ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಮಣಿ ( 65), ತಂದೆ: ಪನ್ನು ಸ್ವಾಮಿ ,ವಾಸ: ಪ್ರಸಾದ ರವರ ಬಾಡಿಗೆ ಮನೆ ವಿಷ್ಣುಮೂರ್ತಿ ನಗರ ನಿಟ್ಟೂರು ಪುತ್ತೂರು ಗ್ರಾಮ ಉಡುಪಿ ,ಖಾಯಂ ವಿಳಾಸ: ಡೋರ್ ನಂ 1-382 A ರಾಜೀವ ನಗರ ರಾಯ ಕೊಟ್ಟಾಯಿ ಕೃಷ್ಣಗಿರಿ ತಮಿಳುನಾಡು ಇವರು ದಿನಾಂಕ 25/02/2021 ರಂದು ಬೆಳಿಗ್ಗೆ 07:30 ಗಂಟೆಗೆ ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ಶಿರಿಬೀಡು ಜಂಕ್ಷನ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಸಿಟಿ ಬಸ್ಸ್ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ , ಕರಾವಳಿ ಜಂಕ್ಷನ್ ಕಡೆಯಿಂದ ಸಿಟಿ ಬಸ್ ನಿಲ್ದಾಣದ ಕಡೆಗೆ KA-26-ED-5047 ನೇ ಮೋಟಾರ್ ಸೈಕಲ್ ಸವಾರ ಹನುಮಂತ ಮಾದರ ತನ್ನ ಮೋಟಾರ್ ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ, ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿಗೆ ಗುದ್ದಿದ ನೋವಾಗಿದ್ದು ಹಾಗೂ ಸೊಂಟದ ಮೂಳೆ ಮುರಿತ ಉಂಟಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಶಿರ್ವಾ: ಪಿರ್ಯಾದಿದಾರರಾದ ಸಂತೋಷ್‌ (25), ತಂದೆ: ಶಂಕರ, ವಾಸ: ಗೋಕಾಕ್‌ , ದುರದುಂಡಿ ಗ್ರಾಮ, ಬೆಳಗಾವಿ ಜಿಲ್ಲೆ, ಹಾಲಿ ವಾಸ: ನಾವುಂದ, ಕಿರಿಮಂಜೇಶ್ವರ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 25/02/2021 ರಂದು ಧರ್ಮಸ್ಥಳಕ್ಕೆ ಹೋಗಲು ತನ್ನ ಮೋಟಾರ್‌ ಸೈಕಲ್‌ ನಂಬ್ರ KA-20-EF- 9820 ನೇ ಬೈಕ್‌ನಲ್ಲಿ ಸಹ ಸವಾರ ಧನಂಜಯರವರನ್ನು ಕುಳ್ಳಿರಿಸಿಕೊಂಡು ಉಡುಪಿ- ಕಟಪಾಡಿ-ಶಂಕರಪುರ ಮಾರ್ಗವಾಗಿ ಬಂಟಕಲ್‌ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹಾದು ಹೋಗುವ ಡಾಮಾರು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಶಿರ್ವಾ ಕಡೆಯಿಂದ ಶಂಕರಪುರ ಕಡೆಗೆ ಬರುತ್ತಿದ್ದ KA-20-EM-7333ನೇ ನೇದರ ಬೈಕ್‌ ಸವಾರನು ತಾನು ಚಲಾಯಿಸುತ್ತಿದ್ದ ಬೈಕನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ತೀರ ರಸ್ತೆಯ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ಇಬ್ಬರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಹಿಂಬದಿ ತಲೆಗೆ ಗಾಯವಾಗಿದ್ದು, ಎಡ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಎಡ ಕಾಲಿನ ಮೊಣಗಂಟಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಒಳ ಜಖಂ ಆಗಿರುತ್ತದೆ. ಸಹ ಸವಾರ ಧನಂಜಯರವರಿಗೆ ಸೊಂಟಕ್ಕೆ ಒಳ ಜಖಂ ಹಾಗೂ ಎಡ ಕೈಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಸಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2021, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ:  17/02/2021 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ಕುಂದಾಪುರ  ತಾಲೂಕಿನ, ಕೋಟೇಶ್ವರ  ಗ್ರಾಮದ ಅಂಕದಕಟ್ಟೆ ಶಾಲೆಯ ಸಮೀಪ  ಸರ್ವಿಸ್ ರಸ್ತೆಯ ಪಶ್ವಿಮ ಬದಿಯಲ್ಲಿ  ಆಪಾದಿತ ಸುಕೇಶ್ ಎಂಬವರು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ತನ್ನ ಬಾಬ್ತು  ಮೋಟಾರು ಸೈಕಲ್ ನಂಬ್ರ  ಕೆಎ-19-ಡಬ್ಲೂ-398 ನೇ ದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು  ಯಾವುದೇ ಸೂಚನೆ ನೀಡದೆ ಒಮ್ಮೆಲೆ ಎನ್.ಎಚ್.66 ರಸ್ತೆಯಿಂದ ಸರ್ವಿಸ್ ರಸ್ತೆಗೆ ನುಗ್ಗಿಸಿದ ಪರಿಣಾಮ ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ದೂರುದಾರರ ತಂದೆ ಗೋವಿಂದ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ-20-ಇಸಿ-8640 ನೇ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರ ತಂದೆಯಾದ ಗೋವಿಂದ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಅವರ ಎಡಕಾಲಿನ ಹೆಬ್ಬೆರಳು ಒಳಜಖಂ ಗೊಂಡಿದ್ದು  ಹಾಗೂ ಮೈಕೈಗೆ ತರಚಿದ  ಗಾಯ ನೋವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ನರ್ಸಿಂಗ್ ಹೋಮ್‌  ಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದು  ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ 

  • ಶಂಕರನಾರಾಯಣ:  ದಿನಾಂಕ 25/02/2021  ರಂದು 23:30  ಗಂಟೆಗೆ ಪಿರ್ಯಾದಿ ಹೆಚ್‌ ಸತೀಶ್‌ ಶೆಟ್ಟಿ ಪ್ರಾಯ 47 ವರ್ಷ ತಂದೆ: ರಘುರಾಮ ಶೆಟ್ಟಿ ವಾಸ: ಆಶ್ರೀತಾ ಸದನ ಬೈಲೂರು ರಸ್ತೆ ಕಾವ್ರಾಡಿ ಅಂಚೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರು  ಕುಂದಾಪುರ ತಾಲೂಕು ಅಂಪಾರು ಗ್ರಾಮದ  ಬೈಲೂರು ರಸ್ತೆಯ  ಆನಂದ ಮೋಗವೀರ ಎಂಬವರ ಅಂಗಡಿಯ ಬಳಿ ಆರೋಪಿತ 1) ಪ್ರಶಾಂತ ಮೊಗವೀರ ತಂದೆ : ನರಸಿಂಹ ಮೊಗವೀರ ವಾಸ: ಆನಗಳ್ಳಿ 2.ಮಂಜುನಾಥ ಶೆಟ್ಟಿ ತಂದೆ: ಶಂಕರ ಶೆಟ್ಟಿ ವಾಸ: ಅಂಪಾರು ಗ್ರಾಮ 3.ರಜತ್‌‌ ಶೆಟ್ಟಿ ತಂದೆ: ಸದಾಶಿವ ಶೆಟ್ಟಿ  ವಾಸ: ಅಂಪಾರು ಗ್ರಾಮ ಯವರು ಸಮಾನ ಉದ್ದೇಶದಿಂದ ಆರೋಪಿ 4ನೇ ಸಂತೋಷ ಕುಮಾರ್‌ ಶೆಟ್ಟಿ ಬಲಾಡಿ ಯವರ ದುಷ್ಟ್ರೇರಣೆಯಿಂದ  ಪಿರ್ಯಾದಿದಾರರನ್ನು ತಡೆದು ಅವಾಚ್ಯವಾಗಿ ಬೈದು ಕಬ್ಬಿಣದ ಕ್ರಿಕೆಟ್‌ ಸ್ಟಂಪ್‌‌ಗಳು ರಾಡ್‌‌ ನಿಂದ ಪಿರ್ಯಾದಿದಾರರ ಕಾಲುಗಳಿಗೆ ಮತ್ತು ಎದೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರ ಕಿಸೆಯಲ್ಲಿದ್ದ ನಗದು ರೂಪಾಯಿ 25 ಸಾವಿರ ಮತ್ತು ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರಿಗೆ ರಾಜಕೀಯ ವಿರೋಧಿಯಾಗಿ ಗುರುತಿಸಿಕೊಂಡಿದ್ದ ಆರೋಪಿ 4ನೇಯವರ ವಿರುದ್ದ   ಗ್ರಾಮ  ಪಂಚಾಯತ್‌ ಚುನಾವಣೆಯಲ್ಲಿ ಪಿರ್ಯಾದಿದಾರರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಕ್ಕೆ ಕೋಪಗೊಂಡು ಇವರ ದುಷ್ಟ್ರೇರಣೆಯಿಂದ ಸದ್ರಿ ಆಪಾದಿತರು ಈ ರೀತಿ ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021  ಕಲಂ: 341, 324 504, 506, 327, 109 ಜೊತೆಗೆ  34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಹರ್ಷ, ಶ್ರೀಧರ್ ಕುಂದರ್ ಇವರು ಸಿಂಡಿಕೇಟ್ ಬ್ಯಾಂಕ್ ಮಾರ್ಕೆಟ್ ಯಾರ್ಡ್‌ ಶಾಖೆಯಲ್ಲಿ  ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 17.11.2020 ರಂದು ಅವರ ಮೇಲಿನ ಖಾತೆಯಿಂದ ರೂಪಾಯಿ 16,500/- ಹಣ,  ಮಡಿಕೇರಿ ಎಂಬಲ್ಲಿ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಬ್ಯಾಂಕ್ ನಲ್ಲಿ ಪರಿಶೀಲಿಸಿದಲ್ಲಿ ತಿಳಿದುಬಂದಿರುತ್ತದೆ. ನಂತರ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25.02.2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಪಿರ್ಯಾದಿದಾರರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಈ ದಿನ ಉಡುಪಿ ಸೈಬರ್ ಠಾಣೆಗೆ ಬಂದು, ಪಿರ್ಯಾದಿದಾರರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ, ಪಿರ್ಯಾದಿದಾರರ ಎ.ಟಿ.ಎಂ. ಕಾರ್ಡ್‌ ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದು ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021   ಕಲಂ 66(C), 66(D) ಐ.ಟಿ.ಆಕ್ಟ್ & ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಉಡುಪಿ: ಪಿರ್ಯಾದಿ ಲೊಕೇಶ್ ಇವರು ಸಿಂಡಿಕೇಟ್ ಬ್ಯಾಂಕ್ ಆದಿ ಉಡುಪಿ ಶಾಖೆಯಲ್ಲಿ  ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 04.12.2020 ರಂದು ಮಧ್ಯಾಹ್ನ 2:40 ಗಂಟೆಗೆ ಅವರ ಖಾತೆಯಿಂದ ರೂಪಾಯಿ 13,800/- ಹಣ,  ಕಾಸರಗೋಡು ಎಂಬಲ್ಲಿ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಪಿರ್ಯಾದಿದಾರರ ಮೊಬೈಲ್ ಗೆ ಸಂದೇಶ ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25.02.2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಪಿರ್ಯಾದಿದಾರರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಈ ದಿನ ಉಡುಪಿ ಸೈಬರ್ ಠಾಣೆಗೆ ಬಂದು, ಪಿರ್ಯಾದಿದಾರರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ, ಪಿರ್ಯಾದಿದಾರರ ಎ.ಟಿ.ಎಂ. ಕಾರ್ಡ್‌ ನ್ನು ದುರ್ಬಳಕೆ ಮಾಡಿ, ಹಣ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದು ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021   ಕಲಂ 66(C), 66(D) ಐ.ಟಿ.ಆಕ್ಟ್ & ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಮಾನ್ಯ ನ್ಯಾಯಾಲಯದ  ಖಾಸಗಿ  ಪಿರ್ಯಾದಿ ನಂಬ್ರ 13/2021 ರ  ಸಾರಾಂಶವೇನೆಂದರೆ  ಪಿರ್ಯಾದಿ ಅಸ್ಗರ್ ಆಲಿ  ಇವರು  IND-KA-02-MM-2801  ಅಜ್ ಮೇರ್  III  ನೋಂದಾವಣೆ  ಸಂಖ್ಯೆಯ  ಬೋಟಿನ   ಮಾಲಕರಾಗಿದ್ದು  ಸದ್ರಿ  ಬೋಟನ್ನು  ಮೂರು  ತಿಂಗಳ  ಹಿಂದೆ  ಸೈಯದ್  ಹಾರೂನ್  ಕಸ್ಪಂ  ಮತ್ತು  ಸುಲೇಮಾನ್  ಎ. ಶೇಖ್   ರವರಿಗೆ  ಮಲ್ಪೆ  ಬಂದರಿನಲ್ಲಿ  ಮೀನುಗಾರಿಕೆ  ದುಡಿಮೆ  ಮಾಡುವ  ಬಗ್ಗೆ  ಬೋಟನ್ನು ನೀಡಿರುತ್ತಾರೆ   ಸದ್ರಿ ಬೋಟನ್ನು    ಸರಿಯಾಗಿ  ಮೀನುಗಾರಿಕೆ  ದುಡಿಮೆಯನ್ನು   ಮಾಡದೆ ಪಿರ್ಯಾದಿದಾರರಿಗೆ   ನಷ್ಟವನ್ನು  ಉಂಟು ಮಾಡಿರುತ್ತಾರೆ.  ಈ ಬಗ್ಗೆ  ಸದ್ರಿ  ಬೋಟನ್ನು  ಮಲ್ಪೆ  ಬಂದರಿಗೆ  ತಂದು    ಲಂಗಾರು  ಹಾಕಲು  ಹೇಳಿದಕ್ಕೆ   ಆರೋಪಿಗಳು  ಬೋಟನ್ನು  ಮಲ್ಪೆ  ಬಂದರಿಗೆ  ತರಬೇಕಿದ್ದಾರೆ  ತಮಗೆ  ಹಣವನ್ನು  ನೀಡಬೇಕು    ಇಲ್ಗದಿದ್ದರೆ  ಬೋಟನ್ನು  ತಮ್ಮ  ವಶದಲ್ಲಿ ಇಟ್ಟುಕೊಳ್ಳುತೇವೆ  ಎಂದು   ಹೇಳಿ  ಅವಾಚ್ಯ  ಶಬ್ದಗಳಿಂದ ಬೈದು  ಬೆದರಿಕೆ  ಹಾಕಿ  ಹಣವನ್ನು  ವಸೂಲು ಮಾಡುವ  ಉದ್ದೇಶದಿಂದ ಎಲ್ಲಾ  ಆರೋಪಿತರು ಸೇರಿ    ಬೋಟನ್ನು  ಹೊನ್ನಾವರ ಬಂದರಿನಲ್ಲಿ  ಅಕ್ರಮವಾಗಿ  ತಮ್ಮ  ವಶದಲ್ಲಿ ಇಟ್ಟುಕೊಂಡು  ಮೋಸ  ವಂಚನೆ  ಮಾಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021  ಕಲಂ  120 ಬಿ, 379, 381, 384,403, 408, 405, 420, 426, 504, 506  ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-02-2021 10:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080