ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿದಾರರಾದ ಎಚ್‌‌‌ ಧನಂಜಯ ಶೆಟ್ಟಿ (72), ತಂದೆ:ದಿವಂಗತ ಎಂ ಬಾಲಕೃಷ್ಣ ಶೆಟ್ಟಿ , ಅನುವಂಶಿಕ ಮೂಕ್ತೇಸರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನ ಮಂದಾರ್ತಿ ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರಿಗೆ ದಿನಾಂಕ: 26/02/2022 ರಂದು ರಾತ್ರಿ 11:15 ಗಂಟೆಗೆ ಶ್ರೀದುರ್ಗಾಪರಮೇಶ್ವರಿ ದೇವಳದ ಕಾವಲುಗಾರ ಕಿರಣ ಎಂಬುವವರು ಪೋನ್‌‌ ಮಾಡಿ ಶ್ರಿ ಚಾಮುಂಡೇಶ್ವರಿ ದೇವಾಲಯದ ಕಾಣಿಕೆ ಡಬ್ಬ ಒಡೆಯಲಾಗಿದ್ದು ಅದರ ಒಳಗಿನ ನೋಟುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಿ ತಿಳಿಸಿದಂತೆ ಸ್ಧಳಕ್ಕೆ ಹೋಗಿ ನೋಡಿ ಕಾವಲುಗಾರ ಕಿರಣ್‌‌‌ ರವರಲ್ಲಿ ವಿಚಾರಿಸಿದಾಗ ರಾತ್ರಿ 8:00 ಗಂಟೆಗೆ ಅರ್ಚಕರು ಗರ್ಭಗುಡಿಯ ಬಾಗಿಲುನ್ನು ಹಾಕಿ ಎಂದಿನಂತೆ ಮುಂದಿನ ಬಾಗಿಲು ತೆಗೆದಿಟ್ಟು ಹೋಗಿದ್ದು ರಾತ್ರಿ 10:50 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಾಗಿಲು ಮುಚ್ಚಿರುವುದನ್ನು ಕಂಡು ಒಳಗೆ ಬಂದು ನೋಡಿದಾಗ ಎರಡರಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕಾಣಿಗೆ ಡಬ್ಬದ ಒಂದು ಬದಿಯ ಇಟ್ಟಿಗೆ ಗೋಡೆಯನ್ನು ಒಡೆದು ಕಾಣಿಗೆ ಡಬ್ಬವನ್ನು ಒಡೆದು ಅದರಿಂದ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಿದ್ದು ನನ್ನನ್ನು ಕಂಡು ಗೋಣಿ ಚೀಲವನ್ನು ಕಾಣಿಕೆ ಡಬ್ಬ ಒಡೆಯಲು ಉಪಯೋಗಿಸಿದ ಸಣ್ಣ ಹಾರೆ, ಸುತ್ತಿಗೆ ಹಾಗೂ ಕಬ್ಬಿಣದ ಸಲಾಕೆಯನ್ನು ಅಲ್ಲಿಯೇ ಬಿಟ್ಟು ಹಿಂದಿನ ಬಾಲಿನಿಂದ ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ. ನೋಟುಗಳು ಅಲ್ಲಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 380,511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ 

  • ಕುಂದಾಪುರ: ದಿನಾಂಕ 27/02/2022 ರಂದು ಬೆಳಗಿನ ಜಾವ 2:30 ಗಂಟೆಗೆ, ಕುಂದಾಪುರ ತಾಲೂಕು, ಜಪ್ತಿ ಗ್ರಾಮದ ಮಣಿಕಂಠ ಶಾಮಿಯಾನ ಎದುರುಗಡೆ ರಸ್ತೆಯಲ್ಲಿ, ಆಪಾದಿತ ಸಂತೋಷ ಶೆಟ್ಟಿ KA-20-EQ-5261ನೇ ಬೈಕಿನಲ್ಲಿ ಸಚಿನ್‌ ದಡ್ಡಿ ಎಂಬವವರನ್ನು ಸಹ ಸವಾರಾಗಿ ಕುಳ್ಳಿರಿಸಿಕೊಂಡು ಗಿಳಿಯಾರುನಿಂದ ಹುಣ್ಸೆಮಕ್ಕಿ ಮಾರ್ಗವಾಗಿ ಬಿ.ಹೆಚ್‌‌ ಮುಖೇನ ಹೊಸಂಗಡಿ ಕಡೆಗೆ ಬೈಕನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ, ರಸ್ತೆಯ ಎಡಬದಿಯ ಹಾಡಿ ಜಾಗದಿಂದ ರಸ್ತೆಗೆ ನುಗ್ಗಿದ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌‌ ಸಮೇತ ರಸ್ತೆಯಲ್ಲಿ ಬಿದ್ದು, ಸಚಿನ್‌ ದಡ್ಡಿರವರ ತಲೆಗೆ ಒಳಜಖಂ ಉಂಟಾಗಿ ಪ್ರಜ್ಞೆ ಕಳೆದುಕೊಂಡಿದ್ದು, ಸಂತೋಷ ಶೆಟ್ಟಿರವರಿಗೆ ಮುಖ ಹಾಗೂ ಮೈ ಕೈಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ.ಸಿ ಆಸ್ಪತ್ರೆಯಲ್ಲಿಸಚಿನ್‌ ದಡ್ಡಿಯವತು ಒಳರೋಗಿಯಾಗಿ ದಾಖಲಾಗಿದ್ದು ಹಾಗೂ ಸಂತೋಷ ಶೆಟ್ಟಿಯವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕುಂದಾಪುರ : ಫಿರ್ಯಾದಿದಾರರಾದ ಶ್ರೀಮತಿ ರಾಧಾ ದಾಸ್ ಪ್ರಾಯ:63 ವರ್ಷ , ಕುಂಭಾಶಿ ಗ್ರಾಮ ಪಂಚಾಯತ್ ಸದಸ್ಯರು, ವಾರ್ಡ್ -1 ಹಾಗೂ ಕುಂಭಾಶಿ ಅಂಗನವಾಡಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರು ಇವರು ದಿನಾಂಕ: 26/02/2022 ರಂದು ಸಂಜೆ 4 ಗಂಟೆ ಸಮಯಕ್ಕೆ ಕುಂಭಾಶಿ ಪಂಚಾಯತ್‌ನ 1ನೇ ವಾರ್ಡಿಗೆ ಸಂಬಂಧಿಸಿದ ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ಮುಖ ಮಂಟಪದ ಬಳಿ ಇರುವ ಪಾಳು ಬಿದ್ದ ಅಂಗನವಾಡಿ ಕಟ್ಟಡವನ್ನು ಪಂಚಾಯತಿನ ಅನುಮತಿ ಪಡೆದು ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸುವ ಕೆಲಸ ಕಾರ್ಯವನ್ನು ಮಾಡುತ್ತಿರುವಾಗ ಕುಂಭಾಶಿ ಪಂಚಾಯತ್‌ನ 3ನೇ ವಾರ್ಡಿನ ಸದಸ್ಯರಾದ ಹರೀಶ್ ಅಲ್ಲಿಗೆ ಬಂದು ಕೆಲಸಗಾರರಿಗೆ ಕೆಲಸ ಮಾಡದಂತೆ ಬೆದರಿಸಿ, ಅಲ್ಲಿದ್ದ ಪಿರ್ಯಾದಿದಾರರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ, ಹಲ್ಲೆಗೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ : 341,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-02-2022 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080