ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ . ಕೆ.ವಿ ನಂಬಿಯಾರ್ (65), ತಂದೆ: ತಂದೆ:ಕೆ ರಾಘವನ್, ವಾಸ; ಶಾಂತಿ ನಿಲಯ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರು ಬೈಂದೂರು ತಾಲೂಕು ನಾವುಂದ ಗ್ರಾಮದ ಕೋಯಾನಗರದಲ್ಲಿರುವ ತೋಟವನ್ನು ನೋಡಿಕೊಳ್ಳಲು ಕೇರಳದ ವಾಸಿ ಶಂಕರನ್(80) ಎಂಬುವವರು 45 ವರ್ಷದಿಂದ ಭಿಕ್ಷಾಟನೆ ಮಾಡುತ್ತಿದ್ದು ತನಗೆ ಯಾರು ಇಲ್ಲ ನನಗೇನಾದರೂ ಕೆಲಸ ಕೊಡಿ ಎಂದು ಹೇಳಿರುವುದರಿಂದ ತೋಟದ ಶೆಡ್ ನಲ್ಲಿ ವಾಸಿಸಲು ಬಿಟ್ಟಿದ್ದು ಶೆಡ್ ನಲ್ಲಿಯೇ ಉಳಿದುಕೊಂಡು ತೋಟವನ್ನು ನೋಡಿಕೊಳ್ಳುತ್ತಿದ್ದು ಆತನಿಗೆ ಬಿ.ಪಿ ಖಾಯಿಲೆ ಇದ್ದಿರುವುದಾಗಿದ್ದು ಕಿರಿಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ 26/05/2021 ರಂದು ಸಂಜೆ 17:00 ಗಂಟೆಗೆ  ಪಿರ್ಯಾದಿದಾರರು ಕ್ಲಿನಿಕ್ ನಲ್ಲಿರುವಾಗ ಮನೆಯ ಹತ್ತಿರದವರು ಕರೆ ಮಾಡಿ ಶಂಕರನ್ ತೋಟದಲ್ಲಿ ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದಾನೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಬಂದು ನೋಡಲಾಗಿ ಶಂಕರನ್ ರವರು ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದ್ದು,  ಶಂಕರನ್ ಗೆ ಬಿಪಿ ಖಾಯಿಲೆ ಇದ್ದೋ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 25/05/2021 ರಂದು ಬೆಳಿಗ್ಗೆ 10:00 ಗಂಟೆಯಿಂದ 26/05/2021 ಸಂಜೆ 17:00ಗಂಟೆಯ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ದಿವ್ಯಾ ಎಸ್ (32), ಪಂಚಾಯತ್ ಅಭಿವೃಧ್ಧಿ ಅಧಿಕಾರಿ, ಹಾವಮಜೆ ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕು ಇವರು ಪ್ರಸ್ತುತ ಕೋವಿಡ್ ಇರುವುದರಿಂದ ಸರಕಾರದ ಆದೇಶದಂತೆ ಎಲ್ಲಾ ಇಲಾಖೆಯನ್ನು ಸೇರಿಸಿ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್‌ ಸಮಿತಿಯನ್ನು ರಚಿಸಿಕೊಂಡು ದಿನಾಂಕ 26/05/2021 ರಂದು ಪಂಚಾಯತ್‌ನ ಅಧ್ಯಕ್ಷರು ಹಾಗೂ ಸಿಬ್ಬಂದಿಯವರೊಂದಿಗೆ ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:00 ಗಂಟೆಗೆ ಹೊರಟು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಮಾಸ್ಕ್ ಧರಿಸದೆ ಹಾಗೂ ಅನಗತ್ಯವಾಗಿ ತಿರುಗುತ್ತಿರುದರ ಬಗ್ಗೆ ದಂಡ ವಿಧಿಸುವ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಸ್ಥಳೀಯ ಗೋಳಿಕಟ್ಟೆ ನಿವಾಸಿಯಾದ 1ನೇ ಆರೋಪಿ ನಾಗರಾಜ ಹೆಗ್ಡೆ ಯವರು ಗೋಳಿಕಟ್ಟೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ್‌ನಲ್ಲಿ ತಮ್ಮ ಮನೆಯ ಪಕ್ಕದ ನಿರುಪಯುಕ್ತ ಕಲ್ಲು ಮಣ್ಣುಗಳನ್ನು ತಂದು ಹಾಕುತ್ತಿದ್ದು, ಅದನ್ನು ತೆರವುಗೊಳಿಲು  ತಿಳಿಸಿದಾಗ ಆರೋಪಿಯು ಉಡಾಫೆಯಿಂದ ಉತ್ತರ ನೀಡಿರುತ್ತಾರೆ.  ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಪಿರ್ಯಾದಿದಾರರ ಟೀಮ್ ವಾಪಾಸ್ಸು ಬರುವಾಗ 1 ನೇ ಆರೋಪಿಯು ಅವರ KA-20-N-8908 ನೇ ಬೊಲೆರೋ ಕಾರಿನಲ್ಲಿ ಹಿಂದಿನಿಂದ ಬೆನ್ನಟ್ಟಿ ಬಂದು ಹಾವಂಜೆ ಬಸ್ಸು ನಿಲ್ದಾಣದ ಬಳಿ ಪಿರ್ಯಾದಿದಾರರ ವಾಹನವನ್ನು ನಿಲ್ಲಿಸಿ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ನಾನು ಹೋಗುವುದಿಲ್ಲ ಇಲ್ಲಿಯೇ ಇರುತ್ತೇನೆ ನೀವು ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಯೇ ತಿರುಗಾಡಿಕೊಂಡು ಕೋವಿಡ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿರುತ್ತಾರೆ. ಅಲ್ಲದೇ ಮಧ್ಯಾಹ್ನ 2:00 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರು ಹಾಗೂ ಕಾರ್ಯದರ್ಶಿಯವರಾದ ಶ್ರೀಮತಿ ವಿಮಲಾಕ್ಷಿಯವರು ಪಂಚಾಯತ್ ಕಛೇರಿಯಲ್ಲಿ ಊಟ ಮಾಡುತ್ತಿರುವಾಗ 1ನೇ ಆರೋಪಿಯು ಅವರ ಬುಲೆರೋ ಕಾರಿನಲ್ಲಿ ಇತರ ಆರೋಪಿಗಳಾದ 2ನೇ  ಹರೀಶ್ ಶೆಟ್ಟಿ, 3ನೇ ಅಮರನಾಥ ಶೆಟ್ಟಿ , 4ನೇ ಗಣೇಶ್ ಶೆಟ್ಟಿ ರವರೊಂದಿಗೆ ಪಂಚಾಯತ್ ಕಛೇರಿ ಬಳಿ ಬಂದು, ಪಂಚಾಯತ್‌ನ್ನು ಸೀಲ್‌ಡೌನ್‌ ಮಾಡಬೇಕು,ನಿಮ್ಮ ಪಂಚಾಯತ್ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ನೀವು  ಊರೆಲ್ಲಾ ತಿರುಗಾಡುತ್ತಿದ್ದಿರಿ ಎಂದು ಹೇಳಿ ವಿಡಿಯೋ  ಚಿತ್ರಿಕರಣ ಮಾಡಲು ಶುರು ಮಾಡಿದ್ದು, ಆ ಸಮಯ ಅವರ ಜೊತೆ ಬಂದ 2,3,4 ನೇ ಆರೋಪಿಯು ಬೊಬ್ಬೆ ಹೊಡೆದು ನೀವು ಹೊರಗೆ ಬನ್ನಿ ನಿಮ್ಮನ್ನು ನಾವು ನೋಡಿ ಕೊಳ್ಳುತ್ತೇವೆ, ಹೊರಗೆ ಬರದಿದ್ದರೇ ನಿಮ್ಮನ್ನು ಪಂಚಾಯತ್‌ನ ಒಳಗೆ ಹಾಕಿ ಬೀಗ ಹಾಕುತ್ತೇವೆ  ಎಂದು ಹೇಳಿರುತ್ತಾರೆ.  ಪಿರ್ಯಾದಿದಾರರಿಗೆ ಊಟ ಮಾಡಲು ಬಿಡದೇ ಎಲ್ಲಾ ಆರೋಪಿಗಳು ಒಳಗೆ ಬಂದು ವಿಡಿಯೋ ಚಿತ್ರೀಕರಣ ಮಾಡಿ ಪಿರ್ಯಾದಿದಾರರಿಗೆ ಮಾನಸಿಕ ಹಿಂಸೆ ನೀಡಿ 10 ನಿಮಿಷದಲ್ಲಿ ಪಂಚಾಯತ್‌ಗೆ ಬೀಗ ಹಾಕದಿದ್ದರೇ ನಾವು ಊರಿನವರನ್ನು ಸೇರಿಸಿ ಪಂಚಾಯತ್‌ಗೆ ಬೀಗ ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ಆರೋಪಿಗಳು ಪಿರ್ಯಾದಿದಾರರಿಗೆ ಕಛೇರಿಯ ಒಳಗೆ ಹೊದಲ್ಲಿ  ದೂರು ನೀಡಿ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿ, ಕಛೇರಿಯ ಒಳಗೆ ಬಂದು ಪಿರ್ಯಾದಿದಾರರಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ: 353, 506, 269, 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ.  ದಿನಾಂಕ 26/05/2021 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು ಕಾರ್ಕಳ  ನಗರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ಕಸಬ  ಗ್ರಾಮದ ಮೂರು ಮಾರ್ಗ ಬಳಿ  ಸಾರ್ವಜನಿಕ ರಸ್ತೆಯಲ್ಲಿ  ಸಂಜೆ 18:30 ಗಂಟೆಗೆ ಅನಗತ್ಯವಾಗಿ ಓಡಾಡುತ್ತಿದ್ದ KA-20-EL-2840 ನೇ ನಂಬ್ರದ ಟಿ.ವಿ.ಎಸ್‌ ಕಂಪೆನಿ  ತಯಾರಿಕೆಯ APACHE RTR ಮಾದರಿಯ ಮೋಟಾರ್ ಸೈಕಲ್‌ ಸವಾರ ಶರತ್‌‌ ,ತಂದೆ: ಜಯ :ಶೆಟ್ಟಿ, ವಾಸ: ಮನೆ ನಂಬ್ರ 4-91, ಅಲೀಮ್‌ಬೆಟ್ಟು, ತೆಳ್ಳಾರು ಅಂಚೆ, ದುರ್ಗಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರನ್ನು ತಡೆದು ನಿಲ್ಲಿಸಿ ಆತನಲ್ಲಿ ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ  ಆಪಾದಿತನಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ : 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶಾಂತ (60), ಗಂಡ: ಸುಂದರ, ವಾಸ: ಗರಡಿ ಬಳಿ, ನಕ್ರೆ, ಕುಕ್ಕೂಂದೂರು ಗ್ರಾಮ, ಕಾರ್ಕಳ ತಾಲೂಕು ಇವರ ಗಂಡ ಸುಂದರರವರು ತನ್ನ ಮನೆ ಸಮೀಪ ವಾಸ್ತವ್ಯವಿರುವ ಸಂಬಂಧಿ ಸ್ಮಿತಾ ಮತ್ತು ಸೀಮಾರವರಲ್ಲಿ ಸುಖೇಶನು ಯಾಕೆ ನಿಮ್ಮ ಮನೆಗೆ ಬರುತ್ತಾನೆ ಎಂದು ಕೇಳಿದಕ್ಕೆ ಅಪಾದಿತರಾದ ಸ್ಮಿತಾ @ ಮಂಗಳ, ಸೀಮಾ @ ಚುಮ್ಮು, ಸುಖೇಶರವರು ಸೇರಿ ಪಿರ್ಯಾದಿದಾರರ ಗಂಡ ಸುಂದರರವರು ದಿನಾಂಕ 24/05/2021 ರಂದು ಸಂಜೆ 07.30 ಗಂಟೆಗೆ ಮನೆಯ ಸಮೀಪ ದಾರಿಯಲ್ಲಿ ನೆಡೆದುಕೊಂಡು ಬರುತ್ತಿರುವಾಗ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಗ್ಗದ ಸಹಾಯದಿಂದ ಮರಕ್ಕೆ ಕಟ್ಟಿ ಹಾಕಿ ಮರದ ಕೋಲಿನಿಂದ ಕೈ ಕಾಲು ತಲೆಗೆ ಹೊಡೆದ ಪರಿಣಾಮ ಸುಂದರರವರು ತಲೆಗೆ ರಕ್ತ ಗಾಯವಾಗಿರುತ್ತದೆ. ಘಟನೆಯ ನಂತರ ಸುಂದರರವರು ಈ ತನಕ ಮನೆಗೂ ಬಾರದೇ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021  ಕಲಂ: 324, 341, 504 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 26/05/2021 ರಂದು ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ   ರೌಂಡ್ಸ್‌  ಕರ್ತವ್ಯದಲ್ಲಿರುವಾಗ ಬ್ರಹ್ಮಾವರ  ತಾಲೂಕು ಕೋಟತಟ್ಟು ಗ್ರಾಮದ ಪಡುಕೆರೆ  ಎಂಬಲ್ಲಿರುವ ಮಹೇಶ ಹೊಟೇಲ್‌ ಹತ್ತಿರದ ಶ್ರೀ ಮಹಾಸತಿ  ಮೀನು ಮತ್ತು ಕೋಳಿ ಅಂಗಡಿ ಬದಿಯಲ್ಲಿ ಆರೋಪಿ ಮಹಾಬಲ ತಿಂಗಳಾಯ ರವರು ಕೋಟದ ನಟರಾಜ್‌ ಬಾರ್‌ ಮತ್ತು ರೆಸ್ಟೋರೆಂಟ್‌ ನಿಂದ ಮದ್ಯದ  ಟೆಟ್ರಾ ಪ್ಯಾಕ್‌ಗಳನ್ನು ಪಡೆದುಕೊಂಡು ಕೋವಿಡ್‌-19 ವೈರಾಣು ಪ್ರಯುಕ್ತ ಜಿಲ್ಲಾಡಳಿತದ ಆದೇಶದಂತೆ ಕರ್ಪ್ಯೂ ನಿಷೇಧಾಜ್ಞೆ ಸಂದರ್ಭದಲ್ಲಿ ಸ್ಕೂಟಿ ನಂಬ್ರ KA-20-EG-0683 ನೇದರಲ್ಲಿ ಯಾವುದೇ ಪರವಾನಿಗೆ  ಇಲ್ಲದೆ ಮದ್ಯದ  ಟೆಟ್ರಾ  ಪ್ಯಾಕ್‌ಗಳನ್ನು  ಲಾಭದ  ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು  ಆತನಲ್ಲಿದ್ದ  Original Choice 180 ml 12  Tetra Pack ಗಳಿದ್ದು ಮದ್ಯದ ಒಟ್ಟು ಪ್ರಮಾಣ 2,160  ಲೀಟರ್‌  ಆಗಿದ್ದು, ಮೌಲ್ಯ  850-/- ರೂಪಾಯಿ ಆಗಿದ್ದು, ಆರೋಪಿ ಮತ್ತು  ಸ್ವತ್ತುಗಳನ್ನು  ಹಾಗೂ  ಮದ್ಯ  ಮಾರಾಟಕ್ಕೆ  ಬಳಸಿ  ಸ್ಕೂಟಿಯನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 15 (A), 32(3) K.E.Act  ರಂತೆ ಪ್ರಕರಣ ದಾಖಲಾಗಿರುತ್ತದೆ.        

     

ಇತ್ತೀಚಿನ ನವೀಕರಣ​ : 27-05-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080