ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 25.05.2022 ರಂದು ಪಿರ್ಯಾದಿ ರವೀಂದ್ರ ಕುಲಾಲ್‌ 40 ವರ್ಷ, ತಂದೆ: ವೆಂಕಟ ಕುಲಾಲ್‌, ವಾಸ: ಶ್ರೀ ವಿಷ್ಣು ಮೂರ್ತಿ, ಕೀರ್ತಿ ನಗರ  ಆರೂರು ಗ್ರಾಮ ರವರು ಅವರ ಬಾಬ್ತು ಟೆಂಪೊವನ್ನು  ಬಾಡಿಗೆ ಬಗ್ಗೆ  ಪೇತ್ರಿಯಿಂದ ಮುಂಡ್ಕಿನ್‌ ಜೆಡ್ಡು  ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ಚೇರ್ಕಾಡಿ ಗ್ರಾಮದ, ಮುಂಡ್ಕಿನ್‌ ಜೆಡ್ಡು ಪದ್ಮನಾಭ ನಾಯಕ್‌ ರವರ ಮನೆಯ ಎದುರು ತಲುಪಿದಾಗ ಅವರ ಎದುರಿನಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ KA.20.EY.9671 ನೇ ದ್ವಿಚಕ್ರ ವಾಹನವನ್ನು ಸವಾರಿ  ಮಾಡಿಕೊಂಡು ಹೋಗುತ್ತಿದ್ದ ಚರಣ್‌ ಶೆಟ್ಟಿಯು ತನ್ನ  ದ್ವಿ ಚಕ್ರ ವಾಹವನ್ನು ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ದ್ವಿ ಚಕ್ರ ವಾಹನ ಸ್ಕೀಡ್‌ ಆಗಿ ಅವರು ವಾಹನದ ಸಮೇತ ರಸ್ತೆಯ ಎಡಬದಿಯಲ್ಲಿ ಚರಂಡಿಗೆ ಹೋಗಿ ಬಿದ್ದಿರುವುದಾಗಿದೆ. ಈ ಅಪಘಾತದಿಂದ ಚರಣ್‌ ಶೆಟ್ಟಿಯವರ ಹೊಟ್ಟೆಯ ಒಳಭಾಗಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು, ದೇಹದ ಇತರ ಭಾಗಗಳಿಗೆ ತರಚಿದ ರಕ್ತಗಾಯ ವಾಗಿರುತ್ತದೆ.  ನಂತರ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಅವರ  ಮನೆಯವರು  ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಅಪಘಾತಕ್ಕೆ ಚರಣ್‌ ಶೆಟ್ಟಿ ರವರ  ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 92/2022 ಕಲಂ:279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕಿರಣ್ (27) ತಂದೆ:ಮೋಹನ ದೇವಾಡಿಗ ವಾಸ: ನೆಲ್ಲಿಬೆಟ್ಟು ಕಾರ್ಕಡ ಗ್ರಾಮ  ಬ್ರಹ್ಮಾವರ ಇವರ ಅಕ್ಕನ ಗಂಡ ಭಾವ ಕುಮಾರ್ (37) ಈತನು ವಿಪರೀತ ಕುಡಿತದ ಚಟ ಹೊಂದಿದ್ದು  ಕುಡಿತದ ಚಟ ಬಿಡಿಸುವ ಬಗ್ಗೆ ಉಡುಪಿಯ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅತಿಯಾಗಿ ಮದ್ಯಪಾನ ಮಾಡುತ್ತಿದ್ದರಿಂದ ಲಿವರ್ ಡ್ಯಾಮೇಜ್ ಆಗಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದವರು ಅತಿಯಾದ ಕುಡಿತದಿಂದ ಆರೋಗ್ಯದಲ್ಲಿನ ಸಮಸ್ಯೆಯಿಂದ 26/05/2022 ರಂದು ರಾತ್ರಿ 9.30 ಗಂಟೆಯಿಂದ  ದಿನಾಂಕ 27/05/2022 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರ ನಾರಾಯಣ : ಪಿರ್ಯಾದಿ ಮಂಜುನಾಥ ನಾಯ್ಕ (30) ತಂದೆ:ಬಾಬು ನಾಯ್ಕ ವಾಸ: ತಲ್ಲೂರು ಮಕ್ಕಿ ಶಂಕರನಾರಾಯಣ ಗ್ರಾಮ ಇವರ ತಂದೆ ಬಾಬು ನಾಯ್ಕ (55) ಎಂಬವರು ದಿನಾಂಕ 26/05/2022 ರಂದು ಮದ್ಯಾಹ್ನ 2:30 ಗಂಟೆಗೆ  ತೋಟದ ಅಡಿಕೆ ಸಸಿಗಳಿಗೆ ನೀರು ಬಿಡುವರೇ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ತಲ್ಲೂರು ಮಕ್ಕಿ ಹಾಲಾಡಿ ಹೊಳೆಯಲ್ಲಿರುವ ಪುಟ್ ಬಾಲ್ ಪರಿಶೀಲಿಸಲು ನೀರಿಗೆ ಇಳಿದಾಗ ಆಕಸ್ಮಾತ್ ಆಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಮೃತ ಶರೀರವು ದಿನಾಂಕ 27/05/2022 ರಂದು ಬೆಳಿಗ್ಗೆ 09:30 ಗಂಟೆಗೆ  ನದಿಯ ಉತ್ತರ ದಡದ ನೀರಿನಲ್ಲಿ ಪತ್ತೆಯಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 12/2022  ಕಲಂ:174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ :

  • ಕಾರ್ಕಳ: ಪಿರ್ಯಾದಿ: ನವೀನ (34), ತಂದೆ: ದಿವಂಗತ ಕುಟ್ಟಿ, ವಾಸ: ನೆಲ್ಲದ ಬೆಟ್ಟು ಮನೆ, ನೆಲ್ಲಿಕಾರ್ ಅಂಚೆ, ನಲ್ಲೂರು ಗ್ರಾಮ, ಇವರ ತಮ್ಮ ಪ್ರವೀಣ ಪ್ರಾಯ 26 ವರ್ಷ ಈತನು ದಿನಾಂಕ 04/05/2022 ರಂದು ಮಧ್ಯಾಹ್ನ 2:30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯಿಂದ ಹೊರಟು ಹೋಗಿದ್ದು, ಬಳಿಕ ದಿನಾಂಕ 10/05/2022 ರಂದು ಆತನ ಮೊಬೈಲ್ ನಂಬ್ರದಿಂದ  ಆತನ ಅಕ್ಕ ನಯನ ಇವರ ಮೊಬೈಲಿಗೆ ತಾನು ಕೆಲಸಕ್ಕೆ ಸೇರಿದ್ದು ಬರುವ ಭಾನುವಾರ ವಾಪಾಸು ಮನೆಗೆ ಬರುವುದಾಗಿ ಮೆಸೇಜ್ ಮಾಡಿದ್ದು, ಆದರೆ ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಂಕ 67/2022 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ರಾಘವೇಂದ್ರ ದೇವಾಡಿಗ ಪ್ರಾಯ:36 ವರ್ಷ ತಂದೆ: ಮಾಧವ ದೇವಾಡಿಗ ವಾಸ: ಮನೆ ನಂ:1-122ಕೆ ಜನತಾ ಕಾಲೊನಿ ಕರಂಬಳ್ಳಿ ಶವಳ್ಳಿ ಗ್ರಾಮ, ಇವ್ರ ತಂದೆ ಮಾಧವ ದೇವಾಡಿಗ (67) ರವರು ದಿನಾಂಕ: 23/05/2022 ರಂದು ಬೆಳಿಗ್ಗೆ 07:00 ಗಂಟೆಗೆ ಮನೆಯಿಂದ ಹೋದವರು ಈ ತನಕ ಮನೆಗೆ ಬಾರದೇ ಇದ್ದು , ಯಾವಾಗಲೂ ಅವರ ತಂದೆಯ ಮನೆಯಾದ ಬೈಲುಕೆರೆಗೆ ಹೋಗುತ್ತಿದ್ದವರು ಅಲ್ಲಿಯೂ ಹೋಗದೇ  ಹಾಗೂ  ಸಂಬಂಧಿಕರ ಮನೆಗೆ ಹೋಗದೇ, ಈ ವರೆಗೂ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.ಕಾಣೆಯಾದವರ ಚಹರೆ: ಸಾಧಾರಣ ಮೈಕಟ್ಟು ಎತ್ತರ: 6 ಅಡಿಬಣ್ಣ: ಗೋಧಿ ಮೈ ಬಣ್ಣ , ತಲೆ ಕೂದಲು ಬಿಳಿಯಾಗಿದೆ, ಬಟ್ಟೆ: ಬಿಳಿ ವಸ್ತ್ರ ಧರಿಸಿರುತ್ತಾರೆ ಮತ್ತು ತುಂಬು ತೋಳಿನ ಸಣ್ಣ ಗೆರೆಯುಳ್ಳ ಶರ್ಟ ಧರಿಸಿರುತ್ತಾನೆ.ಭಾಷೆ:ಕನ್ನಡ, ಹಿಂದಿ, ತುಳು, 6ನೇ ರಗತಿ ತನಕ ವಿದ್ಯಾಬ್ಯಾಸ ಮಾಡರುತ್ತಾರೆ.ಈ ಬಗ್ಗೆ ಮಣಿಪಾಲ ಠಾಣೆ ಅಪರಾದ ಕ್ರಮಾಂಕ 76/2022  ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಶಿರ್ವ: ದಿನಾಂಕ 24/05/2022 ರಂದು ಬೆಳಗ್ಗೆ 08:30  ಗಂಟೆಗೆ ಕಾಪು ತಾಲೂಕು ಶಿರ್ವಾ ಗ್ರಾಮದ ಶಿರ್ವಾ ಮಸೀದಿ ಬಸ್ ನಿಲ್ದಾಣದ  ಬಳಿ ಇರುವ  ಸಾರ್ವಜನಿಕ  ಬಸ್ಸು ನಿಲ್ದಾಣದ  ಬಳಿ ಆಪಾದಿತ ಮೊಹಮ್ಮದ್  ಶೋಯಬ್. ಪ್ರಾಯ  24   ವರ್ಷ  ತಂದೆ: ಮೊಹಮ್ಮದ್ ಅಲಿ. ವಾಸ: ಶಿರ್ವ ಮಸೀದಿ ಬಳಿ ಈತನು  ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  31/2022, ಕಲಂ 27(b) NDPS Act. ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ದಿನಾಂಕ 24/05/2022 ರಂದು ಬೆಳಗ್ಗೆ 10:30 ಗಂಟೆಗೆ ಕಾಪು ತಾಲೂಕು ಕಳತ್ತೂರು ಗ್ರಾಮದ ಚಂದ್ರನಗರ ಬಸ್ ನಿಲ್ದಾಣದ ಬಳಿ ಆಪಾದಿತ ಅಸ್ರಫ್,  ಪ್ರಾಯ  37 ವರ್ಷ  ತಂದೆ: ಯೂಸಫ್ . ವಾಸ: ಜನತಾ ಕಾಲೋನಿ ಚಂದ್ರನಗರ ಇವನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 27-05-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080