ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 26/03/2023 ರಂದು ಮಧ್ಯಾಹ್ನ 12:45 ಗಂಟೆಗೆ,  ಕುಂದಾಪುರ ತಾಲೂಕಿನ ಕುಂಭಾಶಿ  ಗ್ರಾಮದ ಪಾಕಶಾಲ ಹೋಟೇಲ್‌ ಬಳಿ ಪಶ್ಚಿಮ  ಬದಿಯ  NH 66 ರಸ್ತೆಯಲ್ಲಿ,  ಪಿರ್ಯಾದಿದಾರರಾದ ವಿಘ್ನೇಶ (28), ತಂದೆ:  ಸಂಜೀವ ಪೂಜಾರಿ, ವಾಸ: ಮಾಣಿಮನೆ ಬೆಟ್ಟು ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರು  ತನ್ನ ಗೆಳೆಯ ಪ್ರಶಾಂತ ರವರೊಂದಿಗೆ KA-20-EM-2551 ನೇ ಸ್ಕೂಟರ್‌  ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಕ್ರಿಕೆಟ್‌ ಆಟದ ಬಗ್ಗೆ ಎನ್‌ ಹೆಚ್‌ 66 ರ ಕುಂಭಾಶಿ ಬಳಿಯ ಪಾಕಶಾಲ ಹೋಟೇಲ್‌ ಬಳಿ ಬರುತ್ತಿರುವಾಗ, ಪಾಕಶಾಲ ಪಕ್ಕದ ಹಾಲುಡೈರಿ ರಸ್ತೆಯಲ್ಲಿ KA- 04-MW-0685ನೇ ಕಾರನ್ನುರಸ್ತೆಯಲ್ಲಿ ನಿಲ್ಲಿಸಿದ್ದ ಅದರ ಚಾಲಕ ನಿತಿನ್‌ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೇ  ಎನ್‌ ಹೆಚ್‌ ರಸ್ತೆಗೆ ಚಲಾಯಿಸಿದ ಪರಿಣಾಮ  NH 66 ರಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರ್‌ ಗೆ ಡಿಕ್ಕಿ ಹೊಡೆದು, ನಂತ್ರ  ಎನ್‌ ಹೆಚ್‌ ರಸ್ತೆಯ ಬಲಬದಿಯಲ್ಲಿ ಕುಂದಾಪುರಕ್ಕೆ ಹೋಗುತ್ತಿದ್ದ KA-20-C-6566 ನೇ ಭಾರತಿ ಬಸ್ಸ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಪ್ರಶಾಂತ ಮತ್ತು ಹಿಂಬದಿ ಸವಾರ ವಿಘ್ನೇಶ ರಸ್ತೆಗೆ ಬಿದ್ದ ಪರಿಣಾಮ ಹಿಂಬದಿಯ ಸವಾರನ ಬಲಕಾಲಿಗೆ ಒಳ ಜಖಂ ಹಾಗೂ ತಲೆಗೆ ಎಡ ಬಲ ಕೈ, ಹಾಗೂ ಎಡ ಕಾಲಿಗೆ ತರಚಿದ ಗಾಯವಾಗಿ ಪ್ರಶಾಂತನಿಗೆ ತಲೆಗೆ , ಹೊಟ್ಟೆಗೆ ಒಳಜಖಂ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಕೊಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಗಂಭೀರ ಗಾಯಗೊಂಡ ಪ್ರಶಾಂತ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ ಕೆಂ ಎಂ ಸಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದು, ಪಿರ್ಯಾದಿದಾರರನ್ನು ಕೊಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023   ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 26/03/2023 ರಂದು ಬೆಳಿಗ್ಗೆ 11:00 ಗಂಟೆಗೆ,  ಕುಂದಾಪುರ ತಾಲೂಕಿನ ತಲ್ಲೂರು  ಗ್ರಾಮದ ತಲ್ಲೂರು ಪ್ರವಾಸಿ ಹೊಟೇಲ್‌‌ಬಳಿ ಪೂರ್ವ  ಬದಿಯ  NH 66 ರಸ್ತೆಯಲ್ಲಿ,  ಆಪಾದಿತ ರೆಕ್ಸನ್‌ರೆಬೆರೋ  ಎಂಬುವವರು KA-20-P-0860ನೇ ಕಾರನ್ನು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ  ನಾಗರಾಜ ಮೋಗವೀರ (42), ತಂದೆ:  ಸಾದಪ್ಪ, ವಾಸ: ಶ್ರೀ ಮಹಿಷಾ ಮರ್ಧಿನಿ ದೇವಸ್ಥಾನದ ಬಳಿ, ಬಗ್ವಾಡಿ, ನೂಜಾಡಿ ಗ್ರಾಮ ಕುಂದಾಪುರ ತಾಲೂಕು KA-20-EY-2982ನೇ  HONDA DEO ಸ್ಕೂಟರ್‌‌ನ್ನು ಸವಾರಿ ಮಾಡಿಕೊಂಡು ಬಂದು, ರಸ್ತೆಯ ಪಶ್ಚಿಮ ಬದಿಯ ಪ್ರವಾಸಿ ಪೆಟ್ರೋಲ್‌‌ಬಂಕ್‌ಗೆ ಹೋಗಲು ಸೂಚನೆ ನೀಡಿ ನಿಧಾನಿಸಿದ ಸಮಯ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರ ಸೊಂಟಕ್ಕೆ ಒಳನೋವು ಹಾಗೂ ಬಲಕೈಗೆ ತರಚಿದ ಗಾಯವಾಗಿ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023   ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಮಹೇಶ್‌ಪೂಜಾರಿ (37), ತಂದೆ: ಚಂದ್ರಶೇಖರ್‌, ವಾಸ: ಆಶ್ರಯ ಹೌಸ್‌, ಶಿರಿಬೀಡು, ಉಡುಪಿ ತಾಲೂಕು ಇವರ ತಾಯಿಯ ತಮ್ಮ ಅಣ್ಣೋಜಿ ಕೋಟ್ಯಾನ್‌ (58) ರವರು ಅವಿವಾಹಿತರಾಗಿದ್ದು, ಅವರಿಗೆ  5 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ  ವೈಧ್ಯರಲ್ಲಿ ಚಿಕಿತ್ಸೆ  ಪಡೆದಿರುತ್ತಾರೆ. ದಿನಾಂಕ 26/03/2023 ರಂದು ಸಂಜೆ 5:00 ಗಂಟೆಗೆ  ಅವರಿಗೆ ಫೀಡ್ಸ್‌ ಬಂದ ಹಾಗೆ ಆರೋಗ್ಯ ಸ್ಥಿತಿ ವ್ಯತ್ಯಾಸ ಆಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ, ವೈದ್ಯರು ಅಣ್ಣೋಜಿ ಕೋಟ್ಯಾನ್‌ ರವರನ್ನು ಪರಿಶೀಲಿಸಿ ಈಗಾಗಲೇ ಮೃತ ಪಟ್ಟಿರುವ ಬಗ್ಗೆ ಸಂಜೆ 6:20 ಗಂಟೆಗೆ ತಿಳಿಸಿರುತ್ತಾರೆ. ಅಣ್ಣೋಜಿ ಕೋಟ್ಯಾನ್‌ ರವರಿಗಿದ್ದ ಮಾನಸಿಕ ಖಾಯಿಲೆಯಿಂದಲೊ ಅಥವಾ ಬೇರೆ ಯಾವುದೋ ದೈಹಿಕ ಖಾಯಿಲೆಯಿಂದಲೊ ಮೃತಪಟ್ಟಿರ ಬಹುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 22/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು:  ದಿನಾಂಕ 21/03/2023 ರಂದು ನಿರಂಜನ್ ಗೌಡ ಬಿ ಎಸ್,  ಪೊಲೀಸ್ ಉಪನಿರೀಕ್ಷಕರು,  ಬೈಂದೂರು ಪೊಲೀಸ್ ಠಾಣೆ ಇವರು ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಪೇಟೆಯ ಬಳಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ವಿಧ್ಯಾಧರ  ಪೂಜಾರಿ(20) ಎಂಬಾತನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆಯ ಬಗ್ಗೆ  ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು,  ಪರೀಕ್ಷಿಸಿದ ವೈದ್ಯಾಧಿಕಾರಿಯವರು ವಿಧ್ಯಾಧರ ಪೂಜಾರಿ   ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:  ದಿನಾಂಕ 21/03/2023 ರಂದು ನಿರಂಜನ್ ಗೌಡ ಬಿ ಎಸ್,  ಪೊಲೀಸ್ ಉಪನಿರೀಕ್ಷಕರು,  ಬೈಂದೂರು ಪೊಲೀಸ್ ಠಾಣೆ ಇವರು ರೌಂಡ್ಸ್  ಕರ್ತವ್ಯದಲ್ಲಿರುವಾಗ ಶಿರೂರು ಕರಾವಳಿ  ಬಳಿ  ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ನಾಗರಾಜ ಮೊಗವೀರ (23) ಎಂಬಾತನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆಯ ಬಗ್ಗೆ  ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು  ಪರೀಕ್ಷಿಸಿದ ವೈದ್ಯಾಧಿಕಾರಿಯವರು ನಾಗರಾಜ ಮೊಗವೀರ  ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿ  ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  49/2023  ಕಲಂ: 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 26/03/2023 ರಂದು ನರೇಂದ್ರ,  ಪೊಲೀಸ್‌ ‌‌‌‌ಉಪನಿರೀಕ್ಷಕರು (ತನಿಖೆ), ಕೋಟ  ಪೊಲೀಸ್‌ ‌‌‌‌‌ಠಾಣೆ, ಸೈಬ್ರಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಸಿಬ್ಬಂದಿಯವರ ಜೊತೆಯಲ್ಲಿ‌ ವಾಹನ  ತಪಾಸಣೆ  ಮಾಡುತ್ತಿರುವಾಗ  11:00  ಗಂಟೆಗೆ  ಬಿಲ್ಲಾಡಿ  ಕಡೆಯಿಂದ  ಕೋಟ  ಕಡೆಗೆ  ಟಾಟಾ ಏಸ್‌‌‌‌‌ ‌‌‌ವಾಹನ ನಂಬ್ರ KA-20-C-6573  ಬರುತ್ತಿದ್ದುದನ್ನು  ಸಿಬ್ಬಂದಿಯವರ  ಸಹಾಯದಿಂದ ನಿಲ್ಲಿಸಿ   ವಾಹನ  ಚಾಲಕನ  ಹೆಸರು,  ಹಾಗೂ ವಾಹನದಲ್ಲಿ ಏನಿದೆ  ಎಂದು ಕೇಳಲಾಗಿ  ಸರಿಯಾದ  ಉತ್ತರ ನೀಡದೆ  ತಡವರಿಸುತ್ತಿದ್ದು , ವಾಹನವನ್ನು      ಪರಿಶೀಲಿಸಲಾಗಿ ಅಕ್ಕಿಯ  ಚೀಲಗಳಿರುವುದು  ಕಂಡು  ಬಂದಿರುತ್ತದೆ.  ಅಲ್ಲದೆ   ಅಕ್ಕಿಯನ್ನು  ಸಾಗಾಟ  ಮಾಡಲು ಅಗತ್ಯ ದಾಖಲಾತಿ ಇದೆಯೇ ಎಂದು ವಿಚಾರಿಸಿದಾಗ ಯಾವುದೇ  ದಾಖಲಾತಿಗಳನ್ನು  ಹಾಜರುಪಡಿಸಿರುವುದಿಲ್ಲ. ವಾಹನದ ಹಿಂಭಾಗದ ಬಾಡಿಯಲ್ಲಿ ಇದ್ದ ಅಕ್ಕಿ ತುಂಬಿರುವ ಚೀಲದ ಮೂಟೆಗಳನ್ನು ಪರಿಶೀಲಿಸಲಾಗಿ ತಲಾ 40 ಕೆ. ಜಿ. ತೂಕದ ಬಿಳಿ ಬಣ್ಣದ ಚೀಲದಲ್ಲಿ ತುಂಬಿಸಿರುವ ಒಟ್ಟು ಅಕ್ಕಿ ಚೀಲಗಳು- 17 ಇದ್ದು, ಒಟ್ಟು  680  ಕೆ.ಜಿ. ಆಗಿದ್ದು, ಅದರ ಮೌಲ್ಯ  ರೂಪಾಯಿ  20,400/- ಆಗಿರುತ್ತದೆ. KA-20-C-6573 ನೇ ನಂಬ್ರದ ಮಿನಿ ಗೂಡ್ಸ್‌‌ ‌‌‌ಟೆಂಪೋ ಮೌಲ್ಯ ರೂಪಾಯಿ 1,00,000/- ಆಗಿದ್ದು  ಅಕ್ಕಿ  ಹಾಗೂ  ವಾಹನವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2023 ಕಲಂ: 98 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 26/03/2023 ರಂದು ತೇಜಸ್ವಿ ಟಿ.ಐ, ಪೊಲೀಸ್‌ ಉಪನಿರೀಕ್ಷಕರು,. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ಒಡ್ಡೊಟ್ಟು ಎಂಬಲ್ಲಿ ಸಂಜೀವ ಪೂಜಾರಿ ಎಂಬಾತ ತನ್ನ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ವಿಸ್ಕಿ ಪ್ಯಾಕೇಟ್‌ಗಳನ್ನು ಶೇಖರಣೆ ಮಾಡಿಟ್ಟುಕೊಂಡು ಸಾರ್ವಜನಿಕರಿಗೆ ಹೆಚ್ಚಿನ ದರದಲ್ಲಿ ತನ್ನ ಸ್ವಂತ ಲಾಭಕೋಸ್ಕರ ಮಾರಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ: 32,  34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 26/03/2023 ರಂದು ರಾಘವೇಂದ್ರ ಸಿ., ಪೊಲೀಸ್‌ ಉಪನಿರೀಕ್ಷಕರು (ಕಾ&ಸು), ಶಿರ್ವ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಶಿರ್ವ ಗ್ರಾಮದ ಬೆಳಂಜಾಲೆ ಬಸ್ಸು ನಿಲ್ದಾಣದ ಒಳಗಡೆ ಒಬ್ಬ ವ್ಯಕ್ತಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದಾಗ ಒಬ್ಬ ವ್ಯಕ್ತಿ ಬಸ್ಸು ತಂಗುದಾಣದ ಒಳಗಡೆ ಕುಳಿತುಕೊಂಡು ಕೈಯ್ಯಲ್ಲಿ ಬೀಯರ್‌ ಬಾಟಲಿ ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ  ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದು ಆಪಾದಿತ ಹೆಚ್‌. ಹರೀಶ್‌(42) ,ತಂದೆ: ದಿ. ಬಾಬು., ವಾಸ: ಹೆಮ್ಮಕ್ಕಿ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಎಂಬಾತನ ವಶದಲ್ಲಿದ್ದ kingfisher UB EXPORT premium ಎಂದು ಬರೆದಿರುವ ಒಂದು ಬಿಯರ್‌ ಬಾಟಲಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023  ಕರ್ನಾಟಕ ಅಬಕಾರಿ ಕಾಯ್ದೆ ಕಲಂ: 15(A), 32(3) ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 26/03/2023 ರಂದು ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರು (ಕಾಸು) ಪುರುಷೋತ್ತಮ ಎ ಇವರು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣಾ ಸಂಬಂದ ನಿಗಾ ವಹಿಸಲು ವಾಹನ ತಪಾಸಣೆ ಕರ್ತವ್ಯಕ್ಕೆ ನೇಮಿಸಿದಂತೆ ಕರ್ತವ್ಯದಲ್ಲಿರುವಾಗ ಅಪರಾಹ್ನ ಸುಮಾರು 16:35 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-20-ME-2561 ನೇ TOYOTA GLANZA ನೇ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಚಾಲಕನ ಎಡ ಬದಿಯ ಟೂಲ್ಸ್ ಬಾಕ್ಸ್ ಒಳಗಡೆ ಒಂದು ಕೇಸರಿ ಬಣ್ಣದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು, ಪ್ರಸಾದ ಎಂಬ ನೀಲಿ ಬಣ್ಣ  ಪ್ರಿಂಟ್ ಇರುವ ಕೈ ಚೀಲ ಇದ್ದು ಅದನ್ನು ಪರಿಶೀಲಿಸಿದಾಗ ಅದರೊಳಗೆ 500 ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟುಗಳಿರುವ ಒಟ್ಟು ಸೇರಿಸಿ ಬಂಡಲ್ ಮಾಡಿ ಇಟ್ಟಿರುವ ಹಣ ಕಂಡು ಬಂದಿದ್ದು, ಈ ಹಣದ ಕುರಿತು ಕಾರಿನ ಚಾಲಕ ಅಹಮ್ಮದ್ ಕಬೀರ್ ಹಾಗೂ ಕಾರಿನಲ್ಲಿ ಇದ್ದ ಅಬ್ದುಲ್ ಖಾದರ್ ಜೈಲಾನಿ ಎಂಬುವರನ್ನು ವಿಚಾರಿಸಿದಾಗ. ಈ ಹಣದ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ ಹಾಗೂ ತೃಪ್ತಿಕರವಾದ ಉತ್ತರವನ್ನು ನೀಡಿರುವುದಿಲ್ಲ, ಆದ್ದರಿಂದ  ರೂಪಾಯಿ 5,00,000/- ಮತ್ತು ಕಾರನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023,  ಕಲಂ:  98 ಕೆ.ಪಿ. ಕಾಯ್ದೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-03-2023 10:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080