ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 26/03/2023 ರಂದು 20:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ  ಎಂಬಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಎಡ ಬದಿಯಲ್ಲಿ ಪಿರ್ಯಾದಿದಾರರಾದ ರಾಜೇಶ (32), ತಂದೆ: ಸಾಧು, ವಾಸ: ಚೇತನಹಳ್ಳಿ, ಅತ್ತೂರು, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು  ಹಾಗೂ ಅವರ ಚಿಕ್ಕಪ್ಪ ರಮೇಶ್ ರವರು ಗುಂಡ್ಯಡ್ಕ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಗುಂಡ್ಯಡ್ಕದಿಂದ ಅತ್ತೂರು ಕಡೆಗೆ KA-20-ER-8774 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಸಂತೋಷ ತನ್ನ  ಮೋಟಾರ್ ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಚಿಕ್ಕಪ್ಪ ರಮೇಶ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಹಣೆಗೆ ಮತ್ತು ತಲೆಗೆ ರಕ್ತಗಾಯವಾಗಿದ್ದು, ಹಾಗೂ ಆರೋಪಿ ಸಂತೋಷನಿಗೂ ಕೂಡ ರಸ್ತೆಗೆ ಬಿದ್ದು ರಕ್ತಗಾಯವಾಗಿರುತ್ತದೆ, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 26/03/2023 ರಂದು ಸಂಜೆ 06:45 ಗಂಟೆಗೆ,  ಕುಂದಾಪುರ ತಾಲೂಕಿನ ಅಸೋಡು ಗ್ರಾಮದ ಕಾರಂತರ ಚಿಕ್ಕು ತೋಟದ ಬಳಿ  ರಸ್ತೆಯಲ್ಲಿ,ಆಪಾದಿತ ಆನಂದ ಎಸ್‌ KA-01-AE-9686 ನೇ ಆಟೋ ರಿಕ್ಷಾವನ್ನುಅಸೋಡು ಕಡೆಯಿಂದ ದಬ್ಬೆಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ರಿಕ್ಷಾ ಬಲ ಮಗ್ಗುಲಾಗಿ ಬಿದ್ದು, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಾದ  ಶಶಿಕಲಾ (47), ತಂದೆ  ಭಾಸ್ಕರ, ವಾಸ: ಕಾಳಾವರ ಗರಗದ್ದೆ ಕಾಳಾವರ ಗ್ರಾಮ  ಕುಂದಾಪುರ ತಾಲೂಕು , ಅವರ ಮಗ ಕಿಶನ್‌ ಕುಮಾರ್‌,  ತಂಗಿ ಅನುಸೂಯ, ತಂಗಿಯ ಮಗ ಅಧ್ವಿತ್‌ ಹಾಗೂ ಆಪಾದಿತ ಆನಂದ ಎಸ್‌ ರವರುಗಳಿಗೆ ಮೂಗಿಗೆ ಹಾಗೂ ತಲೆಗೆ ಮತ್ತು ಮುಖಕ್ಕೆ, ಹಣೆಗೆ  ತರಚಿದ ರಕ್ತಗಾಯ ಹಾಗೂ ಒಳನೋವು ಉಂಟಾಗಿದ್ದು, ಅಧ್ವಿತ್‌ನ ಬಲಕಾಲಿಗೆ ಒಳನೋವು ಉಂಟಾಗಿದ್ದು ಚಿಕಿತ್ಸೆಗೆ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿದ್ದು, ಸಾದಾ ಗಾಯಗೊಂಡ ಆಪಾದಿತ ಆನಂದ ಎಸ್ ಹಾಗೂ ಕಿಶನ್  ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು ಉಳಿದವರು  ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023   ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 26/03/2023 ರಂದು ಪಿರ್ಯಾದಿದಾರರಾದ ರಾಘವೇಂದ್ರ ಗೌಡ (29), ತಂದೆ: ಮಂಜುನಾಥ ಗೌಡ, ವಾಸ: ಸೂರ್ಯೋದಯ ನಿಲಯ, ಆಲೂರು ಪೇಟೆ ಆಲೂರು ಗ್ರಾಮ, ಕುಂದಾಪುರ ತಾಲೂಕು,ಕುಂದಾಪುರ  ತಾಲೂಕು ಇವರು ಆಲೂರು ಗ್ರಾಮದ ಆಲೂರು ಪೇಟೆಯಲ್ಲಿ ಭಜನಾ ಮಂದಿರದ ಬಳಿ  ನಿಂತಿರುವಾಗ  ಮಧ್ಯಾಹ್ನ 12:10 ಗಂಟೆಗೆ ರಾಮ ಪೂಜಾರಿ ಎಂಬುವವರು ಅವರ KA-20-EA-4585 ನೇ ಮೋಟಾರ್‌ ಸೈಕಲ್‌ನಲ್ಲಿ ಆಲೂರು ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಮುಳ್ಳಿಕಟ್ಟೆ ಕಡೆಗೆ ಹೋಗುತ್ತಿರುವಾಗ ಆಲೂರು ರಾಮ ಭಜನಾ ಮಂದಿರದ ಬಳಿ ತಲುಪುವಾಗ ಮುಳ್ಳಿಕಟ್ಟೆ ಕಡೆಯಿಂದ ಆಲೂರು ಕಡೆಗೆ KA-20-EH-5864 ನೇ ಮೋಟಾರ್‌ಸೈಕಲ್‌ ನ್ನು ಸವಾರ ಅರುಣ ಶೆಟ್ಟಿ ರವರು ಪ್ರವೀಣ ಎಂಬಾತನನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ರಾಮ ಪುಜಾರಿ ಯವರು ಚಲಾಯಿಕೊಂಡು ಹೋಗುತ್ತಿದ್ದ KA-20-EA-4585 ನೇ ಮೊಟಾರ್‌ ಸೈಕಲ್‌ಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ 2 ಮೋಟಾರು ಸೈಕಲ್‌ ಸಮೇತ ಸವಾರರು ಹಾಗೂ ಸಹಸವಾರನು ರಸ್ತೆಗೆ ಬಿದ್ದು,  ರಾಮ ಪೂಜಾರಿ ಯವರ ಎಡ ಕಾಲಿಗೆ ತೀವೃ ಗಾಯಗೊಂಡಿದ್ದು, ಪ್ರವೀಣ ರವರ ಹಣೆಗೆ ಮತ್ತು ಬಲ ಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 27/03/2023 ರಂದು ಪಿರ್ಯಾದಿದಾರರಾದ ಯಶೋಧರ ಶೆಟ್ಟಿ (52), ತಂದೆ: ದೂಮಣ್ಣ  ಶೆಟ್ಟಿ, ಬ್ರಾಹ್ಮರಿ ನಿಲಯ, ಮನೆ ನಂ 1-1589/1, ಕೆಮ್ಮಿಂಜೆ ಗ್ರಾಮ, ಮುಕ್ರಂಪಾಡಿ, ಪುತ್ತೂರು ತಾಲೂಕು, ದ.ಕ ಇವರ  ಹೆಂಡತಿಯ KA-21-N-9155 ನೇ ನಂಬ್ರದ ರಿಡ್ಸ್ ಕಾರಿನಲ್ಲಿ ಸಂಸಾರ ಸಮೇತ ಉಡುಪಿಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 11:20 ಗಂಟೆಗೆ ವಾರಂಬಳ್ಳಿ ಗ್ರಾಮದ, ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕೆನರಾ ಬ್ಯಾಂಕ್ ಬಳಿ ತಲುಪುವಾಗ ಅವರ  ಮುಂಭಾಗದಲ್ಲಿ ಕುಂದಾಪುರ ಕಡೆಗೆ  ಆರೋಪಿ ಅಬಿಧಿನ್ KA-20-AA-3248 ನಂಬ್ರದ ALPA PLUS ಗೂಡ್ಸ್ ರಿಕ್ಷಾವನ್ನು ಯಾವುದೇ ಸೂಚನೆ ಯನ್ನು ನೀಡದೇ ಒಮ್ಮೇಲೆ ಬಲಕ್ಕೆ ತಿರುಗಿಸಿ, ವಾಪಾಸ್ಸು ಆಕಾಶವಾಣಿ ಜಂಕ್ಷನ್ ಕಡೆಗೆ ಹೋಗಲು ತಿರುಗಿಸಿ ಅರ್ಧ ರಸ್ತೆಗಿಂತ ಜಾಸ್ತಿ ಬಲಕ್ಕೆ ಬಂದಿದ್ದು, ಆಗ ಪಿರ್ಯಾದಿದಾರರು ಅಪಘಾತವನ್ನು ತಪ್ಪಿಸಲು ಕಾರನ್ನು ಬಲ ಬದಿಗೆ ಚಲಾಯಿಸಿದಾಗ ರಿಕ್ಷಾದ ಮುಂದಿನ ಬಲಭಾಗ ಕಾರಿನ ಎದುರು ಎಡಭಾಗಕ್ಕೆ ಡಿಕ್ಕಿಯಾಗಿ, ರಿಕ್ಷಾ ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದು, ಆರೋಪಿಯ ತಲೆಗೆ ರಕ್ತಗಾಯವಾಗಿ, ಪ್ರಜ್ಞಾಹೀನನಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಬಾತ್ಯಾ ಉಝ್ಯಫ್ (26), ತಂದೆ: ಬಾತ್ಯಾ ಇರ್ಫಾನ್ , ವಾಸ: ಬಾತ್ಯಾ ಹೌಸ್, ಆರ್ಮೆ ಕರಿಕಟ್ಟೆ ಶಿರೂರು ಗ್ರಾಮ , ಬೈಂದೂರು  ತಾಲೂಕು ಇವರ ತಮ್ಮ ಬಾತ್ಯಾ ನೌಮನ್ (15) ರವರು ದಿನಾಂಕ 12/03/2023 ರಂದು 15:00 ಗಂಟೆಗೆ  ಸ್ನೇಹಿತರೊಂದಿಗೆ   ಶಿರೂರು ಗ್ರಾಮದ ಅರ್ಮೆ ಕರಿಕಟ್ಟೆ ಎಂಬಲ್ಲಿನ ಮನೆಯ ಬಳಿಯ ಶಿರೂರು ರೈಲ್ವೆ ನಿಲ್ದಾಣದ ಬಳಿ ಇರುವ ಮಾವಿನ ಮರದ ಮಾವಿನ ಕಾಯಿ ತೆಗೆಯಲು ಮರ ಹತ್ತಿದ್ದಾಗ ಆಕಸ್ಮಿಕವಾಗಿ  ಕಾಲು ಜಾರಿ ಮರದಿಂದ ಕೆಳಗೆ ಬಿದ್ದು  ಗಾಯಗೊಂಡವರನ್ನು ಚಿಕಿತ್ಸೆ  ಬಗ್ಗೆ  ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಯೆನಪೋಯಾ  ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ  ಮಂಗಳೂರಿನ ಯೆನಪೋಯಾ  ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ  ವೈದ್ಯರು  ಪರೀಕ್ಷೀಸಿ ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ.  ಚಿಕಿತ್ಸೆಯಲ್ಲಿದ್ದ  ಬಾತ್ಯಾ ನೌಮನ್ ರವರು  ದಿನಾಂಕ 27/03/2023 ರಂದು 02:21 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 17/2023 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ಚಂದ್ರಶೇಖರ್ ನಾಯಕ್(55) , ತಂದೆ: ಸುಬ್ಬಣ್ಣ ನಾಯಕ್, ವಾಸ ; ಬಟ್ಯಾರುಮನೆ, ಬಂಗ್ಲೆಗುಡ್ಡೆ , ಕೆರ್ವಾಶೆ ಗ್ರಾಮ ಕಾರ್ಕಳ ತಾಲೂಕು ಇವರ ತಾಯಿ ರತ್ನಾವತಿ ನಾಯಕ್ (85) ರವರು ದಿನಾಂಕ 26/03/2023 ರಂದು ರಾತ್ರಿ 12:15 ಗಂಟೆಯಿಂದ ದಿನಾಂಕ 27/03/2023 ರಂದು ಬೆಳಿಗ್ಗೆ 05:15 ಗಂಟೆಯ ನಡುವೆ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆ ಬಟ್ಯಾರು ಮನೆ ಎಂಬಲ್ಲಿ ಪಿರ್ಯಾದಿದಾರರ ಮನೆ ಬಳಿ ಹತ್ತಿರ  ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ರತ್ನಾವತಿ ನಾಯಕ್ ರವರ ಕಿರಿಯ ಮಗ ಹರಿಶ್ಚಂದ್ರ ನಾಯಕ್ ಎನ್ನುವವರು ದಿನಾಂಕ ದಿನಾಂಕ 26/03/2023 ರಂದು ಸಂಜೆ 06:00 ಗಂಟೆಗೆ ಅಸೌಖ್ಯದಿಂದ ಮೃತಪಟ್ಟಿದ್ದು,  ಹರಿಶ್ಚಂದ್ರ ನಾಯಕ್ ರವರ ಮೇಲೆ ತಾಯಿ ರತ್ನಾವತಿ ನಾಯಕ್ ರವರಿಗೆ  ಅತೀಯಾದ ಪ್ರೀತಿ ಇದ್ದು, ಮಗ ಮೃತಪಟ್ಟಿದ್ದಕ್ಕೆ ಮನನೊಂದು  ರತ್ನಾವತಿ ನಾಯಕ್ ರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 11/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ  22/03/2023 ರಂದು ಎಸ್.ಹೆಚ್. ಬಜಂತ್ರಿ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ  ಇವರು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಉಪೇಂದ್ರ ಪೈ ಸರ್ಕಲ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ  ಜುನೈದ್ ಸೈಯದ್  (22) ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿ ದಿನಾಂಕ 27/03/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಆರೋಪಿ ಜುನೈದ್ ಸೈಯದ್ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023 ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-03-2023 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080