ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಸೈಯದ್ ನದೀಮ್ (34), ತಂದೆ: ಶಬ್ಬೀರ್ ಸಾಹೇಬ್, ವಾಸ: ಕಜೆ ಮನೆ, ಜೋಡುರಸ್ತೆ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ  26/01/2023 ರಂದು ಅತ್ತೂರು ಚರ್ಚ್ ಹಬ್ಬದ ಬಗ್ಗೆ ಅತ್ತೂರಿಗೆ ಹೋಗುತ್ತಿರುವ ಸಮಯ ಶ್ರೀಮತಿ ಜಹೀರಾ ಬಾನು (44) ರವರು ಟಿವಿಎಸ್ ಜುಪಿಟರ್ ನಂಬ್ರದ ದ್ವಿಚಕ್ರ ವಾಹನ KA-19-EZ-5918 ರಲ್ಲಿ ಪುಲ್ಕೇರಿ ಬೈಪಾಸ್ ಕಡೆಯಿಂದ ಬಂಗ್ಲೆಗುಡ್ಡೆ  ಕಡೆಗೆ ಸವಾರಿ  ಮಾಡಿಕೊಂಡು ಬರುತ್ತಾ  ಮಧ್ಯಾಹ್ನ 12:00 ಗಂಟೆಗೆ  ಕಾರ್ಕಳ ಕಸಬಾ ಗ್ರಾಮದ  ಕಾಬೆಟ್ಟು  ಅತ್ತೂರು  ಚರ್ಚ್  ದ್ವಾರದ  ಬಳಿ ತಲುಪಿ ದ್ವಿಚಕ್ರ  ವಾಹನವನ್ನು  ಅತ್ತೂರು ಚರ್ಚ್ ರಸ್ತೆಗೆ ತಿರುಗಿಸಿದಾಗ ಅದೇ ದಿಕ್ಕಿನಲ್ಲಿ ಪುಲ್ಕೇರಿ ಬೈಪಾಸ್ ಕಡೆಯಿಂದ ಅತ್ತೂರು ಚರ್ಚ್ ಕಡೆಗೆ ಟಿಪ್ಪರ್ KA-19-D-9947 ನೇದನ್ನು  ಅದರ  ಚಾಲಕ ರಾಬುಲ್  ಹುಸೇನ್  ಬಾಬುರಿಯಾ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನ KA-19-EZ-5918 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ತಲೆಗೆ ಗಂಭೀರ ರಕ್ತಗಾಯಗೊಂಡ ಶ್ರೀಮತಿ ಜಹೀರಾ ಬಾನುರವರನ್ನು  12:15 ಗಂಟೆಗೆ  ಡಾ.ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು  ಶ್ರೀಮತಿ ಜಹೀರಾ ಬಾನುರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2023 ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಕಾರ್ತಿಕ್ (24), ತಂದೆ: ಶ್ರೀನಿವಾಸ, ವಾಸ: ಮೊಗೆಬೆಟ್ಟು ಬೇಳೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 26/01/2023 ರಂದು 10:15 ಗಂಟೆಗೆ ತನ್ನ KA-19-ET-2193 ನೇ ಅವೆಂಜರ್ ಬೈಕಿನಲ್ಲಿ ದೊಡ್ಡಮ್ಮನ ಮಗಳು ಶ್ರೀಮತಿ ರಾಜೇಶ್ವರಿ ರವರನ್ನು ಹಿಂಬದಿ ಸವಾರಳಾಗಿ ಕುಳ್ಳಿರಿಸಿಕೊಂಡು ಬೇಳೂರು ಮುಳ್ಳುಗುಡ್ಡೆಯಲ್ಲಿನ ಹೊಸಮನೆ ನಿರ್ಮಾಣದ ಹತ್ತಿರ ಹೋಗಿ ಮನೆ ನೋಡಿಕೊಂಡು ಮುಳ್ಳುಗುಡ್ಡೆ ಕಡೆಯಿಂದ ಬೇಳೂರು ಕಡೆಗೆ ವಾಪಾಸ್ಸು ಬರುತ್ತಿರುವಾಗ ಮುಳ್ಳುಗುಡ್ಡೆ-ಬೆಳೂರು ರಸ್ತೆಯಲ್ಲಿ ಎದುರಿನಿಂದ KA-20-AA-7658 ನೇ ಟಾಟಾ ಮಿನಿ ಬಸ್ಸಿನ ಚಾಲಕ ಅತೀ ವೇಗ ಹಾಗೂ ಅಜಾರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ್ದು ಆಗ ಬೈಕಿನ ಹಿಂಬದಿ ಕುಳಿತಿದ್ದ ಪಿರ್ಯಾದಿದಾರರ ಅಕ್ಕ ಜಾರಿ ರಸ್ತೆಗೆ ಬಿದ್ದಿದ್ದೂ ಆಗ ಬಸ್ಸಿನ ಮುಂದಿನ ಎಡಬದಿಯ ಟಯರ್ ಆಕೆಯ ಎಡಕಾಲಿನ ಮೇಲೆ ಚಲಿಸಿರುತ್ತದೆ ಪರಿಣಾಮ ಎಡಕಾಲಿನ ಪಾದ ಸಂಪೂರ್ಣ ಜಖಂಗೊಂಡು ತೀವ್ರತರದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಅಮಾಸೆಬೈಲು: ದಿನಾಂಕ 26/01/2023 ರಂದು ಬೆಳಿಗ್ಗೆ 11:00 ಗಂಟೆಗೆ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಕೆಳಪೇಟೆ ಶ್ರೀ ವೀರಾಂಜನೇಯ ದೇವಸ್ಥಾನದ ಎದುರುಗಡೆ ಹೊಸಂಗಡಿ ಸಿದ್ದಾಪುರ ರಸ್ತೆಯಲ್ಲಿ ಆಪಾದಿತ KA-15-EE-0028  ನೇ ನಂಬ್ರದ TVS Star City Motor Cycle  ಸವಾರ ಅರುಣ್‌ಕುಮಾರ್‌ ತನ್ನ ಮೋಟಾರು ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಹೊಸಂಗಡಿ ಕಡೆಯಿಂದ ಸಿದ್ದಾಪುರ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ತನ್ನ ಬಲಬದಿಗೆ ಬಂದು ಮೋಟಾರು ಸೈಕಲ್ಲು ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಮಲ್ಯ ಕಂಪೌಂಡಿನ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನಿಗೆ  ಸ್ವತಹ ಮುಖಕ್ಕೆ , ಮೂಗಿನ ಬಳಿ ಹಣೆಗೆ ಹಾಗೂ ತಲೆಯ ಭಾಗಕ್ಕೆ ತೀವೃ ಸ್ವರೂಪದ  ರಕ್ತ ಗಾಯವುಂಟಾಗಿರುವುದಾಗಿದೆ.‌  ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಮಹಾಬಲೇಶ್ವರ ಕಲ್ಕೂರ (53),  ತಂದೆ:  ಶಿವರಾಮ ಕಲ್ಕೂರ,  ಕುಚ್ಚೂರು ಕಾನ್ವೆಟ್ಟು ಕುಚ್ಚೂರು ಗ್ರಾಮ ಹೆಬ್ರಿ ತಾಲೂಕು ಇವರ  ತಮ್ಮ ಚನ್ನಕೇಶವ (43) ಇವರು ದಿನಾಂಕ 26/01/2023 ರಂದು  ಹೆಬ್ರಿ   ತಾಲೂಕಿನ  ಅಲ್ಬಾಡಿ  ಗ್ರಾಮದ ಕೊಂಜಾಡಿ ರಾಜೀವ ಶೆಟ್ಟಿ ಯವರ ಮನೆಯ ತೆಂಗಿನ ಮರ ಹತ್ತಿ ಕಾಯಿ ಕೊಯ್ಯೂವ ಕೃಷಿ ಕೆಲಸದ  ಬಗ್ಗೆ  ಹೋಗಿದ್ದು,   ನಂತರ  ಬೆಳಿಗ್ಗೆ 11:30 ಗಂಟೆಗೆ ತೆಂಗಿನ  ತೋಟದಲ್ಲಿ ಇರುವ  ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಅಕಸ್ಮಾತ ಆಗಿ ತೆಂಗಿನ   ಮರದಿಂದ  ಕಳಗಡೆ  ಬಿದ್ದು,  ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ  ಬಗ್ಗೆ  ಬೆಳ್ವೆ   ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಲ್ಲಿಂದ  ಹೆಚ್ಚಿನ ಚಿಕಿತ್ಸೆ ಬಗ್ಗೆ ಹೆಬ್ರಿ  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು,  ಅಲ್ಲಿ ಅವರನ್ನು ಪರಿಕ್ಷೀಸಿದ ವೈದ್ಯರು ಚನ್ನಕೇಶವ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿದಾರರಾದ ದೀಪಕ್ ಎನ್ . ಎನ್ (24), ತಂದೆ: ನಂದನ್  ಪಿಳ್ಳೆ , ವಾಸ:  N.R.R.WA-51 ನಡುಪಿಳ್ಳೆ ನಂದನಮ್ ಹೌಸ್  ನಡುಂಪಿಳ್ಳೆ ರೋಡ್ ಮಂಜು ಮೇಲ್  ಪೋಸ್ಟ್ ಎಲ್ಲೂರು ಗ್ರಾಮ ಪ್ರೂರು ತಾಲೂಕು  ಜಿ. ಎರ್ನಾಕುಲಂ  ಕೇರಳ ರಾಜ್ಯ  ಇವರು  ತನ್ನ ತಂದೆ ನಂದನ್, ತಾಯಿ ಉಷಾ ಕುಮಾರಿ ಕೆ.(54) ಹಾಗೂ ಕುಟುಂಬ ವರ್ಗದವರೊದಿಗೆ ದಿನಾಂಕ 24/01/2023  ರಂದು ಕೇರಳ ರಾಜ್ಯದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ಬಂದಿದ್ದು  ದಿನಾಂಕ 25/01/2023  ರಂದು ಕೊಲ್ಲೂರು  ಶ್ರೀ. ಮಹಾಲಕ್ಷ್ಮೀ ರೆಸಿಡೆನ್ಸಿ ಹೋಟೆಲ್‌ನಲ್ಲಿ ಕೊಠಡಿ ಸಂಖ್ಯೆ 1018 ರಲ್ಲಿ ಉಳಿದುಕೊಂಡಿದ್ದ ವೇಳೆ  ರಾತ್ರಿ 10:30 ಗಂಟೆಗೆ ಉಷಾ ಕುಮಾರಿ ಕೆ ರವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು ಉಸಿರಾಡಲು ಆಗದೇ ಅಸ್ವಸ್ಥರಾದವರನ್ನು ಪಿರ್ಯಾದಿದಾರರು ಹೋಟೆಲ್‌ ಸಿಬ್ಬಂದಿ ಯವರ ಸಹಾಯದಿಂದ ಕಾರಿನಲ್ಲಿ  ಚಿಕಿತ್ಸೆಗೆ ಕುಂದಾಪುರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಿನಾಂಕ 26/01/2023 ರಂದು ಬೆಳಗಿನ ಜಾವ 00:40 ಗಂಟೆಗೆ  ಬಂದಾಗ  ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ  ಕರೆ ತರುವ ದಾರಿಯಲ್ಲಿ  ಮೃತಪಟ್ಟಿರುವುದಾಗಿ  ದೃಡೀಕರಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 03/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಸತೀಸನ್ (46), ತಂದೆ: ಚಂದ್ರನ್‌, ವಾಸ: ಸತೀಶ್‌ ಭವನಮ್‌, ಎಡಕ್ಕಡಮ್‌, ಕರೀಪ್ರ, ಕೊಲ್ಲಂ, ಕೇರಳ ರಾಜ್ಯ  ಹಾಗೂ ಸುರೇಶ್‌, ಸಂತೋಷ್‌, ಯಶೋಧರ ರವರು ಕೇರಳ ರಾಜ್ಯದವರಾಗಿದ್ದು ಬಾವಿರಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಬಾವಿ ರಿಂಗ್‌ ಕೆಲಸದ ಬಗ್ಗೆ 2022 ಅಕ್ಟೋಬರ್‌ ತಿಂಗಳಲ್ಲಿ ಮಲ್ಪೆಗೆ ಬಂದಿದ್ದು ಕಲ್ಮಾಡಿಯ ಕೃಷ್ಣ ಎಂಬುವವರ ಜಾಗದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯ ರೂಮಿನಲ್ಲಿ ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಸುಮಾರು 1 ವಾರದ ಹಿಂದೆ ಸುರೇಶ್‌ (45) ರವರಿಗೆ ಎದೆನೋವು ಕಾಣಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ಸುರೇಶ್‌ ರವರನ್ನು ಕರೆದುಕೊಂಡು  ಮಲ್ಪೆ ಕಾರ್ತೀಕ್ ಬಿಲ್ಡಿಂಗ್‌ನಲ್ಲಿರುವ ಡಾ. ದೇವಾಡಿಗ ರವರಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ, ವೈದ್ಯರು ನೀಡಿದ ಮಾತ್ರೆಗಳನ್ನು ಸುರೇಶ್‌ ರವರು ಸೇವನೆ ಮಾಡಿಕೊಂಡು 1 ವಾರ ಕೆಲಸಕ್ಕೆ ಹೋಗದೆ ರೂಮಿನಲ್ಲಿ ವಿಶ್ರಾಂತಿಯಲ್ಲಿರುತ್ತಾರೆ. ದಿನಾಂಕ 25/01/2023 ರಂದು ರಾತ್ರಿ 8:00 ಗಂಟೆಗೆ ಕಲ್ಮಾಡಿ ರೂಮಿನಲ್ಲಿದ್ದ ಸುರೇಶ್‌ ರವರು ಎದೆನೋವು ಎಂದು ಕೂಗಿಕೊಂಡು ರಕ್ತವಾಂತಿ ಮಾಡಿಕೊಳ್ಳುತ್ತಿದ್ದವರನ್ನು ಪಿರ್ಯಾದಿದಾರರು ಹಾಗೂ ಸುಧೀರ್‌ ಸಂತೋಷ್‌ ರವರು ಚಿಕಿತ್ಸೆ ಬಗ್ಗೆ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಸುರೇಶ್‌ ರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ವನಜಾ ಆಚಾರ್ತಿ (82), ಗಂಡ:ದಿ.ರುದ್ರಯ್ಯ ಆಚಾರಿ, ವಿಳಾಸ:ಈರ್‌ಬೆಟ್ಟು, ಪೆರ್ಡೂರು ಗ್ರಾಮ ಮತ್ತು ಪೋಸ್ಟ್, ಉಡುಪಿ ತಾಲೂಕು ಇವರ ಸ್ಥಿರಾಸ್ಥಿಯ ಸರ್ವೆ ನಂಬ್ರ 2-2 ರ ಪೂರ್ವಾಂಶದಲ್ಲಿ  ಆರೋಪಿ ಕೃಷ್ಣ ಶೆಟ್ಟಿಯವರ ಸರ್ವೆ ನಂಬ್ರ 2- 16  ಸ್ಥಿರಾಸ್ಥಿಯಲ್ಲಿ ಕೃಷ್ಣ ಶೆಟ್ಟಿ ರವರ ಮಗಳಾದ ರೇವತಿ ಶೆಟ್ಟಿರವರು ಮನೆ ನಿರ್ಮಾಣ ಮಾಡುತ್ತಿದ್ದು,  ಕೃಷ್ಣ ಶೆಟ್ಟಿ , ರೇವತಿ ಶೆಟ್ಟಿ ಮತ್ತು ಬಿ, ಪದ್ಮರಾಜ್‌ರಾವ್‌ ಸೇರಿಕೊಂಡು ಮೋಸ ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ಪಿರ್ಯಾದಿದಾರರು ತನಗೆ ಸಂಬಂದಿಸಿದ  ಸ್ಥಿರಾಸ್ಥಿಯ ದಾಖಲಾತಿಯನ್ನು ಮಾಹಿತಿ ಹಕ್ಕು ಅಧೀನಿಯಮದಂತೆ ಪಡೆದು ಪರಿಶೀಲಿಸಿದಾಗ ಆರೋಪಿತ ಬಿ, ಪದ್ಮರಾಜ್ ಎಂಬಾತ ತನ್ನ  ಹೆಬ್ಬೆರಳಿನ ಗುರುತನ್ನು ದಾಖಲಿಸಿ ಪಿರ್ಯಾದಿದಾರರ ಒಪ್ಪಿಗೆ  ಇಲ್ಲದೆ ಕೃಷ್ಣ ಶೆಟ್ಟಿ ಎಂಬುವವರ  ಸ್ಥಿರಾಸ್ಥಿಯ ಭೂ ಪರಿವರ್ತನೆಗೆ ಸಂಬಂಧಿಸಿ ಪಿರ್ಯಾದಿದಾರರ ಜಾಗದಲ್ಲಿನ  ರಸ್ತೆಯನ್ನು ಬಿಟ್ಟುಕೊಡುವ ಬಗ್ಗೆ ನಕಲಿ ಒಪ್ಪಿಗೆ  ಪತ್ರವನ್ನು ತಯಾರಿಸಿ  ಸಲ್ಲಿಸಿರುವುದು ಕಂಡು ಬಂದಿರುತ್ತದೆ.  ಆರೋಪಿತರಾದ ಬಿ. ಪದ್ಮರಾಜ್‌ರಾವ್‌ ಹಾಗೂ ಕೃಷ್ಣ ಶೆಟ್ಟಿ ಮತ್ತು ರೇವತಿ ಶೆಟ್ಟಿ   ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಿರ್ಯಾದಿದಾರರ ಬೆರಳಿನ ಗುರುತನ್ನು ಫೋರ್ಜರಿ ಮಾಡಿ  ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: : 468, 471, 420 ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 27-01-2023 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080