ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸಾಹೇಬ್ ಗೌಡ (27), ತಂದೆ: ಗುತ್ತಪ್ಪ ಗೌಡ ಮಳನೂರ, ವಾಸ : ಕೆ.ರಾಮ. ಸೋಮೇಶ್ವರ ಮೋಟಾರ್ಸ್, ಬೈಂದೂರು ಮಯೂರ ಪೆಟ್ರೋಲ್ ಪಂಪ್ ಎದುರುಗಡೆ, ಬೈಂದೂರು  ತಾಲೂಕು ಇವರು ದಿನಾಂಕ  26/04/2023 ರಂದು ಬೈಂದೂರಿನಲ್ಲಿ ಕೆಲಸ ಮುಗಿಸಿಕೊಂಡು  ಅವರ KA-20 EX-9907 YAMAHA FZ-X ನೇ ಮೋಟಾರ್ ಸೈಕಲ್ ನಲ್ಲಿ ಬೈಂದೂರಿನಿಂದ ಕುಂದಾಪುರಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಸಂಜೆ 05:30 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂದುಗಡೆಯಿಂದ KA-19 MA-6323 ನೇ ಕಾರು ಚಾಲಕನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲಗಾಲಿನ ಪಾದದ ಬೆರಳುಗಳಿಗೆ ಮೂಳೆ ಮುರಿತ, ಬಲ ಮೊಣಕೈ, ಬಲ ಮೊಣಕಾಲು ಗಂಟಿಗೆ ಸಣ್ಣಪುಟ್ಟ ತೆರಚಿದ ಗಾಯವಾಗಿದ್ದು ಅಲ್ಲಿಯ ಸ್ಥಳೀಯರು ಹಾಗೂ ಬಸ್ ಗೆ ನಿಂತಿರುವ ಪಿರ್ಯಾದಿದಾರರ ಸಂಬಂಧಿ ಸುರೇಶ್ ರವರು ಉಪಚರಿಸಿ ಒಂದು ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2023 ಕಲಂ:  279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಬ್ರಹ್ಮಾವರ: ದಿನಾಂಕ 27/04/2023 ರಂದು ಪಿರ್ಯಾದಿದಾರರಾದ ನಯಾಬ್‌ (34), ತಂದೆ: ದಿ. ಸೈಯದ್‌ ಫೀರ್‌, ವಾಸ: ಗಾಂಧಿನಗರ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಆಟೋ ರಿಕ್ಷಾದಲ್ಲಿ ಮಾಬುಕಳ ದಿಂದ ಉಪ್ಪಿನಕೋಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಬೆಳಿಗ್ಗೆ 10:30 ಗಂಟೆಗೆ ಕುಮ್ರಗೋಡು ಗ್ರಾಮದ ಸೂಲ್ಕೂದ್ರು ಕ್ರಾಸ್ ನಲ್ಲಿ ತಲುಪುವಾಗ ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ರೋಹನ್ ಭಟ್ ರವರು ಅವರ KA-05-MQ-2541 ನೇ ಡಸ್ಟರ್ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ಆಟೋರಿಕ್ಷಾದ ಎದುರಿನಿಂದ ಬ್ರಹ್ಮಾವರ ಕಡೆಗೆ ಶೇಕ್ ಉಸ್ಮಾನ್ ಸಾಹೇಬ್ ರವರು ಸವಾರಿ ಮಾಡುತ್ತಿದ್ದ KA-20-EV-0199 ನಂಬ್ರದ ಟಿವಿಎಸ್ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಉಸ್ಮಾನ್ ಸಾಹೇಬ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಬಲ ತಲೆಗೆ ತೀವ್ರ ರಕ್ತಗಾಯ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಉಸ್ಮಾನ್ ಸಾಹೇಬ್ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿನ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಉಡುಪಿ: ದಿನಾಂಕ 26/04/2023 ರಂದು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಉಡುಪಿ ನಗರ  ಪೊಲೀಸ್‌ ಸಿಬ್ಬಂದಿಯವರಿಗೆ ದಿನಾಂಕ 27/04/2023 ರಂದು ಬೆಳಗಿನ ಜಾವ 01:00 ಗಂಟೆಗೆ ಕೊರಂಗ್ರಪಾಡಿ ಪರಿಸರದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿ ಉಪದ್ರ ಮಾಡುತ್ತಿರುವ ಬಗ್ಗೆ ಶಬ್ದ ಕೇಳಿ ಬಂದ ಮೇರೆಗೆ, 01:30 ಗಂಟೆಗೆ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಪಿಲಿಚಾಮುಂಡಿ ದೇವಸ್ಥಾನದ ಬಳಿ ಆಪಾದಿತ ಅಶೋಕ್‌ ರವರ ಮನೆಯ ಬಳಿ ತಲುಪಿ ಪರಿಶೀಲಿಸಲಾಗಿ, ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್‌ ಹಾಕಿಕೊಂಡು 01:30 ಗಂಟೆ ತನಕ ನೃತ್ಯ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಮುಂದಿನ ಕ್ರಮದ ಬಗ್ಗೆ ಜೆಎಲ್‌ಬಿ ಕಂಪೆನಿಯ ಕಪ್ಪು ಬಣ್ಣದ ಸೌಂಡ್‌ ಬಾಕ್ಸ್‌- 2 ಹಾಗೂ ಒಂದು ಸೌಂಡ್‌ ಆ್ಯಂಪಿಪ್ಲಯರ್ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023  ಕಲಂ:  109  ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿದಾರರಾದ ಸುಕುಮಾರ್‌ (23), ತಂದೆ: ನರಸಿಂಹ ಬಂಗೇರ, ವಾಸ: ಅಮ್ಮಾ ಕ್ಯಾಂಟೀನ್‌ ಬಳಿ, ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ಮತ್ತು ಅವರೊಂದಿಗೆ ಕೆಲಸ ಮಾಡುವ ಅಕ್ಷಯ್ ರವರು ದಿನಾಂಕ 26/04/2023 ರಂದು ಮೂಡಹಡು ಬಾಯಾರಬೆಟ್ಟು ಎಂಬಲ್ಲಿರುವ ಸೈಟ್‌ನಲ್ಲಿ ಕೆಲಸ ಮಾಡಿಕೊಂಡಿರುವಾಗ ಮಧ್ಯಾಹ್ನ 3:00 ಗಂಟೆಗೆ ಅಲ್ಲಿಗೆ ಬಂದ ಆರೋಪಿ ವಿನೋದ್‌ ಎಂಬಾತನು ಪಿರ್ಯಾದಿದಾರರ ಮೇಲಿನ ಯಾವುದೋ ದ್ವೇಷದಿಂದ ವಿನಾ ಕಾರಣ ಜಗಳ ಮಾಡಿ, ಪಿರ್ಯಾದಿದಾರರ ತಲೆಗೆ ಹಾಗೂ ಕೈಗೆ ಮತ್ತು ಅಕ್ಷಯ್ ರವರ ತಲೆಗೆ ಪಂಚ್‌ನಿಂದ ಹೊಡೆದು ರಕ್ತಗಾಯ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಕಾಲು ಮುರಿಯುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2023  ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: 118 ನೇ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ  ಶ್ರೀ ಸಿದ್ದಿವಿನಾಯಕ ದೇವಸ್ಥಾನ ತೊಂಬಟ್ಟು ಎಂಬಲ್ಲಿ  ಸಂಜೆ 06:00 ಗಂಟೆಗೆ  ಭಾರತೀಯ  ಜನತಾ ಪಕ್ಷದ ಅಭ್ಯರ್ಥಿ ಹಾಗೂ ಅವರ ಪದಾಧಿಕಾರಿಗಳು ಚುನಾವಣಾ ಪ್ರಚಾರ  ಕಾರ್ಯಕ್ರಮ ಹಮ್ಮಿಕೊಂಡಿದ್ದು ನೀತಿ ಸಂಹಿತೆಯ ವಿರುದ್ದವಾಗಿರುತ್ತದೆ  ಎಂದು ಕರೆ ಮಾಡಿ ಮೌಖಿಕವಾಗಿ ತಿಳಿಸಿದ ಮೇರೆಗೆ 118 ನೇ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು ದೂರಿಗೆ ಸಂಬಂಧಪಟ್ಟಂತೆ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ  118 ನೇ ಬೈಂದೂರು ವಿಧಾನಸಭಾ ಕ್ಷೇತ್ರದ  ಪ್ಲೈಯಿಂಗ್ ಸ್ಕ್ವಾಡ್ ಟೀಮ್  (FST-3) ನ ಅಧಿಕಾರಿಯಾದ ಪಿರ್ಯಾದಿದಾರರಾದ ಕಿರಣ್ ಪಡ್ತಿ (46),  ಸಹಾಯಕ ಕಾರ್ಯಪಾಲಕ ಅಭಿಯಂತರರು,  ವಾರಾಹಿ ಜಲಾಶಯ ಯೋಜನಾ ಉಪ ವಿಭಾಗ 4, ಸಿದ್ದಾಪುರ ಉಡುಪಿ ಜಿಲ್ಲೆ ಉಡುಪಿ ಇವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ  ಪಿರ್ಯಾದಿದಾರರು ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ  ಗುರುರಾಜ್ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳು ಚುನಾವಣಾ ಅಧಿಕಾರಿಯವರಿಂದ ಚುನಾವಣಾ ನಿಯಮಾನುಸಾರ ಯಾವುದೇ ಅನುಮತಿ ಪಡೆಯದೇ  ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾ ಭವನದಲ್ಲಿ  ಚುನಾವಣಾಪ್ರಚಾರ ನಡೆಸಿದ್ದು ಅವರ  ಮೇಲೆ ಹಾಗೂ ದೇವಸ್ಥಾನದ ಸಭಾ ಭವನಕ್ಕೆ ಸಂಬಂಧ ಪಟ್ಟವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ: 7 RELIGIOUS INSTITUTIONS(PREVENTIONOF MISUSE ACT 1988 ) ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-04-2023 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080