ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 26/04/2023 ರಂದು ಮದ್ಯಾಹ್ನ 1:00 ಗಂಟೆಗೆ  ಮೂಡನಿಡಂಬೂರು ಗ್ರಾಮದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರುಗಡೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬ್ರಹ್ಮಗಿರಿ ಕಡೆಯಿಂದ ಜೋಡುಕಟ್ಟೆ ಕಡೆಗೆ KA-20-HA-6388 ನೇ ಮೋಟಾರ್ ಸೈಕಲ್‌ನ್ನು ಅದರ ಸವಾರ ಗೌತಮ್ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಅದೇ ರಸ್ತೆಯನ್ನು ದಾಟಿ ರಸ್ತೆಯ ಉತ್ತರ ದಿಕ್ಕಿನ ಅಂಚಿನಲ್ಲಿದ್ದ ಪಿರ್ಯದಿದಾರರಾದ ಕೃಪಾ (21), ತಂದೆ: ವಸಂತ,ವಾಸ: ಮನೆ ನಂ: 131/16 ಎಸ್ ಮನಿಯಾಕೋ ಬಿಲ್ಡಿಂಗ್, 1ನೇ ಮಹಡಿ, 2ನೇ ಸ್ಟೇಜ್, ಲೇಕ್ ರೋಡ್, ಅನಂತನಗರ, ಮಣಿಪಾಲ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಎಡಕೈಗೆ ಮೂಳೆ ಮುರಿತದ ಒಳಜಖಂ ಆಗಿರುತ್ತದೆ. ಮೋಟಾರ್ ಸೈಕಲ್ ಸವಾರ ಕೂಡ ರಸ್ತೆಗೆ ಬಿದ್ದು, ತಲೆಗೆ ರಕ್ತಗಾಯವಾಗಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಅಲ್ಲದೇ ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 26/04/2023 ರಂದು  ಪಿರ್ಯಾದಿದಾರರಾದ ಅಕ್ರಮ್‌ (20), ತಂದೆ: ಜಾಫರ್‌ ಸಾಧೀಕ್‌ ವಾಸ: ಹೈಕಾಡಿ, ಹಿಲಿಯಾಣ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಸ್ಕೂಟರ್‌ನಲ್ಲಿ ಖಾಜಿ   ಮಹಮ್ಮದ್‌ ನಬಾನ್‌ರವರನ್ನು ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಹಾಲಾಡಿ ಮಾರ್ಗವಾಗಿ ಬ್ರಹ್ಮಾವರದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ  9:45 ಗಂಟೆಯ ಯಡ್ತಾಡಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಡ ಶಾಲೆಯಿಂದ ಸ್ವಲ್ಪ ಹಿಂದೆ ರಸ್ತೆಯಲ್ಲಿ ತಲುಪುವಾಗ  ಬ್ರಹ್ಮಾವರ ಕಡೆಯಿಂದ ಸಾಯಿಬರ ಕಟ್ಟೆ ಕಡೆಗೆ ಆರೋಪಿ  ಭುಜಂಗ ಶಟ್ಟಿಯವರು  ಅವರ MH-05-DM-2028 ನೇ ಹೊಂಡಾ ಅಕ್ಟಿವ್‌ ಸ್ಕೂಟರ್‌ಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಭಾಗಕ್ಕೆ ಸವಾರಿ ಮಾಡಿ ಸಾಯಿಬರಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಫಿರ್ಯಾದಿದಾರರ ಎದುರಿನಲ್ಲಿ ಹೋಗುತ್ತಿದ್ದ  ಮಹಮ್ಮದ್‌ ಸಫಾನ್‌ರವರು  ಸವಾರಿ ಮಾಡುತ್ತಿದ್ದ  KA-20-EX-1876 ನಂಬ್ರದ ಯಮಹಾ ಏಫ್‌ ಜೆಡ್‌ ಮೋಟಾರ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಮಹಮ್ಮದ್‌ ಸಾಫನ್‌ ಹಾಗೂ ಆರೋಪಿ ಇಬ್ಬರೂ ಅವರ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದರು. ಈ ಅಪಘಾತದಿಂದ  ಮಹಮ್ಮದ್‌ ಸಫಾನ್‌ ರವರ ಮುಖಕ್ಕೆ ಮತ್ತು ತಲೆಗೆ ತೀವೃ ರಕ್ತಗಾಯವಾಗಿದ್ದು  ಕೈ ಕಾಲುಗಳಿಗೆ  ಗಾಯಗಳಾಗಿರುತ್ತದೆ. ಅಲ್ಲದೇ ಅರೋಪಿಯ ಮುಖ,   ತಲೆ, ಕೈಕಾಲುಗಳಿಗೆ  ತೀವ್ರ  ರಕ್ತ ಗಾಯವಾಗಿರುತ್ತದೆ. ಇಬ್ಬರನ್ನು ಚಿಕಿತ್ಸೆಯ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ರವೀಂದ್ರ ನಾಯ್ಕ (45), ತಂದೆ: ಕೃಷ್ಣ ನಾಯ್ಕ, ವಾಸ: ಸೋಮರಜಡ್ಡು, ಕಾಡುಹೊಳೆ, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಸುಧೀಂದ್ರ ನಾಯ್ಕ (42) ರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26/04/2023 ರಂದು 13 :00  ಗಂಟೆಯಿಂದ 17:00 ಗಂಟೆಯ ನಡುವಿನ ವೇಳೆ ಕಾಡುಹೊಳೆ ಮರ್ಣೆ ಗ್ರಾಮ ಸೋಮರಜಡ್ಡು ಎಂಬಲ್ಲಿ ಅವರ ಮನೆಯಲ್ಲಿ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಕೋಣೆಯಲ್ಲಿರುವ ಫ್ಯಾನ್‌ ಗೆ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 16/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಸೀತಾರಾಮ ಶೆಟ್ಟಿ (72), ತಂದೆ: ದಿ. ವೆಂಕಪ್ಪ ಶೆಟ್ಟಿ, ವಾಸ: ಉಮಾ ನಿಲಯ, ಶ್ರೀ ಜನಾರ್ಧನ ದೇವಸ್ಥಾನದ ಹತ್ತಿರ, ತೆಂಕ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಅಕ್ಕ ಉಮಾವತಿ ಶೆಟ್ಟಿ (76) ರವರು ಕ್ಯಾನ್ಸರ್‌ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 1 ½ ತಿಂಗಳ ಹಿಂದೆ  ಮುಂಬೈಯಿಂದ ಊರಿಗೆ ಬಂದಿದ್ದು, ದಿನಾಂಕ 26/04/2023 ರಂದು ಮಧ್ಯಾಹ್ನ  ಮನೆಯಲ್ಲಿ  ಊಟ ಮಾಡಿ ಮಲಗಿದವರಿಗೆ   3:30 ಗಂಟೆಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಚಿಕಿತ್ಸೆಯ ಬಗ್ಗೆ   ಅವರ ಮಗಳು ಮಧುರ ರವರು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಫತ್ರೆಗೆ 5:15 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಉಮಾವತಿ ಶೆಟ್ಟಿ ರವರು ಆದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2023, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕುಂದಾಪುರ: 118 ನೇ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಎಸ್‌. ಮಣಿಕಂಠ ಬೈಂದೂರು, ಅಧ್ಯಕ್ಷರು, ಹಿಂದುಳಿದ ವರ್ಗಗಳ ಘಟಕ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಇವರು “ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಗುರುರಾಜ್‌ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳು ಸೇರಿಕೊಂಡು ದಿನಾಂಕ 25/04/2023 ರ ಮಂಗಳವಾರ ಪೂರ್ವಾಹ್ನ ಬೈಂದೂರು ವಿಧಾನ ಸಭಾ ಕ್ಷೇತ್ರದ ಸಬ್ಲಾಡಿಯ ಶ್ರೀ ಮಾರಿಕಾಂಬಾ ಮತ್ತು ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಚುನಾವಣಾ ಪ್ರಚಾರ ಮಾಡಿದ್ದು ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ, ಆದ್ದರಿಂದ ಮಾನ್ಯರಾದ ತಾವುಗಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಗುರುರಾಜ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಈ ಮೂಲಕ ವಿನಂತಿ” ಎಂಬುದಾಗಿ ಲಿಖಿತ ದೂರು ನೀಡಿದ್ದು ಅದರಂತೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು 118 ನೇ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್‌ ಸ್ಕ್ವಾಡ್‌ ಟೀಮ್‌(FST-3)ನ ಅಧಿಕಾರಿಯಾಗಿರುವ ಪಿರ್ಯಾದಿದಾರರಾದ ಪ್ರಸನ್ನ ಕುಮಾರ್‌ ಶೇಟ್‌ (45), ಸಹಾಯಕ ಕಾರ್ಯಪಾಲಕ ಅಭಿಯಂತರರು, ವಾರಾಹಿ ಜಲಾಶಯ ಯೋಜನಾ ಉಪ ವಿಭಾಗ-3,  ಸಿದ್ದಾಪುರ, ಉಡುಪಿ ಜಿಲ್ಲೆ ಇವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಮೇರೆಗೆ ಪಿರ್ಯಾದಿದಾರರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಗುರುರಾಜ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳು ಮತ್ತು ಶ್ರೀ ಮಾರಿಕಾಂಬಾ ಮತ್ತು ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನಕ್ಕೆ ಸಂಬಂಧಪಟ್ಟವರ ಮೇಲೆ  ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 ಕಲಂ:  07 RELIGIOUS INSTITUTIONS (PREVENTION OF MISUSE) ACT, 1988 ರಂತೆ ಪ್ರಕರಣ ದಾಖಲಾಗಿರುತ್ತದೆ.    

   

ಇತ್ತೀಚಿನ ನವೀಕರಣ​ : 27-04-2023 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080