ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ,ಪಿರ್ಯಾದಿ ಮೊಹಮ್ಮದ್ ಆಶೀಕ್ ಇವರು ದಿನಾಂಕ: 26-01-2023 ರಂದು 76 ನೇ ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯ ಬಳಿ ತನ್ನ ಬಾಬ್ತು KA20Y9186ನೇ ಮೋಟಾರ್ ಸೈಕಲ್‌ನ್ನು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಅಲ್ಲಿರುವ ಖಾದ್ಯದ ಅಂಗಡಿಯಲ್ಲಿ ತಿಂಡಿಯನ್ನು ತಿಂದು ಬಳಿಕ ಗೆಳೆಯ ಕುಮಾರ್ ರವರೊಂದಿಗೆ ಮಾತನಾಡುತ್ತಿರುವಾಗ ಸಮಯ ಸುಮಾರು ರಾತ್ರಿ 8:30 ಗಂಟೆಗೆ KA20B4392ನೇ ಟೆಂಪೋದ ಚಾಲಕನ ದಿನೇಶ್ ಎಂಬಾತನು ತಾನು ಚಲಾಯಿಸಿಕೊಂಡು ಟೆಂಪೋವನ್ನು ಅಮ್ಮಣಿ ರಮಣ ಶೆಟ್ಟಿನ ಹಾಲ್  ಕಡೆಯಿಂದ ಬೀಡಿನಗುಡ್ಡೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಕ್ರಮಬದ್ದ ರೀತಿಯಲ್ಲಿ ವಾಹನವನ್ನು ಚಲಾಯಿಸದೇ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿದಾರರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಮೋಟಾರ್‌ ಸೈಕಲಿಗೆ ಹಾಗೂ ಪಕ್ಕದಲ್ಲಿ ನಿಲ್ಲಿಸಿದ್ದ KA20EB6341ನೇ ಹರೀಶ್ ಕುಮಾರ್ ರವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ 2 ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಆರೋಪಿ  KA20B4392 ನೇ ಟೆಂಪೋದ ಚಾಲಕನ ದಿನೇಶ್ ರವರು  ಮೇಲ್ನೋಟಕ್ಕೆ ಅಮಲು ಪದಾರ್ಥ ಸೇವಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 07/2023 ಕಲಂ: 279,   336 ಐ.ಪಿ.ಸಿ& 185 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ನರಸಿಂಹ ವಿಷ್ಣು ನಾಯ್ಕ ಇವರು ದಿನಾಂಕ 26/01/2023 ರಂದು ಅವರ ಪರಿಚಯದ ಕೇಶವ ದುರ್ಗಾ ನಾಯ್ಕ ರವರೊಂದಿಗೆ ಅವರ ಬಾಬ್ತು KA 47 V 3717 ನೇ ನಂಬ್ರದ ಸ್ಕೂಟಿಯಲ್ಲಿ  ಹಿಂಬದಿ ಸಹ ಸವಾರರಾಗಿ ಕುಳಿತು ಕೊಂಡು ಬೈಂದೂರಿನ ಅವರ ಸಂಬಂದಿಕರ ಮನೆಗೆ ಬಂದಿದ್ದು ನಂತರ  ವಾಪಾಸ್ಸು  ಮನೆಗೆ ಬೈಂದೂರಿನಿಂದ ಹೊರಟು  ರಾ ಹೆ 66 ರಲ್ಲಿ  ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ಬಳಿ ಸಮಯ ಸುಮಾರು ಸಂಜೆ 6:30 ಗಂಟೆಗೆ   ಹೋಗುತ್ತಿರುವಾಗ ಫಿರ್ಯಾದುದಾರರು ಸಹ ಸವಾರರಾಗಿ ಕುಳಿತಿದ್ದ  ಸ್ಕೂಟರ್ ನ ಹಿಂಬಂದಿಯಿಂದ ಅಂದರೆ  ಬೈಂದೂರಿನಿಂದ ಭಟ್ಕಳ ಕಡೆಗೆ  KA 19 MG 9460 ನೇ ಕಾರು ಚಾಲಕ  ನು ಆತನ ಬಾಬ್ತು ಕಾರನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಸ್ಕೂಟರ್ ಗೆ ಹಿಂದಿನಿಂದ  ಡಿಕ್ಕಿ ಹೊಡೆದ  ಪರಿಣಾಮ ಫಿರ್ಯಾದಿದಾರರು ಹಾಗೂ ಸವಾರ ಕೇಶವ ರವರು  ಸ್ಕೂಟರ್ ಸಮೇತ ರಸ್ತೆ ಬಿದ್ದಿದ್ದು  ಅಪಘಾತದ ಪರಿಣಾಮ ಫಿರ್ಯಾದುದಾರರಿಗೆ  ಬಲ ಬದಿಯ ಕಣ್ಣಿನ ಕೆಳಗೆ,ಹುಬ್ಬಿಗೆ, ಭುಜ, ಸೊಂಟ, ಮೊಣಕಾಲಿಗೆ ತರಚಿದ ಗಾಯವಾಗಿದ್ದು, ಸ್ಕೂಟರ್ ಸವಾರ ಕೇಶವರವರಿಗೆ  ಬಲ ಕಾಲಿನ ಪಾದದ ಗಂಟು, ಬಲ ಬದಿಯ ಕೈ ಹಸ್ತ, ಎಡ ಕೈ ಮೊಣಗಂಟಿಗೆ ರಕ್ತಗಾಯ, ಬಲ ಬದಿಯ ಗಲ್ಲಕ್ಕೆ ಒಳನೋವು  ಉಂಟಾಗಿದ್ದು  ಗಾಯಾಳುಗಳನ್ನು ಸ್ಥಳೀಯರು ಎತ್ತಿ ಉಪಚರಿಸಿ ಚಿಕಿತ್ಸೆ ಬಗ್ಗೆ  108 ಅಂಬುಲೆನ್ಸ್   ವಾಹನದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ವೈದ್ಯರು ಫಿರ್ಯಾದುದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ಕೇಶವ  ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿ ವಿನ್ಸೆಂಟ್‌ ಜೂಲಿಯಾನ್‌ ಡಿಸೋಜಾ ಇವರ ತಮ್ಮ ಹೆರಾಲ್ಡ್‌ ಡಿಸೋಜಾ(57 ವರ್ಷ) ರವರು ದಿನಾಂಕ:25/01/2023 ರಂದು ಉಡುಪಿ ಯಲ್ಲಿ ಲಿಫ್ಟ್‌ ಟೆಕ್ನಿಷಿಯನ್‌ ಕೆಲಸ ಮುಗಿಸಿ ಅವರು ಕೆಲಸ ಮಾಡುವ ಕಂಪೆನಿಯ ಬಾಬ್ತು KA-19-HL-8461 ನೇ ಮೋಟಾರು ಸೈಕಲ್‌ನಲ್ಲಿ ತನ್ನ ಮನೆಯಾದ ಸಾಂತೂರುಗೆ ಹೊರಟು ಪಡುಬಿದ್ರಿ ಮಾರ್ಗವಾಗಿ ಪಡುಬಿದ್ರಿ- ಕಾರ್ಕಳ ರಾಜ್ಯ ರಸ್ತೆ-01 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಂಜೆ ಸಮಯ ಸುಮಾರು 7:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಸುಜ್ಲಾನ್‌ ಕಂಪೆನಿಯ ಎದುರು ರೋಡ್‌ ಹಂಪ್ಸ್‌ ಬಳಿ ತಲುಪುವಾಗ ಮುಂದುಗಡೆಯಿಂದ  ಕಾರ್ಕಳ ಕಡೆಗೆ ಹೋಗುತ್ತಿದ್ದ KA-19-ME-8150 ನೇ ನಂಬ್ರದ ರಿಡ್ಜ್‌ ಕಾರು ಚಾಲಕನು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ರಸ್ತೆಯ ಬಲಬದಿಗೆ ಚಲಾಯಿಸಿ ಒಮ್ಮೆಲೇ ಬ್ರೇಕ್‌ ಹಾಕಿದ್ದರ ಪರಿಣಾಮ ಹಿಂದುಗಡೆಯಿಂದ ಪಿರ್ಯಾದಿದಾರರ ಅಣ್ಣ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-HL-8461 ನೇ ಮೋಟಾರು ಸೈಕಲ್‌ ಕಾರಿನ ಹಿಂಬದಿಯ ಎಡಬದಿಯ ಟಯರ್‌ಗೆ ಡಿಕ್ಕಿಯಾಗಿದ್ದು, ಪರಿಣಾಮ ಮೋಟಾರು ಸೈಕಲ್‌ ಸವಾರ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಆತನ ಬಲಕಾಲಿಗೆ ಹಾಗೂ ಬಲಕೈಗೆ ತೀವೃ ಒಳಜಖಂ ಆಗಿ ಉಡುಪಿ ಸಿ.ಟಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ದಿನೇಶ ಇವರು ದಿನಾಂಕ 24-01-2023 ರಂದು  ಕಾಪು ಪೇಟೆಯಿಂದ ತನ್ನ ಬಾಬ್ತು ಮೋಟಾರು ಸೈಕಲ್‌ನಲ್ಲಿ  ರಾ ಹೆ 66 ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಮನೆಗೆ ಹೋಗುತ್ತಿರುವಾಗ, ಸಮಯ ಸುಮಾರು ಸಂಜೆ 5:45 ಗಂಟೆಗೆ ಪಿರ್ಯಾದಿದಾರರ ಎದುರಿನಲ್ಲಿ ಕೆಎ-20-ಇ.ಎಲ್-7461‌ ನೇ ನಂಬ್ರದ ಮೋಟಾರ್‌ ಸೈಕಲ್ಲಿನಲ್ಲಿ ಸವಾರನು ಓವ೯ ಹಿಂಬದಿ ಸವಾರನನ್ನು ಕುಳ್ಳಿರಿಸಿಕೊಂಡು ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಕೊಪ್ಪಲಂಗಡಿಯ ಕಮ್ಯೂನಿಟಿ ಹಾಲ್‌ ಎದುರು ತಲುಪುತ್ತಿದ್ದಂತೆ  ಆತನ ಮೋಟಾರ್‌ ಸೈಕಲ್‌ ಆತನ ನಿಯಂತ್ರಣಕ್ಕೆ ಸಿಗದೇ  ರಸ್ತೆ ಬದಿಗೆ ಹೋಗಿ ಬಿದ್ದಿತು.   ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಬಿದ್ದವರನ್ನು ಎತ್ತಿ ಉಪಚರಿಸಿ ನೋಡಲಾಗಿ ಸಹ ಸವಾರನಾದ ಎಮಾ೯ಳು ನಿವಾಸಿ ಲಕ್ಷ್ಮಣ್‌  ಎನ್.‌ ತಿಂಗಳಾಯ ಹಾಗೂ ಮೋಟಾರದ್‌ ಸೈಕಲನ್ನು  ಚಲಾಯಿಸುತ್ತಿದ್ದ ಲಕ್ಷ್ಮಣ್‌ ರವರ ಮಗ ಕೀತಿ೯ ಕುಮಾರ್‌ ಪಿಯಾ೯ದಿದಾರರ ಪರಿಚಯದವರಾಗಿದ್ದು, ಈ ಅಪಘಾತದಿಂದ ಲಕ್ಷ್ಮಣ್‌ ತಿಂಗಳಾಯರವರ ಮುಖಕ್ಕೆ, ತಲೆಗೆ ತೀವೃ  ತರದ ಗಾಯ ಹಾಗೂ ಮೈಕೈಗಳಿಗೆ ಸಾದಾರಣ ಗಾಯಗಳಾಗಿದ್ದು, ಕೀತಿ೯ ಕುಮಾರನಿಗೆ ಎಡಕೈ ಮೊಣಗಂಟಿಗೆ ಹಾಗೂ ಎಡಕಾಲಿಗೆ ತರಚಿದ ಗಾಯಗಳಾಗಿರುತ್ತದೆ. ಅವರನ್ನು ಚಿಕಿತ್ಸೆಯ ಬಗ್ಗೆ ಸಾರ್ವಜನಿಕರ ಸಹಾಯದಿಂದ ಒಂದು ರಿಕ್ಷಾದಲ್ಲಿ ಪ್ರಶಾಂತ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಬಳಿಕ ಹೆಚ್ಚಿ ನ ಚಿಕಿತ್ಸೆಯ ಬಗ್ಗೆ ಉಡುಪಿ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಲಕ್ಷ್ಮಣ್‌ ತಿಂಗಳಾಯರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 13/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾಧಿ ಮಂಜುನಾಥ ವಿ ಸಾಲ್ಯಾನ್ ಇವರು ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾಧಿಯ ಸಾರಾಂಶವೆನೆಂದರೆ ಈ ಹಿಂದೆ ಉಡುಪಿಯಲ್ಲಿ ಎಸ್ ಡಿ ಪಿ ಐ  ಸಂಘಟನೆಯವರು ನಡೆಸಿದ ಕಾನೂನು ವಿರೋಧಿ ಪ್ರತಿಭಟನೆಯ ವಿಡಿಯೋಗಳನ್ನು ಮತ್ತು ಸೈಂಟ್ ಮೆರಿಸ್ ದ್ವೀಪದಲ್ಲಿ ನಡೆದ ಘಟನೆಯ ವಿಡಿಯೋ ಗಳನ್ನು ಎಡಿಟ್ ಮಾಡಿ ಈ ಎರಡು ಘಟನೆಗಳಿಗೂ ಹಾಗೂ ಮಲ್ಪೆ ಸೈಂಟ್ ಮೆರಿಸ್ ದ್ವೀಪದ ಪ್ರವಾಸಿ ಸಂಸ್ಥೆ ಹಾಗೂ ಕೆಲಸಗಾರರ ಜೋತೆ ನನಗೆ ಯಾವುದೇ  ಸಂಬಂಧ ಇಲ್ಲದಿದ್ದರೂ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರ ಮಧ್ಯ ದ್ವೇಶ ಭಾವನೆ ಹುಟ್ಟುವಂತೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸುಳ್ಳು ಮಾಹಿತಿಯನ್ನು ಪ್ರಕಾಶ ಮಲ್ಪೆ ಎಂಬವರು ಆತನ ಮೊಬೈಲ್ ನ  ವ್ಯಾಟ್ಸಾಫ್ ಮೂಲಕ ಸಾರ್ವಜನಿಕವಾಗಿ ಹರಿಯಬಿಟ್ಟು ವೈರಲ್ ಮಾಡಿ ನನ್ನ ತೆಜೋವದೆಗೆ ಪ್ರಯತ್ನಿಸಿರುವಿದರಿಂದ ಈ ಬಗ್ಗೆ ಅವರಲ್ಲಿ ದಿನಾಂಕ 25-11-2023 ರಂದು ಬೆಳಿಗ್ಗೆ  09:00 ಗಂಟೆಗೆ ಮಲ್ಪೆ ಕೊಳ ಎಂಬಲ್ಲಿ ಪ್ರಶ್ನೆ ಮಾಡಲು ಹೋದಾಗ ಪ್ರಕಾಶ ಮಲ್ಪೆ ಅವರು ವಿಡಿಯೋ ಮಾಡಿರುವುದು ನನ್ನ ಮೊಬೈಲ್ ನಲ್ಲಿ ಮತ್ತು ಇದು ನನ್ನ ಇಷ್ಟ ಎಂದು ಹೇಳಿ ಮಲ್ಪೆ ಪರಿಸರದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಪಿರ್ಯಾಧಿದಾರರಿಗೆ ಬೆದರಿಕೆ ಹಾಕಿರುವ ಪ್ರಕಾಶ ಮಲ್ಪೆ ಎಂಬವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಎಂಬಿತ್ಯಾಧಿಯಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2023  ಕಲಂ: 505(5), 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 27-01-2023 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080