ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಶಂಕರನಾರಾಯಣ: ದಿನಾಂಕ 26/04/2021 ರಂದು 12:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ  ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯ ಹೆನ್ನಾಬೈಲು  ಸಮೀಪದ ದೊಟ್ಟನಬೇರು  ಎಂಬಲ್ಲಿ  ಶಂಕರ ಎನ್‌ ಶೆಟ್ಟಿ ಇವರ ಕಾರು ನಂಬ್ರ  KA-68-M-0003 ನೇದನ್ನು  ಹೊಸಂಗಡಿ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಸಿದ್ದಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದ KA-20-AA-1950 ನೇ ನಂಬ್ರದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ  ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಬೀಬಿಮಾ ಮತ್ತು ಶ್ರೀಮತಿ ರೆಹನಾ ಹಾಗೂ ಆಟೋ ಚಾಲಕ ಫರೀದ್‌ರವರ ಮುಖಕ್ಕೆ ಮೈಗೆ ಕೈಗೆ ತೀವೃ ಸ್ವರೂಪದ ರಕ್ತ ಗಾಯವಾಗಿ ಬೀಬಿಮಾರವರು ಮೃತ ಪಟ್ಟಿದ್ದು ರೆಹನಾ ಮತ್ತು ಆಟೋ ಚಾಲಕ ಫರೀದ್‌ರವರು ಮಣಿಪಾಲ ಕೆ,ಎಮ್‌ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುವುದಾಗಿದೆ. ಆರೋಪಿತರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪುಷ್ಪಾ ಎಂಬವರಿಗೂ ಗಾಯನೋವು ಆಗಿರುವುದಾಗಿದೆ, ಎಂಬುದಾಗಿ ಸೈಯ್ಯದ್‌ ಮುಸ್ತಾಕ್‌ ‌(42) ತಂದೆ: ಸಯ್ಯದ್‌ ಅಬ್ದುಲ್‌ ಹಮೀದ್‌ ‌ವಾಸ: ಹೆನ್ನಾಬೈಲು ಸಿದ್ದಾಪುರ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಉಡುಪಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2021 ಕಲಂ: 279, 337,  304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಹೆಬ್ರಿ: ಪಿರ್ಯಾದಿದಾರರಾದ ಸಂತೋಷ (30) ತಂದೆ: ತಮ್ಮಯ್ಯ ನಾಯ್ಕ ವಾಸ: ಗೋಯಿಕೊಡ್ಲು ಬೇಳಂಜೆ, ಬೇಳಂಝೆ ಗ್ರಾಮ ಹೆಬ್ರಿ ಇವರು ದಿನಾಂಕ 25/04/2021 ರಂದು ರಾತ್ರಿ ಅವರ ಮೋಟಾರ್ ಸೈಕಲ್ ನಲ್ಲಿ ಬಸದಿ ಕಡೆಯಿಂದ ಸಳ್ಳೆಕಟ್ಟೆ ಕಡೆಗೆ ಹೋಗುತ್ತಿರುವಾಗ ಅವರ ಮುಂದುಗಡೆ KA-20-Y-9362 ನೇ ಮೋಟಾರ್ ಸೈಕಲ್ ನ್ನು ಪ್ರಕಾಶ ರವರು ಸಹ ಸವಾರರನ್ನಾಗಿ ನಾಗರಾಜ ರವರನ್ನು ಕುಳ್ಳಿರಿಸಿಕೊಂಡು ಸಳ್ಳೆಕಟ್ಟೆ ಕಡೆಗೆ ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 07:30 ಗಂಟೆಗೆ ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಸಳ್ಳೆಕಟ್ಟೆ ಕಡೆಯಿಂದ ಬಸದಿ ಕಡೆಗೆ KA-20-MC-0401 ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿದ ಪರಿಣಾಮ ಪ್ರಕಾಶ ರವರಿಗೆ ಬಲಕೈ ಹೆಬ್ಬೆರಳಿನ ಬಳಿ ಮೂಳೆ ಮುರಿತವಾಗಿದ್ದು ಬಲಕಾಲಿನ ಮೊಣಗಂಟಿನ ಕೆಳಗೆ ಹಾಗೂ ಬಲ ಮತ್ತು ಎಡ ಭುಜದ ಬಳಿ ಗುದ್ದಿದ ನೋವಾಗಿರುತ್ತದೆ ಸಹ ಸವಾರ ನಾಗರಾಜ ರವರಿಗೆ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತವಾಗಿದ್ದು ಬಲಕೈ ಗಂಟಿಗೆ ಹಾಗೂ ಬಲಕಾಲಿನ ಹೆಬ್ಬೆರಳಿಗೆ ಗುದ್ದಿದ ನೋವಾಗಿರುತ್ತದೆ ಅಪಘಾತ ಪಡಿಸಿದ ಕಾರಿನ ಚಾಲಕನು ಗಾಯಾಳುವನ್ನು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಕಾರನ್ನು ಚಲಾಯಿಸಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2021 ಕಲಂ: 279,337,338 ಐಪಿಸಿ ಕಲಂ: 134(A&B),187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕೊಲ್ಲೂರು: ಪಿರ್ಯಾದಿದಾರರಾದ ಚಂದ್ರ (39) ತಂದೆ:ಗೋವಿಂದ ವಾಸ: ಕಲ್ಯಾಣಿಗುಡ್ಡೆ ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು ಇವರ ತಂದೆ: ಗೋವಿಂದ (65) ರವರು ಕೃಷಿ ಕೆಲಸ ಮಾಡಿಕೊಂಡಿದ್ದವರು, ದಿನಾಂಕ 26/04/2021 ಸಂಜೆ 4:00 ಗಂಟೆಗೆ  ವಾಸವಾಗಿರುವ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ  ಮನೆಯ ಬಳಿ ಇರುವ  ತೆಂಗಿನ ಮರವನ್ನು ಹತ್ತಿ  ತೆಂಗಿನ ಕಾಯಿ ಕೊಯ್ಯುವಾಗ ಆಕಸ್ಮಿಕವಾಗಿ ಕೈ ತಪ್ಪಿ ಕಾಲು ಜಾರಿ ಸುಮಾರು 25 ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಬೀರ ಸ್ವರೂಪದ ಒಳ ಜಖುಂ ಗಾಯವಾಗಿ ಸ್ಥಳದ್ಲಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಸುಜಿತ್ (23) ತಂದೆ: ನಾರಾಯಣ ಪೂಜಾರಿ ವಾಸ: ಕೆರೆಗದ್ದೆ ಸಿತೂರು ಎನ್ ಆರ್ ಪುರ ತಾಲೂಕು ಚಿಕ್ಕಮಗಳೂರು ಇವರ ತಂದೆ ನಾರಾಯಣ ಪೂಜಾರಿ (45) ಇವರು ಸುಮಾರು 8-9 ತಿಂಗಳಿಂದ 38 ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಚಾಪಾಳೀಜಡ್ಡು ಎಂಬಲ್ಲಿ ಅವರ ತಾಯಿ ಮನೆಯಲ್ಲಿ ವಾಸವಾಗಿದ್ದು. ಅವರು ಸುಮಾರು 2 ವರ್ಷಗಳಿಂದ ವಿಪರೀತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು. ಈ ಬಗ್ಗೆ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡಿಸಲಾಗಿದೆ ಈ ಕಾಯಿಲೆಯಿಂದ ಅವರ ಕಾಲಿನ 4 ನೇ ಬೆರಳನ್ನು ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆಯಲಾಗಿದೆ . ದಿನಾಂಕ 26/04/2021 ರಂದು ನಾರಾಯಣ ಪೂಜಾರಿ ರವರು ಮನೆಯಲ್ಲಿರುವಾಗ ಅವರಿಗೆ ವಿಪರೀತ ಸಕ್ಕರೆ ಕಾಯಿಲೆವುಂಟಾಗಿದ್ದು. ಅವರನ್ನು ಚಿಕಿತ್ಸೆಯ ಬಗ್ಗೆ ಅಸ್ಪತ್ರೆಗೆ ಕೊಂಡು ಹೋಗುವ ಸಲುವಾಗಿ ಮನೆಯ ಅಂಗಳಕ್ಕೆ ಬಂದಾಗ ಸುಮಾರು ಬೆಳಿಗ್ಗೆ 11:30 ಗಂಟೆಗೆ ಅವರು ಅಲ್ಲಿಯೇ ಕುಸಿದು ಬಿದ್ದು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ಹೆಬ್ರಿ ಸರಕಾರಿ ಅಸ್ಪತ್ರೆಗೆ ಸುಮಾರು ಮದ್ಯಾಹ್ನ 12:30 ಗಂಟೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ಅವರು ಮೃತ ಪಟ್ಟಿರುತ್ತಾರೆಂದು ವೈದ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಕೆ ವೆಂಕಟೇಶ್ ಕಿಣಿ (51) ತಂದೆ; ಸದಾನಂದ ಕಿಣಿ, ವಾಸ; ಬಂಕೇಸ್ವರ, ಯಡ್ತರೆ ಗ್ರಾಮ, ಬೈಂದೂರು ಇವರು ತಮ್ಮ ಒಡೆತನದಲ್ಲಿ ಬೈಂದೂರಿನಲ್ಲಿ ಸಿಟಿ ಪಾಯಿಂಟ್ ವ್ಯಾಪಾರ ಸಂಕೀರ್ಣ ಹಾಗೂ ಪ್ರಸ್ತುತ ಬೈಂದೂರು ಪ್ಯಾಲೇಸ್ ಎಂಬ ಹೆಸರಿನಲ್ಲಿ ಪ್ಲಾಟ್ ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಲೈಸೆನ್ಸ್ ಪಡೆದುಕೊಂಡಿದ್ದು, ಕೆ ವೆಂಕಟೇಶ್ ಕಿಣಿ ರವರು ಬೈಂದೂರಿನಲ್ಲಿ ಸಿಟಿ ಪಾಯಿಂಟ್ ವ್ಯಾಪಾರ ಸಂಕೀರ್ಣ ನಿರ್ಮಾಣ ಮಾಡುತ್ತಿರುವಾಗ ಆಪಾದಿತ ವೆಂಕಟೇಶ್ ಕಾರಂತನು ತಾನು RTI ಕಾರ್ಯಕರ್ತ ಸಾಮಾಜಿಕ ಹೊರಟಗಾರ ಎಂದು ಪರಿಚಯಿಸಿಕೊಂಡು ಕೆ ವೆಂಕಟೇಶ್ ಕಿಣಿ ರವರ ಒಡೆತನದ ಮೂಕಾಂಬಿಕಾ ಡೆವಲ್ಪರ್ಸ್ ಹೆಸರಿನಲ್ಲಿ ಮನವಿಯನ್ನು ಕೆರೆಕಟ್ಟೆ ಪ್ರಸನ್ನ ಚಾರಿಟೇಬಲ್ ಟ್ರಸ್ಟಿನ ಲೆಟ್ಟರ್ ಹೆಡ್ಡಿನಲ್ಲಿ ನೀಡಿ ಆಪಾದಿತ ವೆಂಕಟೇಶ್ ಕಾರಂತನು 3 ಲಕ್ಷ ಬೇಡಿಕೆ ಇಟ್ಟಿದ್ದು, ಕೆ ವೆಂಕಟೇಶ್ ಕಿಣಿ ರವರು ಇದಕ್ಕೆ ಒಪ್ಪದೆ ಇದ್ದಾಗ ಸಿಟಿ ಪಾಯಿಂಟ್ ನ ದಾಖಲೆಗಳನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ತೆಗೆದು ಸರಕಾರದ ವಿವಿಧ ಇಲಾಖೆಗೆ ದೂರು ಅರ್ಜಿ ಹಾಕಿರುತ್ತಾನೆ. ನಂತರ ಆಪಾದಿತನು ಕೆ ವೆಂಕಟೇಶ್ ಕಿಣಿ ರವರಲ್ಲಿ ತಾನು ಹಾಕಿದ ದೂರು ಅರ್ಜಿಗಳನ್ನು ವಾಪಾಸ್ ಪಡೆಯುತ್ತೇನೆ, ತಾನು ಕೇಳಿದ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದು. ಇವರು ಅಪಾದಿತನ ಒತ್ತಾಯಕ್ಕೆ ಮಣಿದು 35.000 ರೂಪಾಯಿ ಹಣವನ್ನು ನೀಡಿದ್ದು, ನಂತರ ಪುನ: ಆಪಾದಿತನು ಹಣಕ್ಕಾಗಿ  ಬೇಡಿಕೆ ಇಟ್ಟಿದ್ದು ಕೆ ವೆಂಕಟೇಶ್ ಕಿಣಿ ರವರು ಇದಕ್ಕೆ ಒಪ್ಪದಿದ್ದಾಗ ಇವರ ಒಡೆತನದ ಬೈಂದೂರು ಪ್ಯಾಲೇಸ್ ನಿರ್ಮಾಣದ ಬಗ್ಗೆ ಇಲ್ಲ ಸಲ್ಲದ ವಿಷಯವನ್ನು ಸಾರ್ವಜನಿಕ ವಲಯದಲ್ಲಿ ತಪ್ಪು ತಿಳುವಳಿಕೆ ಬರುವಂತೆ ವಾಟ್ಸಪ್ ನಲ್ಲಿ ಪ್ರಚಾರ ಮಾಡಿ ಕೆ ವೆಂಕಟೇಶ್ ಕಿಣಿ ರವರ ವ್ಯವಹಾರಕ್ಕೆ ಮತ್ತು ವ್ಯಕ್ತಿಕ್ವಕ್ಕೆ ದಕ್ಕೆ ಬರುವಂತೆ ಮಾಡಿರುತ್ತಾನೆ. ಇವರ ಸೈಟ್ ಮ್ಯಾನೇಜರ್ ಆದ ಗುರುರಾಜನ ಬಳಿ ಆಪಾದಿತನು ದಿನಾಂಕ 24/04/2021 ರಂದು ಸಂಜೆ 04.30 ಗಂಟೆಗೆ  ಕಟ್ಟಡ ಕಾಮಗಾರಿ ಸ್ಥಳಕ್ಕೆ ಬಂದು ಇದು ಕಳಪೆ ಕಾಮಗಾರಿ ಎಂದು ಪ್ರಚಾರ ಮಾಡುತ್ತೇನೆ ಕಟ್ಟಡ ಕಾಮಗಾರಿಯನ್ನು ನಿಲ್ಲಿಸುತ್ತೇನೆ ಎಂದು ಹೇಳಿ 5 ಲಕ್ಷ ರೂಪಾಯಿಯನ್ನು ಆಪಾದಿತನ ಕೆರೆಕಟ್ಟೆ ಪ್ರಸನ್ನ ಟ್ರಸ್ಟಿಗೆ ವರ್ಗಾವಣೆ ಮಾಡುವಂತೆ ಬೇಡಿಕೆ ಇಟ್ಟಿದ್ದು, ಸದ್ರಿ ಸಮಯ ಕಿರಣ್ ಎನ್ನುವವರು ಗುರುರಾಜನೊಂದಿಗೆ ಇರುತ್ತಾರೆ. ನಂತರ 5 ಲಕ್ಷ ಹಣ ನೀಡದಿದ್ದರೆ ಕಟ್ಟಡ ನಿರ್ಮಾಣದ ಬಗ್ಗೆ ಲೋಕಯುಕ್ತರಿಗೆ ದೂರು ನೀಡಿ ಯಾರು ಪ್ಲಾಟ್ ಖರೀದಿಸದಂತೆ ಮಾಡುವುದಾಗಿ ಹೇಳಿರುತ್ತಾನೆ. ಅಲ್ಲದೆ ಆಪಾದಿತನು ಉದ್ಯಮಿಗಳಿಂದ ಹಾಗೂ ವ್ಯವಹಾರಸ್ಥರಿಂದ ಹಣ ವಸೂಲಿ ಮಾಡುವ ಅಕ್ರಮ ದಂದೆ ಮಾಡುತ್ತಿದ್ದು, ತನ್ನ ವಸೂಲಿ ದಂದೆಗಾಗಿ ಕೆರೆಕಟ್ಟೆ ಪ್ರಸನ್ನ ಚಾರಿಟೇಬಲ್ ಟ್ರಸ್ಟನ್ನು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 80/2021 ಕಲಂ: 384 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 27-04-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ