ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ


  • ಬ್ರಹ್ಮಾವರ:  ಪಿರ್ಯಾದಿ: ಶಶಿಕಲಾ ಕೆ,, (46), ಗಂಡ: ಲೋಕೇಶ್ವರಾಚಾರಿ ಕೆ.ಪಿ, ವಾಸ: ಕಡೂರು, ಹೊಳಲ್ಕೆರೆ ತಾಲೂಕು ಇವರ ಗಂಡನಾದ ಲೋಕೇಶ್ವರಾಚಾರಿ ಕೆ.ಪಿ. (57 ವರ್ಷ) ಎಂಬವರು ಪ್ರಸ್ತುತ ಪೆರ್ಡೂರು ಪ್ರೌಢ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಕರ್ತವ್ಯ ನಿರ್ವಹಿಸಿಕೊಂಡು ತನ್ನ ಸಂಸಾರದೊಂದಿಗೆ ಉಪ್ಪೂರು ಗ್ರಾಮದ ತೆಂಕಬೆಟ್ಟು ಅಂಚೆ, ರಾಜಾರಾವ್‌ ಶೇಷಗಿರಿ ನಿಲಯ ಎಂಬ ಬಾಡಿಗೆ ಮನೆಯಲ್ಲಿ   ವಾಸವಾಗಿರುವುದಾಗಿದೆ. ದಿನಾಂಕ 27.02.2023 ರಂದು ಬೆಳಗ್ಗಿನ ಜಾವ 03:00 ಗಂಟೆಯ ಸಮಯಕ್ಕೆ  ಲೋಕೇಶ್ವರಾಚಾರಿ ಕೆ.ಪಿ. ರವರು ಮನೆಯಲ್ಲಿ ಮಲಗಿದ್ದವರು ಜೋರು ಉಸಿರಾಟ ಮಾಡುತ್ತಾ ಹೊರಳಾಡುತ್ತಿದ್ದಾಗ ಫಿರ್ಯಾದಿದಾರರಿಗೆ ಎಚ್ಚರವಾಗಿ ನೋಡಿದಾಗ, ಲೋಕೇಶ್ವರಾಚಾರಿ ಕೆ.ಪಿ. ರವರು ಮಾತನಾಡದೇ ಉಸಿರಾಡಲು ಕಷ್ಟಪಡುತ್ತಿದ್ದು, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಬ್ರಹ್ಮಾವರ ಮಹೇಶ್‌ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯರು ಪರೀಕ್ಷಿಸಿ ಲೋಕೇಶ್ವರಾಚಾರಿ ಕೆ.ಪಿ.  ರವರು ಈಗಾಗಲೇ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿರುವ ಬಗ್ಗೆ ಬೆಳಿಗ್ಗೆ 04:00 ಗಂಟೆಯ ಸಮಯಕ್ಕೆ ತಿಳಿಸಿರುತ್ತಾರೆ. ಲೋಕೇಶ್ವರಾಚಾರಿ ಕೆ.ಪಿ. ರವರಿಗೆ ಸುಮಾರು 10 ವರ್ಷಗಳಿಂದ ಸಕ್ಕರೆ ಖಾಯಿಲೆ ಇದ್ದು ಈ ಬಗ್ಗೆ ಮಾತ್ರೆಗಳನ್ನು ಸೇವಿಸುತ್ತಿದ್ದರು. ಅವರು ಎದೆನೋವಿನ ಸಮಸ್ಯೆಯಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 15/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ:  ಪಿರ್ಯಾದಿ: ಸಂತೋಷ್ ಪ್ರಾಯ 43 ವರ್ಷ ತಂದೆ: ಪುಟ್ಟ ವಾಸ: ನಂದಿಕೆಶ್ವರ ದೇವಸ್ಥಾನದ ಬಳಿ, ಮಾಸ್ತಿಕಟ್ಟೆ ಮೊಳಹಳ್ಳಿ  ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕನ ಗಂಡ ನರಸಿಂಹ ಎಂಬುವವರು  ದಿನಾಂಕ:  27-02-2023 ರಂದು ಮುಂಜಾನೆ ಕೂಲಿ ಕೆಲಸಕ್ಕೆ ಹೋದವರು 9:00 ಗಂಟೆಗೆ ವಾಪಾಸು ಮನೆಗೆ ಬಂದಿದ್ದು, ಎದೆ ನೊವು ಎಂದು ಮನೆಯವರಲ್ಲಿ ಹೇಳಿರುತ್ತಾರೆ ಆಗ ಮನೆ ಹಾಗೂ ನೆರೆಮನೆಯವರು ಸೇರಿ ಅವರನ್ನು  ಹುಣ್ಸೆಮಕ್ಕಿ ಕ್ಲೀನಿಕ್ ಗೆ ಅಲ್ಲಿಂದ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಮ್ ಸಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ 11:40 ಗಂಟೆಗೆ ಖಚಿತಪಡಿಸಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 07/2023 ಕಲಂ:174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 27/02/2023 ರಂದು ಬೆಳಗಿನ ಜಾವ 01:30 ಗಂಟೆಯಿಂದ 02:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು KA19 N5279 ನೇ ಟಿಪ್ಪರ್ ನಲ್ಲಿ ಬಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಫಾರೆವರ್ ಹೋಟೇಲ್ ನ ಬಳಿ ಇರುವ ಆರಾಧ್ಯ ಜುವೆಲ್ಲರ್ ಅಂಗಡಿಯ ಶಟರ್ ನ ಬೀಗವನ್ನು ಯಾವುದೋ ಆಯುಧದಿಂದ  ಮುರಿದು ಒಳಪ್ರವೇಶಿಸಿ  ಶೋಕಸ್ ನಲ್ಲಿಟ್ಟಿದ್ದ ಸುಮಾರು 20,000/- ರೂ ಮೌಲ್ಯದ ಸುಮಾರು 260 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿ ಟಿಪ್ಪರ್ ನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  27/2023 ಕಲಂ:457,  380    ಭಾದಸಂ  ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣ

  • ಹಿರಿಯಡ್ಕ:  ಪಿರ್ಯಾದಿ: ಚಿದಾನಂದ ಗೌಡ ಕೆ (58) ತಂದೆ: ದಿ|| ಶೇಷಗೌಡ , ವಾಸ: ಬಡೆಕೊಟ್ಟು ಮನೆ , ಉಜಿರೆ . ಗ್ರಾಮ ಇವರು ತನ್ನ ಹೆಂಡತಿಯ   KA-70-E-0091ನೇದರಲ್ಲಿ ಕಾರ್ಕಳ  ಕಡೆಯಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು 10:10 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿ ಗುತ್ತು ಎಂಬಲ್ಲಿ ತಲುಪುವಾಗ್ಗೆ  ತನ್ನ ಹಿಂದಿನಿಂದ ಅಂದರೆ ಕಾರ್ಕಳ ಕಡೆಯಿಂದ ರೋನಾಲ್ಡ್ ಡಿಸೋಜ ಎಂಬರು KA-20-D-9109 ನೇ ಟಿಪ್ಪರ್‌‌ಲಾರಿಯನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಪಿರ್ಯಾದಿದರ  ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದುದಾರರು ಸ್ಕೂಟರ್  ಸಮೇತ ರಸ್ತೆಗೆ  ಬಿದ್ದು ಬಲಕಾಲು ಮಂಡಿ ಎಡಕೈ, ಹಾಗೂ ಬಲಭುಜಕ್ಕೆ  ತರಚಿದ ಗಾಯವಗಿದ್ದು ,ಸ್ಕೂಟಿ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ  KA-20-D-9109 ನೇ ಟಿಪ್ಪರ್  ಚಾಲಕ ರೋನಾಲ್ಡ್ ಡಿಸೋಜರವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ. ಅಪರಾಧ ಕ್ರಮಾಂಕ . 10/2023    ಕಲಂ: 279,337,ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣ

  • ಉಡುಪಿ:  ಪಿರ್ಯಾದಿ: ಮಹೇಶ್‌ ಟಿ.ಎಂ,  PSI-1, ಉಡುಪಿ  ನಗರ ಪೊಲೀಸ್‌ ಠಾಣೆ ಇವರು ದಿನಾಂಕ: 26/02/2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ದಿನಾಂಕ 27/02/2023 ರಂದು ಬೆಳಗಿನ ಜಾವ 01:30 ಗಂಟೆಗೆ ಕುಂಜಿಬೆಟ್ಟು ಪರಿಸರದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿ ಉಪದ್ರ ಮಾಡುತ್ತಿರುವ ಬಗ್ಗೆ ಶಬ್ದ ಕೇಳಿ ಬಂದ ಮೇರೆಗೆ, ರಾತ್ರಿ 01:45 ಗಂಟೆಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿ ಆಪಾದಿತ ಶರತ್‌ ಎಂಬಾತನ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್‌ ಹಾಕಿಕೊಂಡು ರಾತ್ರಿ 02:00 ಗಂಟೆ ತನಕ ನೃತ್ಯ ಮಾಡುತ್ತಿದ್ದು, ಮುಂದಿನ ಕ್ರಮದ ಬಗ್ಗೆ Pearl 1024B Light Controller-1, DJ Controller-1, Sound Controller-1 ಹಾಗೂ ಕಪ್ಪು ಬಣ್ಣದ ಸೌಂಡ್‌ ಬಾಕ್ಸ್‌- 4  ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ: 109 KP ACT ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 27-02-2023 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080