ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಗಂಗೊಳ್ಳಿ : ಫಿರ್ಯಾದಿದಾರರಾದ ವಿಜಯ ಪೂಜಾರಿಯವರು ದಿನಾಂಕ: 25-02-2022 ರಂದು ರಾತ್ರಿ ರಾಘವೇಂದ್ರ ಪೂಜಾರಿಯವರ ಬಾಬ್ತು KA-20 AB-0050  ನೇ ಆಟೋ ರಿಕ್ಷಾದಲ್ಲಿ ದೇವದಾಸ ಪೂಜಾರಿಯವರ ಜೊತೆಗೆ ಹಿಂದುಗಡೆ ಪ್ರಯಾಣಿಕರಾಗಿ ಕುಳಿತುಕೊಂಡು ಹೆಮ್ಮಾಡಿಗೆ ಹೋಗಿ ವಾಪಾಸು ಗುಜ್ಜಾಡಿ ಕಡೆಗೆ ಮುಳ್ಳಿಕಟ್ಟೆ ನಾಯಕ್ ವಾಡಿ ರಸ್ತೆಯಾಗಿ ಬರುತ್ತಿರುವಾಗ ದಿನಾಂಕ: 26-02-2022 ರಂದು  ಸಮಯ ಸುಮಾರು 00:00 ಗಂಟೆಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ತಲುಪುವಾಗ್ಗೆ ಆಟೋರಿಕ್ಷಾಕ್ಕೆ ನಾಯಿಯೊಂದು ಅಡ್ಡ ಬಂದಿದ್ದು ಅದನ್ನು ತಪ್ಪಿಸುವ ಭರದಲ್ಲಿ ಚಾಲಕ ರಾಘವೇಂದ್ರ ಪೂಜಾರಿಯವರು ಆಟೋರಿಕ್ಷಾವನ್ನು ಒಮ್ಮೆಲೇ ಬ್ರೇಕ್ ಹಾಕಿ ಎಡಕ್ಕೆ ತಿರುಗಿಸಿದಾಗ ಆಟೋ ರಿಕ್ಷಾ ಸ್ಕಿಡ್  ಆಗಿ ಎಡಬದಿಗೆ ಮಗುಚಿ ಬಿದ್ದಿದ್ದು  ಫಿರ್ಯಾದಿದಾರರಿಗೆ ಸಣ್ಣಪುಟ್ಟ ತರಚಿದ ಗಾಯ ಹಾಗೂ ದೇವದಾಸ ಪೂಜಾರಿಯವರ  ತಲೆಗೆ, ಕೈಕಾಲುಗಳಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಫಿರ್ಯಾದಿದಾರರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿ ದೇವದಾಸ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಆಟೋರಿಕ್ಷಾ ಚಾಲಕ ರಾಘವೇಂದ್ರ ಪೂಜಾರಿಯವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2022 ಕಲಂ  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಅಮಾಸೆಬೈಲು: ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ ಸುದರ್ಶನ ಶೆಟ್ಟಿ ಇವರು ದಿನಾಂಕ 26-02-2022 ರಂದು ಹೊಸಂಗಡಿಯಲ್ಲಿರುವ ತನ್ನ ಬಟ್ಟೆ ಅಂಗಡಿಗೆ ಬೇಕಾದ ಬಟ್ಟೆಗಳನ್ನು ತರಲೆಂದು ತನ್ನ ಬಾಬ್ತು ಬುಲೆಟ್ ಮೋಟಾರು ಸೈಕಲ್ಲು ನಂಬ್ರ KA 20 EV 8827 ರಲ್ಲಿ ಹೊಸಂಗಡಿಯಿಂದ ಸಿದ್ದಾಪುರಕ್ಕೆ  ಬರುತ್ತಿರುವಾಗ ಫಿರ್ಯಾದಿದಾರ ಎದುರುಗಡೆಯಿಂದ ರಸ್ತೆಯಲ್ಲಿ KA 20 MA 9762  ನೇ ಪೋರ್ಡ್ ಪಿಯಾಗೋ ಕಾರು  ಹೊಸಂಗಡಿ ಕಡೆಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿದ್ದು ಮಧ್ಯಾಹ್ನ 13:10 ಗಂಟೆ ಸಮಯಕ್ಕೆ  ಹೊಸಂಗಡಿ ಗ್ರಾಮದ ಹೊಸಂಗಡಿ ಸೊಸೈಟಿ ಬಳಿ ಇರುವ ಕೋಟೆಕೆರೆ ಕ್ರಾಸ್ ರಸ್ತೆಯ ಬಳಿ ಕಾರು ಚಾಲಕನು ತನ್ನ ಕಾರನ್ನು ರಸ್ತೆಯ ಬಲಬದಿಗೆ ಹೋದ ಕೋಟೆ ಕೆರೆ ಕಡೆಗೆ ಹೋದ ಮಣ್ಣು ರಸ್ತೆ ಕಡೆಗೆ ಚಲಾಯಿಸಲೆಂದು ಕಾರನ್ನು ಯಾವುದೇ ಸೂಚನೆ ನೀಡದೆ ಒಮ್ಮೆಲೆ ರಸ್ತೆಯ ಬಲಬದಿಗೆ ತಿರುಗಿಸಿದ್ದು ಅದರ ಪರಿಣಾಮ ಫಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಬುಲೆಟ್ಮೋಟಾರು ಸೈಕಲ್ಲು ಕಾರಿನ ಹಿಂಬದಿ ಬಲ ಬದಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಫಿರ್ಯಾದಿದಾರರು ಕೆಳಗೆ  ಬಿದ್ದು ಅವರ ಎಡ ಕಾಲಿಗೆ ಹಾಗೂ ಬಲ ಕೈಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯೀ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2022 ಕಲಂ  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಇತರ ಪ್ರಕರಣ

 • ಕುಂದಾಪುರ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂ 27/2022ರ ಸಾರಾಂಶವೇನೆಂದರೆ, ಪಿರ್ಯಾದುದಾರರಾದ ಕೆ ಹರೀಶ್ ಖಾರ್ವಿ ರವರು ಶ್ರೀ ದುರ್ಗಾ ಪರಮೇಶ್ವರಿ ಶೆಲ್ ಗ್ರಿಟ್ ಎಂಬ ಕಾರ್ಖಾನೆ ಹೊಂದಿದ್ದು ಚಿಪ್ಪು ವ್ಯಾಪಾರ ಮಾಡಿಕೊಂಡಿರುವುದಾಗಿದೆ. ಆಪಾದಿತ ರೋಹಿಣಿ ಚಿದಂಬರ ಮುಸುಂಡೆ, ಪ್ರಾಯ: 60 ವರ್ಷ, ಮಾಲಕರು, ಶ್ರೀ ಶಿವಶಕ್ತಿ ಟ್ರೇಡರ್ಸ್, ಚಿಕ್ಕೋಡಿ ಬೆಳಗಾವಿ ಇವರು ಪಿರ್ಯಾದುದಾರರೊಂದಿಗೆ ಹಲವಾರು ವರ್ಷಗಳಿಂದ ವ್ಯವಹಾರ ಮಾಡಿಕೊಂಡಿದ್ದು ಚಿಪ್ಪು ವ್ಯಾಪಾರದ ಬಾಬ್ತು ಸುಮಾರು 41,36,003 ರೂಪಾಯಿ ವ್ಯವಹಾರದಲ್ಲಿ ಸುಮಾರು 39,32,500 ರೂಪಾಯಿ ಹಣವನ್ನು ಆರೋಪಿತರು ಪಿರ್ಯಾದುದಾರರಿಗೆ ನೀಡಿ ಉಳಿದ 2,03,500 ಹಣವನ್ನು ಬಾಕಿ ಇರಿಸಿಕೊಂಡಿದ್ದು ಪಿರ್ಯಾದುದಾರರ ಕೇಳಿದರೂ ಹಣ ಪಾವತಿಸಿರುವುದಿಲ್ಲ. ತದನಂತರ ಪುನಃ ಪಿರ್ಯಾದುದಾರರಲ್ಲಿ ಚಿಪ್ಪು ಕಳುಹಿಸಿಕೊಡುವಂತೆ ನಯ ಮಾತುಗಳಿಂದ ಒತ್ತಾಯಿಸಿ ನಂತರ ಹಣ ಪಾವತಿ ಮಾಡುವುದಾಗಿ ಹೇಳಿದ್ದು ಸದ್ರಿ ಮಾತಿನಂತೆ ಪಿರ್ಯಾದುದಾರರು ಆರೋಪಿತರಿಗೆ ಚಿಪ್ಪು ಕಳುಹಿಸಿಕೊಟ್ಟಿರುವುದಾಗಿದೆ. ಆರೋಪಿತರು ಚಿಪ್ಪು ಪಡೆದುಕೊಂಡು ಹಣಪಾವತಿಸದೇ ವಂಚಿಸಿರುವುದಾಗಿದೆ. ಆರೋಪಿತರು ಪಿರ್ಯಾದುದಾರರಿಗೆ ಮೋಸ ಮಾಡುವ ಉದ್ದೇಶದಿಂದ ವ್ಯವಹಾರ ಮಾಡಿ ನಂತರ ಹಣ ಪಾವತಿಸದೇ ನಂಬಿಕೆ ದ್ರೋಹ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2022 ಕಲಂ 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕುಂದಾಪುರ: ಪಿರ್ಯಾದಿ ಮಧುಕರ ಶೇರೆಗಾರ ಇವರ ಅಜ್ಜ ಶಂಕರ ಶೇರುಗಾರರು ಉಪ್ಪಿನಕುದ್ರು ಗ್ರಾಮದ ಸ.ನಂ 175/1 ರಲ್ಲಿ .19 ಎಕ್ರೆ ಸ್ಥಳವನ್ನು ಅವರ ಮಕ್ಕಳಾದ ವಾಸುದೇವ ಶೇರುಗಾರ ಮತ್ತು ಪ್ರಭಾಕರ ಶೇರುಗಾರ ದಿನಾಂಕ  03-09-1992ರಂದು ಕುಂದಾಪುರದ ಸಬ್ ರಿಜಿಸ್ಟ್ರಾರ್ ಆಫೀಸಿನ ದಸ್ತಾವೇಜು ನಂ 54/1992-93, ರಂತೆ ನೋದಾಯಿತ ವೀಲು ನಾಮೆ ಬರೆದಿಟ್ಟು ತದನಂತರ ಮೃತಪಟ್ಟಿರುವುದಾಗಿದೆ. ಪಿರ್ಯಾದುದಾರರ ಅಜ್ಜ ಶಂಕರ ಶೇರುಗಾರರಿಗೆ ಯಾವುದೇ ರೀತಿಯ ಸಂಬಂಧಪಡದ 1 ನೇ ಆರೋಪಿತ ರಾಧಾಕೃಷ್ಣ ಶೇರೆಗಾರ, ಉಪ್ಪಿನಕುದ್ರು  ಇವರು  4,5,6,7 ಹಾಗೂ 8 ನೇ ಆರೋಪಿತರಾದ  4) ದೇವರಾಯ ಪೂಜಾರಿ, ಉಪ್ಪಿನಕುದ್ರು  5) ಶೇಖರ ಪೂಜಾರಿ, ಉಪ್ಪಿನಕುದ್ರು 6) ಆನಂದಭಂಡಾರಿ, ವಕೀಲರು ಕುಂದಾಪುರ7) ಅಚ್ಯುತ, ಉಪ್ಪಿನಕುದ್ರು  8) ಶಂಕರ ಶೇರೆಗಾರ ಉಪ್ಪಿನಕುದ್ರು ಇವರನ್ನು ಸಾಕ್ಷೀದಾರರನ್ನಾಗಿಸಿ ಸುಳ್ಳು ಮುಕ್ತ್ಯಾರುನಾಮೆಯನ್ನು ಸೃಷ್ಠಿಸಿ ಸದ್ರಿ ಸ್ಥಿರಾಸ್ಥಿಯನ್ನು 2 ನೇ ಆರೋಪಿತ ಮಾಲತಿ, ಉಪ್ಪಿನಕುದ್ರು ಇವರಿ ಗೆ ದಿನಾಂಕ 28-12-2016 ರಂದು ಕುಂದಾಪುರ ಸಬ್ ರಿಜಿಸ್ಟ್ರಾರ್ ಆಫೀಸಿನ ದಸ್ತಾವೇಜು ನಂ KUN-1-04021-2016-17 ರಂತೆ ಮೋಸದ ಕ್ರಯಪತ್ರವನ್ನು ಮಾಡಿಕೊಟ್ಟಿದ್ದು ತದನಂತರ ಖಾತಾ ಬದಲಾವಣೆ ಮಾಡಿಕೊಂಡು 3 ನೇ ಆಪಾದಿತ ಅಜಿತ್ ಕುಮಾರ್, ಉಪ್ಪಿನಕುದ್ರು  ಇವರ ಹೆಸರಿಗೆ ದಾನಪತ್ರ ರಿಜಿಸ್ತ್ರಿ ಮಾಡಿಕೊಟ್ಟಿರುವುದಾಗಿದೆ. 1 ನೇ ಆರೋಪಿತನು ಅವರ  ಹೆಂಡತಿ ಮತ್ತು ಮಗನಾದ 2 ನೇ ಮತ್ತು 3 ನೇ ಆರೋಪಿತರಿಗೆ,  ಉಳಿದ ಆರೋಪಿತರ  ಸಹಾಯದಿಂದ ಮೋಸದ ದಾಖಲಾತಿ ಸೃಷ್ಟಿಸಿ ಪಿರ್ಯಾದಾರರಿಗೆ ಸೇರಬೇಕಾದ ಆಸ್ತಿಯನ್ನು ಪರಭಾರೆ ಮಾಡಿ ಪಿರ್ಯಾದುದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 23/2022 ಕಲಂ417, 415, 416, 419, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಉಡುಪಿ: ಆಪಾದಿತ ಮಂಜುನಾಥ @ ಮಂಜು ಎಂಬವನ ಮೇಲೆ ಉಡುಪಿ ಸಂಚಾರ ಠಾಣೆಯಲ್ಲಿ ಅಕ್ರ 14/2015 ಕಲಂ: 279, 337, 338, 304(ಎ) ಐಪಿಸಿ ರಂತೆ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಾಲಯದ ಸಿಸಿ ನಂ 986/2015 ರಂತೆ ವಿಚಾರಣೆಯಲ್ಲಿರುತ್ತದೆ. ಆಪಾದಿತನು ದಿನಾಂಕ: 20/02/2016 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ಮುಂದಿನ ವಿಚಾರಣೆಯ ಸಮಯದಲ್ಲಿ 25,000/- ರೂ. ಸ್ವಂತ ಮುಚ್ಚಳಿಕೆ ಹಾಗೂ 5000/- ನಗದು ಹಣ ಜಾಮೀನನ್ನು ನೀಡಿರುತ್ತಾರೆ. ತದನಂತರ ಆಪಾದಿತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ದಿನಾಂಕ:25/02/2022 ರಂದು ಉಡುಪಿ ಸಂಚಾರ ಠಾಣೆಯ ಸಿಬ್ಬಂಧಿಯವರು ಅಟ್ಯಾಚ್‌ಮೆಂಟ್‌ ಮತ್ತು ದಸ್ತಗಿರಿ ವಾರಂಟ್‌ನಲ್ಲಿ ಆತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಪ್ರಕರಣದಲ್ಲಿ ಆಪಾದಿತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ನ್ಯಾಲಯಲಯದ ಷರತ್ತನ್ನು ಉಲ್ಲಂಘಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 38/2022, ಕಲಂ: 229(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಫಿರ್ಯಾದಿ ಅಬ್ದುಲ್ ಶಬಾಬ್ ಇವರ ಅಜ್ಜ ಮೃತ ಸುಲೈಮಾನ್ ಬ್ಯಾರಿ ಪ್ರಾಯ (61) ಇವರು ಫಿಶ್ ಕಟ್ಟಿಂಗ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದವರು ಎಂದಿನಂತೆ ಈ ದಿನ ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವರು ,ಮಧ್ಯಾಹ್ನ ಊಟಕ್ಕೆ ಬಾರದೇ ಇದ್ದು ವಿಚಾರಿಸಿದಾಗ ಕೆಲಸಕ್ಕೆ ಹೋಗದೇ ಇದ್ದು ಸುತ್ತ ಮುತ್ತ ಹುಡುಕಾಡಿದಾಗ ಸುಲೈಮಾನ್ ಬ್ಯಾರಿಯವರು ಮನೆಯ ಹಿಂಬದಿ ಅಂದರೆ 25 ಮೀಟರ್ ದೂರದಲ್ಲಿರುವ ಆನಂದ ಕುಂದರ್ ರವರ  ಹಳೆಯ ಪಾಳು ಬಿದ್ದ ಹಂಚು ಛಾವಣಿಯ  ಕಟ್ಟಡದಲ್ಲಿ  ನೇಣು ಬಿಗಿದುಕೊಂಡು ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಶಿರ್ವ: ಪಿರ್ಯಾದಿ ಅರುಣ್‌ ದೊಡ್ಡಮಣಿ ಇವರು ಶಾಂತಪ್ಪ ಎಲ್ (38ವರ್ಷ) ರವರೊಂದಿಗೆ ದಿನಾಂಕ:25/2/2022 ರಂದು ಬೆಳಿಗ್ಗೆ 09.30 ಗಂಟೆಗೆ ಪಿಲಾರು ಗ್ರಾಮದ ಪಿಲಾರ್ ಖಾನ್ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಹೊರಗಡೆ ಸಿಮೆಂಟ್ ಶೀಟ್ ಮಾಡಿನಲ್ಲಿ ಸಿಮೆಂಟ್ ಶೀಟಿನ ಕಸವನ್ನು ತೆಗೆಯುತ್ತಿರುವಾಗ ಸಿಮೆಂಟ್ ಶೀಟ್ ತುಂಡಾಗಿ ಶಾಂತಪ್ಪರವರು ಮಾಡಿನಿಂದ ಕೆಳಗೆ ಬಿದ್ದಿದ್ದು ಸದ್ರಿ ಸಮಯ ಶಾಂತಪ್ಪರವರ  ಹಿಂಬದಿ ತಲೆಗೆ ಗಂಭೀರ ಸ್ವರೂಪದ ಗಾಯವಾದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಬಗ್ಗೆ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ವೈದ್ಯಕೀಯ ವೆಚ್ಚ ಜಾಸ್ತಿಯಾಗುತ್ತದೆ ಎಂದು ತಿಳಿದು ಅಲ್ಲಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ದಿನಾಂಕ:26/02/2022  ರಂದು ಬೆಳಿಗ್ಗಿನ  ಜಾವ 00.40 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 27-02-2022 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080