ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 25/04/2022 ರಂದು ಪಿರ್ಯಾದಿದಾರರಾದ  ಬೋಜರಾಜ (48), ತಂದೆ: ದಿ. ಹೇರಿಯ ಪೂಜಾರಿ, ವಾಸ: ಈಶ್ವರ ನಗರ, ಹೇರಂಜೆ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಅವರ ಮನೆಯ ಹೊರಗಡೆ ನಿಂತಿದ್ದಾಗ ಅವರ ತಾಯಿ ಗಿರಿಜಾ ರವರು ಮನೆಯ ಹತ್ತಿರ ಇರುವ ರಾಜೇಶ್‌ ಬಂಗೇರ ರವರ ದಿನಸಿ ಅಂಗಡಿಯಿಂದ ಮನೆಯ ಸಾಮಾನುಗಳನ್ನು ಖರೀದಿ ಮಾಡಿ ಮನೆಗೆ ಬರಲು ಅಂಗಡಿಯ ಎದುರು ರಸ್ತೆ ಬರುತ್ತಿದ್ದಂತೆ ಬೆಳಿಗ್ಗೆ 08:30 ಗಂಟೆಯ ಸಮಯಕ್ಕೆ ಆರೋಪಿ ಸೋಮನ್‌ ಕೆ.ಐ KA-19-AA-2784 ನೇ ಬೊಲೇರೊ ಮ್ಯಾಕ್ಸಿ ಟ್ರಕ್‌ ಗೂಡ್ಸ್‌ ವಾಹನವನ್ನು ಈಶ್ವರ ನಗರ  ಕಡೆಯಿಂದ  ಹೇರಂಜೆ ಜಂಕ್ಷನ್‌ ಕಡೆಗೆ ರಸ್ತೆಯಲ್ಲಿ ಒಮ್ಮೇಲೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಹಿಮ್ಮಖವಾಗಿ ಏಕಾ ಏಕಿ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಗಿರಿಜಾ ರವರಿಗೆ ಡಿಕ್ಕಿ ಹೊಡಿದ್ದು. ಈ ಅಪಘಾತದ ಪರಿಣಾಮ ಗಿರಿಜಾ ರವರ ಬಲ ಸೊಂಟಕ್ಕೆ ತೀವ್ರ ಮೂಳೆ ಮುರಿತದ ಒಳ ಜಖಂ, ಬಲಕಾಲಿನ ಬೆರಳಿಗೆ ತರಚಿದ ಗಾಯ ಆಗಿರುತ್ತದೆ. ಗಾಯಗೊಂಡ ಗಿರಿಜಾ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 24/04/2022  ರಂದು 17:20 ಗಂಟೆಗೆ ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮ ಕುಶಿನ್ ತೋಟ ಎಂಬಲ್ಲಿನ ಅರಣ್ಯ ಬಾರ್ ಬಳಿ ಹಾಲಾಡಿ ಸೋಮೇಶ್ವರ ರಸ್ತೆಯಲ್ಲಿ  ಆರೋಪಿತ KA-20-C-4306 ಅಟೋ ರಿಕ್ಷಾ ಚಾಲಕ ನಾರಾಯಣ ನಾಯ್ಕ ಅಲ್ಬಾಡಿಯಿಂದ ಪಿರ್ಯಾದಿದಾರರಾದ ಶ್ರೀಮತಿ ಚಂದ್ರಮತಿ ಎನ್. (47), ಗಂಡ: ದಿ: ನಾರಾಯಣ ನಾಯ್ಕ, ವಾಸ, ಕರ್ಪಾಡಿ, ಮಾಯಬಜಾರ್ , ಶೇಡಿಮನೆ  ಗ್ರಾಮ ಹೆಬ್ರಿ ತಾಲೂಕು ಇವರ ಮನೆಯಾದ ಕರ್ಪಾಡಿ ಮಾಯ ಬಜಾರ್ ಕಡೆಗೆ ಅರ್ಡಿ ಮಾರ್ಗವಾಗಿ ಪಿರ್ಯಾದಿದಾರರು ಮತ್ತು ಅವರ ಮಗಳು ಶ್ರೀಂಚನಾ ಇವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಲ ಬದಿಗೆ ಮಗುಚಿ ಬಿದ್ದು ಅಪಘಾತವಾಗಿರುವುದಾಗಿದೆ. ಈ ಅಪಘಾತದಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ  ಬಲ ಭಜಕ್ಕೆ ಮೂಳೆ ಮುರಿತ ಗಾಯ ಹಾಗೂ ತಲೆಯ ಬಲಭಾಗಕ್ಕೆ ರಕ್ತಗಾಯವಾಗಿರುತ್ತದೆ ಬಲಸೊಂಟಕ್ಕೆ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ರವೀನಾ (19),, ತಂದೆ: ರತ್ನಾಕರ ಪೂಜಾರಿ ವಾಸ: ನೈಕಾಡಿ ಮನೆ, ಗಾಂಧಿನಗರ,  ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ಬೈಂದೂರು ತಾಲೂಕು ಮರವಂತೆ ಗ್ರಾಮದ ಗಾಂಧಿನಗರ ನೈಕಾಡಿ ಮನೆ ಎಂಬಲ್ಲಿ ತಂದೆ, ತಾಯಿ, ಅಜ್ಜನೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 23/04/2022 ರಂದು ಬೆಳಿಗ್ಗೆ 7:35 ಗಂಟೆಗೆ ಮನೆಯ ಕೋಣೆಯಲ್ಲಿದ್ದ ಕಪಾಟಿನಿಂದ 1,000/- ರೂಪಾಯಿ ತೆಗೆದು ಉಳಿದ ಹಣ ರೂಪಾಯಿ 8,500/- ನ್ನು ಕಪಾಟಿನ ಲಾಕರ್ ಒಳಗೆ ಇಟ್ಟಿದ್ದು ಅದರ ಜೊತೆಗೆ ಪಿರ್ಯಾದಿದಾರರ ತಾಯಿಯ ಚಿನ್ನದ ಕರಿಮಣಿ ಸರ, ಚಿನ್ನದ ಕಿವಿಯ ಬೆಂಡೋಲೆ-1 ಜೊತೆ ಇದ್ದಿರುತ್ತದೆ. ಪಿರ್ಯಾದಿದಾರರು ಕಪಾಟಿಗೆ ಬೀಗ ಹಾಕಿ ಬೀಗವನ್ನು ಬೇರೆ ಕಡೆ ತೆಗೆದಿಟ್ಟಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ 25/04/2022 ರಂದು ಬೆಳಿಗ್ಗೆ 8:30 ಗಂಟೆಗೆ ಕಪಾಟಿನ ಬಾಗಿಲಿನ ಬೀಗ ತೆಗೆದು ಒಳ ಲಾಕರ್ ನ ಬೀಗ ತೆಗೆದು ನೋಡಲಾಗಿ 40 ಗ್ರಾಂ ತೂಕದ ಕರಿಮಣಿ ಸರ,  2 ಗ್ರಾಂ ತೂಕದ ಕಿವಿಯ ಬೆಂಡೋಲೆ ಹಾಗೂ ನಗದು ರೂಪಾಯಿ 8,500/- ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ  23/04/2022 ರಂದು ಬೆಳಿಗ್ಗೆ 7:35 ಗಂಟೆಯಿಂದ ದಿನಾಂಕ 25/04/2022 ರಂದು ಬೆಳಿಗ್ಗೆ 8:30 ಗಂಟೆ ಮಧ್ಯಾವಧಿಯಲ್ಲಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿ ಕಪಾಟಿನ ಬೀಗವನ್ನು ತೆಗೆದು ಲಾಕರ್ ನ ಬೀಗ ತೆಗೆದು ನೋಡಲಾಗಿ ಲಾಕರ್ ನಲ್ಲಿಟ್ಟಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಕಿವಿಯ ಬೆಂಡೋಲೆ-1 ಜೊತೆ ಹಾಗೂ ನಗದು ರೂಪಾಯಿ 8,500/-  ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನದ  ಮೌಲ್ಯ ರೂಪಾಯಿ 1,30,000/- ಹಾಗೂ ನಗದು 8,500/- ಒಟ್ಟಿಗೆ 1,38,500 ರೂಪಾಯಿ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40  /2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕುಂದಾಪುರ: ದಿನಾಂಕ 26/04/2022 ರಂದು ಸಂಜೆ ಕಂಡ್ಲೂರು ಗಂಗಾ ವೈನ್ಸ್‌ಬಳಿ ರಸ್ತೆಯಲ್ಲಿ 2 ಜನ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರು ಕಾವ್ರಾಡಿ ಗ್ರಾಮದ ಕಂಡ್ಲೂರು ಸೌಕೂರು ರಸ್ತೆಯಲ್ಲಿ ಗಂಗಾ ವೈನ್‌ಶಾಪ್ ಬಳಿ ಬಂದು ನೋಡುವಾಗ ಗಂಗಾ ವೈನ್ಸ್‌‌‌ಮುಂಬದಿ ರಸ್ತೆಯಲ್ಲಿ 2 ಜನ ಜೋರಾಗಿ ಕೂಗಾಡುತ್ತ, ರಸ್ತೆಯಲ್ಲಿ ಬರುವ ಸಾರ್ವಜನಿಕರನ್ನು ಮತ್ತು ವಾಹನಗಳನ್ನು ಸಂಚರಿಸದಂತೆ ತಡೆಯೊಡ್ಡಿ ಸಾರ್ವಜನಿಕ ಶಾಂತಿಭಂಗವುಂಟು ಮಾಡುತ್ತಿದ್ದುದನ್ನು ಕಂಡು ಅವರ ಬಳಿ ಹೋಗಿ ಅವರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ವಿನಂತಿಸಿಕೊಂಡಿದ್ದು. ಈ ಸಮಯ ಆರೋಪಿಗಳಾದ 1) ಮನೀಶ ಎಂ (23), ತಂದೆ:ಮಣಿಕಂಠನ್ ಎನ್, ವಾಸ: ಮನುವಿಲಾಸಂ ಫಝಂಗಲಮ್ ಕೊಲ್ಲಂ ಕೇರಳ ರಾಜ್ಯ, 2) ರಾಜೀವ (37), ತಂದೆ:ಜಾರ್ಜ್, ವಾಸ:ಪ್ರತಿಭಾ ಭವನಂ ಕೊಲ್ಲಂ ಕೇರಳ ರಾಜ್ಯ ಇವರು ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರ ಸಮವಸ್ತ್ರವನ್ನು ಎಳೆದು, ಕೈಯಿಂದ ಹೊಡೆದು ಹಲ್ಲೆ ನಡೆಸಿ, ಸ್ಥಳದಲ್ಲಿ ಸಾರ್ವಜನಿಕ ಶಾಂತಿಭಂಗ ಉಂಟಾಗುವುದನ್ನು ತಡೆಯಲು ಇಲಾಖಾ ಸಮವಸ್ತ್ರದಲ್ಲಿ ವಿಧಿಬದ್ದ ಕರ್ತವ್ಯ ನಿರ್ವಹಿಸುತ್ತಿರುವವನ್ನು ತಳ್ಳಾಡಿ , ಕೈಯಿಂದ ಹೊಡೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ:323, 353, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಶಿವಾನಂದ (44), ತಂದೆ: ದಿ. ನಾರಾಯಣ, ವಾಸ: ಮನೆನಂಬ್ರ: 2B-56B, ಇಂದಿರಾನಗರ, ಕುಕ್ಕಿಕಟ್ಟೆ, 76-ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 24/04/2022 ರಂದು ಕಲ್ಸಂಕ ಕಡೆಯಿಂದ ಉಡುಪಿ ಸಿಟಿ ಬಸ್‌ನಿಲ್ದಾಣದ ಕಡೆಗೆ ಅವರ ಆಟೋ ರಿಕ್ಷಾದಲ್ಲಿ ಬರುತ್ತಿರುವಾಗ 16:30 ಗಂಟೆಗೆ ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ನಿಲ್ದಾಣದ ಆಟೋ ಸ್ಟ್ಯಾಂಡ್‌ ಬಳಿ ಪಿರ್ಯಾದಿದಾರರ ನೆರೆಮನೆಯವರನ್ನು ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡಾಗ, ಆರೋಪಿತರಾದ 1) ಸತೀಶ್‌, ಆಟೋ ರಿಕ್ಷಾ ಚಾಲಕ, ಉಡುಪಿ, 2) ವಿಠಲ ಪೂಜಾರಿ, ಆಟೋ ರಿಕ್ಷಾ ಚಾಲಕ, ಉಡುಪಿ ಇವರು ತಮ್ಮ ಆಟೋ ರಿಕ್ಷಾವನ್ನು ಪಿರ್ಯಾದಿದಾರರ ಆಟೋ ರಿಕ್ಷಾದ ಮುಂದೆ ನಿಲ್ಲಿಸಿ ಅಡ್ಡಗಟ್ಟಿ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ರಿಕ್ಷಾವನ್ನು ದೂಡಿ, ಕೀ ಯನ್ನು ತೆಗೆದು ಬಿಸಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 27-04-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080