ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು


  • ಬ್ರಹ್ಮಾವರ : ದಿನಾಂಕ 25.04.2022 ರಂದು ಪಿರ್ಯಾದಿ ಬೋಜರಾಜ (48 ವರ್ಷ), ತಂದೆ: ದಿ| ಹೇರಿಯ ಪೂಜಾರಿ, ಔಸ: ಈಶ್ವರ ನಗರ, ಹೇರಂಜೆ, 52 ನೇ ಹೇರೂರು ಗ್ರಾಮ ಇವರು ಮನೆಯ ಹೊರಗಡೆ ನಿಂತಿದ್ದಾಗ ಅವರ ತಾಯಿ ಗಿರಿಜಾ ರವರು ಮನೆಯ ಹತ್ತಿರ  ಇರುವ ರಾಜೇಶ್‌ ಬಂಗೇರ ರವರ ದಿನಸಿ ಅಂಗಡಿಯಿಂದ ಮನೆಯ ಸಾಮಾನುಗಳನ್ನು ಖರೀದಿಮಾಡಿ ಮನೆಗೆ ಬರಲು ಅಂಗಡಿಯ ಎದುರು ರಸ್ತೆ ಬರುತ್ತಿದ್ದಂತೆ  ಸುಮಾರು ಬೆಳಿಗ್ಗೆ 08:30 ಗಂಟೆಯ ಸಮಯಕ್ಕೆ ಆರೋಪಿಯು ಅವರ ಬಾಬ್ತು KA.19.AA.2784 ನೇ ಬೊಲೇರೊ ಮ್ಯಾಕ್ಸಿ ಟ್ರಕ್‌ ಗೂಡ್ಸ್‌ ವಾಹನವನ್ನು ಈಶ್ವರ ನಗರ  ಕಡೆಯಿಂದ  ಹೇರಂಜೆ ಜಂಕ್ಷನ್‌ ಕಡೆಗೆ ರಸ್ತೆಯಲ್ಲಿ ಒಮ್ಮೇಲೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಹಿಮ್ಮಖವಾಗಿ ಏಕಾ ಏಕಿ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಗಿರಿಜಾ ರವರಿಗೆ ಡಿಕ್ಕಿ ಹೊಡಿದ್ದು. ಈ ಅಪಘಾತದ ಪರಿಣಾಮ ಗಿರಿಜಾ ರವರ ಬಲ ಸೊಂಟಕ್ಕೆ ತೀವ್ರ ಮೂಳೆ ಮುರಿತದ ಒಳ ಜಖಂ, ಬಲಕಾಲಿನ ಬೆರಳಿಗೆ ತರಚಿದ ಗಾಯ ಆಗಿರುತ್ತದೆ. ಗಾಯಗೊಂಡ ಗಿರಿಜಾ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. [ ಆರೋಪಿಯು ಗಾಯಾಳುವಿನ ಆಸ್ಪತ್ರೆಯ ಖರ್ಚು ವೆಚ್ಚ ನೀಡುವುದಾಗಿ ಹೇಳಿ, ನಂತ್ರ ಆಸ್ಪತ್ರೆಯ ವೆಚ್ಚ ಜಾಸ್ತಿ ಆಗುವುದರಿಂದ ಆರೋಪಿಯು ಹಣ ಕೊಡಲು ನಿರಾಕರಿಸಿದ್ದರಿಂದ, ಈ ದಿನ ಠಾಣೆಗೆ  ಬಂದು ದೂರು ನೀಡುವಾಗ ವಿಳಂಬವಾಗಿರುತ್ತದೆ] ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾದ ಕ್ರಮಾಂಕ 73/2022 ಕಲಂ 279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣಗಳು

  • ಉಡುಪಿ : ಪಿರ್ಯಾದಿ ಶಿವಾನಂದ ಪ್ರಾಯ: 44 ತಂದೆ: ದಿ. ನಾರಾಯಣ ವಾಸ: ಮನೆನಂಬ್ರ: 2B-56B, ಇಂದಿರಾನಗರ, ಕುಕ್ಕಿಕಟ್ಟೆ ಇವರು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 24/04/2022 ರಂದು ಕಲ್ಸಂಕ ಕಡೆಯಿಂದ ಉಡುಪಿ ಸಿಟಿ ಬಸ್‌ನಿಲ್ದಾಣದ ಕಡೆಗೆ ಅವರ ಆಟೋ ರಿಕ್ಷಾದಲ್ಲಿ ಬರುತ್ತಿರುವಾಗ, 16:30 ಗಂಟೆಗೆ ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ನಿಲ್ದಾಣದ ಆಟೋ ಸ್ಟ್ಯಾಂಡ್‌ಬಳಿ ಪಿರ್ಯಾದುದಾರರ ನೆರೆಮನೆಯವರನ್ನು ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡಾಗ, ಆರೋಪಿತ 1) ಸತೀಶ್‌, ಆಟೋ ರಿಕ್ಷಾ ಚಾಲಕ, ಉಡುಪಿ 2) ವಿಠಲ ಪೂಜಾರಿ, ಆಟೋ ರಿಕ್ಷಾ ಚಾಲಕ, ಉಡುಪಿ ಇವರು ಸಮಾನ ಉದ್ದೇಶದಿಂದ ತಮ್ಮ ಆಟೋ ರಿಕ್ಷಾವನ್ನು ಪಿರ್ಯಾದುದಾರರ ಆಟೋ ರಿಕ್ಷಾದ ಮುಂದೆ ನಿಲ್ಲಿಸಿ ಅಡ್ಡಗಟ್ಟಿ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ರಿಕ್ಷಾವನ್ನು ದೂಡಿ, ಕೀ ಯನ್ನು ತೆಗೆದು ಬಿಸಾಡಿದ್ದಲ್ಲದೆ, ‘ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಂದು ಬಿಡುತ್ತೇವೆ’ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  63/2022 ಲಂ: 341, 504, 506 Rw 34 IPC  ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಪಡುಬಿದ್ರಿ: ದಿನಾಂಕ:05.03.2022 ರಂದು ಬೆಳಗ್ಗೆ 11:45 ಗಂಟೆಗೆ ಪಿರ್ಯಾದಿ ಕಲಂಧರ್ ಶಾಫಿ, ಪ್ರಾಯ: 36  ವರ್ಷ, ತಂದೆ: ಟಿ. ಮೊಹಮ್ಮದ್, ವಾಸ: ಮನೆ ನಂಬ್ರ.1-21-10-1 ಎಮ್.ಎಸ್. ಕ್ವಾಟೇಜ್ ಆಭರಣ ಮೋಟಾರ್ಸ್ ಶೋ ರೂಮ್ ಎದುರು ನಡ್ಸಾಲು ಗ್ರಾಮ ಇವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ- ಕಾರ್ಕಳ ಜಂಕ್ಷನ್‌ಬಳಿಯ  ತನ್ನ  ಎಂ. ಎಸ್. ಹಣ್ಣು ಹಂಪಲು ಮತ್ತು ತರಕಾರಿ ಅಂಗಡಿಯಲ್ಲಿರುವಾಗ ಮೊಹಮ್ಮದ್ ಇಲಿಯಾಸ್ ಮತ್ತು ಜೀನತ್ ಎಂಬವರು ಏಕಾಏಕಿ ಅಂಗಡಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಪಂಚಾಯತ್ ಸದಸ್ಯ ಆದ ನಂತರ ಬಹಳ ಹಾರಾಡುತ್ತೀಯಾ ನಿನ್ನನ್ನು ಯಾವ ರೀತಿ ಮಟ್ಟ ಹಾಕಬೇಕು ಎಂದು ನಮಗೆ ಗೊತ್ತಿದೆ, ನಾವು  ಕೇಳಿದ ಹಣ ಕೊಡದೇ ಇದ್ದರೆ ನಿನ್ನನ್ನು ದಿನೇಶ್ ಸನಿಲ್ ಮಾನಂಪಾಡಿ ಎಂಬವನನ್ನು ಪಡುಬಿದ್ರಿ ಪೇಟೆಯಲ್ಲಿ ಹೊಡೆದು ಸಾಯಿಸಿದ ಹಾಗೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ದಿನಾಂಕ:14.04.2022 ರಂದು  ಸಂಜೆ 04:00 ಗಂಟೆಗೆ ಹಮೀದ್ ಪಡುಬಿದ್ರಿ, ಯತೀಶ್ ಎಂಬವರ ಬಳಿ ಬಂದ ಆರೋಪಿಗಳು ಪಿರ್ಯಾದಿದಾರರ ಮತ್ತು ಒಂದು ಹುಡುಗಿ ಪೋಟೋ ಶಾಪ್ ಮಾಡಿದ ಪೋಟೋವನ್ನು ತೋರಿಸಿ, ರೂ.5,00,000/- ನೀಡದಿದ್ದಲ್ಲಿ ನಾಳೆ ಪತ್ರಿಕಾ ಮಾದ್ಯಮ ಮತ್ತು ದೃಶ್ಯ ಮಾದ್ಯಮಕ್ಕೆ ಫೋಟೋ  ಹಾಕಿಸುತ್ತೆವೆಂದು  ಹೇಳಿ ಹೋಗಿದ್ದು, ಫಿರ್ಯಾದುದಾರರು ಹಣ ನೀಡದ ಕಾರಣ ಫಿರ್ಯಾದುದಾರರನ್ನು  ಬ್ಲಾಕ್ ಮೇಲ್ ಮಾಡಿ ಹಣ ದೋಚುವ ಉದ್ದೇಶದಿಂದ ದಿನಾಂಕ:15/04/2022 ರಂದು ಆರೋಪಿಗಳು ಉಡುಪಿಯ ಪತ್ರಿಕಾ ಗೋಷ್ಠಿಯಲ್ಲಿ ಪೋಟೋದಲ್ಲಿ ಇರುವ ಹುಡುಗಿಗೂ ಫಿರ್ಯಾದುದಾರರಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿರುತ್ತಾರೆ.   ಆರೋಪಿಗಳು ಹಿಂದಿನಿಂದಲೂ ಜನರನ್ನು ಬ್ಲಾಕ್ ಮೇಲ್ ಮಾಡಿ ಒಂದಲ್ಲ ಒಂದು ರೀತಿಯಲ್ಲಿ ಹಣ ದೋಚುವ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಆರೋಪಿತರಿಬ್ಬರ ಮೇಲೂ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ತನಿಖೆಗೆ ಬಾಕಿ ಇರುತ್ತದೆ. ಆದುದರಿಂದ ಆರೋಪಿಗಳಿಬ್ಬರೂ ವಂಚನೆಯಿಂದ ಬೆದರಿಸಿ ಬಲತ್ಕಾರದಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಪೋಟೋಶಾಪ್ ಮಾಡಿ ಪಿರ್ಯಾದಿದಾರರಿಗೆ ರೂ.5,00,000/- ಹಣಕ್ಕೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2022,  ಕಲಂ  384,504,506 ಜೊತೆಗೆ 34 ಐಪಿಸಿ ಯಂತೆ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ: ಗ್ರಾಮಾಂತರ : ದಿನಾಂಕ 26/04/2022 ರಂದು ಸಂಜೆ ಪಿರ್ಯಾಧಿ ಚಂದ್ರ ಪಿಸಿ 2469 ತಂದೆ: ದಿ.ಭಾಸ್ಕರ ಶೆಟ್ಟಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವ ವೇಳೆ ಪಿಎಸ್‌ಐ ರವರಿಗೆ ಕಂಡ್ಲೂರು ಗಂಗಾ ವೈನ್ಸ್‌ಬಳಿ ರಸ್ತೆಯಲ್ಲಿ 2 ಜನ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿರ್ಯಾಧಿದಾರರನ್ನು ಹಾಗೂ ಠಾಣಾ ಹೆಚ್‌ಸಿ-15 ಮಧುಸೂಧನ ಇವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದು, ಪಿರ್ಯಾಧಿದಾರರು ಠಾಣೆಯಿಂದ ಸಮವಸ್ತ್ರ ದಲ್ಲಿ ಹೊರಟು ಸಂಜೆ 6-00 ಗಂಟೆಗೆ ಕಾವ್ರಾಡಿ ಗ್ರಾಮದ ಕಂಡ್ಲೂರು ಸೌಕೂರು ರಸ್ತೆಯಲ್ಲಿ ಗಂಗಾ ವೈನ್‌ಶಾಪ್ ಬಳಿ ಬಂದು ನೋಡುವಾಗ ಗಂಗಾ ವೈನ್ಸ್‌‌‌ಮುಂಬದಿ ರಸ್ತೆಯಲ್ಲಿ 2 ಜನ ಜೋರಾಗಿ ಕೂಗಾಡುತ್ತ, ರಸ್ತೆಯಲ್ಲಿ ಬರುವ ಸಾರ್ವಜನಿಕರನ್ನು ಮತ್ತು ವಾಹನಗಳನ್ನು ಸಂಚರಿಸದಂತೆ ತಡೆಯೊಡ್ಡಿ ಸಾರ್ವಜನಿಕ ಶಾಂತಿಭಂಗವುಂಟುಮಾಡುತ್ತಿದ್ದುದನ್ನು ಕಂಡು ಅವರ ಬಳಿ ಹೋಗಿ ಅವರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ವಿನಂತಿಸಿಕೊಂಡಿದ್ದು. ಈ ಸಮಯ ಈ ಎರಡು ಜನರು ಸಮವಸ್ತ್ರದಲ್ಲಿದ್ದ ಪಿರ್ಯಾಧಿದಾರರನ್ನು ತಳ್ಳಿ,  ಸಮವಸ್ತ್ರವನ್ನು ಎಳೆದು, ಕೈಯಿಂದ ಹೊಡೆದು ಹಲ್ಲೆ ನಡೆಸಿ, ಸ್ಥಳದಲ್ಲಿ ಸಾರ್ವಜನಿಕ ಶಾಂತಿಭಂಗ ಉಂಟಾಗುವುದನ್ನು ತಡೆಯಲು ಇಲಾಖಾ ಸಮವಸ್ತ್ರದಲ್ಲಿ ವಿಧಿಬದ್ದ ಕರ್ತವ್ಯ ನಿರ್ವಹಿಸುತ್ತಿರುವ ಪಿರ್ಯಾಧಿದರರನ್ನು ತಳ್ಳಾಡಿ , ಕೈಯಿಂದ ಹೊಡೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಮನೀಶ್‌‌ಎಂ. ಹಾಗೂ ರಾಜೀವ ಎಂಬವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 20/2022 ಕಲಂ:323, 353, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಕಳವು ಪ್ರಕರಣಗಳು

  • ಗಂಗೊಳ್ಳಿ ಫಿರ್ಯಾದಿ ರವೀನಾ  ಪ್ರಾಯ: 19 ವರ್ಷ, ತಂದೆ: ರತ್ನಾಕರ ಪೂಜಾರಿ ವಾಸ: ನೈಕಾಡಿ ಮನೆ, ಗಾಂಧಿನಗರ,  ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ಬೈಂದೂರು ತಾಲೂಕು ಮರವಂತೆ ಗ್ರಾಮದ ಗಾಂಧಿನಗರ ನೈಕಾಡಿ ಮನೆ ಎಂಬಲ್ಲಿ ತಂದೆ,ತಾಯಿ, ಅಜ್ಜನೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರು ದಿನಾಂಕ: 23-04-2022 ರಂದು ಬೆಳಿಗ್ಗೆ 7:35 ಗಂಟೆಗೆ ಮನೆಯ ಕೋಣೆಯಲ್ಲಿದ್ದ ಕಪಾಟಿನಿಂದ 1,000 ರೂಪಾಯಿ ತೆಗೆದು ಉಳಿದ ಹಣ ರೂ 8,500/- ನ್ನು ಕಪಾಟಿನ ಲಾಕರ್ ಒಳಗೆ ಇಟ್ಟಿದ್ದು ಅದರ ಜೊತೆಗೆ ಫಿರ್ಯಾದಿದಾರರ ತಾಯಿಯ ಚಿನ್ನದ ಕರಿಮಣಿ ಸರ, ಚಿನ್ನದ ಕಿವಿಯ ಬೆಂಡೋಲೆ-1 ಜೊತೆ ಇದ್ದಿರುತ್ತದೆ. ಫಿರ್ಯಾದಿದಾರರು ಕಪಾಟಿಗೆ ಬೀಗ ಹಾಕಿ ಬೀಗವನ್ನು ಬೇರೆ ಕಡೆ ತೆಗೆದಿಟ್ಟಿರುವುದಾಗಿದೆ. ಫಿರ್ಯಾದಿದಾರರು ದಿನಾಂಕ:25-04-2022 ರಂದು ಬೆಳಿಗ್ಗೆ 8:30 ಗಂಟೆಗೆ ಕಪಾಟಿನ ಬಾಗಿಲಿನ ಬೀಗ ತೆಗೆದು ಒಳ ಲಾಕರ್ ನ ಬೀಗ ತೆಗೆದು ನೋಡಲಾಗಿ 40 ಗ್ರಾಂ ತೂಕದ ಕರಿಮಣಿ ಸರ, ಸುಮಾರು 2 ಗ್ರಾಂ ತೂಕದ ಕಿವಿಯ ಬೆಂಡೋಲೆ ಹಾಗೂ ನಗದು ರೂ 8,500/- ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 23-04-2022 ರಂದು ಬೆಳಿಗ್ಗೆ 7:35 ಗಂಟೆಯಿಂದ ದಿನಾಂಕ: 25-04-2022 ರಂದು ಬೆಳಿಗ್ಗೆ 8:30 ಗಂಟೆ ಮಧ್ಯಾವಧಿಯಲ್ಲಿ   ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿ ಕಪಾಟಿನ ಬೀಗವನ್ನು ತೆಗೆದು ಲಾಕರ್ ನ ಬೀಗ ತೆಗೆದು ನೋಡಲಾಗಿ ಲಾಕರ್ ನಲ್ಲಿಟ್ಟಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಕಿವಿಯ ಬೆಂಡೋಲೆ-1 ಜೊತೆ ಹಾಗೂ ನಗದು ರೂ 8,500/-   ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನದ ಅಂದಾಜು ಮೌಲ್ಯ ರೂ 1,30,000 ಹಾಗೂ ನಗದು 8,500/- ಒಟ್ಟಿಗೆ 1,38,500 ರೂ ಆಗಬಹುದು.  ಫಿರ್ಯಾದಿದಾರರು ಮನೆಯಲ್ಲಿ ಹಾಗೂ ಮನೆಯ ಆಸುಪಾಸಿನಲ್ಲಿ ಹುಡುಕಾಡಿದ್ದು ಪತ್ತೆಯಾಗದ ಕಾರಣ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪ್ರಾಧ ಕ್ರಮಾಂಕ 40  /2022 ಕಲಂ: 454, 457, 380 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.  


ಇತ್ತೀಚಿನ ನವೀಕರಣ​ : 27-04-2022 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080