗೆ ಗುದ್ದಿದ ಒಳನೋವು ಆಗಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಅಂಬುಲೆನ್ಸ್  ನಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ಕಳುಹಿಸಿದ್ದು  ಕುಂದಾಪುರ ಆದರ್ಶ ಆಸ್ಪತ್ರೆಗೆ ಹೋದಲ್ಲಿ ವೈದ್ಯರು  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಹೋಗಲು ಸೂಚಿಸಿದ ಮೇರೆಗೆ ಪಿರ್ಯಾದುದಾರರ ಹೆಂಡತಿಯ ತಮ್ಮ ಚಂದ್ರಶೇಖರ ರವರು ಗಾಯಾಳುಗಳನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪಿರ್ಯಾದುದಾರರ ಹೆಂಡತಿ ರೇವತಿಯವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು, ಜಯರಾಮ ಬೋವಿ ರವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ಜಯರಾಮ ಬೋವಿ ರವರು ಹೆಂಡತಿಯ ಆರೈಕೆಯಲ್ಲಿ  ಆಸ್ಪತ್ರೆಯಲ್ಲಿ ಇದ್ದುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾಧ ಈಶ್ವರ ಪುತ್ರನ್ (48) ತಂದೆ: ಆನಂದ ಪುತ್ರನ್ ವಾಸ: ಬಲರಾಮ ನಗರ ಮಲ್ಪೆ ಕೊಡವೂರು ಇವರಿಗೆ ದಿನಾಂಕ 26/05/2022 ರಂದು ಬೆಳಿಗ್ಗೆ 08:00 ಈಶ್ವರ ಪುತ್ರನ್ ರವರ ಪರಿಚಯಸ್ಥರು  ಕರೆ ಮಾಡಿ ಮಲ್ಪೆ ಬೀಚ್ ನ ಮರಳಿನ ಮೇಲೆ  ಓರ್ವ ಅಪರಿಚಿತ ವ್ಯಕ್ತಿಯ ಮೃತ ದೇಹ  ಇರುವುದಾಗಿ ತಿಳಿಸಿದಂತೆ ಇವರು  ಅಂಬುಲೆನ್ಸ್  ನಲ್ಲಿ  ಮಲ್ಪೆ ಬೀಚ್ ಗೆ ಹೋಗಿ  ಮೃತ ದೇಹವನ್ನು  ನೋಡಿದಾಗ ಅಪರಿಚಿತ ವ್ಯಕ್ತಿಯು ಸುಮಾರು 45-50 ವರ್ಷದ ಪ್ರಾಯದವನಾಗಿದ್ದು, ನೀಲಿ ಬಣ್ಣದ ಟೀ ಶರ್ಟ್‌, ಬೂದು ಬಣ್ಣದ  ರ್ಪಯಾಂಟ್ ಧರಿಸಿರುತ್ತಾನೆ . ಸದ್ರಿ ಅಪ್ರಿಚಿತ ವ್ಯಕ್ತಿಯು ಸುಮಾರು 3 ದಿನ ಗಳ  ಹಿಂದೆ ಮಲ್ಪೆ ಬೀಚ್ ತಿರುಗಾಡಲು ಬಂದಿದ್ದು  ಪ್ರತಿದಿನ ಮಧ್ಯಪಾನ ಮಾಡಿ ಮಲ್ಪೆ ಬೀಚ್ ನಲ್ಲಿಯೆ  ಮಲಗುತ್ತಿದ್ದು, ಆತನ ಹೆಸರು ಸೂರಜ್ ಗದಗ ಜಿಲ್ಲೆ ಎಂಬುದಾಗಿ ಅಲ್ಲಿನ ಲೈಪ್ ಗಾರ್ಡ ತಿಳಿಸಿರುತ್ತಾರೆ.  ಮೃತ ಸೂರಜ್ ವಿಪರೀತ ಮಧ್ಯಪಾನ ಮಾಡಿ ದಿನಾಂಕ 26/05/2022 ರಂದು ಬೆಳಿಗ್ಗೆ 7:00 ಗಂಟೆಯಿಂದ 08:00 ಗಂಟೆಯ ಮಧ್ಯಾವಧಿಯಲ್ಲಿ  ಹೃದಯಾಘಾತದಿಂದ ಅಥವಾ ಯಾವುದೋ ಖಾಯಿಲೆಯಿಂದ   ಮೃತಪಟ್ಟಿದ್ದು, ಮೃತದೇಹವನ್ನು ಉಡುಪಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33 /2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಗಿರಿಜಾ, (40) ಗಂಡ: ಚಂದ್ರ, ವಾಸ: ಐತುಮನೆ, ತಾರಿಬೇರು, ಆಲೂರು ಗ್ರಾ, ಕುಂದಾಪುರ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ಶ್ರೀಮತಿ ಗಿರಿಜಾ ರವರ ಗಂಡ ಚಂದ್ರ (55) ರವರು ಕುಂದಾಪುರದಲ್ಲಿ ಹಣ್ಣಿನ  ವ್ಯಾಪಾರ ಮಾಡಿಕೊಂಡಿದ್ದು ವಿಪರೀತ ಶರಾಬು ಕುಡಿಯುವ ಚಟ ಬೆಳೆಸಿಕೊಂಡಿರುತ್ತಾರೆ. ಹೀಗಿರುತ್ತಾ ಚಂದ್ರರವರು ದಿನಾಂಕ 24/05/2022  ರಂದು ಬೆಳಗ್ಗೆ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮದ್ಯಾಹ್ನ 12:30 ಗಂಟೆಗೆ ದೂರವಾಣಿ ಕರೆ ಮಾಡಿ ಬೇರೆ ಕಡೆ ಕೆಲಸಕ್ಕೆ ಹೋಗಿರುವುದಾಗಿ ಹೇಳಿದ್ದು ಈವರೆಗೆ ಮನೆಗೆ ಬಾರದೇ ಇದ್ದು ದಿನಾಂಕ 26/05/2022 ರಂದು 10:30 ಗಂಟೆಗೆ ಕುಂದಾಪುರದಲ್ಲಿ ಅಪರಿಚಿತ ಶವ  ಇರುವ ವಿಚಾರ ತಿಳಿದು ಕುಂದಾಪುರದ ಸರ್ಕಾರಿ ಶವಾಗಾರಕ್ಕೆ ಬಂದು ನೋಡಲಾಗಿ ಮೃತದೇಹವು ಶ್ರೀಮತಿ ಗಿರಿಜಾ ರವರ ಗಂಡ ಚಂದ್ರರವರದ್ದಾಗಿರುತ್ತದೆ. ಚಂದ್ರರವರು ವಿಪರೀತ ಶರಾಬು ಕುಡಿಯುವ ಚಟ ಹಾಗೂ ಸಾಲ ತೀರಿಸಲಾಗದೇ 24/05/2022  ರಂದು ಮದ್ಯಾಹ್ನ 12:30 ರಿಂದ 26/05/2022 ರಂದು 10:35 ಗಂಟೆಯ ನಡುವೆ  ಚಂದ್ರರವರು ಕುಂದಾಪುರ ತಾಲೂಕು ಸಂಗಂ ಬಳಿ ಇರುವ ಹೊಳೆಗೆ ಹಾರಿ ಮೃತಪಟ್ಟಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯ ಇಲ್ಲದೇ ಇರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಲತೇಶ್ ಶೆಟ್ಟಿ, (34) ತಂದೆ: ಜಗನ್ನಾಥ ಶೆಟ್ಟಿ, ವಾಸ: ಜಾರ್ಕಳ, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ಇವರ ಬಳಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಪ್ಪ ಚಿತ್ರಗಿ, (39)ಎಂಬುವವರು ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಜಾರ್ಕಳದ ರಜಿಯಾ ಕಾಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ 26/05/2022 ರಂದು ಬೆಳಗ್ಗೆ 09:30 ಗಂಟೆಗೆ  ಶಿವಪ್ಪ ಚಿತ್ರಗಿ ವಾಸವಿರುವ ಮನೆಯ ಬದಿಯವರಾದ ಲಕ್ಷ್ಮೀ ರವರು ಲತೇಶ್ ಶೆಟ್ಟಿ ರವರಿಗೆ ಪೋನ್ ಮಾಡಿ ಶಿವಪ್ಪ ಚಿತ್ರಗಿ ರವರು ಮಲಗಿದ್ದು, ಮಾತನಾಡುತ್ತಿರುವುದಿಲ್ಲ ಎಂದು ತಿಳಿಸಿದ ಕೂಡಲೇ ಲತೇಶ್ ಶೆಟ್ಟಿ ರವರು  ಹೋಗಿ ನೋಡಿದ್ದು, ಶಿವಪ್ಪ ಚಿತ್ರಗಿರವರು ಮೃತಪಟ್ಟಿದ್ದು, ಶಿವಪ್ಪ ಚಿತ್ರಗಿರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಅನಾರೋಗ್ಯದಿಂದ ಬಳಲುತಿದ್ದ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಪ್ರಸನ್ನ (25) ತಂದೆ:ನೀಲಯ್ಯ ಮೂಲ್ಯ  ವಾಸ:ಇಂದಿರಾನಗರ ಮಾಳ ಗ್ರಾಮ ಕಾರ್ಕಳ ಇವರ ತಂದೆ ನೀಲಯ್ಯ ಮೂಲ್ಯ ಇವರು ಸುಮಾರು 10 ವರ್ಷದಿಂದ ಟಿ.ಬಿ.ಖಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೆ ಮದ್ಯಪಾನ ಮಾಡುವ ಅಭ್ಯಾಸವಿರುತ್ತದೆ. ಇವರು ಅನಾರೋಗ್ಯದಿಂದ ಮತ್ತು ಮದ್ಯಪಾನದ ಅಭ್ಯಾಸದ ಚಟದಿಂದ ಮನನೊಂದು ಇಲ್ಲವೇ ಯಾವುದೋ ಕಾರಣದಿಂದ ಜೀವನದಲ್ಲಿ ನೊಂದು  ದಿನಾಂಕ 26/5/2022 ರಂದು ಅಪರಾಹ್ನ 2 ಗಂಟೆಯಿಂದ ಸಂಜೆ 6:30 ಗಂಟೆ ಮದ್ಯೆ ಸಮಯದಲ್ಲಿ ಕಾರ್ಕಳ ತಾಲೂಕು ಮಾಳ ಗ್ರಾಮದ ಮಲ್ಲಾರು ಎಂಬಲ್ಲಿರುವ ಜನಾರ್ದನ ಗೌಡ ಇವರ ಮನೆಯ ಮರದ ಅಡ್ಡಕ್ಕೆ ಸಣ್ಣ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 15/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸುಧೀಂದ್ರ ಕಟ್ಟೆ, (51), ತಂದೆ: ಕಟ್ಟೆ ಗೋಪಾಲಕೃಷ್ಣ ರಾವ್, ವಾಸ: ಶ್ರೀ ಮೂಕಾಂಬಿಕಾ, ಬ್ರಹ್ಮಗುಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ ಇವರ ತಂದೆ ಕೆ ಗೋಪಾಲಕೃಷ್ಣರಾವ್ (79) ಎಂಬುವವರು ವ್ಯವಹಾರಸ್ಥರಾಗಿದ್ದು ಸದ್ರಿಯವರು ದಿನಾಂಕ 26/05/2022ರಂದು 06:20 ಸುಮಾರಿಗೆ ಸುಧೀಂದ್ರ ಕಟ್ಟೆ ರವರ ಪರಿಚಯದ ಅಂಕದಕಟ್ಟೆ ನಿವಾಸಿ ಮೊಳಹಳ್ಳಿ ಗಣೇಶ್ ಶೆಟ್ಟಿಯವರ ಮನೆಯ ಸಿಟೌಟಿನಲ್ಲಿ ಅವರ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಗಣೇಶ್ ಶೆಟ್ಟಿಯವರು ತಿಳಿಸಿದ ಮೇರೆಗೆ ಸುಧೀಂದ್ರ ಕಟ್ಟೆ ಇವರು ಸ್ಥಳಕ್ಕೆ ಭೇಟಿ ನೀಡಲಾಗಿ ಇವರ ತಂದೆ ಗೋಪಾಲಕೃಷ್ಣರಾವ್ ರವರ ಮೃತದೇಹವು ಕುರ್ಚಿಯಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಮೃತದೇಹದ ಕಿವಿಯ ಬಳಿ` ಹಾಗೂ ತಲೆಯಿಂದ ರಕ್ತಸುರಿಯುತ್ತಿದ್ದು ಮೃತದೇಹದ ಬಳಿ ರಿವಾಲ್ವರ್ ಕೂಡ ಬಿದ್ದುಕೊಂಡಿರುತ್ತದೆ. ನಂತರ ಸುಧೀಂದ್ರ ಕಟ್ಟೆ ರವರು ಅವರ ತಂದೆಯ ಬೆಡ್ ರೂಮಿಗೆ ಹೋಗಿ ನೋಡಲಾಗಿ ಮೃತರ ಕೈ ಬರಹದ ಡೆತ್ ನೋಟ್ ಸಿಕ್ಕಿದ್ದು ಡೆತ್ ನೋಟಿನಲ್ಲಿ “ ಮೊಳಹಳ್ಳಿ ಗಣೇಶ್ ಶೆಟ್ಟಿ ಸಿ.ಎ, ಪಾರ್ಟ್ ನರ್ ಗೋಲ್ಡ್ ಜ್ಯುವೆಲ್ಲರ್ ಕುಂದಾಪುರ ಹಾಗೂ  ಹೆಚ್ ಇಸ್ಮಾಯಿಲ್ ಬ್ರೋಕರ್ ಇವರಿಬ್ಬರು ದಿನಾಂಕ 31/03/2013 ರಂದು ನನಗೆ ಬಡ್ಡಿಯ ಆಸೆ ತೋರಿಸಿ 3 ಕೋಟಿ 34 ಲಕ್ಷ ನಗದು ಹಾಗೂ 5 ಕೆ ಜಿ 24 ಕ್ಯಾರೇಟ್ ಚಿನ್ನವನ್ನು  ಪಡೆದುಕೊಂಡಿದ್ದು ಇಲ್ಲಿಯವರೆಗೆ ವಾಪಾಸು ನೀಡಿರುವುದಿಲ್ಲ. ಈ ಬಗ್ಗೆ ಸುಮಾರು 6, 7 ಬಾರಿ ಪಂಚಾಯತಿ ನಡೆದರೂ ಈವರೆಗೆ ವಾಪಾಸು ಕೊಟ್ಟಿರುವುದಿಲ್ಲ. ನಾನು ಈವರೆಗೆ ಮರ್ಯಾದೆಯಿಂದ ಬಾಳಿದವ ನಾನು ಹೊರಗಿನವರಿಗೆ ಹಣ ಕೊಡಬೇಕು ಗಣೇಶ ಶೆಟ್ಟಿ ಮನೆಗೆ ತಿರುಗಿ ತಿರುಗಿ ಸಾಕಾಯ್ತು ಹಾಗಾಗಿ ಗಣೇಶ್ ಶೆಟ್ಟಿ ಮನೆಯಲ್ಲಿ ನನ್ನ ರಿವಾಲ್ವರಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ”  ಎಂಬಿತ್ಯಾದಿಯಾಗಿ ಬರೆದಿರುತ್ತದೆ. ಗೋಪಾಲಕೃಷ್ಣ ರಾವ್ ರವರು ಸಾವಿಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸಿ.ಎ ಹಾಗೂ ಪಾರ್ಟ್ ನರ್ ಗೋಲ್ಡ್ ಜ್ಯುವೆಲ್ಲರ್ ಕುಂದಾಪುರ ಹಾಗೂ  ಹೆಚ್ ಇಸ್ಮಾಯಿಲ್ ಬ್ರೋಕರ್ ರವರೆ ದುಷ್ಪ್ರೇರಣೆಯಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-05-2022 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080