ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ರಾಜೇಂದ್ರ ನಾಯಕ್ (45), ತಂದೆ:  ಶ್ರೀನಿವಾಸ ನಾಯಕ್ , ವಾಸ: ಕೋಡ್ಲಪೆಲತ್ತೂರು ಕಣಜಾರು ಗ್ರಾಮ ಗುಡ್ಡೆಯಂಗಡಿ ಅಂಚೆ ಕಾರ್ಕಳ ತಾಲೂಕು ಇವರು KA-17-F-1813 ನೇ ಕೆ.ಎಸ್.ಆರ್.ಟಿ ಬಸ್ಸಿನಲ್ಲಿ ಚಾಲಕರಾಗಿದ್ದು. ದಿನಾಂಕ 26/03/2022 ರಂದು ಪಿರ್ಯಾದಿದಾರರು ತನ್ನ ಬಸ್ಸಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 10:40 ಗಂಟೆಗೆ ಹೆಬ್ರಿ ಗ್ರಾಮದ ಕೊಳ್ಳಗುಡ್ಡೆಯ ಕ್ರಾಸ್ ಬಳಿ ತಲುಪಿದಾಗ ಅವರ ಎದುರುಗಡೆಯಿಂದ  ಹೆಬ್ರಿ ಕಡೆಯಿಂದ KA-16-N-7552 ನೇ ಐ-10 ಕಾರನ್ನು ಅದರ ಚಾಲಕ ಹನುಮಾನ್ ಇವರು ಅತೀವೇಗ ಹಾಗೂ ಅಜಾಗರು ಕತೆಯಿಂದ ಚಲಾಯಿಸಿ ರಸ್ತೆಯ ಬಲ ಬದಿಗೆ ಬಂದದ್ದನ್ನು ಪಿರ್ಯಾದಿದಾರರು ನೋಡಿ ತನ್ನ ಬಸ್ಸನ್ನು ನಿಲ್ಲಿಸಿದಾಗ ಅಪಾದಿತನು ಬಸ್ಸನ್ನು ನೋಡಿ ತನ್ನ ಕಾರನ್ನು ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡ ಬದಿಗೆ ಹೋಗಿ ಕಚ್ಚಾ ರಸ್ತೆಯಲ್ಲಿ ನಿಂತಿರುವ KA-20-MD-1377 ನೇ ಇಕೋ ಕಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಯಲ್ಲಿರುವ ಚರಂಡಿ ಬಳಿ ನಿಂತಿರುವುದಾಗಿದೆ. ಇದರಿಂದ ಅಪಘಾತ ಪಡಿಸಿದ  KA-16-N-7552  ನೇ ಐ-10 ಕಾರಿ ನಲ್ಲಿದ್ದ ಸುಬಾಶ್ಚಂದ್ರ ಶೆಟ್ಟಿ, ನಾಗೇಂದ್ರಪ್ಪ, ಎ.ಬಿ ಪಾಟೀಲ್ ಇವರುಗಳಿಗೆ ಗಾಯವಾಗಿರುವುದಲ್ಲದೇ ಅಪಾದಿತ ಹನುಮಾನ್ ಇವರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸುಮಂತ ಸುಂದರ ಅಮೀನ್ (45), ತಂದೆ: ಸುಂದರ್ ಸುವರ್ಣ, ವಾಸ: ಡೋರ್ ನಂ; 8-95 ಮೂಡುಬೆಟ್ಟು ರಸ್ತೆಜೋರ್ತಿಗಮಯ ಮಜಲು ತೋಟ ತೋನ್ಸೆ ಇವರು ದಿನಾಂಕ 26/03/2022 ರಂದು ತನ್ನ KA-20-AB-3916  ನೇ ಆಟೋರಿಕ್ಷಾವನ್ನು  ಬ್ರಹ್ಮಗಿರಿ  ಕಡೆಯಿಂದ  ಕಿನ್ನಿಮೂಲ್ಕಿ  ಸ್ವಾಗತ ಗೋಪುರದ ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿರುವಾಗ ಬೆಳಿಗ್ಗೆ  8:30 ಗಂಟೆಗೆ  ಎ ಟು  ಜಡ್   ಕಟ್ಟಡದ  ಎದುರು  ತಲುಪುವಾಗ  ಎದುರಿನಿಂದ  ಕಿನ್ನಿಮೂಲ್ಕಿ  ಸ್ವಾಗತ  ಗೋಪುರದ  ಕಡೆಯಿಂದ  ಬ್ರಹ್ಮಗಿರಿ  ಕಡೆಗೆ KA-20-EA- 0979  ನೇ ಮೋಟಾರು  ಸೈಕಲ್  ಸವಾರ  ಪ್ರಕಾಶ  ತನ್ನ ಮೋಟಾರು  ಸೈಕಲಿನ  ಹಿಂಬದಿ  ವಿಜೇತ  ಎಂಬುವವರನ್ನು ಹಿಂಬದಿ  ಕುಳ್ಳಿರಿಸಿಕೊಂಡು  ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ   ರಸ್ತೆಯ ಬಲಬದಿಗೆ ಸವಾರಿ ಮಾಡಿ ನನ್ನ ಆಟೋರಿಕ್ಷಾದ ಬಲಬದಿಗೆ  ಡಿಕ್ಕಿ  ಹೊಡೆದ  ಪರಿಣಾಮ  ಆಟೋರಿಕ್ಷಾದ  ಬಲಬದಿ  ಜಖಂಗೊಂಡು  ಮೋಟಾರ   ಸೈಕಲ್  ಸವಾರರು   ಮೋಟಾರು  ಸೈಕಲ್  ಸಮೇತ  ರಸ್ತೆಗೆ  ಬಿದ್ದು  ಮೋಟಾರು  ಸೈಕಲ್  ಸವಾರ  ಪ್ರಕಾಶ ರವರಿಗೆ ಬಲ ಕಾಲು ಮತ್ತು  ಬಲಕೈಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ  24/03/2022  ರಂದು  KA-20-EE-8910 ನೇ  ಮೋಟಾರು  ಸೈಕಲ್ ಸವಾರ  ಗಣೇಶ   ತನ್ನ  ಮೋಟಾರು ಸೈಕಲನ್ನು   ಸಂತೆಕಟ್ಟೆ  ಕಡೆಯಿಂದ   ಕರಾವಳಿ  ಕಡೆಗೆ ರಾಷ್ಟ್ರೀಯ  ಹೆದ್ದಾರಿ  66 ರಲ್ಲಿ  ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ ಸಂಜೆ 18:00 ಗಂಟೆಗೆ  ಉಡುಪಿ  ತಾಲೂಕಿನ  ಪುತ್ತೂರು  ಗ್ರಾಮದ   ನಿಟ್ಟೂರು  ಬಾಳಿಗಾ  ಜಂಕ್ಷನ್ನ  ಬಳಿ  ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ  ಮೋಟಾರು ಸೈಕಲನ  ನಿಯಂತ್ರಣ  ತಪ್ಪಿ   ಮೋಟಾರು  ಸೈಕಲ್  ಸಮೇತ  ರಸ್ತೆಗೆ   ಬಿದ್ದು  ತಲೆಗೆ  ಗಂಬೀರ  ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 26/03/2022 ರಂದು ಹೆಬ್ರಿ ಗ್ರಾಮದ ಕುಚ್ಚೂರು ರಸ್ತೆಯ ರಾಘವೇಂದ್ರ ಮಠದ ಬಳಿವಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಸುದರ್ಶನ ದೊಡಮನಿ ಪೊಲೀಸ್ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರಿಗೆ ಬಂದ  ಮಾಹಿತಿಯಂತೆ  ದಾಳಿ ಮಾಡಿ ಅಟದಲ್ಲಿ ನಿರತರಾಗಿರುವ 1) ಹರೀಶ್ ಪೂಜಾರಿ (33), ತಂದೆ: ಚಂದ್ರ ಶೇಖರ ವಾಸ; ಹೊಸೂರು, ಹೆಬ್ರಿ ಪದವಿ ಕಾಲೇಜಿನ ಬಳಿ  ಹೆಬ್ರಿ ಗ್ರಾಮ,   2) ಆಶ್ರೀತ್ (23), ತಂದೆ: ರಾಮಕೃಷ್ಣ ಭಂಡಾರಿ, ವಾಸ: ಹಸಿಕೊಡ್ಲು,  ಚಾರಾ ಗ್ರಾಮ,  3)  ಮಂಜುನಾಥ ಶೆಟ್ಟಿ (56), ತಂದೆ: ಬಚ್ಚು ಶೆಟ್ಟಿ ವಾಸ:ಬಾಗಲ್ ಜಡ್ಡು, ಕುಚ್ಚೂರು ಗ್ರಾಮ,   4)  ದಿನೇಶ್ ಪೂಜಾರಿ (36), ತಂದೆ: ಚಂದ್ರ ಪೂಜಾರಿ, ವಾಸ: ಬಚ್ಚಪ್ಪು, ಹೆಬ್ರಿ ಗ್ರಾಮ,  5) ಸುದಾಕರ ದೇವಾಡಿಗ  (52), ತಂದೆ: ಅಂತು ದೇವಾಡಿಗ, ವಾಸ: ದೇವಸ್ಥಾನ ಬೆಟ್ಟು, ಹೆಬ್ರಿ ಗ್ರಾಮ ಇವರನ್ನು ವಶಕ್ಕೆ ಪಡೆದು ಅವರು ಅಟಕ್ಕೆ ಉಪಯೋಗಿಸಿದ ನಗದು ರೂಪಾಯಿ 1,410/-, ಇಸ್ಪೀಟ್ ಎಲೆಗಳು-52 , ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ: 87 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುನೀತಾ (40), ಗಂಡ: ರಮಾನಂದ ಕೋಟ್ಯಾನ್‌ , ವಿಳಾಸ: ನಂದಗೋಕುಲ, ಮನೆ ನಂಬ್ರ: 1-3-7A3,  ಗುಂಡಿಬೈಲು, ಉಡುಪಿ  ತಾಲೂಕು ಇವರು ತನ್ನ ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ 25/03/2022 ರಂದು 23:50 ಗಂಟೆಯಿಂದ ದಿನಾಂಕ 26/03/2022 ರಂದು ಬೆಳಿಗ್ಗೆ 06:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಾಲ್‌ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್‌ ತೂಕದ ಚಿನ್ನದ ತೆಂಡೂಲ್ಕರ್‌ ಚೈನ್‌ ಮತ್ತು ನೀಲಿ ಹರಳಿನ ಲೋಕೆಟ್‌ ಇರುವ 3½ ಪವನ್‌ ತೂಕದ ಚಿನ್ನದ ಚೈನ್‌ ನ್ನು ಮನೆಯ ಕಿಟಕಿಯ ಮೂಲಕ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಮೌಲ್ಯ ರೂಪಾಯಿ 3,60,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2022, ಕಲಂ: 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಯಶೋದಾ ಸಿ ಶೆಟ್ಟಿ(62), ಗಂಡ:ಬಿ ಚಂದ್ರಶೇಖರ ಶೆಟ್ಟಿ , ವಾಸ: ಕೋಟೆಬಾಗಿಲು ತಲ್ಲೂರು ಗ್ರಾಮ, ಕುಂದಾಪುರ ತಾಲೂಕು ಹಾಗೂ ಅವರ ಮನೆಯ ಸಮೀಪದಲ್ಲಿರುವ ಅವರ ತಮ್ಮ ಆಪಾದಿತ ಉದಯ ಕುಮಾರ ಶೆಟ್ಟಿ ಇವರಿಗೂ ಸಣ್ಣ ಪುಟ್ಟ ವಿಚಾರದಲ್ಲಿ ಮಾತುಕತೆಯಾಗುತ್ತಿದ್ದು, ದಿನಾಂಕ 26/03/2022 ರಂದು ಮಧ್ಯಾಹ್ನ 15:30 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ಅವರ ಆಪಾದಿತ ಟೆಂಪೋದಲ್ಲಿ ಕೆಂಪುಕಲ್ಲುಗಳನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರರು ಹಾಕಿರುವ ಕೆಂಪು ಕಲ್ಲುಗಳ ಸಮೀಪದಲ್ಲಿ ಹಾಕುತ್ತಿದ್ದಾಗ ಪಿರ್ಯಾದಿದಾರರು ಕಲ್ಲುಗಳನ್ನು ಅಲ್ಲಿ ಹಾಕಬಾರದು ತೊಂದರೆಯಾಗುತ್ತದೆ ಬೇರೆ ಕಡೆ ಹಾಕಿ ಎಂದು ಹೇಳಿದ್ದಕ್ಕೆ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ತೆಂಗಿನ ಮರದ ಹೆಡೆಮಂಡೆಯನ್ನು ತೆಗೆದುಕೊಂಡು ಪಿರ್ಯಾದಿದಾರರ ತಲೆಯ ಮುಂಭಾಗಕ್ಕೆ ಹಾಗೂ ಎಡಕೈಗೆ ಹೊಡೆದಿರುತ್ತಾನೆ. ನಂತರ ಮನೆಯಲ್ಲಿದ್ದ ಪಿರ್ಯಾಧಿದಾರರ ಗಂಡ ಚಂದ್ರಶೇಖರರವರು ಪಿರ್ಯಾದಿದಾರರನ್ನು ಉಪಚರಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈಧ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 324, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 27-03-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080